Rashmika Mandanna: ಬರ್ತಿದೆ ಮೆಗಾ ಬ್ಲಾಕ್​ಬಸ್ಟರ್! ಇದೇ ಭಾನುವಾರ ಟೀಸರ್​ ರಿಲೀಸ್​ ಎಂದ ರಶ್ಮಿಕಾ

ಏಕಾಏಕಿ ರಶ್ಮಿಕಾ ಮಂದಣ್ಣ ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಅದರ ಹೆಸರು ‘ಮೆಗಾ ಬ್ಲಾಕ್​​ಬಸ್ಟರ್​’ ಎಂದು ಸೆಪ್ಟೆಂಬರ್ 4ರಂದು ಇದರ ಟ್ರೇಲರ್ ಕೂಡ ರಿಲೀಸ್ ಆಗಲಿದೆ.

ಮೆಗಾ ಬ್ಲಾಕ್​​ಬಸ್ಟರ್​​ ಪೋಸ್ಟರ್​

ಮೆಗಾ ಬ್ಲಾಕ್​​ಬಸ್ಟರ್​​ ಪೋಸ್ಟರ್​

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ತನ್ನ ಕೆರಿಯರ್​ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ ಅವರು ಇದೀಗ ಕಾಲಿವುಡ್​, ಟಾಲಿವುಡ್​, ಬಾಲಿವುಡ್​ಗಳಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಅವರು ಪುಷ್ಪಾ (Pushpa) ಸಿನಿಮಾದ ಶ್ರೀವಲ್ಲಿ ಪಾತ್ರದಿಂದ ಪ್ಯಾನ್​ ಇಂಡಿಯಾ ನಟಿಯಾಗಿದ್ದಾರೆ. ನ್ಯಾಷನಲ್ ಕ್ರಶ್​​ ರಶ್ಮಿಕಾ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ರಶ್ಮಿಕಾ ಅವರು ಹೊಸ ಹೊಸ ಸಿನಿಮಾ (New Movie) ಪ್ರಾಜೆಕ್ಟ್​ ಗಳ ಶೂಟಿಂಗ್​ನಲ್ಲಿ ನಿರತರಾಗಿದ್ದು, ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ರಶ್ಮಿಕಾ ಪ್ರಾಜೆಕ್ಟ್​​, ಸೆಪ್ಟೆಂಬರ್ 4ರಂದು ಇದರ ಟ್ರೇಲರ್ (Trailer) ಕೂಡ ರಿಲೀಸ್ ಆಗಲಿದೆ. ರಶ್ಮಿಕಾ ಯಾವಾಗ ಈ ಹೊಸ ಸಿನಿಮಾ ಒಪ್ಪಿಕೊಂಡರು, ಯಾವಾಗ ಶೂಟಿಂಗ್ ಮುಗಿಸಿದರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ರಶ್ಮಿಕಾ ಮಂದಣ್ಣ ನ್ಯೂ ಪ್ರಾಜೆಕ್ಟ್​

ಏಕಾಏಕಿ ರಶ್ಮಿಕಾ ಮಂದಣ್ಣ ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಅದರ ಹೆಸರು ‘ಮೆಗಾ ಬ್ಲಾಕ್​​ಬಸ್ಟರ್​’! (Mega Blockbuster). ಸೆಪ್ಟೆಂಬರ್ 4ರಂದು ಇದರ ಟ್ರೇಲರ್ ಕೂಡ ರಿಲೀಸ್ ಆಗಲಿದೆ. ರಶ್ಮಿಕಾ ಯಾವಾಗ ಈ ಹೊಸ ಸಿನಿಮಾ ಒಪ್ಪಿಕೊಂಡರು, ಯಾವಾಗ ಶೂಟಿಂಗ್ ಮುಗಿಸಿದರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಅನೇಕ ಚಿತ್ರಗಳಲ್ಲಿ ರಶ್ಮಿಕಾ ಬ್ಯುಸಿ

ರಶ್ಮಿಕಾ ಮಂದಣ್ಣ ಹಲವು ಸಿನಿಮಾ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಇದ್ದಾರೆ. ‘ಗುಡ್​ಬೈ’, ‘ಮಿಷನ್​ ಮಜ್ನು’, ‘ಅನಿಮಲ್​’ ಸಿನಿಮಾಗಳು ಅಧಿಕೃತವಾಗಿ ಘೋಷಣೆ ಆಗಿವೆ. ಇದಲ್ಲದೆ, ಟೈಗರ್ ಶ್ರಾಫ್ ಹಾಗೂ ಕಾರ್ತಿಕ್ ಆರ್ಯನ್ ಮಾಡುತ್ತಿರುವ ಎರಡು ಪ್ರತ್ಯೇಕ ಸಿನಿಮಾಗಳಿಗೆ ರಶ್ಮಿಕಾ ನಾಯಕಿ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಈ ಮಧ್ಯೆ ‘ಮೆಗಾ ಬ್ಲಾಕ್​ಬಸ್ಟರ್’ ಘೋಷಿಸಲಾಗಿದೆ.

ಹಲವು ಸೆಲೆಬ್ರಿಟಿಗಳಿಂದ ಪೋಸ್ಟರ್ ಶೇರ್​​

ರಶ್ಮಿಕಾ ಮಾತ್ರವಲ್ಲ ಹಲವು ಸೆಲೆಬ್ರೆಟಿಗಳು ಈ ಬಗ್ಗೆ ತಮ್ಮ ಪೋಸ್ಟರ್​ ಅಳವಡಿಸಿಕೊಂಡಿದ್ದಾರೆ.​ ಮೂಲಗಳ ಪ್ರಕಾರ ಇದು ಜಾಹಿರಾತಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಹಲವು ಸೆಲೆಬ್ರಿಟಿಗಳು ಇದೇ ಮಾದರಿಯ ಪೋಸ್ಟರ್​ ಶೇರ್  ಮಾಡಿಕೊಂಡಿರುವುದು ಇದು ಸಿನಿಮಾ, ಜಾಹಿರಾತಿನ ಸುಳಿವ ಅನ್ನೋ ಪ್ರಶ್ನೆ ಎದುರಾಗಿದೆ.

‘ಮೆಗಾ ಬ್ಲಾಕ್​​ಬಸ್ಟರ್’ ಎಂದು ಟೈಟಲ್ ಬರೆದುಕೊಂಡಿರುವ ಪೋಸ್ಟರ್​​ ಅನ್ನು ತ್ರಿಷಾ ಕೃಷ್ಣ, ತಮಿಳು ನಟ ಕಾರ್ತಿ, ಕಪಿಲ್ ಶರ್ಮಾ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೌರವ್​ ಗಂಗೂಲಿ ಮೊದಲಾದವರು ಹಂಚಿಕೊಂಡಿದ್ದಾರೆ.

ಕ್ರಿಕೆಟರ್​​ರಿಂದಲೂ ಪೋಸ್ಟರ್​ ಶೇರ್​​

ಪೋಸ್ಟರ್​ನಲ್ಲಿ ಯಾವುದೇ ನಿರ್ದೇಶಕರು, ನಿರ್ಮಾಪಕರ ಹೆಸರು ಇಲ್ಲ.  ಕ್ರಿಕೆಟರ್​ಗಳಾದ ರೋಹಿತ್​ ಶರ್ಮಾ, ಸೌರವ್​ ಗಂಗೂಲಿ ಕೂಡ ಮೆಗಾ ಬ್ಲಾಕ್​​ಬಸ್ಟರ್ ಎಂದು ಪೋಸ್​ ಕೊಟ್ಟಿರೋ ಪೋಸ್ಟರ್​ಗಳು ಎಲ್ಲೆಡೆ ಹರಿದಾಡುತ್ತಿದೆ.ಇದನ್ನೂ ಓದಿ: Kiccha Sudeep Birthday: ಇಂದು 49ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್​, ಐರನ್​ ಲೆಗ್​ ಟು ಗೋಲ್ಡನ್​ ಮ್ಯಾನ್​!

ರಶ್ಮಿಕಾ ಮಾಡಿದ ಪೋಸ್ಟ್ ಕಂಡು ಅಭಿಮಾನಿಗಳು ಹೊಸ ಸಿನಿಮಾ ಅನೌನ್ಸ್​ಮೆಂಟ್ ಎಂದು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಕೆಲವರು ರಶ್ಮಿಕಾಗೆ ಆಲ್​ ದಿ ಬೆಸ್ಟ್ ಎಂದು ವಿಶ್ ಮಾಡಿದ್ದಾರೆ. ಇದು ಜಾಹಿರಾತಿನ ಬ್ರಾಂಡ್ ಪ್ರಮೋಷನ್​ ಎಂದು ಹೇಳಲಾಗ್ತಿದೆ.
Published by:Pavana HS
First published: