Rashmika Mandanna: ಮೊದಲ ಸೋಲಿನ ಬಳಿಕ ಬಾಲಿವುಡ್​ನಲ್ಲಿ ರಶ್ಮಿಕಾ ಅಗ್ನಿಪರೀಕ್ಷೆ! ಜೂನ್​ 10ಕ್ಕೆ `ಕಿರಿಕ್​​​ ಬ್ಯೂಟಿ’ ಭವಿಷ್ಯ ನಿರ್ಧಾರ

ನಟ ಅಲ್ಲು ಅರ್ಜುನ್(Allu Arjun) ಜೊತೆಗೆ ‘ಪುಷ್ಪ’(Pushpa) ಸಿನಿಮಾದಲ್ಲಿ ನಟಿಸಿದ ನಂತರ ಪ್ಯಾನ್ ಇಂಡಿಯಾ ಸ್ಟಾರ್(Pan India Star) ಆಗಿ ಮತ್ತಷ್ಟು ಜನಪ್ರಿಯತೆಯನ್ನು ರಶ್ಮಿಕಾ ತನ್ನದಾಗಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ನಿರ್ಮಾಪಕರು ರಶ್ಮಿಕಾ ಡೇಟ್ಸ್​​ಗಾಗಿ ಕಾಯುತ್ತಿದ್ದಾರೆ ಎಂದರೆ ತಪ್ಪಲ್ಲ.

ಮಿಷನ್ ಮಜ್ನು ಸಿನಿಮಾ ಪೋಸ್ಟರ್​

ಮಿಷನ್ ಮಜ್ನು ಸಿನಿಮಾ ಪೋಸ್ಟರ್​

  • Share this:
ನಟಿ ರಶ್ಮಿಕಾ ಮಂದಣ್ಣ(Rashmika Mandanna) ಟಾಲಿವುಡ್(Tollywood), ಬಾಲಿವುಡ್(Bollywood) ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರವ ನಟಿ. ಸ್ಟಾರ್ ನಟನ ಜೊತೆ ನಟಿಸುವ ಮೂಲಕ ತಾನೆಂಥ ನಟಿ ಎಂಬುಂದನ್ನು ಸಾಬೀತು ಪಡಿಸಿದ್ದಾರೆ. ದಕ್ಷಿಣದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ತಾನೊಬ್ಬ ಅದೃಷ್ಟವಂತ ನಟಿ ಎಂದು ಸಾಬೀತು ಮಾಡಿದ್ದಾರೆ. ಹಿಂದಿ(Hindi)ಯಲ್ಲಿ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಕಾದಿವೆ. ಈ ನಡುವೆ ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್(Allu Arjun) ಜೊತೆಗೆ ‘ಪುಷ್ಪ’ (Pushpa) ಸಿನಿಮಾದಲ್ಲಿ ನಟಿಸಿದ ನಂತರ ಪ್ಯಾನ್ ಇಂಡಿಯಾ ಸ್ಟಾರ್(Pan India Star) ಆಗಿ ಮತ್ತಷ್ಟು ಜನಪ್ರಿಯತೆಯನ್ನು ರಶ್ಮಿಕಾ ತನ್ನದಾಗಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ನಿರ್ಮಾಪಕರು ರಶ್ಮಿಕಾ ಡೇಟ್ಸ್ಗಾಗಿ ಕಾಯುತ್ತಿದ್ದಾರೆ ಎಂದರೆ ತಪ್ಪಲ್ಲ.

ಸಕ್ಸಸ್​ ನಿರೀಕ್ಷೆಯಲ್ಲಿದ್ದಾರೆ ರಶ್ಮಿಕಾ ಮಂದಣ್ಣ!

ಸೂಪರ್ ಹಿಟ್ ಚಿತ್ರ ಪುಷ್ಪ ರಿಲೀಸ್ ಆಗುವ ಮೊದಲೇ ರಶ್ಮಿಕಾ ಬಾಲಿವುಡ್ನ 2 ಚಿತ್ರದಲ್ಲಿ ಅಭಿನಯಿಸಿದ್ದರು, ನಟ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ನಟಿಸಿರುವ ಮೊದಲ ಚಿತ್ರ 'ಮಿಷನ್ ಮಜ್ನು ಬಿಡುಗಡೆಗೆ ಸಜ್ಜಾಗಿದ್ದು, ಬಾಲಿವುಡ್​​ನಲ್ಲಿ ಸಕ್ಸಸ್ ಸಿಗುವ ನಿರೀಕ್ಷೆಯಲ್ಲಿದ್ದಾರೆ ಕಿರಿಕ್ ಬೆಡಗಿ.

ಜೂನ್​ 10ಕ್ಕೆ ರಿಲೀಸ್ ಆಗ್ತಿದೆ ‘ಮಿಷನ್​ ಮಜ್ನು’ ಸಿನಿಮಾ!

‘ಮಿಷನ್ ಮಜ್ನು' ಚಿತ್ರತಂಡ ಇದೀಗ ಫಿಲ್ಮ್ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಈ ಹಿಂದೆ ಮೇ 13 ರಂದು ಚಿತ್ರ ಬಿಡುಗಡೆಗೆ ನಿರ್ಧರಿಸಿತ್ತು, ಆದರೆ ಈಗ ಚಿತ್ರದ ರಿಲೀಸ್ ದಿನಾಂಕ ಬದಲಾಗಿದ್ದು, ಜೂನ್ 10 ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಬಗ್ಗೆ ರಶ್ಮಿಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದು, ಭಾರತ ಹೆಮ್ಮೆ ಪಡುವಂತಹ ಮಿಷನ್ ಇದು. ಹೇಳದೆ ಉಳಿದ ಇತಿಹಾಸದ ಪುಟದ ಅನುಭವ ಪಡೆಯಲು ನೀವು ಸಜ್ಜಾಗಿ ನೀವು ಎಂದು ಬರೆದುಕೊಂಡಿದ್ದಾರೆ.

‘ಗುಡ್​ಬೈ’ ಸಿನಿಮಾದಲ್ಲಿ ಬಿಗ್​ ಬಿ ಜೊತೆ ರಶ್ಮಿಕಾ!

ಶಾಂತನು ಬಗ್ಚೀ ನಿರ್ದೇಶನದ ‘ಮಿಷನ್ ಮಜ್ನು’ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ರಶ್ಮಿಕಾ ಅಭಿಮಾನಿಗಳಲ್ಲಿ ಸಹ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಇನ್ನು ಮಿಷನ್ ಮಜ್ನು ಅಲ್ಲದೇ ರಶ್ಮಿಕಾ ಗುಡ್ ಬೈ ಹೆಸರಿನ ಚಿತ್ರದಲ್ಲಿ ಸಹ ಅಭಿನಯಿಸುತ್ತಿದ್ದಾರೆ, ಗುಡ್ ಬೈ ಸಿನಿಮಾ ರಶ್ಮಿಕಾ ಪಾಲಿಗೆ ಅತ್ಯಂತ ಮಹತ್ವದ್ದು. ಏಕೆಂದರೆ ಅವರು ಈ ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಿಂದಿ ಸಿನಿಮಾ ರಂಗ ಪ್ರವೇಶಿಸುತ್ತಲೇ, ಬಾಲಿವುಡ್ ಶೆಹನ್ಶಾ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿರುವುದರಿಂದ ರಶ್ಮಿಕಾ ಮಂದಣ್ಣ ತುಂಬಾ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಮತ್ತೊಬ್ಬ ಸ್ಟಾರ್​ ನಟನ ಜೊತೆ ನಟಿಸ್ತಿದ್ದಾರೆ ಆಲಿಯಾ, ಈ ಚಿತ್ರಕ್ಕೆ ರಾಜಮೌಳಿ ಆ್ಯಕ್ಷನ್​-ಕಟ್​!

ಸದ್ಯಕ್ಕೆ ಬ್ಯುಸಿಯೆಸ್ಟ್​ ನಟಿ ರಶ್ಮಿಕಾ ಮಂದಣ್ಣ!

ಈ ಕಿರಿಕ್ ಪಾರ್ಟಿ ಚೆಲುವೆ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮಿತಾಭ್ ಬಚ್ಚನ್ ಅವರ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ‘ಮಿಷನ್ ಮಜ್ನು’ ಮತ್ತು ‘ಗುಡ್ ಬೈ’ ಸಿನಿಮಾಗಳಲ್ಲಿ ಮಾತ್ರವಲ್ಲದೆ, ರಶ್ಮಿಕಾ ಅವರು ‘ಪುಪ್ಪಾ’ ಚಿತ್ರದ ಎರಡನೇ ಭಾಗದಲ್ಲೂ ಅಭಿನಯಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಾಯಕರಾಗಿದ್ದ ಪುಪ್ಪಾ - ದಿ ರೈಸ್ ಚಿತ್ರದಲ್ಲಿ ರಶ್ಮಿಕಾ ಅವರ ಅಭಿನಯದ ಕುರಿತು ಕೂಡ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಸ್ಟಾರ್ ನಟಿಯರು ಪಡೆಯುವ ಸಂಭಾವನೆ ಎಷ್ಟು? ಇವರೇ ಅತಿ ಹೆಚ್ಚು ಹಣ ಬೇಡಿಕೆಯಿಡುವ ನಟಿಮಣಿ!

ಆ ಚಿತ್ರದ ಸಾಮಿ ಹಾಡಿಗೆ ರಶ್ಮಿಕಾ ಮಂದಣ್ಣ ಹಾಕಿರುವ ಸ್ಟೆಪ್ಗಳು ಎಷ್ಟು ಜನಪ್ರಿಯವಾಗಿವೆ ಎಂದರೆ, ಅವರು ಭಾಗವಹಿಸುವ ಹೆಚ್ಚಿನ ಸಮಾರಂಭಗಳ ವೇದಿಕೆಗಳಲ್ಲಿ ಆ ಹಾಡಿನ ಒಂದೆರಡು ಸಾಲಿಗೆ ಹೆಜ್ಜೆ ಹಾಕುವಂತೆ ಅವರನ್ನು ಕೇಳಿಕೊಳ್ಳಲಾಗುತ್ತಿರುವುದನ್ನು ಗಮನಿಸಬಹುದು. ಪುಷ್ಪಾ ಸಿನಿಮಾದ ಮುಂದಿನ ಭಾಗಕ್ಕೆ ಪುಷ್ಪಾ - ದಿ ರೂಲ್ ಎಂದು ಹೆಸರಿಡಲಾಗಿದೆ.
Published by:Vasudeva M
First published: