• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Belageddu Song: ಬ್ರೇಕಪ್​ ನಂತರ ರಕ್ಷಿತ್​ ಶೆಟ್ಟಿಗೆ ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ ರಶ್ಮಿಕಾ ಮಂದಣ್ಣ

Belageddu Song: ಬ್ರೇಕಪ್​ ನಂತರ ರಕ್ಷಿತ್​ ಶೆಟ್ಟಿಗೆ ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ ರಶ್ಮಿಕಾ ಮಂದಣ್ಣ

ಕಿರಿಕ್​ ಪಾರ್ಟಿ ಸಿನಿಮಾ

ಕಿರಿಕ್​ ಪಾರ್ಟಿ ಸಿನಿಮಾ

Rashmika-Rakshit Shetty: 2016ರಲ್ಲಿ ತೆರೆ ಕಂಡಿದ್ದ ಈ ಸಿನಿಮಾ ಬೆಳಗೆದ್ದು ಯಾರ ಮುಖವ ನಾನು ನೋಡಲಿ ಹಾಡಿನ ವಿಡಿಯೋಗೆ ಯೂಟ್ಯೂಬ್​ನಲ್ಲಿ 100 ಮಿಲಿಯನ್​ ಅಂದರೆ ಬರೋಬ್ಬರಿ 10 ಕೋಟಿ ವೀಕ್ಷಣೆ ಸಿಕ್ಕಿದೆ.

  • Share this:

ರಕ್ಷಿತ್​ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಕಿರಿಕ್​ ಪಾರ್ಟಿ’ ಸಿನಿಮಾದ ತೆರೆ ಕಂಡಾಗಲೇ ಬಾಕ್ಸಾಫಿಸ್​ನಲ್ಲಿ ಭಾರಿ ಸದ್ದು ಮಾಡಿತ್ತು. ಸಿನಿಮಾದ ಜತೆಗೆ ಹಾಡುಗಳು ಸಹ ಹಿಟ್​ ಆಗಿದ್ದವು. ಈ ಸಿನಿಮಾದ ಹಾಡುಗಳು ಇನ್ನೂ ಸಹ ಸಿನಿಪ್ರಿಯರ ನಾಲಗೆ ಮೇಲೆ ನಲಿಯುತ್ತಿವೆ. ಇಂತಹ ಮ್ಯೂಸಿಕಲ್​ ಸೂಪರ್​ ಹಿಟ್ ಸಿನಿಮಾದ ಬೆಳಗೆದ್ದು ಹಾಡು... ಈ ಹಿಂದೆಯೇ ಯೂಟ್ಯೂಬ್​ನಲ್ಲಿ ದಾಖಲೆ ಬರೆದಿತ್ತು. ಹೌದು, ​ಯುಟ್ಯೂಬ್​ನಲ್ಲಿ ಈ ಸಿನಿಮಾದ ‘ಬೆಳಗೆದ್ದು ಯಾರ ಮುಖವ ನಾನು ನೋಡಲಿ….’ ಹಾಡು 5 ಕೋಟಿ (50 ಮಿಲಿಯನ್​) ವೀಕ್ಷಣೆ ಗಳಿಸಿತ್ತು. ಈ ಮೂಲಕ ಇಷ್ಟು ವೀಕ್ಷಣೆಗಳಿಸಿದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದಾದ ನಂತರ ಕನ್ನಡದ ಮತ್ತೆ ಕೆಲವು ಹಾಡುಗಳು ಈ ಹಾಡಿನ ದಾಖಲೆ ಮುರಿದವು. ಆದರೆ ಕಿರಿಕ್​ ಪಾರ್ಟಿ ಸಿನಿಮಾದ ಈ ಹಾಡು ಮತ್ತೊಮ್ಮೆ ಚಿತ್ರತಂಡಕ್ಕೆ ಖುಷಿ ನೀಡಿದೆ.  


2016ರಲ್ಲಿ ತೆರೆ ಕಂಡಿದ್ದ ಈ ಸಿನಿಮಾ ಬೆಳಗೆದ್ದು ಯಾರ ಮುಖವ ನಾನು ನೋಡಲಿ ಹಾಡಿನ ವಿಡಿಯೋಗೆ ಯೂಟ್ಯೂಬ್​ನಲ್ಲಿ 100 ಮಿಲಿಯನ್​ ಅಂದರೆ ಬರೋಬ್ಬರಿ 10 ಕೋಟಿ ವೀಕ್ಷಣೆ ಸಿಕ್ಕಿದೆ.




ಈ ಖುಷಿಯ ವಿಚಾರವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದೆ. ಅಭಿಮಾನಿಗಳೂ ಈ ಸಂತಸದ ಸುದ್ದಿಯನ್ನು ಕೇಳಿ ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ಸಂಗೀತ ನಿರ್ದೇಶಕ ಅಜನೀಶ್​ ಹಾಗೂ ರಕ್ಷಿತ್​ ಶೆಟ್ಟಿ ಸಹ ಟ್ವೀಟ್​ ಮಾಡಿದ್ದಾರೆ.







ರಕ್ಷಿತ್​ ಶೆಟ್ಟಿ ಬ್ರೇಕಪ್​ ಆದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್​ ಶೆಟ್ಟಿ ಅವರನ್ನು ಟ್ಯಾಗ್​ ಮಾಡಿ ಒಂದು ಟ್ವೀಟ್​ ಮಾಡಿದ್ದಾರೆ. ಬೆಳಗೆದ್ದು... ನನ್ನ ಮೊದಲ ಹಾಡು, ಈ ಹಾಡಿನ ಚಿತ್ರೀಕರಣ ನನಗೆ ಇನ್ನೂ ನೆನಪಿದೆ. ನನ್ನಲ್ಲಿ ಸಾನ್ವಿಯ ಹುಡುಕಾಟ.... ಎಲ್ಲವೂ ಕಣ್ಮುಂದೆ ಬಂದು ಹೋಗುತ್ತದೆ ಎಂದು ರಶ್ಮಿಕಾ ಟ್ವೀಟ್​ ಮಾಡಿದ್ದಾರೆ.


ಅಜನೀಶ್​ ಲೋಕನಾಥ್​ ಅವರ ಸಂಗೀತ, ಧನಂಜಯ್​ ರಾಜನ್​ ಅವರ ಸಾಹಿತ್ಯ ಇರುವ ಈ ಹಾಡನ್ನು ಗಾಯಕ ವಿಜಯ ಪ್ರಕಾಶ್​ ಹಾಡಿದ್ದಾರೆ. ರಿಷಬ್​ ಶೆಟ್ಟಿ ನಿರ್ದೇಶನದ ಈ ಸಿನಿಮಾ 2016ರಲ್ಲಿ ತೆರೆ ಕಂಡಿತ್ತು.

Published by:Anitha E
First published: