• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sita Ramam: ರಶ್ಮಿಕಾ ಮಂದಣ್ಣ ಸಿನಿಮಾ ಬ್ಯಾನ್, ಸೀತಾ ರಾಮಂ ಚಿತ್ರತಂಡಕ್ಕೆ ಎದುರಾಯಿತು ಸಂಕಷ್ಟ

Sita Ramam: ರಶ್ಮಿಕಾ ಮಂದಣ್ಣ ಸಿನಿಮಾ ಬ್ಯಾನ್, ಸೀತಾ ರಾಮಂ ಚಿತ್ರತಂಡಕ್ಕೆ ಎದುರಾಯಿತು ಸಂಕಷ್ಟ

ಸೀತಾ ರಾಮಂ

ಸೀತಾ ರಾಮಂ

ಮಲಯಾಳಂ ಸಿನಿಮಾವಾದ ನಟ ದುಲ್ಕರ್​ ಸಲ್ಮಾನ್​ ಅಭಿನಯದ ಸೀತಾ ರಾಮಂ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಚಿತ್ರವು ನಾಳೆ (ಆಗಸ್ಟ್ 5) ಬಿಡುಗಡೆ ಆಗಲಿದೆ. ಆದರೆ ರಿಲೀಸ್​ಗೂ ಮುನ್ನವೇ ಚಿತ್ರತಂಡಕ್ಕೆ ಹೊಸ ಸಮಸ್ಯೆ ಎದುರಾಗಿದೆ. 

ಮುಂದೆ ಓದಿ ...
  • Share this:

‘ಕಿರಿಕ್ ಪಾರ್ಟಿ’  (Kirik Party) ಸಿನಿಮಾದ (Film) ಮೂಲಕ ಚಿತ್ರರಂಗಕ್ಕೆ (Film Industry)  ಪಾದಾರ್ಪಣೆ  ಮಾಡಿದ ಕೊಡಗಿನ ಕುವರಿ, ಕರ್ನಾಟಕದ ಸುಂದರಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಟಾಲಿವುಡ್ ಸೇರಿ ಬಾಲಿವುಡ್ ನಲ್ಲೂ  ಸಖತ್ ಮಿಂಚುತ್ತಿದ್ದಾರೆ. ಇದರ ನಡುವೆ ರಶ್ಮಿಕಾ ಅವರು ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ದುಲ್ಕರ್​ ಸಲ್ಮಾನ್​ (Dulquer Salmaan) ಅಭಿನಯದ ‘ಸೀತಾ ರಾಮಂ’ (Sita Ramam) ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ.  ಈ ಚಿತ್ರವೂ ಸಹ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ಸಾಕಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಆದರೆ ಇದರ ನಡುವೆ ಚಿತ್ರಕ್ಕೆ ಬ್ಯಾನ್​ ಬಿಸಿ ತಟ್ಟಿದೆ. 


ಸೀತಾ ರಾಮಂ ಚಿತ್ರ ಹಲವೆಡೆ ಬ್ಯಾನ್:


ಹೌದು, ಮಲಯಾಳಂ ಸಿನಿಮಾವಾದ ನಟ ದುಲ್ಕರ್​ ಸಲ್ಮಾನ್​ ಅಭಿನಯದ ಸೀತಾ ರಾಮಂ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಚಿತ್ರವು ನಾಳೆ (ಆಗಸ್ಟ್ 5) ಬಿಡುಗಡೆ ಆಗಲಿದೆ. ಆದರೆ ರಿಲೀಸ್​ಗೂ ಮುನ್ನವೇ ಚಿತ್ರತಂಡಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಕೆಲವು ರಾಷ್ಟ್ರಗಳಲ್ಲಿ ಈ ಚಿತ್ರವನ್ನು ಬ್ಯಾನ್​ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ವಿಷಯಗಳಿವೆ ಎಂದು ಚಿತ್ರ ಬಿಡುಗಡೆಗೆ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿವೆಯಂತೆ.


ವರದಿಯ ಪ್ರಕಾರ ಕುವೈತ್​, ಖತಾರ್​, ಸೌದಿ ಅರೇಬಿಯಾ, ಬಹ್ರೇನ್​, ಓಮನ್​ ಮುಂತಾದ ರಾಷ್ಟ್ರಗಳಲ್ಲಿ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್​ ಮಂಡಳಿ ಚಿತ್ರವನ್ನು ಬ್ಯಾನ್​ ಮಾಡಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಚಿತ್ರತಂಡ ಇದಿಗ ಮತ್ತೊಮ್ಮೆ ಸೆನ್ಸಾರ್​ಗೆ ಮನವಿ ಸಲ್ಲಿಸಿದೆ ಎನ್ನಲಾಗುತ್ತಿದೆ.


ಇನ್ನು, ರಶ್ಮಿಕಾ ಮಂದಣ್ಣ ಜೊತೆ ದುಲ್ಕರ್​ ಸಲ್ಮಾನ್ , ಮೃಣಾಲ್​ ಠಾಕೂಲ್ ಚಿತ್ರದಲ್ಲಿ​ ಮುಖ್ಯ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ. ಇನ್ನು, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರವು ಚಿತ್ರದಲ್ಲಿನ ಬಹುಮುಖ್ಯ ಪಾತ್ರವಾಗಿದೆ ಎಂದು ನಿರ್ದೇಶಕರು ಈಗಾಗಲೇ ತಿಳಿಸಿದ್ದಾರೆ.


ಇದನ್ನೂ ಓದಿ: Sita Ramam Movie: ಸೀತಾ ರಾಮಂ ಸಿನಿಮಾ ಟೀಸರ್ ರಿಲೀಸ್​, ಅದ್ಭುತ ಪ್ರೇಮಕಥೆ ಹೇಳಲಿದ್ದಾರೆ ದುಲ್ಕರ್ ಸಲ್ಮಾನ್


ನಾಳೆ ಚಿತ್ರ ಬಿಡುಗಡೆ: 


ಪಿಎಸ್ ವಿನೋದ್ ಈ ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡಿದ್ದು, ಅವರು ಸೆರೆಹಿಡಿದಿರುವ ಪ್ರತಿಯೊಂದು ಫ್ರೇಮ್ ಒಂದು ಕಲಾಕೃತಿಯಂತೆ ಬಂದಿದೆ ಎಂಬುದು ಜನರ ಅಭಿಪ್ರಾಯ. ಅಲ್ಲದೇ, ಇದರಲ್ಲಿ ಕಾಶ್ಮೀರದ ಸ್ಥಳಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ಅದ್ಭುತವಾದ ಅಭಿನಯ, ಮನಮುಟ್ಟುವ ಕಥೆ, ಸುಂದರವಾದ ದೃಶ್ಯಗಳು ಮತ್ತು ಮೋಡಿಮಾಡುವ ಸಂಗೀತದೊಂದಿಗೆ ಸೀತಾ ರಾಮಂ ಒಂದು ಅದ್ಭುತ ಪ್ರೇಮಕಥೆಯಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.


ಸೀತಾ ರಾಮಂ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಈ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.


ಇದನ್ನೂ ಓದಿ: Vikrant Rona: ವಿಕ್ರಾಂತ್​ ರೋಣ ಕುರಿತು ಅಪಸ್ವರ ಎತ್ತಿದ ಚೇತನ್, ಸ್ಯಾಂಡಲ್​ವುಡ್​ನಲ್ಲಿ ಬಿರುಗಾಳಿ ಎಬ್ಬಿಸಿದ ನಟ


ನಿರೀಕ್ಷೆ ಹುಟ್ಟಿಸಿರುವ ಸೀತಾ ರಾಮಂ ಟ್ರೈಲರ್:

top videos


     ಲೆಫ್ಟಿನೆಂಟ್ ರಾಮ್ ಎನ್ನುವ ವ್ಯಕ್ತಿಯ ಜೀವನದ ಒಳನೋಟವನ್ನು ನೀಡುತ್ತದೆ. ಆ ವ್ಯಕ್ತಿ ಕಾಶ್ಮೀರ ಕಣಿವೆಯಲ್ಲಿ ಒಂಟಿ ಸೈನಿಕನಾಗಿ ಗಸ್ತು ತಿರುಗುತ್ತಿರುವ ಅನಾಥ. ಅವನಿಗಾಗಿ, ಅವನ ಬಗ್ಗೆ ಕೇಳಲು ಯಾರೂ ಇಲ್ಲ, ಅವನಿಗೆ ಪತ್ರ ಬರೆಯಲು ಯಾರೂ ಇಲ್ಲ ಎನ್ನಲಾಗುತ್ತದೆ. ಎಲ್ಲರೂ ಹಾಗೆಯೇ ಅಂದುಕೊಂಡಿರುತ್ತಾರೆ. ಆದರೆ ಒಂದು ದಿನ ಅವನಿಗೆ ತನ್ನ ಹೆಂಡತಿ ಎಂದು ಹೇಳಿಕೊಳ್ಳುವ ಸೀತಾ ಮಹಾಲಕ್ಷ್ಮಿಯಿಂದ ಸರಣಿ ಪತ್ರಗಳು ಬರುತ್ತದೆ. ಇಲ್ಲಿಂದ ಕಥೆಗೆ ಟ್ವಿಸ್ಟ್​ ಸಿಗುತ್ತದೆ.

    First published: