ಎಲ್ಲೆ ಇರಲಿ, ಹೇಗೆ ಇರಲಿ.. ಎಲ್ಲೆ ಇದ್ದರೂ ನಾವು ನಮ್ಮ ಭಾಷೆಯನ್ನು ಮರೆಯಲು ಸಾಧ್ಯವೇ?. ಅಮೆರಿಕ(America)ಕ್ಕೆ ತೆರಳಿದ ಕೂಡಲೇ ಅದು ನಮ್ಮ ತಾಯ್ನಾಡು ಆಗುವುದಿಲ್ಲ.ದೇವರೇ ಬಂದು ಕನ್ನಡ(Kannada) ಪದಗಳನ್ನು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರೂ ಅವನನ್ನು ಕೊಲೆ ಮಾಡುತ್ತೇನೆ ಹಾಗೂ ಅವನು ನನ್ನನ್ನು ನರಕಕ್ಕೆ ಕಳಿಸಿ, ನಾಲಿಗೆ ಸೀಳಿ, ಬಾಯಿ ಹೊಲಿಸಿ ಹಾಕಿದ್ರೂ ಮೂಗಿನಲ್ಲಿ ಕನ್ನಡ ಪದಗಳನ್ನು ಮಾತನಾಡುವೆ ಎಂದು ಹೇಳುವ ಕನ್ನಡಿಗರೇ ನಮಗೆ ಇಷ್ಟ. ಆದರೆ,ಈ ನಟಿ(Actress)ಯರಿಗೆ ಅದೇನು ಆಗಿದ್ಯೋ ಏನೋ.. ಈ ಹಿಂದೆ ಕನ್ನಡದ ವಿಚಾರಕ್ಕೆ ರಶ್ಮಿಕಾ ಮಂದಣ್ಣ(Rashmika Mandanna) ಸಖತ್ ಟ್ರೋಲ್ ಆಗಿದ್ದರು. ಈ ಅಪ್ಪಟ ಕನ್ನಡತಿಗೆ ಬ್ರೇಕ್ ಕೊಟ್ಟಿದ್ದು ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ(Kirik Party) ಸಿನಿಮಾ. ಕಿರಿಕ್ ಪಾರ್ಟಿ ಬಳಿಕ ಕನ್ನಡದ ಗಡಿ ದಾಟಿದ ರಶ್ಮಿಕಾ ಈಗ ತಮಿಳು(Tamil), ತೆಲುಗು(Telugu) ಹಾಗೂ ಹಿಂದಿ(Hindi)ಯ ಬ್ಯುಸಿ ನಟಿ. ಸಾಲು ಸಾಲು ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಆಗಾಗ ವಿವಾದದಿಂದ ಸುದ್ದಿಯಾಗೋದು ಕಾಮನ್.ಆದರೆ. ಪದೇ ಪದೇ ರಶ್ಮಿಕಾ ತಾವು ಬಣ್ಣದ ಲೋಕಕ್ಕೆ ಕಾಲಿಟ್ಟ (sandalwood)ಭಾಷೆ ಕನ್ನಡವನ್ನೇ ಮರೆಯೋ ಮೂಲಕ ಪ್ರತಿಭಾರಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಕನ್ನಡವನ್ನೇ ಮರೆತು ಬಿಟ್ಟರಾ ನಟಿ!
ರಶ್ಮಿಕಾ ಮಂದಣ್ಣ ಒಂದು ಕಾಲದಲ್ಲಿ ಕರ್ನಾಟಕದ ಕ್ರಶ್ ಎಂದು ಹೆಸರಾದವರು. ಆದರೆ ಕನ್ನಡದ ಗಡಿ ದಾಟುತ್ತಿದ್ದಂತೆ ನ್ಯಾಶನಲ್ ಕ್ರಶ್ ಎನ್ನಿಸಿದ ರಶ್ಮಿಕಾ ಇತ್ತೀಚಿಗೆ ಕನ್ನಡವನ್ನು, ಕನ್ನಡಿಗರನ್ನು ಮರೆತು ಬಿಟ್ಟಿದ್ದಾರೆ. ಇದಕ್ಕೆ ಈಗಾಗಲೆ ಹಲವು ಭಾರಿ ರಶ್ಮಿಕಾ ತಮ್ಮ ಮಾತುಕತೆ ಮೂಲಕ ಸಾಕ್ಷಿ ಒದಗಿಸಿದ್ದಾರೆ. ಇದೀಗ ಮತ್ತೊಮ್ಮೆ ರಶ್ಮಿಕಾ ತಮ್ಮ ಫೆವರಿಟ್ ಹೀರೋ ಯಾರು ಎಂಬ ಪ್ರಶ್ನೆಗೆ ಕನ್ನಡಿಗರೆಲ್ಲರನ್ನೂ ಮರೆತು ಬೇರೆ ಭಾಷೆಯ ಹೀರೋಗಳನ್ನೇ ನೆನಪಿಸಿಕೊಳ್ಳುವ ಮೂಲಕ ಕನ್ನಡಿಗರ ಅಭಿಮಾನಕ್ಕೆ ಕಿಚ್ಚು ಹಚ್ಚಿದ್ದಾರೆ. ಇದನ್ನು ಕಂಡ ನೆಟ್ಟಿಗರು ಈಕೆಯ ವಿರುದ್ಧ ಗರಂ ಆಗಿದ್ದಾರೆ. ನೀನು ಎಷ್ಟೇ ದೊಡ್ಡವಳಾದರೂ ನಿನಗೆ ಜನ್ಮಕೊಟ್ಟ ತಾಯಿಯನ್ನ ಮರೆಯಬಾರದು, ನೀನು ಎಷ್ಟೇ ಎತ್ತರಕ್ಕೂ ಹೋದರು ಹತ್ತಿ ಹೋದ ಮೆಟ್ಟಲುಗಳನ್ನು ಮರೆಯಬಾರದು ಎಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನು ಓದಿ : `ಪುಷ್ಪ’ ಐಟಂ ಸಾಂಗ್ನಲ್ಲಿ ಸಮಂತಾ: ಪೋಸ್ಟರ್ ಕಂಡು ಜೊಲ್ಲು ಸುರಿಸಿದ ಪಡ್ಡೆ ಹೈಕ್ಳು!
ಕನ್ನಡ ನಟರ ಹೆಸರೇಳದ ಕಿರಿಕ್ ಬೆಡಗಿ!
ಇತ್ತೀಚೆಗೆ ಖ್ಯಾತ ನಿರೂಪಕ ಫೇರಿಡೂನ್ ಶಹ್ರ್ಯಾರ್ ಅವರ ಖಾಸಗೀ ಸಂದರ್ಶನದಲ್ಲಿ ರಶ್ಮಿಕಾ ಪಾಲ್ಗೊಂಡಿದ್ದಾರೆ. ಈ ಸಂದರ್ಶನದಲ್ಲಿ ರಶ್ಮಿಕಾ ಅವರಿಗೆ ಒಂದಷ್ಟು ಸಿನಿಮಾಗೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಕೇಳಲಾಗಿದೆ. ಜೊತೆಗೆ ನಿಮ್ಮ ಫೇವರಿಟ್ ಸಹ ಕಲಾವಿದ ಯಾರು ಎಂದು ಕೇಳಲಾಗಿದೆ. ಇದಕ್ಕೆ ರಶ್ಮಿಕಾ ಅಮಿತಾಬ್ ಬಚ್ಚನ್ ಎಂದು ಉತ್ತರ ನೀಡಿದ್ದಾರೆ. ನಂತರ ಇಂಡಿಯನ್ ಸಿನಿಮಾಗಳಲ್ಲಿ ನಿಮ್ಮ ಫೇವರಿಟ್ ನಟರು ಯಾರು ಎಂದು ಪ್ರಶ್ನೆ ಕೇಳಿದ್ದಾರೆ ಫೇರಿಡೂನ್ ಶಹ್ರ್ಯಾರ್. ಇದಕ್ಕೆ ಉತ್ತರಿಸಿರುವ ರಶ್ಮಿಕಾ ಬಾಲಿವುಡ್ನ ರಣ್ಬೀರ್ ಕಪೂರ್, ತೆಲುಗಿನಲ್ಲಿ ಅಲ್ಲು ಅರ್ಜುನ್, ಮಲಯಾಳಂನಲ್ಲಿ ಫಹಾದ್ ಮತ್ತು ತಮಿಳಿನಲ್ಲಿ ವಿಜಯ್ ಸೇತುಪತಿ ಎಂದು ಉತ್ತರಿಸಿ ಸುಮ್ಮನಾಗಿದ್ದಾರೆ.
ಇದನ್ನು ಓದಿ : RRR ಟ್ರೈಲರ್ ರಿಲೀಸ್, ರಾಮ್-ಭೀಮ್ ಅಬ್ಬರ: ಮತ್ತೊಂದು ದಾಖಲೆ ಸೃಷ್ಟಿಸೋದು ಫಿಕ್ಸ್!
ನಮ್ಮ ನಟರು ನೆನಪಾಗಿಲ್ವಾ ಅಂತ ನೆಟ್ಟಿರ ಕ್ಲಾಸ್!
ಕನ್ನಡದಲ್ಲಿ ರಶ್ಮಿಕಾಗೆ ಇಷ್ಟ ಆಗುವಂತ ನಟರೇ ಇಲ್ವಾ? ಕನ್ನಡ ಸಿನಿಮಾಗಳನ್ನು ರಶ್ಮಿಕಾ ಯಾಕಿಷ್ಟು ತಾತ್ಸಾರ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಈ ಹಿಂದೆ ಕನ್ನಡ ಬರಲ್ಲ ಎಂದು ರಶ್ಮಿಕಾ ಮಂದಣ್ಣ ಸಖತ್ ಟ್ರೋಲ್ ಆಗಿದ್ದರು. ಇದೀಗ ಮತ್ತೆ ಸ್ಯಾಂಡಲ್ವುಡ್ ಹಾಗೂ ಕನ್ನಡವನ್ನು ಕಡೆಗಣಿಸಿರುವುದು ಕನ್ನಡಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ