ಕೊರೋನಾ ಲಾಕ್ಡೌನ್ ಆರಂಭವಾದಾಗಿನಿಂದ ಸೆಲೆಬ್ರಿಟಿಗಳು ಒಬ್ಬೊಬ್ಬರು ಒಂದೊಂದು ರೀತಿ ಚಾಲೆಂಜ್ಗಳನ್ನು ಮಾಡುತ್ತಾ, ಮತ್ತೊಬ್ಬರನ್ನು ನಾಮಿನೇಟ್ ಮಾಡುತ್ತಿದ್ದಾರೆ. ಈ ಹಿಂದೆ ಟಾಲಿವುಡ್ನಲ್ಲಿ 'ಬಿ ದ ರಿಯಲ್ ಮ್ಯಾನ್' ಚಾಲೆಂಜ್ ಸದ್ದು ಮಾಡಿತ್ತು.
ಈಗ ಮತ್ತೊಂದು ಚಾಲೆಂಜ್ ಸದ್ದು ಮಾಡುತ್ತಾ ಸುದ್ದಿಯಲ್ಲಿದೆ. ಅದೇ ಈ ಗ್ರೀನ್ ಇಂಡಿಯಾ ಚಾಲೆಂಜ್. ಸೆಲೆಬ್ರಿಟಿಗಳು ಒಂದೊಂದು ಸಸಿ ನೆಟ್ಟು, ಮತ್ತೊಬ್ಬರನ್ನು ನಾಮಿನೇಟ್ ಮಾಡುತ್ತಿದ್ದಾರೆ. ಈ ಹಿಂದೆ ನಟ ಪ್ರಭಾಸ್ ಸಹ ಈ ಚಾಲೆಂಜ್ ಸ್ವೀಕರಿಸಿದ್ದರು.
ಇತ್ತೀಚೆಗಷ್ಟೆ ಸಮಂತಾ ತಮ್ಮ ಮಾವ ನಾಗಾರ್ಜನ ಜೊತೆ ಸೇರಿ ಮನೆಯಂಗಳದಲ್ಲಿ ಎರಡು ಸಸಿಗಳನ್ನು ನೆಟ್ಟಿದ್ದರು. ಅದರ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸವಾಲನ್ನು ಕೀರ್ತಿ ಸುರೇಶ್ ಹಾಗೂ ರಶ್ಮಿಕಾಗೆ ಪಾಸ್ ಮಾಡಿದ್ದರು.
ಇದನ್ನೂ ಓದಿ: ಹೊಸ ಲುಕ್ನಲ್ಲಿ ಮಹೇಶ್ ಬಾಬು: ಸಾಮಾಜಿಕ ಜಾಲತಾಣದಲ್ಲಿ ಡಿಪಿ ಬದಲಿಸಿದ ಪ್ರಿನ್ಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ