ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ Rashmika Mandanna: ಆರಂಭವಾಗಿದೆ ಪರ-ವಿರೋಧದ ಚರ್ಚೆ

ಈಗಾಗಲೇ ಒಂದು ಜಾಹೀರಾತುನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರು ಈಗ ಮತ್ತೊಂದು ಜಾಹೀರಾತಿನಲ್ಲಿ ಬಾಲಿವುಡ್​ ನಟ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡಿದ್ದಾರೆ. ಹೌದು, ವಿಕ್ಕಿ ಕೌಶಲ್ -ರಶ್ಮಿಕಾ ಅಭಿನಯದ ಜಾಹೀರಾತು ರಿಲೀಸ್​ ಆಗುತ್ತಿದ್ದಂತೆಯೇ ನೆಟ್ಟಿಗರು ಮತ್ತೆ ರಶ್ಮಿಕಾರನ್ನು ಟೀಕಿಸಲು ಪ್ರಾರಂಭಿಸಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ನಟ ವಿಕ್ಕಿ ಕೌಶಲ್

ರಶ್ಮಿಕಾ ಮಂದಣ್ಣ ಹಾಗೂ ನಟ ವಿಕ್ಕಿ ಕೌಶಲ್

  • Share this:
ಸ್ಯಾಂಡಲ್​ವುಡ್​ನಲ್ಲಿ ಕಿರಿಕ್​ ಹುಡುಗಿಯಾಗಿ... ಟಾಲಿವುಡ್​ನಲ್ಲಿ ಲಿಲ್ಲಿಯಾಗಿ ಬಾಲಿವುಡ್​ನಲ್ಲಿ ಮಜ್ನುಗೆ ಲೈಲಾ ಆಗಿ ಮಿಂಚುತ್ತಿರುತ್ತಿದ್ದಾರೆ ನಟಿ ಕೊಡವತಿ ರಶ್ಮಿಕಾ ಮಂದಣ್ಣ (Rashmika Mandanna). ಸಾಲು ಸಾಲು ಸಿನಿಮಾಗಳು, ಫೋಟೋಶೂಟ್​ಗಳ ಜತೆಗೆ ಈಗ ಜಾಹೀರಾತಿನಲ್ಲೂ ಬ್ಯುಸಿಯಾಗಿದ್ದಾರೆ. ಈಗ ರಶ್ಮಿಕಾ ಕಾಣಿಸಿಕೊಂಡಿರುವ ಹೊಸ ಜಾಹೀರಾತೊಂದು (New Ad) ವಿವಾದಕ್ಕೀಡಾಗಿದೆ. ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಾ ವಿವಾದಕ್ಕೀಡಾಗಿ ಸುದ್ದಿಯಲ್ಲಿರುವ ರಶ್ಮಿಕಾ ಅವರಿಗೆ ಈಗ  ಹೊಸ ಜಾಹೀರಾತು ಸಹ  ತಲೆನೋವಾಗಿ ಪರಿಣಮಿಸಿದೆ ಎಂದರೆ ತಪ್ಪಾಗದು. 

ಬಾಲಿವುಡ್​ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ನಂತರ ರಶ್ಮಿಕಾ ಮಂದಣ್ಣ ಅವರಿಗೆ ಜಾಹೀರಾತಿನಲ್ಲಿ ನಟಿಸುವ ಅವಕಾಶ ಸಹ ಸಿಕ್ಕಿತು. ಈಗಾಗಲೇ ಒಂದು ಜಾಹೀರಾತುನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರು ಈಗ ಮತ್ತೊಂದು ಜಾಹೀರಾತಿನಲ್ಲಿ ಬಾಲಿವುಡ್​ ನಟ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡಿದ್ದಾರೆ. ಹೌದು, ವಿಕ್ಕಿ ಕೌಶಲ್ -ರಶ್ಮಿಕಾ ಅಭಿನಯದ ಜಾಹೀರಾತು ರಿಲೀಸ್​ ಆಗುತ್ತಿದ್ದಂತೆಯೇ ನೆಟ್ಟಿಗರು ಮತ್ತೆ ರಶ್ಮಿಕಾರನ್ನು ಟೀಕಿಸಲು ಪ್ರಾರಂಭಿಸಿದ್ದಾರೆ.ಇದೊಂದು ಪುರುಷರ ಒಳ ಉಡುಪಿನ ಜಾಹೀರಾತಾಗಿದ್ದು, ಇದರಲ್ಲಿ ವಿಕ್ಕಿ ಕೌಶಲ್​ ಅವರ ಜತೆ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ರಶ್ಮಿಕಾ ಯೋಗಾ ತರಬೇತುದಾರಳಾಗಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತಿನಲ್ಲಿ ಏನಿದೆ...

ಅಲ್ಲಿ ಯೋಗ ಕಲಿಯಲು ಬರುವ ವಿಕ್ಕಿ ಅವರು ಒಮ್ಮೆ ಮೇಲಕ್ಕೆ ಕೈ ಎತ್ತುತ್ತಾರೆ.ಆಗ ಅವರು ಧರಿಸಿರುವ ಒಳುಡುಪಿನ ಪಟ್ಟಿ ಕಾಣಿಸುತ್ತದೆ. ಇದೇ ಜಾಹೀರಾತಿನ ಮತ್ತೊಂದು ಭಾಗದಲ್ಲಿ ವಿಕ್ಕಿ ಅವರ ಉಳ ಉಡುಪಿನ ಪಟ್ಟಿಯನ್ನು ನೋಡಲೆಂದೇ ರಶ್ಮಿಕಾ, ಅವರಿಗೆ ಯೋಗಾ ಮ್ಯಾಟ್​ ಅನ್ನು ಮೇಲೆ ಇಡುವಂತೆ ಹೇಳುತ್ತಾರೆ. ಆಗ ಕಾಣಿಸುವ ಒಳ ಉಡುಪಿನ ಪಟ್ಟಿಯನ್ನು ನೋಡಿ ಲಿಲ್ಲಿ ಮೈಮರೆಯುತ್ತಾರೆ.

ಈಗಾಗಲೇ ಈ ಜಾಹೀರಾತು ತುಂಬಾ ವೈರಲ್ ಆಗುತ್ತಿದೆ. ಅಲ್ಲದೆ ಈ ಕುರಿತಾದ ಪರ ಹಾಗೂ ವಿರೋಧದ ಚರ್ಚೆಗಳು ಆರಂಭವಾಗಿವೆ. ರಶ್ಮಿಕಾ ಬೆಳೆಯುತ್ತಿದ್ದಂತೆಯೇ ಏಕೆ ಇಂತಹ ಆಯ್ಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಪುರುಷ ಒಳ ಉಡುಪನ್ನು ನೋಡಿ ಮಹಿಳೆಯರು ಆಕರ್ಷಿತರಾಗುತ್ತಾರಾ ಎನ್ನುವ ಅರ್ಥ ಬರುವಂತೆ ಜಾಹೀರಾತನ್ನು ಚಿತ್ರೀಕರಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈ ತಲುಪಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಸದ್ಯ ಸಿದ್ಧಾರ್ಥ್​ ಮಲ್ರೋತ್ರ ಜತೆ ಮಿಷನ್​ ಮಜ್ನು ಹಾಗೂ ಅಮಿತಾಭ್​ ಬಚ್ಚನ್​ ಅವರೊಂದಿಗೆ ಗುಡ್​ ಬೈ ಸಿನಿಮಾ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಅಲ್ಲದೆ ತೆಲುಗಿನಲ್ಲಿ ಪುಷ್ಪ ಹಾಗೂ ಆಡವಾಳ್ಳು ಮೀಕು ಜೋಹಾರುಲು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಸದ್ಯ ಪುಷ್ಪ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ರಶ್ಮಿಕಾ ಅದರಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಸಿದ್ಧಾರ್ಥ್ ಮಲಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಮುಂಬೈನಲ್ಲಿ ಚಿತ್ರತಂಡ ಸಖತ್ ಪಾರ್ಟಿ ಆಯೋಜಿಸಿತ್ತು. ಆದರೆ ಅಮಿತಾಭ್​ ಬಚ್ಚನ್ ಜೊತೆ ರಶ್ಮಿಕಾ ನಟಿಸುತ್ತಿರುವ ಗುಡ್​ ಬೈ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇದೆ. ಆದರೆ, ಮೊದಲನೇ ಹಂತರ ಚಿತ್ರೀಕರಣ ಪೂರ್ಣಗೊಂಡಿದೆ. ರಶ್ಮಿಕಾ ಸದ್ಯ ಪುಷ್ಪ ಹಾಗೂ ಆಡವಾಳ್ಳು ಮೀಕು ಜೋಹಾರುಲು ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಕೈಯಲ್ಲಿದೆ ಮೂರನೇ ಬಾಲಿವುಡ್​ ಸಿನಿಮಾ

ಇದರ ನಡುವೆಯೇ 3ನೇ ಬಾಲಿವುಡ್​ ಸಿನಿಮಾ ಸಹ ರಶ್ಮಿಕಾ ಕೈ ಸೇರಿದೆ. ಆದರೆ ಯಾವ ಸಿನಿಮಾ, ನಿರ್ಮಾಪಕರು ಯಾರು ಎಂದು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್​ಸ್ಟಾಗ್ರಾಂ ಲೈವ್​ನಲ್ಲಿ ಅಭಿಮಾನಿಗಳಿಗೆ 3ನೇ ಬಾಲಿವುಡ್​ ಸಿನಿಮಾ ಕುರಿತಾಗಿ ಸುದ್ದಿ ನೀಡಿದ್ದಾರೆ ರಶ್ಮಿಕಾ. ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಚೂಸಿಯಾಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಅಲ್ಲದೆ ಈ ವರ್ಷದ ಜೊತೆಗೆ ಮುಂದಿನ ವರ್ಷ ಸಹ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆಯಂತೆ. ಒಟ್ಟಾರೆ ಕೊರೋನಾ ಸಂಕಷ್ಟದಲ್ಲೂ ರಶ್ಮಿಕಾ ಮಾತ್ರ ಸಿನಿಮಾಗಳು, ಫೋಟೋಶೂಟ್​, ಜಾಹೀರಾತು ಅಂತ ಸಖತ್ ಬ್ಯುಸಿಯಾಗಿದ್ದಾರೆ.
Published by:Anitha E
First published: