Video: ಕಿರಿಕ್ ಹುಡುಗಿ ರಶ್ಮಿಕಾ ಅವರ ಫಿಟ್​ನೆಸ್​ ವಿಡಿಯೋದಲ್ಲಿದೆ ಅವರ ಮುಂದಿನ ಸಿನಿಮಾದ ಸುಳಿವು!

news18
Updated:June 26, 2018, 4:12 PM IST
Video: ಕಿರಿಕ್ ಹುಡುಗಿ ರಶ್ಮಿಕಾ ಅವರ ಫಿಟ್​ನೆಸ್​ ವಿಡಿಯೋದಲ್ಲಿದೆ ಅವರ ಮುಂದಿನ ಸಿನಿಮಾದ ಸುಳಿವು!
news18
Updated: June 26, 2018, 4:12 PM IST
ನ್ಯೂಸ್​ 18 ಕನ್ನಡ 

ಕಳೆದ ತಿಂಗಳಿನಿಂದ ಜೋರಾಗಿದ್ದ 'ಹಮ್​ ಫಿಟ್ ಹೈ ತೋ ಇಂಡಿಯಾ ಫಿಟ್​ ಹೈ' ಫಿಟ್‍ನೆಸ್ ಸವಾಲಿನ ಅಭಿಯಾನ ಇನ್ನೇನು ತಣ್ಣಾಗಾಗುವ ಹಂತಕ್ಕೆ ತಲುಪಿತ್ತು. ಹೀಗಿರುವಾಗಲೇ ಸಾನ್ವಿಯಾಗಿ ತನ್ನ ನಗುವಿನಿಂದ, ಆ ಮುಗ್ಧ ಮಾತಿನಿಂದ ಹುಡುಗರ ನಿದ್ದೆಗೆಡಿಸಿದ್ದ ರಶ್ಮಿಕಾ ಫಿಟ್‍ನೆಸ್ ಸವಾಲಿಗೆ ಮತ್ತೆ ಹುರುಪು ತುಂಬಿದ್ದಾರೆ. ಜೀವನದಲ್ಲಿ ಜಿಮ್ ಕಡೆ ಮುಖ ಹಾಕದವರು ಕೂಡ ನಾಳೆಯಿಂದ ಜಿಮ್‍ಗೆ ಸೇರಿಕೊಳ್ಳುತ್ತೇನೆ ಎಂದು ಹೇಳುವಷ್ಟರ ಮಟ್ಟಿಗಿದೆ ಅವರ ಈ ಸವಾಲು.

ರಶ್ಮಿಕಾ ತಮ್ಮ ವಿಡಿಯೋದ ಕೊನೆಯಲ್ಲಿ ತಮ್ಮ ಅಭಿಮಾನಿಗಳಿಗೆ ಒಂದು ಆಶ್ಚರ್ಯವನ್ನೂ ಇಟ್ಟಿದ್ದಾರೆ. ಅದೇನು ಎಂದು ತಿಳಿಯೋಕೆ ಈ ವರದಿ ಓದಿ.

ಫಿಟ್‍ನೆಸ್ ಚಾಲೆಂಜ್ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟು, ದೊಡ್ಡ ದೊಡ್ಡ ಸ್ಟಾರ್​ಗಳೆಲ್ಲ ಚಾಲೆಂಜ್ ಮಾಡಿಯೂ ಆಗಿತ್ತು. ಇನ್ನೇನು ಇದರ ಬಿರುಸು ಕಮ್ಮಿಯಾಯಿತು ಎನ್ನುವ ವಾತಾವರಣವಿತ್ತು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಖಡಕ್ಕಾದ ಫಿಟ್​ನೆಸ್​ ಸವಾಲನ್ನು ನೀಡಿದ್ದಾರೆ.

ನಿಮ್ಮೆಲ್ಲರಿಗೂ ರಶ್ಮಿಕಾ ಅಂದರೆ ಆ ಮುದ್ದು ಮೊಗ, ಮುಗ್ಧ ನೋಟ, ಮೋಹಕ ನಗೆ ಕಣ್ಣ ಮುಂದೆ ಬರುತ್ತೆ. ಮನಸ್ಸು ಬೆಳಗೆದ್ದು ಯಾರ ಮುಖವ ನೋಡಿದೆ ಅಂತ ಗುನುಗೋಕೆ ಶುರು ಮಾಡುತ್ತೆ. ಆದರೆ ನೀವು ಈ ವಿಡಿಯೋ ನೋಡಿದರೆ ಬೆಸ್ತು ಬೀಳುತ್ತಿರಿ. ಅರೇ! ನಿಜವಾಗಲೂ ಕಿರಿಕ್​ ಹುಡುಗಿ ರಶ್ಮಿಕಾನ ಅಂತ ಅಚ್ಚರಿಗೊಳ್ಳುತ್ತೀರಿ.



ಹೌದು, ಇದು ರಶ್ಮಿಕಾ ಫಿಟ್‍ನೆಸ್ ಚಾಲೆಂಜ್. ಅಬ್ಬಾಬ್ಬಾ ಅಷ್ಟು ಭಾರ ಇರೋ ಟೈಯರನ್ನ ಹೇಗೆ ಎತ್ತಿ ಎತ್ತಿ ಉರುಳಿಸುತ್ತಾ ಇದ್ದಾರೆ ನೋಡಿ. ಇವರ ಈ ಕಸರತ್ತು ನೋಡುತ್ತಿದ್ದರೆ  ಎಂತಹವರಿಗೂ ಜಿಮ್​ ಸೇರುವ ಆಸೆ ಮೂಡುವುದಂತೂ ಖಚಿತ. ಫಿಟ್‍ನೆಸ್ ಕೇವಲ ದೇಹದ ಕಸರತ್ತಲ್ಲ, ಮೆದುಳಿಗೂ ಕೂಡ ಕಸರತ್ತು ಕೊಡಬೇಕು ಅಂತ ಕೊನೆಯಲ್ಲಿ ಚೆಸ್ ಬೋರ್ಡ್ ಮುಂದೆ ಸಹ ಕುಂತಿದ್ದಾರೆ. ಇದು ಸಹ ಫಿಟ್​ನೆಸ್​ ಸವಾಲಿನ ಒಂದು ಭಾಗ ಅಂತ ನೀವು ಅಂದುಕೊಂಡರೆ ಅದರಲ್ಲಿ ತಪ್ಪಿಲ್ಲ. ಆದರೆ ಈ ಚದುರಂಗದ ಆಟವನ್ನು ಆಡುವ ಮೂಲಕ ರಶ್ಮಿಕಾ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ.

ಇನ್ನು ರಶ್ಮಿಕಾಗೆ ಚಾಲೆಂಜ್ ಕೊಟ್ಟಿದ್ದು ನಟ ರಕ್ಷಿತ್ ಶೆಟ್ಟಿ. ಸುದೀಪ್ ಅವರ ಸಾವಲನ್ನು  ಸ್ವೀಕರಿಸಿದ್ದ ರಕ್ಷಿತ್ ತಮ್ಮ ನಾಯಿ ಚಾರ್ಲಿ ಜೊತೆ ವ್ಯಾಯಾಮ ಮಾಡಿದ್ದ ವಿಡಿಯೋ ಹಾಕಿದ್ದರು. ಹಾಗೆ ರಶ್ಮಿಕಾಗೆ ಚಾಲೆಂಜ್ ಪಾಸ್ ಮಾಡಿದ್ದರು. ಸದ್ಯ ರಶ್ಮಿಕಾ ಈ ಸವಾಲನ್ನು ದಿಗಂತ್, ನಿರ್ದೇಶಕ ಸೆನ್ನಾ ಹೆಗಡೆ, ಸೇರಿ ಸಾಕಷ್ಟು ಜನಕ್ಕೆ ಚಾಲೆಂಜ್ ಪಾಸ್ ಮಾಡಿದ್ದಾರೆ. ಈ ಮೂಲಕ ಫಿಟ್​ನೆಸ್ ಸವಾಲನ್ನುಇನ್ನಷ್ಟು ಬಿರುಸುಗೊಳಿಸಿದ್ದಾರೆ.
First published:June 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ