- ಅನಿತಾ ಈ,
ಟಾಲಿವುಡ್ ಲಿಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾಗಳಿಗಿಂತ ಹೆಚ್ಚಾಗಿ ಅವರು ವಿವಾದಗಳು ಹಾಗೂ ಟ್ರಾಲ್ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇತ್ತೀಚೆಗೆ ತುಂಡುಗೆ ತೊಟ್ಟು ಬೋಲ್ಡ್ ಫೋಟೋಶೂಟ್ಗಳಿಗೆ ಪೋಸ್ ನೀಡಿದ್ದಾರೆ. ಈಗ ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ರಶ್ಮಿಕಾರ ಈ ಬೋಲ್ಡ್ ಫೋಟೋಗಳಿಗೆ ಮೆಚ್ಚುಗೆಗಿಂತ ಹೆಚ್ಚಾಗಿ ಟೀಕೆಗಳೇ ಕೇಳಿ ಬಂದಿದ್ದು, ಟ್ರಾಲ್ಗೆ ಬಲಿಯಾಗಿದ್ದಾರೆ. ಪ್ರತಿ ಸತಿ ಅವರ ಬೋಲ್ಡ್ ದೃಶ್ಯ, ಕಿಸ್ಸಿಂಗ್ ದೃಶ್ಯ ಹಾಗೂ ತುಂಡುಗುಗೆ ಚಿತ್ರಗಳನ್ನು ಟ್ರಾಲ್ ಮಾಡುವ ಮಂದಿಗೆ ರಶ್ಮಿಕಾ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಸಬೂಬು ಹೇಳುವ ಮೂಲಕ ಪರೋಕ್ಷವಾಗಿ ಬುದ್ಧಿ ಹೇಳಲು ಪ್ರಯತ್ನಿಸಿ, ಮತ್ತೆ ನಗೆಪಾಟಲಿಗೀಡಾಗಿದ್ದಾರೆ.
ಹೌದು, ರಶ್ಮಿಕಾ ಕೆಲ ದಿನಗಳಿಂದ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೋಲ್ಡ್ ಹಾಗೂ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ಅದಕ್ಕೆ ಜಾಲತಾಣಿಗರು ಕೆಟ್ಟದಾಗಿ ಟೀಕಿಸುವುದರೊಂದಿಗೆ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾ ಸದ್ಯ ಬೋಲ್ಡ್ ಫೋಟೋಶೂಟ್ ಕುರಿತಂತೆ ಒಂದು ಸ್ಪಷ್ಟನೆ ನೀಡಿದ್ದಾರೆ. 'ಈ ಇಡೀ ಫೋಟೋಶೂಟ್ ಅನ್ನು ಜನರು ತಮ್ಮನ್ನ ತಾವು ಪ್ರೀತಿಸಲಿ ಎಂದು ಮಾಡಿಸಿದ್ದು. ನೀವು ದಪ್ಪಗಿರಿ, ತೆಳ್ಳಗಿರಿ, ನಿಮ್ಮ ತ್ವಚೆಯ ಬಣ್ಣ ಹೇಗೇ ಇರಲಿ ಅದನ್ನೇ ನೀವು ಪ್ರೀತಿಸಿ ಎಂದು ಹೇಳಲು ಈ ಫೋಟೋಶೂಟ್ ಮಾಡಿಸಿದರ ಉದ್ದೇಶ' ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ