Rashmika Mandanna: ರಶ್ಮಿಕಾ ಬಗ್ಗೆ ಅಷ್ಟೇ ಅಲ್ಲ, ಅವ್ರ ನಾಯಿ ಬಗ್ಗೆಯೂ ಕೇಳಿಬಂತು ಗಾಸಿಪ್​! ಇದೇನ್​ ಹೊಸ ಕಥೆ ಅಂತೀರಾ? ಇಲ್ಲಿದೆ ನೋಡಿ

ಇಷ್ಟು ದಿನಗಳ ಕಾಲ ಕೇವಲ ರಶ್ಮಿಕಾ ಅವರ ಮೇಲೆ ಗಾಸಿಪ್ ಗಳು ಕೇಳಿಬರುತ್ತಿತ್ತು. ಆದರೆ ಈ ಬಾರಿ ವಿಶೇಷ ಎಂಬಂತೆ ಅವರ ನಾಯಿಯ (Dog) ಮೇಲೆ ಗಾಸಿಫ್ ಒಂದು ಕೇಳಿಬಂದಿದೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಏನೇ ಮಾಡಿದರೂ ಸುದ್ದಿಯಲ್ಲಿರುತ್ತಾರೆ. ಹೊಸ ಸಿನಿಮಾ (Movie) ಅನೌನ್ಸ್ ಮಾಡಿದರೂ ಸುದ್ದಿಯಾಗುವ ಇವರು, ಹೆಚ್ಚು ಗಾಸಿಫ್, ರೂಮರ್ಸ್, ಟ್ರೋಲ್ (Troll)​ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆದರೆ ಇವುಗಳಿಗೆ ಎಂದಿಗೂ ತಲೆ ಕೆಡಿಸಿಕೊಳ್ಳದ ರಶ್ಮಿಕಾ ತಮ್ಮ ಸ್ಥಾನದಲ್ಲಿ ದಿನೇ ದಿನೇ ಮತ್ತಷ್ಟು ಎತ್ತರಕ್ಕೆ ಏರುತ್ತಿದ್ದಾರೆ. ಈಗಂತೂ ಬಹುಭಾಷಾ ನಟಿ, ಫ್ಯಾನ ಇಂಡಿಯಾನಟಿಯಾಗಿರುವ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಷ್ಟು ದಿನಗಳ ಕಾಲ ಕೇವಲ ರಶ್ಮಿಕಾ ಅವರ ಮೇಲೆ ಗಾಸಿಪ್ ಗಳು ಕೇಳಿಬರುತ್ತಿತ್ತು. ಆದರೆ ಈ ಬಾರಿ ವಿಶೇಷ ಎಂಬಂತೆ ಅವರ ನಾಯಿಯ (Dog) ಮೇಲೆ ಗಾಸಿಫ್ ಒಂದು ಕೇಳಿಬಂದಿದೆ.

ರಶ್ಮಿಕಾ ನಾಯಿಯ ಬಗ್ಗೆ ಗಾಸಿಪ್:

ಹೌದು, ಆಶ್ಚರ್ಯವಾದರೂ ಇದು ಸತ್ಯ, ಕೇವಲ ಇಷ್ಟು ದಿನಗಳ ವರೆಗೆ ರಶ್ಮಿಕಾ ಅವರ ಬಗ್ಗೆ ಮಾತ್ರ ಗಾಸಿಪ್ ಗಳು ಹರಿದಾಡುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಅವರ ನಾಯಿಯ ಬಗ್ಗೆ ಗಾಸಿಪ್ ಒಂದು ಹರಿದಾಡುತ್ತಿದೆ. ಅದೇನೆಂದರೆ, ರಶ್ಮಿಕಾ ಅವರ ನಾಯಿಯಿಂದಾಗಿ ನಿರ್ಮಾಪಕರಿಗೆ ತೊಂದರೆ ಆಗುತ್ತಿದೆಯಂತೆ ಎಂಬ ಸುದ್ದಿಯೊಂದು ಎಲ್ಲಡೆ ಹರಿದಾಡಿತ್ತು. ಆದರೆ ಇದೀಗ ರಶ್ಮಿಕಾ ಈ ಕುರಿತು ಟ್ವಿಟರ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಏನು ಈ ಗಾಸಿಪ್?:

ಇನ್ನು, ರಶ್ಮಿಕಾ ಅವರ ನಾಯಿಯ ಬಗ್ಗೆ ಖಾಸಗಿ ಮಾಧ್ಯಮವೊಂದು ಟ್ವೀಟ್ ಮಾಡಿತ್ತು. ಅದರಲ್ಲಿ, ‘ರಶ್ಮಿಕ ಅವರ ಜೊತೆಗೆ ಅವರ ನಾಯಿಗೂ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಬೇಕು ಎಂದು ಮಂದಣ್ಣ ಅವರು ಹೇಳುತ್ತಿದ್ದಾರೆ. ಏಕೆಂದರೆ ಅವರು ತಮ್ಮ ನಾಯಿಯನ್ನು ಬಿಟ್ಟು ಒಂದು ಕ್ಷಣವೂ ಇರುವುದಿಲ್ಲವಂತೆ. ಹೀಗಾಗಿ ಈ ವಿಷಯವು ನಿರ್ಮಾಪಕರಿಗೆ ಇನ್ನಿಲ್ಲದ ತೊಂದರೆ ಉಂಟುಮಾಡುತ್ತಿದೆ‘ ಎಂದು ಟ್ವೀಟ್ ಮಾಡಲಾಗಿತ್ತು. ಇದಕ್ಕೆ ರಶ್ಮಿಕಾ ಈಗ ಪ್ರತಿಕ್ರಿಯಿಸಿದ್ದು, ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ: Rashmika Mandanna: ಇವೇ ನೋಡಿ ರಶ್ಮಿಕಾ ವೈರಲ್ ಫೋಟೋಗಳು, ಚಮಕ್ ಬೆಡಗಿಯ ಲುಕ್​ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!

ವ್ಯಂಗ್ಯವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಶ್ರೀವಲ್ಲಿ:

ಇನ್ನು, ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರೂ ಸಹ ಟ್ವೀಟ್ ಮಾಡಿದ್ದು, ‘ಒಂದು ವೇಳೆ ಔರಾ (ನಾಯಿ) ನನ್ನ ಜೊತೆ ವಿಮಾನದಲ್ಲಿ ಬರಲಿ ಎಂದು ನೀವು ಬಯಸಿದರೂ ಅದು ಬರುವುದಿಲ್ಲ. ಏಕೆಮದರೆ ಆಕೆ ಹೈದರಾಬಾದ್​ನಯಲ್ಲಯೇ ಸಂತೋಷವಾಗಿದ್ದಾಲೆ. ನಿಮ್ಮ ಈ ಕಾಳಜಿಗೆ ಧನ್ಯವಾದಗಳು. ನನಗೆ ನಗು ತಡೆಯಲಾಗುತ್ತಿಲ್ಲ‘ ಎಮದು ವ್ಯಂಗ್ಯವಾಗಿ ಪ್ರತಿಕ್ರಯೆ ನೀಡಿದ್ದಾರೆ. ಅಲ್ಲದೇ ನಗುವಿನ ಇಮೋಜಿ ಬಳಸಿ ಟ್ವೀಟ್ ಮಾಡಿದ್ದಾರೆ.





ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ:

ತಮಿಳು ಖ್ಯಾತ ನಟ ವಿಜಯ್‌ ಸೇರಿದಂತೆ ಘಟಾನುಘಟಿಗಳೇ ರಶ್ಮಿಕಾಗೆ ನಾಯಕಿಯಾಗಿ ಆಫರ್ ನೀಡುತ್ತಿದ್ದಾರೆ. ಮತ್ತೊಂದೆಡೆ ಬಾಲಿವುಡ್‌ನಲ್ಲೂ ರಶ್ಮಿಕಾ ಜರ್ನಿ ಶುರುವಾಗಿದ್ದು, ಬಾಲಿವುಡ್ ದಂತ ಕಥೆ, ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಖ್ಯಾತನಾಮರ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ಸಲ್ಲು ಭಾಯ್​ಗಾಗಿ ರಶ್ಮಿಕಾ-ಸಮಂತಾ ನಡುವೆ ಬಿಗ್​ ಫೈಟ್, ಯಾರಿಗೆ ಸಿಗಲಿದೆ ಗೋಲ್ಡನ್ ಚಾನ್ಸ್?

ವಿಕಾಶ್ ಬಹ್ಲ್ ನಿರ್ದೇಶನದ 'ಗುಡ್ ಬೈ' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಮತ್ತು ರಣಬೀರ್ ಕಪೂರ್ ಗೆ ನಾಯಕಿಯಾಗಿ ಅನಿಮಲ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಟಾಲಿವುಡ್‌ನಲ್ಲಿ 'ಪುಷ್ಪ 2' ಚಿತ್ರ ತಯಾರಾಗುತ್ತಿದ್ದು, ಆ ಸಿನಿಮಾದ ಚಿತ್ರೀಕರಣದಲ್ಲಿ ಕನ್ನಡದ ಕುವರಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.
Published by:shrikrishna bhat
First published: