Valentines day: 8 ವರ್ಷಗಳ ಪ್ರೀತಿಯ ನೆನಪನ್ನು ಫೋಟೋ ಫ್ರೇಮಿನಲ್ಲಿ ಸುಂದರವಾಗಿ ಸೆರೆ ಮಾಡಿದ ರಾಧಿಕಾ ಪಂಡಿತ್​..!

Rocking Valentines day: ರಾಧಿಕಾ ಪಂಡಿತ್​ ಹಾಗೂ ಯಶ್​ ಪ್ರೀತಿ ವಿವಾಹವಾಗಿದ್ದು ಗೊತ್ತೇ ಇದೆ. ಕಿರುತೆರೆಯ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಈ ಜೋಡಿ ಬೆಳ್ಳಿ ತೆರೆಯಲ್ಲೂ ಸ್ಟಾರ್​ಗಳಾಗಿ ಮಿಂಚಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಬ್ಬರು ಮುದ್ದು ಮಕ್ಕಳಿರುವ ರಾಧಿಕಾ ಎಂಟು ವರ್ಷಗಳ ನೆನಪನ್ನು ಫೋಟೋ ಫ್ರೇಮ್​ನಲ್ಲಿ ಸುಂದರವಾಗಿ ಬಂಧಿಸಿದ್ದಾರೆ. 

Anitha E | news18-kannada
Updated:February 14, 2020, 3:23 PM IST
Valentines day: 8 ವರ್ಷಗಳ ಪ್ರೀತಿಯ ನೆನಪನ್ನು ಫೋಟೋ ಫ್ರೇಮಿನಲ್ಲಿ ಸುಂದರವಾಗಿ ಸೆರೆ ಮಾಡಿದ ರಾಧಿಕಾ ಪಂಡಿತ್​..!
ಮಕ್ಕಳೊಂದಿಗೆ ರಾಕಿಂಗ್​ ದಂಪತಿ
  • Share this:
ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಇದಕ್ಕೆ ಸ್ಯಾಂಡಲ್​ವುಡ್​ನ ರಾಕಿಂಗ್​ ದಂಪತಿಯೂ ಹೊರತಾಗಿಲ್ಲ. ರಾಕಿಂಗ್​ ಜೋಡಿ ಯಶ್​ ಹಾಗೂ ರಾಧಿಕಾರ ಜೀವನದಲ್ಲಿ ಇದು 10ನೇ ವ್ಯಾಲೆಂಟೈನ್ಸ್​ ಡೇ. 

ರಾಧಿಕಾ ಪಂಡಿತ್​ ಹಾಗೂ ಯಶ್​ ಪ್ರೀತಿ ವಿವಾಹವಾಗಿದ್ದು ಗೊತ್ತೇ ಇದೆ. ಕಿರುತೆರೆಯ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಈ ಜೋಡಿ ಬೆಳ್ಳಿ ತೆರೆಯಲ್ಲೂ ಸ್ಟಾರ್​ಗಳಾಗಿ ಮಿಂಚಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಬ್ಬರು ಮುದ್ದು ಮಕ್ಕಳಿರುವ ರಾಧಿಕಾ ಎಂಟು ವರ್ಷಗಳ ನೆನಪನ್ನು ಫೋಟೋ ಫ್ರೇಮ್​ನಲ್ಲಿ ಸುಂದರವಾಗಿ ಬಂಧಿಸಿದ್ದಾರೆ.

ಯಶ್​ ಹಾಗೂ ರಾಧಿಕಾ ಪ್ರೀತಿ ಮಾಡಲಾರಂಭಿಸಿದಾಗಿನಿಂದ ಇದು ಅವರ 10ನೇ ವರ್ಷದ ಪ್ರೇಮಿಗಳ ದಿನಾಚರಣೆ. ತಮ್ಮ ಹತ್ತು ವರ್ಷದ ಪ್ರೀತಿಯ ನೆನಪಿನಿಂದ 8 ವರ್ಷದ ಚಿತ್ರಗಳನ್ನು ಒಂದು ಫ್ರೇಮಿನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಹಿಂದಿ ಸಿನಿಮಾ ನೋಡಿದ್ದೀರಾ ಎಂದ ಬಾಲಿವುಡ್ ನಟಿಗೆ ಈ ಏರ್​ಲೈನ್​ ಸಿಬ್ಬಂದಿ ನೀಡಿದ ಉತ್ತರ ಏನು ಗೊತ್ತಾ?

ಹೌದು, ರಾಧಿಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪ್ರತಿ ವರ್ಷಕ್ಕೆ ಒಂದರಂತೆ 8 ವರ್ಷಗಳ ಚಿತ್ರಗಳನ್ನು ಒಂದೇ ಫ್ರೇಮಿನಲ್ಲಿ ಜೋಡಿಸಿದ್ದಾರೆ. ಅದರಲ್ಲಿ ಮೊದಲ ಎರಡು ವರ್ಷಗಳ ಚಿತ್ರಗಳು ಸಿಗಲಿಲ್ಲ. ಇದರಲ್ಲಿ ನನ್ನ ನೆಚ್ಚಿನ ಚಿತ್ರ ಯಾವುದು ಎಂದು ಹೇಳುವುದು ಕಷ್ಟವೇನಲ್ಲ. ಹತ್ತು ವರ್ಷಗಳ ಪಯಣದಲ್ಲಿ ನಾವೇ ಜೀವ ತುಂಬಿದ ಒಂದು ಅಮೂಲ್ಯವಾದದ್ದನ್ನು ಕೈಯಲ್ಲಿ ಹಿಡಿದಿರುವ ಚಿತ್ರವೇ ನನ್ನ ಫೇವರಿಟ್​. ನಮ್ಮ ಜೂನಿಯರ್ ಅನ್ನು ಮರೆತಿಲ್ಲ. ಅವನೂ ಇದ್ದಾನೆ. ಆದರೆ ಫೋಟೋದಲ್ಲಿ ಕಾಣುತ್ತಿಲ್ಲ ಎಂದು ಅವರು ಗರ್ಭಿಣಿಯಾಗಿದ್ದಾಗ ತೆಗೆದ ಚಿತ್ರದ ಬಗ್ಗೆ ಬಹಳ ಸುಂದರವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: James: ಕೆಲವೇ ವಾರಗಳಲ್ಲಿ ಪುನೀತ್​ ಅಬ್ಬರ ಆರಂಭ: ಶೂಟಿಂಗ್ ಅಡ್ಡಾಗೆ `ಜೇಮ್ಸ್ ಎಂಟ್ರಿ ಫಿಕ್ಸ್..!

ಯಶ್​ ಸದ್ಯ 'ಕೆಜಿಎಫ್​ ಚಾಪ್ಟರ್​ 2' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಧಿಕಾ ಆಯ್ರಾ ಮತ್ತು ಜೂನಿಯರ್​ ಯಶ್​ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಮೊದಲ ಮಗುವಿನ ನಂತರ ರಾಧಿಕಾ ಅಭಿನಯದ 'ಆದಿಲಕ್ಷ್ಮಿ ಪುರಾಣ' ಸಿನಿಮಾ ಬಿಡುಗಡೆಯಾಗಿತ್ತು.

Nikhil - Revathi: ನಿಖಿಲ್​ ಕುಮಾರಸ್ವಾಮಿ ಜೊತೆ ಫುಲ್​ ಮಾಡರ್ನ್​ ಲುಕ್​ನಲ್ಲಿ ಕಾಣಿಸಿಕೊಂಡ ರೇವತಿ..!

First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ