Shamita Shetty ಜೊತೆ ತನ್ನ ಸಂಬಂಧ ಮತ್ತು ಆಕೆಯ ಕುಟುಂಬದ ಬಗ್ಗೆ ಮನಬಿಚ್ಚಿ ಮಾತನಾಡಿದ Raqesh Bapat

Shamita Shetty And Raqesh Bapat : ಶಮಿತಾ ತುಂಬಾ ಕಾಳಜಿಯುಳ್ಳ ವ್ಯಕ್ತಿ. ನಾವು ಬಹಳ  ಮುಂದುವರೆಯಬೇಕಿದೆ, ಸಂಬಂಧ ಮುಂದೆ ಹೋಗಬೇಕಾಗಿದೆ ಮತ್ತು ಈ ಕಾರ್ಯಕ್ರಮದಲ್ಲಿ ನಾವು ಭೇಟಿಯಾದಾಗ ನನಗೆ ಸಂತೋಷವಾಗಿತ್ತು.  ಅದು ಬಿಗ್ ಬಾಸ್ ನಮಗೆ ಮಾಡಿದ ಒಳ್ಳೆಯ ಕೆಲಸ ಎಂದು ರಾಕೇಶ್ ಹೇಳಿದ್ದಾರೆ. ರಾಕೇಶ್ ಮತ್ತು ಶಮಿತಾ ಕಾರ್ಯಕ್ರಮದಲ್ಲಿದ್ದಾಗ ಶಮಿತಾ ಅವರ ತಾಯಿ ಸುನಂದಾ ಶೆಟ್ಟಿ ಮಗಳ  ಮನೋಸ್ಥೈರ್ಯವನ್ನು ಹೆಚ್ಚಿಸಲು ಬಿಗ್ ಬಾಸ್ ಒಟಿಟಿ ಮನೆಯೊಳಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ, ಶಮಿತಾ ಅವರ  ತಾಯಿ ಕೂಡ ರಾಕೇಶ್ ಅವರನ್ನು ಹೊಗಳುವ ಅವಕಾಶವನ್ನು  ಬಿಟ್ಟುಕೊಡಲಿಲ್ಲ. 

ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್

ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್

  • Share this:
ಬಾಲಿವುಡ್​ ನಟಿ  ಶಿಲ್ಪ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ, ಆದರೆ ಇತ್ತೀಚೆಗೆ ಒಟಿಟಿಯಲ್ಲಿ ನಡೆದ ಬಿಗ್​ಬಾಸ್​ ಸೀಸನ್​ನಲ್ಲಿ ಕಾಣಿಸಿಕೊಂಡು ಹೆಚ್ಚು ಸುದ್ದಿಯಲ್ಲಿದ್ದರು.  ಬಿಗ್​ಬಾಸ್​ನಲ್ಲಿ ನಟ ರಾಕೇಶ್ ಬಾಪಟ್​ ಜೊತೆ ಹೆಚ್ಚು ಕ್ಲೋಸ್​ ಇದ್ದ ಶಮಿತಾ ಬಗ್ಗೆ ಕೆಲ ಗುಸುಗುಸು ಕೇಳಿ ಬಂದಿತ್ತು. ಇನ್ನು ಒಟಿಟಿ ಬಿಗ್​ಬಾಸ್​ ನಂತರ ಶಮಿತಾ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ ಒಟಿಟಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದ್ದು, ರಾಕೇಶ್ ಇನ್ನು ಈ ಬಗ್ಗೆ ನಿರ್ಧಾರ ಮಾಡಿಲ್ಲ.   ಬಿಗ್ ಬಾಸ್ OTT  ಕಾರ್ಯಕ್ರಮದಲ್ಲಿ, ರಾಕೇಶ್ ಮತ್ತು ಶಮಿತಾ ಪರಸ್ಪರ  ಒಬ್ಬರ ಮೇಲೊಬ್ಬರು ಭಾವನೆಗಳನ್ನು ಹೊಂದಿರುವುದನ್ನು ಒಪ್ಪಿಕೊಂಡಿದ್ದರು ಅಲ್ಲದೇ ಅವರು  ಬಿಗ್​ಬಾಸ್​ ಮನೆಯ ಹೊರಗೆ ತಮ್ಮ ಸಂಪರ್ಕವನ್ನು ಮುಂದುವರಿಸುವುದಾಗಿ ಸಹ  ಘೋಷಿಸಿದ್ದರು.

ಅಲ್ಲದೇ  ಇತ್ತೀಚೆಗೆ ಮುಂಬೈನಲ್ಲಿ  ಇಬ್ಬರು  ರೋಮ್ಯಾಂಟಿಕ್   ಡಿನ್ನರ್​ ಡೆಟ್​ ಹೋಗಿ ಮತ್ತೆ ಸುದ್ದಿಯಾಗಿದ್ದರು.  ನಂತರ ರಾಕೇಶ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ  ಇಬ್ಬರ ಫೋಟೋವನ್ನು ಪೋಸ್ಟ್ ಮಾಡಿದ್ದು, ಅವರಿಬ್ಬರ ನಡುವಿನ ಸಂಬಂಧವನ್ನು ಅಧಿಕೃತಗೊಳಿಸಿದಂತಾಗಿತ್ತು.  ಈಗ, ರಾಕೇಶ್ ಅವರು ಬಿಗ್​ಬಾಸ್​ ಮನೆಯಿಂದ ಹೊರಬಂದ ನಂತರ ತಾವು ಮತ್ತು ಶಮಿತಾ ತಮ್ಮ ಸಂಬಂಧದಲ್ಲಿ  ಎಷ್ಟು ಆರಾಮದಾಯಕವಾಗಿದ್ದಾರೆ ಮತ್ತು ಕಾರ್ಯಕ್ರಮದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಏಕೆ ಸ್ವಲ್ಪ ಹಿಂಜರಿಯುತ್ತಿದ್ದರು ಎಂಬುದರ ಕುರಿತು ಬಹಿರಂಗಪಡಿಸಿದ್ದಾರೆ.

ನಾನು ಯಾವಾಗಲೂ ಅವರಿಗೆ ಹೇಳುತ್ತಿದ್ದೆ , ನಾವು ಮನೆಯ ಹೊರ ಜಗತ್ತಿನಲ್ಲಿಯೂ ಒಬ್ಬರನ್ನೊಬ್ಬರು ತಿಳಿದುಕೊಳ್ಳಬೇಕು. ಏಕೆಂದರೆ  ನಾವು ಹಂಚಿಕೊಳ್ಳಲು ಮತ್ತು ಮಾತನಾಡಲು ಬಯಸುವ ಬಹಳಷ್ಟು ವಿಷಯಗಳಿವೆ ಆದರೆ  ನಾವು ಅದನ್ನು ಕ್ಯಾಮರಾದಲ್ಲಿ ಅಥವಾ ಆ ರೀತಿಯ ವೇದಿಕೆಯಲ್ಲಿ ಮಾಡಲು ಸಾಧ್ಯವಿಲ್ಲ. ಶಮಿತಾ ಮತ್ತು ನಾನು ಕಾರ್ಯಕ್ರಮದ ನಂತರ ಒಟ್ಟಿಗೆ ಸಮಯ ಕಳೆದಿದ್ದೇವೆ ಮತ್ತು  ಮನೆಯ ಹೊರ ಜಗತ್ತಿನಲ್ಲಿ ಸಹ ನಾನು ಅವರನ್ನು ಇಷ್ಟಪಡುತ್ತೇನೆ. ನನಗೆ ಅದರ ಬಗ್ಗೆ ಯಾವುದೇ ಸಂದೇಹವಿಲ್ಲ ಮತ್ತು ಅವರೂ  ಅದೇ ರೀತಿ ಭಾವಿಸಿದ್ದಾರೆ. ಇದೊಂದು ಸುಂದರ ಬಂಧ ಎಂದು ನಾನು ಹೇಳಲೇಬೇಕು ಎಂದಿದ್ದಾರೆ.

ಇದನ್ನೂ ಓದಿ: ಗುಜರಾತಿನಲ್ಲಿ ಸುತ್ತಾಡುತ್ತಿದ್ದಾರೆ ಹಾಟ್​ ಕಪಲ್​ Milind Soman- Ankita Konwar..!

ಶಮಿತಾ ತುಂಬಾ ಕಾಳಜಿಯುಳ್ಳ ವ್ಯಕ್ತಿ. ನಾವು ಬಹಳ  ಮುಂದುವರೆಯಬೇಕಿದೆ, ಸಂಬಂಧ ಮುಂದೆ ಹೋಗಬೇಕಾಗಿದೆ ಮತ್ತು ಈ ಕಾರ್ಯಕ್ರಮದಲ್ಲಿ ನಾವು ಭೇಟಿಯಾದಾಗ ನನಗೆ ಸಂತೋಷವಾಗಿತ್ತು.  ಅದು ಬಿಗ್ ಬಾಸ್ ನಮಗೆ ಮಾಡಿದ ಒಳ್ಳೆಯ ಕೆಲಸ ಎಂದು ರಾಕೇಶ್ ಹೇಳಿದ್ದಾರೆ. ರಾಕೇಶ್ ಮತ್ತು ಶಮಿತಾ ಕಾರ್ಯಕ್ರಮದಲ್ಲಿದ್ದಾಗ ಶಮಿತಾ ಅವರ ತಾಯಿ ಸುನಂದಾ ಶೆಟ್ಟಿ ಮಗಳ  ಮನೋಸ್ಥೈರ್ಯವನ್ನು ಹೆಚ್ಚಿಸಲು ಬಿಗ್ ಬಾಸ್ ಒಟಿಟಿ ಮನೆಯೊಳಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ, ಶಮಿತಾ ಅವರ  ತಾಯಿ ಕೂಡ ರಾಕೇಶ್ ಅವರನ್ನು ಹೊಗಳುವ ಅವಕಾಶವನ್ನು  ಬಿಟ್ಟುಕೊಡಲಿಲ್ಲ.  ರಾಕೇಶ್ ಬಗ್ಗೆ ಹೇಳುತ್ತಾ, ರಾಖೇಶ್ ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೊಗಳಿದ್ದಲ್ಲದೆ, ಪ್ಲೈಯಿಂಗ್ ಕಿಸ್ ನೀಡಿದ್ದರು. ಇದು ರಾಕೇಶ್ ಬ್ಲಷ್ ಆಗುವಂತೆ ಮಾಡಿತ್ತು.

ಶಮಿತಾಳ ತಾಯಿ ಮತ್ತು ಹಿರಿಯ ಸಹೋದರಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರನ್ನು ಮನೆಯಿಂದ ಹೊರಬಂದ ಮೇಲೆ  ಭೇಟಿಯಾಗಲು ಅವಕಾಶ ಸಿಕ್ಕಿದೆಯೇ ಎಂದು ಕೇಳಿದಾಗ,  ಬ್ಲಷ್ ಆದ ರಾಕೇಶ್ ಆ ವಿಚಾರ ಬೇಡ ಎಂದರು, ಆದರೂ ನಂತರ ನಾನು ಅವರೊಂದಿಗೆ ಮಾತನಾಡಿದ್ದೇನೆ. ತುಂಬಾ ಒಳ್ಳೆಯ ಜನರು. ಅಂಥಹ ಕುಟುಂಬವನ್ನು ಪಡೆಯ ಶಮಿತಾ ಅದೃಷ್ಟ ಮಾಡಿದ್ದರು ಎಂದಿದ್ದಾರೆ.

ಬಿಗ್ ಬಾಸ್ 15 ರಲ್ಲಿ ಭಾಗವಹಿಸುವ ಕುರಿತು ಮಾತನಾಡಿದ ಅವರು, ನಾನು ಬಿಗ್​ಬಾಸ್​ ಹೋಗುವುದು ಅನುಮಾನ, ನನಗಾಗಿ ಬೇರೆ ಕೆಲಸಗಳು ಕಾಯುತ್ತಿದೆ. ಆ ಮನೆಯ ಅನುಭವವನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜನವರಿಯಲ್ಲಿ ಕೆಜಿಎಫ್ ಗರ್ಲ್ ಮೌನಿ ರಾಯ್ ಕಲ್ಯಾಣ?

ಆರು ವಾರಗಳವರೆಗೆ  ಮನೆಯಲ್ಲಿರುವುದು ನನಗೆ ಸಂತೋಷ ತಂದಿದೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಬಿಗ್ ಬಾಸ್‌ನಂತಹ ವೇದಿಕೆಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಏಕೆಂದರೆ ಅದು ನನಗೆ ಜೀವನದಲ್ಲಿ ಬಹಳಷ್ಟು ಒಳ್ಳೆಯ ವಿಷಯಗಳನ್ನು ನೀಡಿದೆ ಮತ್ತು ನನಗೆ ಬಹಳಷ್ಟು ಕಲಿಸಿದೆ ಎಂದಿದ್ದಾರೆ.
Published by:Sandhya M
First published: