Big Boss 15:ಬಿಗ್​ಬಾಸ್​ ಮನೆಯಲ್ಲಿ ಯಾರ ಮಾತಿಗೂ ತಲೆ ಕೆಡೆಸಿಕೊಳ್ಳದಂತೆ Shamita Shettyಗೆ ಸಲಹೆ ನೀಡಿದ್ದಾರಂತೆ Raqesh Bapat

Raqesh Bapat About Shamita Shetty: ನಾನು ಶಮಿತಾಗೆ  ಶಾಂತವಾಗಿರಲು ಹೇಳಿದ್ದೇನೆ. ಅವರು ಒಬ್ಬರೇ ಹೋಗುತ್ತಿದ್ದಾರೆ ಎಂದು ನನಗೆ ಸ್ವಲ್ಪ ಚಿಂತೆಯ ವಿಚಾರವಾಗಿದೆ. ಜನರು ಹೇಳುವ ಅಥವಾ ಮಾಡುವ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬೇಡಿ ಎಂದು ನಾನು ಅವರಿಗೆ ಹೇಳಿದ್ದೇನೆ. ಇದು ಕೇವಲ ಸ್ಪರ್ಧೆಯಾಗಿದೆ.  ಇದು ಬದುಕು ಮತ್ತು ಸಾವಿನ ವಿಚಾರವಲ್ಲ ಎಂಬುದನ್ನ ಮರೆಯಬಾರದು.

ರಾಕೇಶ್ ಬಾಪಟ್ ಮತ್ತು ಶಮಿತಾ ಶೆಟ್ಟಿ

ರಾಕೇಶ್ ಬಾಪಟ್ ಮತ್ತು ಶಮಿತಾ ಶೆಟ್ಟಿ

  • Share this:
ಬಿಗ್ ಬಾಸ್ ಒಟಿಟಿಯಲ್ಲಿ(Bigboss OTT) ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮನೆಮಾತಾಗಿದ್ದ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ (Shamita Shetty) ಮುಂದಿನ ಹೆಜ್ಜೆಯಾಗಿ ಸಲ್ಮಾನ್ ಖಾನ್ (Salman Khan)ಅವರ ಬಿಗ್ ಬಾಸ್ 15 ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.  ಅಕ್ಟೋಬರ್ 2 ರಂದು ಕಲರ್ಸ್ ನಲ್ಲಿ ಇದರ  ಪ್ರದರ್ಶನ ಆರಂಭವಾಗಿದೆ. ಇನ್ನು ಬಿಗ್​ಬಾಸ್​ ಒಟಿಟಿಯಲ್ಲಿ ಶಮಿತಾ ತನ್ನ ಸಹ ಸ್ಪರ್ಧಿ ರಾಕೇಶ್ ಬಾಪಟ್(Raqesh Bapat) ಜೊತೆಗಿನ  ಸಂಬಂಧದ ವಿಚಾರವಾಗಿ  ಸುದ್ದಿಯಲ್ಲಿದ್ದರು. ಬಿಗ್​ಬಾಸ್​ ಒಟಿಟಿ ಮನೆಯೊಳಗೆ ಇರುವಾಗ ಈ ಜೋಡಿಯ ನಡುವೆ ಪ್ರೇಮಾಂಕುರವಾಗಿತ್ತು.  

ಇಬ್ಬರೂ ಸೆಪ್ಟೆಂಬರ್ 18 ರಂದು ಮುಕ್ತಾಯಗೊಂಡ ಬಿಗ್ ಬಾಸ್ ಒಟಿಟಿಯ ಫೈನಲ್‌ ತಲುಪಿದ್ದರು, ಶಮಿತಾ ಎರಡನೇ ರನ್ನರ್ ಅಪ್ ಎಂದು ಘೋಷಿಸಲ್ಪಟ್ಟರೆ, ರಾಕೇಶ್ ಅಗ್ರ 4 ರಲ್ಲಿದ್ದರು. ಕಾರ್ಯಕ್ರಮದಲ್ಲಿ ಶಮಿತಾ ಮತ್ತು ರಾಕೇಶ್ ಪರಸ್ಪರ ಹತ್ತಿರವಾಗಿದ್ದರು. ಕಾರ್ಯಕ್ರಮದ ನಂತರ ಕೂಡ ಇಬ್ಬರು ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು.  ಈಗ, ಶಮಿತಾ ಬಿಗ್ ಬಾಸ್ 15 ನಲ್ಲಿ ಕಾಣಿಸಿಕೊಳ್ಳಲಿದ್ದು, ಅಲ್ಲಿ ಅವರ ಜೊತೆ ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ್ದ, ಪ್ರತೀಕ್ ಸೆಹಜ್ಪಾಲ್ ಮತ್ತು ನಿಶಾಂತ್ ಭಟ್ ಸಹ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ 15 ರಲ್ಲಿ ಡೊನಾಲ್ ಬಿಶ್ತ್, ಉಮರ್ ರಿಯಾಜ್, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಕೂಡ ಭಾಗವಹಿಸಿದ್ದಾರೆ.

ನ್ಯೂಸ್ 18ಗೆ ನೀಡಿದ  ಸಂದರ್ಶನದಲ್ಲಿ, ರಾಕೇಶ್, ಶಮಿತಾ ಮನೆಯಲ್ಲಿ ಏಕಾಂಗಿಯಾಗಿರುವ ಕಾರಣ ಅವರು ಸ್ವಲ್ಪ ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ. ಬಿಬಿ ಒಟಿಟಿಯಲ್ಲಿ ಶಮಿತಾ ಶೆಟ್ಟಿ, ರಾಕೇಶ್ ಮತ್ತು ನೇಹಾ ಭಾಸಿನ್ ಅವರಿಗೆ ಅತ್ಯಂತ ಆಪ್ತರಾಗಿದ್ದರು, ಆದರೆ ಆಕೆಯ ಸ್ನೇಹಿತರಿಬ್ಬರೂ ಈಗ  ಬಿಗ್ ಬಾಸ್ 15 ನಲ್ಲಿ ಇರುವುದಿಲ್ಲ ಎಂಬುದು ಮುಖ್ಯ ವಿಚಾರವಾಗಿದೆ.

ಇದನ್ನೂ ಓದಿ: Sandalwoodನಲ್ಲಿ ಸಿನಿಹಬ್ಬ ಆರಂಭ-ಯರ್ರಾಬಿರ್ರಿ ಚಿತ್ರತಂಡದಿಂದ ರಾಯಚೂರಿನಲ್ಲಿ Fans Show ಆಯೋಜನೆ

ನಾನು ಶಮಿತಾಗೆ  ಶಾಂತವಾಗಿರಲು ಹೇಳಿದ್ದೇನೆ. ಅವರು ಒಬ್ಬರೇ ಹೋಗುತ್ತಿದ್ದಾರೆ ಎಂದು ನನಗೆ ಸ್ವಲ್ಪ ಚಿಂತೆಯ ವಿಚಾರವಾಗಿದೆ. ಜನರು ಹೇಳುವ ಅಥವಾ ಮಾಡುವ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬೇಡಿ ಎಂದು ನಾನು ಅವರಿಗೆ ಹೇಳಿದ್ದೇನೆ. ಇದು ಕೇವಲ ಸ್ಪರ್ಧೆಯಾಗಿದೆ.  ಇದು ಬದುಕು ಮತ್ತು ಸಾವಿನ ವಿಚಾರವಲ್ಲ ಎಂಬುದನ್ನ ಮರೆಯಬಾರದು. ಅವರ ಮಾತುಗಳನ್ನುನೀವು ಗಂಭೀರವಾಗಿ ಪರಿಗಣಿಸಬಾರದು ಎಂದು ಬಿಗ್ ಬಾಸ್ 15 ಮನೆಗೆ ಹೋಗುವ ಮೊದಲು ಶಮಿತಾಗೆ  ರಾಕೇಶ್ ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ.

ನಾನು ಅವರಿಗೆ ಆ ರೀತಿಯ ಸನ್ನಿವೇಶದಲ್ಲಿ  ಆರಾಮವಾಗಿರಲು ಮತ್ತು ತನ್ನತನವನ್ನು ಉಳಿಸಿಕೊಂಡು ಆಟವನ್ನು ಆಡುವಂತೆ ಹೇಳಿದ್ದೇನೆ. ಕಾರ್ಯಕ್ರಮದಲ್ಲಿ ಎಲ್ಲರಿಗೂ ನಾನು ಇದನ್ನು ಹೇಳಿದ್ದೇನೆ, ಆಟವಾಡಿ, ಆದರೆ ಸಹಾನುಭೂತಿಯನ್ನು ಹೊಂದಿರಿ. ನಿಮ್ಮ ಅಭಿಪ್ರಾಯಗಳನ್ನು ಹೇಳಲು ಇದು ತುಂಬಾ  ಅದ್ಭುತ ವೇದಿಕೆಯಾಗಿದೆ ಮತ್ತು ಜನರು ನಿಮ್ಮನ್ನು ನಿರಂತರವಾಗಿ ನೋಡುತ್ತಿದ್ದಾರೆ ಎಂಬುದನ್ನ ಮರೆಯಬೇಡಿ.ಈ ಅವಕಾಶವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ ಎಂದಿದ್ದಾರೆ.

ಬಿಬಿ ಒಟಿಟಿ ಮನೆಯಿಂದ ಹೊರಬಂದ ನಂತರ ಶಮಿತಾ ಮತ್ತು  ತಮ್ಮ ಸಂಬಂಧದಲ್ಲಿ ಹೇಗೆ ಸಂತೋಷವಾಗಿದ್ದಾರೆ ಎಂಬುದರ ಬಗ್ಗೆಯೂ ರಾಕೇಶ್ ಮಾತನಾಡಿದ್ದಾರೆ.  ಹಂಚಿಕೊಳ್ಳಲು ಮತ್ತು ಮಾತನಾಡಲು ಬಯಸುವ ಬಹಳಷ್ಟು ವಿಷಯಗಳಿವೆ ಆದರೆ ಅದನ್ನು ಕ್ಯಾಮರಾದಲ್ಲಿ ಅಥವಾ ಆ ರೀತಿಯ ವೇದಿಕೆಯಲ್ಲಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Shamita Shetty ಜೊತೆ ತನ್ನ ಸಂಬಂಧ ಮತ್ತು ಆಕೆಯ ಕುಟುಂಬದ ಬಗ್ಗೆ ಮನಬಿಚ್ಚಿ ಮಾತನಾಡಿದ Raqesh Bapat

ಶಮಿತಾ ಮತ್ತು ನಾನು ಕಾರ್ಯಕ್ರಮದ ನಂತರ ಒಟ್ಟಿಗೆ ಸಮಯ ಕಳೆದಿದ್ದೇವೆ. ನಾನು ಅವರನ್ನು ಇಷ್ಟಪಡುತ್ತೇನೆ. ನನಗೆ ಅದರ ಬಗ್ಗೆ ಯಾವುದೇ ಸಂದೇಹವಿರಲಿಲ್ಲ. ಇದೊಂದು ಸುಂದರ ಬಂಧ ಎಂದು ನಾನು ಹೇಳಲೇಬೇಕು.ಶಮಿತಾ ತುಂಬಾ ಕಾಳಜಿಯುಳ್ಳ ವ್ಯಕ್ತಿ. ನಾವು  ಈ ಸಂಬಂಧದಲ್ಲಿ ಇನ್ನು ಮುಂದುವರೆಯಬೇಕಿದೆ.ಈ ಕಾರ್ಯಕ್ರಮದಲ್ಲಿ ನಾವು ಭೇಟಿಯಾದಾಗ ನನಗೆ ಸಂತೋಷವಾಗಿತ್ತು, ಅದು ಬಿಗ್ ಬಾಸ್  ಕಾರ್ಯಕ್ರಮ ನಮಗೆ ನೀಡಿದ ಗಿಫ್ಟ್ ಎಂದಿದ್ದಾರೆ.
Published by:Sandhya M
First published: