ಪ್ರತಿ ಬಾರಿ ಹೊಸ ವರ್ಷಕ್ಕೆ ಹೊಸ ಜೋಶ್ ಪಾರ್ಟಿ ಸಾಂಗ್ ಮೂಲಕ ಸದ್ದು ಮಾಡುವ ಚಂದನ್ ಶೆಟ್ಟಿ ಈ ಬಾರಿ ಕೊಂಚ ಜೋರಾಗಿಯೇ ಪಾರ್ಟಿ ಆಚರಿಸಿದ್ದಾರೆ. ಈ ಬಾರಿ ಅವರ ಪಾರ್ಟಿಗೆ ವಿಶೇಷವಾಗಿ ನಿವೇದಿತಾ ಕೂಡ ಜೊತೆಯಾಗಿದ್ದಾರೆ. ಅವರ ಬಹುನಿರೀಕ್ಷೆಯ PARTY FREAK ಹಾಡು ಇಂದು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯುನೈಟ್ ಆಡಿಯೋಸ್ ಮೂಲಕ ಈ ಹಾಡು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಮೂರೇ ಗಂಟೆಗಳಲ್ಲಿ 77 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 'ಇನ್ನು ಟೈಟ್ ಆಗೋಕ್ಕೆ ಚೂರು ಬೇಕಾಗಿದೆ' ಎಂದು ಕುಣಿದಿರುವ ಅವರ ಹಾಡನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದ್ಧೂರಿ ವೆಚ್ಚದಲ್ಲಿ, ಕಲರ್ ಫುಲ್ ಸೆಟ್ ನಲ್ಲಿ ಐಷಾರಾಮಿ ಹೋಟೆಲ್ ಮತ್ತು ಪಬ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. 'ಪಾರ್ಟಿ ಫ್ರೀಕ್' ಹಾಡನ್ನು ಚೈತನ್ಯ ಲಕಂಸಾನಿ ನಿರ್ಮಾಣ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿಯ ಸಂಗೀತ , ಸಾಹಿತ್ಯ ಬರೆದಿದ್ದು, ಅವರೇ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ಕಲರ್ ಫುಲ್ ಹಾಡಿನಲ್ಲಿ ಮಸ್ತ್ ಮಸ್ತ್ ಡಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಚಂದನ್ ಶೆಟ್ಟಿ ಹೆಂಡತಿ ನಿವೇದಿತಾ ಗೌಡ ಈ ಹಾಡಿನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದೆ. ವಿಶೇಷ ಪಾತ್ರದಲ್ಲಿ ಇದೇ ಮೊದಲ ಬಾರಿ ನಟ ಧರ್ಮ ಅವರನ್ನು ಕಾಣಬಹುದು.
ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜಿತ್ ಶ್ರೀರವಿ ಅವರ ವಸ್ತ್ರ ವಿನ್ಯಾಸ ಅದ್ಭುತವಾಗಿದೆ, ಮೋಹನ್ ಮಾಸ್ಟರ್ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ಚಂದನ್ ಶೆಟ್ಟಿ ಸಂಯೋಜಿಸಿ ಹಾಡಿರುವ ಪೊಗರು ಚಿತ್ರದ ಖರಾಬು ಹಾಡು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಮೋಡಿ ಮಾಡುತ್ತಿದೆ. ಇದೇ ಹಿನ್ನಲೆ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ತಮ್ಮ ರ್ಯಾಪ್ ಸಾಂಗ್ ಬಿಡುಗಡೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ