'ಮೂರೇ ಮೂರು ಪೆಗ್ಗಿಗೆ..', 'ಟಕೀಲಾ..'ದಂತಹ ಪಾರ್ಟಿ ಸಾಂಗ್ ಗಳ ಮೂಲಕ ಸದ್ದು ಮಾಡಿದ್ದ ರ‍್ಯಾಪರ್ ಚಂದನ್ ಶೆಟ್ಟಿ ಈಗ 'ಪಾರ್ಟಿ ಫ್ರೀಕ್' ಮೂಲಕ ಹೊಸ ಅಲೆ ಸೃಷ್ಟಿಸಲು ಸಿದ್ಧರಾಗಿದ್ದಾರೆ. ಹೊಸ ವರ್ಷಕ್ಕೆ 'ಪಾರ್ಟಿ ಫ್ರೀಕ್' ಮೂಲಕ ಚಂದನ್ ಶೆಟ್ಟಿ ಕಿಕ್ಕೇರಿಸಲು ಸಿದ್ಧವಾಗಿದ್ದಾರೆ. ಈ ಮೂಲಕ ಈ ಬಾರಿ ನ್ಯೂಯರ್ಗೆ ಮತ್ತೊಂದು ಪಾರ್ಟಿ ಸಾಂಗ್ ನೀಡಲು ಸಜ್ಜಾ ಗಿದ್ದಾರೆ. ವಿಶೇಷ ಎಂದರೇ ಈ ಬಾರಿ ಚಂದನ್ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲಿಯೂ ಈ ಹಾಡನ್ನು ಕಾಣಬಹುದಾಗಿದೆ. ಅದ್ಧೂರಿ ವೆಚ್ಚದಲ್ಲಿ, ಕಲರ್ ಫುಲ್ ಸೆಟ್ ನಲ್ಲಿ ಎರಡು ದಿನ ಹಾಡಿನ ಶೂಟಿಂಗ್ ನಡೆಯಲಿದೆ. ಬೆಂಗಳೂರಿನ ಐಷಾರಾಮಿ ಹೋಟೆಲ್ ಮತ್ತು ಪಬ್ ಗಳಲ್ಲಿ ಈ ಹಾಡಿನ ಚಿತ್ರೀಕರಣವಾಗಲಿದೆ. ಇನ್ನು 'ಪಾರ್ಟಿ ಫ್ರೀಕ್' ಹೆಸರಿನ ಈ ಹಾಡನ್ನು ಚೈತನ್ಯ ಲಕಂಸಾನಿ ನಿರ್ಮಾಣ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿಯ ಸಂಗೀತ , ಸಾಹಿತ್ಯ ಬರೆದಿದ್ದು, ಅವರೇ ಹಾಡಿನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ಕಲರ್ ಫುಲ್ ಹಾಡಿನಲ್ಲಿ ಮಸ್ತ್ ಮಸ್ತ್ ಡಾನ್ಸ್ ಮಾಡಲಿದ್ದಾರೆ. ಅಷ್ಟೇ ಅಲ್ಲ ಚಂದನ್ ಶೆಟ್ಟಿ ಹೆಂಡತಿ ನಿವೇದಿತಾ ಗೌಡ ಸಹ ಈ ಹಾಡಿನಲ್ಲಿರಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರನ್ನು ಕಾಣಬಹುದು.
ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜಿತ್ ಶ್ರೀರವಿ ಅವರ ವಸ್ತ್ರ ವಿನ್ಯಾಸ ಮಾಡಲಿದ್ದು, ಮೋಹನ್ ಮಾಸ್ಟರ್ ಹಾಡಿಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಕರೋನಾ ಹಿನ್ನೆಲೆಯಲ್ಲಿ ಈ ವರ್ಷದ ನ್ಯೂ ಇಯರ್ ಪಾರ್ಟಿ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಮನೆಯಲ್ಲಿಯೇ ಕುಟುಂಬದೊಟ್ಟಿಗೆ ಆಚರಿಸುವಂತೆ ಹೇಳಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಹಾಡನ್ನು ಚಿತ್ರೀಕರಿಸಲಾಗಿದೆ. ನಮ್ಮ ಹಾಡನ್ನು ಮನೆಯಲ್ಲಿಯೇ ಕೇಳಿ ಆನಂದಿಸುತ್ತ ಹೊಸ ವರ್ಷವನ್ನು ಬರಮಾಡಿಕೊಳ್ಳಿ ಎಂಬುದು ತಂಡದ ಉದ್ದೇಶ. ಹಾಗಾಗಿಯೇ ಈ ಹಾಡನ್ನು ಯುನೈಟ್ ಆಡಿಯೋಸ್ ನಲ್ಲಿ ಡಿ.26ರಂದು ಬಿಡುಗಡೆ ಮಾಡಲಿದೆ ತಂಡ.
https://youtu.be/Ysf4QRrcLGM
ಚಂದನ್ ಶೆಟ್ಟಿ ಸಂಯೋಜಿಸಿ ಹಾಡಿರುವ ಪೊಗರು ಚಿತ್ರದ ಖರಾಬು ಹಾಡು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಮೋಡಿ ಮಾಡುತ್ತಿದೆ. ಕನ್ನಡದಲ್ಲಿ 17ಕೋಟಿ ಬಾರಿ ವೀಕ್ಷಣೆಯಾದರೆ, ತೆಲುಗಿನಲ್ಲಿ 4.5 ಕೋಟಿ ವೀಕ್ಷಣೆ ಪಡೆದಿದೆ.ಇದೇ ಹಿನ್ನಲೆ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ತಮ್ಮ ರ್ಯಾಪ್ ಸಾಂಗ್ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ