Video: ಚೌತಿಗೆ ಚಂದನ್ ಶೆಟ್ಟಿ ನೀಡಿದ ಚಂದದ ಉಡುಗೊರೆ; ಕೋಲು ಮಂಡೆ ವಿಡಿಯೋ ಅಲ್ಬಂ ಬಿಡುಗಡೆ

ಕೊರೋನಾ ಸಮಯದಲ್ಲಿ ಅನೇಕರು ಕೆಲಸವಿಲ್ಲದೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಆನಂದ್​ ಆಡಿಯೋದ ಶ್ಯಾಂ ಮತ್ತು ಆನಂದ್​ ಅವರಿಗೆ ವಿಡಿಯೋ ಆಲ್ಬಂ ಮಾಡುವ ಹೊಸ ಆಲೋಚನೆ ಬಂದಿದೆ. ಅದರಂತೆ ‘ಕೋಲು ಮಂಡೆ’ ಹಾಡನ್ನು ಆಲ್ಬಂ ಮಾಡಲು ಯೋಚಿಸಿದ್ದಾರೆ. ಚಂದನ್​ ಶೆಟ್ಟಿ ಅವರ ಜೊತೆಗೆ ಹಾಡಿಸಿ, ನಲಿಸಿ ವಿಡಿಯೋ ಆಲ್ಬಂ ಮಾಡಿಸಿದ್ದಾರೆ.

ಚಂದನ್​ ಶೆಟ್ಟಿ

ಚಂದನ್​ ಶೆಟ್ಟಿ

 • Share this:
  ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ನಟನೆಯ ಜನುಮದ ಜೋಡಿ ಸಿನಿಮಾದ 1996ರಲ್ಲಿ ತೆರೆಕಂಡಿತು. ಈ ಸಿನಿಮಾದ ‘ಕೋಲು ಮಂಡೆ ಜಂಗಮ ದೇವ’ ಹಾಡು ಅಂದಿನ ಕಾಲಕ್ಕೆ ದೊಡ್ಡ ಹಿಟ್​ ಆಗಿತ್ತು. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್​ ಅವರು ಈ ಜಾನಪದ ಗೀತೆಗೆ ಸಂಗೀತದ ಟಚ್​ ನೀಡಿದರು. ಎಲ್​.ಎನ್​ ಶಾಸ್ತ್ರೀ ಅವರ ಕಂಠದಿಂದ ಹಾಡು ಮೂಡಿಬಂದಿತ್ತು.

  ಇದೀಗ ‘ಕೋಲು ಮಂಡೆ ಜಂಗಮ ದೇವ’ ಹಾಡು ವಿಡಿಯೋ ಆಲ್ಬಂ ಆಗಿ ಹೊರಹೊಮ್ಮಿದೆ. ಕೊಂಚ ಭಿನ್ನವಾಗಿ ಮೂಡಿಬಂದಿದೆ, ರ‍್ಯಾಪರ್​ ಚಂದನ್​ ಶೆಟ್ಟಿ ಈ ಹಾಡನ್ನು ಮತ್ತೆ ಹಾಡಿದ್ದು, ಅವರೇ ಸಂಗೀತ ಸಂಯೋಜನೆ ಮಾಡಿ ಹೊರತಂದಿದ್ದಾರೆ. ಆನಂದ್​ ಆಡಿಯೋ ಸಂಸ್ಥೆ ‘ಕೋಲು ಮಂಡೆ‘ ವಿಡಿಯೋ ಆಲ್ಬಂ ನಿರ್ಮಾಣ ಮಾಡಿದ್ದು, ಗಣೇಶ ಚೌತಿಯ ಈ ವಿಶೇಷ ದಿನದಂದು ಯ್ಯೂಟೂಬ್​​ನಲ್ಲಿ ಬಿಡುಗಡೆ ಮಾಡಿದ್ದಾರೆ.

  ಕೊರೋನಾ ಸಮಯದಲ್ಲಿ ಅನೇಕರು ಕೆಲಸವಿಲ್ಲದೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಆನಂದ್​ ಆಡಿಯೋದ ಶ್ಯಾಂ ಮತ್ತು ಆನಂದ್​ ಅವರಿಗೆ ವಿಡಿಯೋ ಆಲ್ಬಂ ಮಾಡುವ ಹೊಸ ಆಲೋಚನೆ ಬಂದಿದೆ. ಅದರಂತೆ ‘ಕೋಲು ಮಂಡೆ’ ಹಾಡನ್ನು ಆಲ್ಬಂ ಮಾಡಲು ಯೋಚಿಸಿದ್ದಾರೆ. ಚಂದನ್​ ಶೆಟ್ಟಿ ಅವರ ಜೊತೆಗೆ ಹಾಡಿಸಿ, ನಲಿಸಿ ವಿಡಿಯೋ ಆಲ್ಬಂ ಮಾಡಿಸಿದ್ದಾರೆ.

  ಇನ್ನು ಈ ಆಲ್ಬಂ ಹಾಡಿನಲ್ಲಿ ಚಂದನ್​ ಜೊತೆಗೆ ಶಿವು ಮತ್ತು ನಂದಿನಿ ಎಂಬವರು ಹೆಜ್ಜೆ ಹಾಕಿದ್ದಾರೆ. ಮಯೂರಿ ಉಪಾಧ್ಯ ಕಾನ್ಸೆಪ್ಟ್​ ಈ ಹಾಡಿಗಿದ್ದು, ಚಿನ್ನಿ ಮಾಸ್ಟರ್​​ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಿರಣ್​ ಹಂಪಾಪುರ ಚಿತ್ರೀಕರಿಸಿದ್ದಾರೆ. ಸದ್ಯ ಈ ಹಾಡು ಆನಂದ್​ ಆಡಿಯೋ ಅವರ ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆಗೊಂಡಿದೆ.
  Published by:Harshith AS
  First published: