Rapper Badshah: ಖಿನ್ನತೆಯಿಂದ ಆ ನಿರ್ಧಾರಕ್ಕೆ ಬಂದಿದ್ರಂತೆ ಈ ರ‍್ಯಾಪರ್! ಶಿಲ್ಪಾ ಶೆಟ್ಟಿ ಬಳಿ ಹೇಳಿಕೊಂಡಿದ್ದೇನು ಬಾದ್‌ಶಾ? ಇಲ್ಲಿದೆ ನೋಡಿ

ನಟಿ ದೀಪಿಕಾ ಪಡುಕೋಣೆ(Deepika Padukone)ಯಿಂದ ಹಿಡಿದು ನಟ ಅರ್ಜುನ್ ಕಪೂರ್‌(Arjun Kapoor)ವರೆಗೆ, ಸೆಲೆಬ್ರಿಟಿಗಳು ತಮ್ಮ ದೈಹಿಕ ನೋಟ, ವೃತ್ತಿ ಜೀವನದ ಏರಿಳಿತಗಳು ಮತ್ತು ಇನ್ನೂ ಹೆಚ್ಚಿನವುಗಳು ಅವರ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ರ‍್ಯಾಪರ್ ಬಾದ್​ಶಾ

ರ‍್ಯಾಪರ್ ಬಾದ್​ಶಾ

  • Share this:
ಹಲವಾರು ಬಾಲಿವುಡ್(Bollywood) ತಾರೆಯರು ಇಲ್ಲಿಯವರೆಗೆ ತಮ್ಮ ಮಾನಸಿಕ ಆರೋಗ್ಯ(Mental Health) ಹದಗೆಟ್ಟಾಗ ಯಾವ ರೀತಿಯ ಹೋರಾಟದ ಜೀವನ ನಡೆಸಿದ್ದಾರೆ ಎನ್ನುವುದರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ನಟಿ ದೀಪಿಕಾ ಪಡುಕೋಣೆ(Deepika Padukone)ಯಿಂದ ಹಿಡಿದು ನಟ ಅರ್ಜುನ್ ಕಪೂರ್‌(Arjun Kapoor)ವರೆಗೆ, ಸೆಲೆಬ್ರಿಟಿಗಳು ತಮ್ಮ ದೈಹಿಕ ನೋಟ, ವೃತ್ತಿ ಜೀವನದ ಏರಿಳಿತಗಳು ಮತ್ತು ಇನ್ನೂ ಹೆಚ್ಚಿನವುಗಳು ಅವರ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ, ಹಿಂದಿ(Hindi) ಮತ್ತು ಪಂಜಾಬಿ(Punjabi)ಯಲ್ಲಿ ರ‍್ಯಾಪ್ ಹಾಡುಗಳಿಗೆ ಹೆಸರುವಾಸಿಯಾಗಿರುವ ಗಾಯಕ ಮತ್ತು ರ‍್ಯಾಪರ್ ಬಾದ್‌ಶಾ(Rapper Badshah) ಅವರು ಸಹ ಹಿಂದೊಮ್ಮೆ ಖಿನ್ನತೆ(Depression) ಮತ್ತು ಆತಂಕದೊಂದಿಗಿನ ತಮ್ಮ ಜೀವನದ ಹೋರಾಟದ ಬಗ್ಗೆ ತೆರೆದಿಟ್ಟರು ಮತ್ತು ಮಾನಸಿಕ ಶಾಂತಿ ಎಂಬುದು ಅವರಿಗೆ ಎಲ್ಲಕ್ಕಿಂತಲೂ ಹೆಚ್ಚು ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಖಿನ್ನತೆ ಬಗ್ಗೆ ಹೇಳಿಕೊಂಡ ರ‍್ಯಾಪರ್ ಬಾದ್​ಶಾ!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಫಿಟ್ನೆಸ್ ವಿಷಯದ ಚಾಟ್ ಶೋ 'ಶೇಪ್ ಆಫ್ ಯು' ನಲ್ಲಿ ರ‍್ಯಾಪರ್ ಬಾದ್‌ಶಾ ಖಿನ್ನತೆ ಮತ್ತು ಆತಂಕ ಅಸ್ವಸ್ಥತೆಯೊಂದಿಗಿನ ತಮ್ಮ ಹೋರಾಟಗಳ ಬಗ್ಗೆ ತೆರೆದಿಟ್ಟರು. "ನಾನು ಕ್ಲಿನಿಕಲ್ ಖಿನ್ನತೆಯಿಂದ ಬಳಲುತ್ತಿದ್ದೆ, ನಾನು ತೀವ್ರ ಆತಂಕದ ಅಸ್ವಸ್ಥತೆಯಿಂದ ಬಳಲುತ್ತಿದ್ದೆ. ಆದ್ದರಿಂದ, ನಾನು ಮತ್ತೆ ಆ ಸ್ಥಿತಿಗೆ ಹೋಗಲು ಬಯಸುವುದಿಲ್ಲ" ಎಂದು ಡಿಜೆ ವಾಲೆ ಬಾಬು ರ‍್ಯಾಪರ್ ಹೇಳಿದರು.

ಸ್ಲೀಪ್​ ಅಪ್ನಿಯಾದಿಂದ ಸಮಸ್ಯೆಯಾಗಿತ್ತಂತೆ!

ಇಷ್ಟೇ ಅಲ್ಲದೆ ಇವರು ಸ್ಲೀಪ್ ಅಪ್ನಿಯಾದಿಂದ ಸಹ ಬಳಲುತ್ತಿದ್ದರು, ಇದು ಉಸಿರಾಟವು ಪದೇ ಪದೇ ನಿಲ್ಲುವ ಮತ್ತು ಪ್ರಾರಂಭವಾಗುವ ಅಸ್ವಸ್ಥತೆಯಾಗಿದೆ ಎಂದು ಅವರು ಹೇಳಿದರು. ಅದರಿಂದ ಚೇತರಿಸಿಕೊಳ್ಳಲು ಮತ್ತು ವೇದಿಕೆಯಲ್ಲಿ ಪ್ರದರ್ಶನ ನೀಡುವಾಗ ತನ್ನ ಸಾಮರ್ಥ್ಯವನ್ನು ಮರಳಿ ಪಡೆಯಲು, ಅವರು ಕೋವಿಡ್ -19 ಲಾಕ್‌ಡೌನ್‌ಗಳ ನಂತರ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಾರಂಭಿಸಿದರು.

ಇದನ್ನೂ ಓದಿ: ಅಯ್ಯೋ.. ಇದೇನಾಯ್ತು ಜೆನಿಲಿಯಾ ಗಂಡನಿಗೆ? ಹಿಂಗಾ ಊಟ ಮಾಡೋದು ರಿತೇಶ್​ ದೇಶ್​​ಮುಖ್​​​!

ಮಾನಸಿಕ ಒತ್ತಡ ಮತ್ತು ಸಮಸ್ಯೆಗಳಿಂದ ಹೇಗೆ ದೂರವಿರಬೇಕು ಎಂಬುದರ ಬಗ್ಗೆ ಗಾಯಕ ಮತ್ತಷ್ಟು ವಿಷಯಗಳನ್ನು ಬಹಿರಂಗಪಡಿಸಿದರು. "ನಿಮ್ಮನ್ನು ಸಂತೋಷಪಡಿಸುವ ಜನರೊಂದಿಗೆ ಹೆಚ್ಚಾಗಿ ಸಮಯ ಕಳೆಯಿರಿ" ಎಂದು ಜನರಿಗೆ ಹೇಳಿದರು. ಒಬ್ಬ ವ್ಯಕ್ತಿಯು ಹೌದು ಮತ್ತು ಇಲ್ಲ ಎಂದು ಹೇಳಲು ಹೇಗೆ ಕಲಿಯಬೇಕು ಮತ್ತು "ನಾವು ಸಾಕಷ್ಟು ಒತ್ತಡದಲ್ಲಿ ಜೀವಿಸುತ್ತಿರುವುದರಿಂದ, ಸದಾ ಸಂತೋಷವಾಗಿರಲು ಪ್ರಯತ್ನಿಸಬೇಕು" ಎಂದು ಅವರು ಹೇಳಿದರು.

ಬಾದ್​ಶಾ ಅಂತಾನೇ ಫೇಮಸ್​ ಆದ ಸಿಂಗರ್​!

ಅಲ್ಲದೇ ಅವರ ಮೊದಲಿನ ಹೆಸರಾದ ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ ಅನ್ನು 1999 ರಲ್ಲಿ ಬಿಡುಗಡೆಯಾದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಚಿತ್ರದಲ್ಲಿನ 'ಬಾದ್‌ಶಾ' ಎಂಬ ಹೆಸರನ್ನು ಇರಿಸಿಕೊಳ್ಳುವ ಮೂಲಕ ತಮ್ಮ ಮೊದಲ ಹೆಸರನ್ನು ಹೇಗೆ ಬದಲಾಯಿಸಿಕೊಂಡಿದ್ದರು ಎಂಬುದರ ಬಗ್ಗೆ ಹೇಳಿದರು. ಸಂಗೀತ ಕ್ಷೇತ್ರಕ್ಕೆ ಸೇರುವ ಮೊದಲು ಬಾದ್‌ಶಾ ಅವರು ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಅರೇ.. ನಿಜವಾಗಲ್ಲೂ ಇವ್ರು ಅವ್ರೇನಾ? ಏನ್​ ಗುರೂ ಹಿಂಗ್​ ಆಗ್ಬಿಟ್ಟಿದ್ದಾರೆ!

ರ‍್ಯಾಪರ್ ಯೋ ಯೋ ಹನಿ ಸಿಂಗ್ ಸ್ಥಾಪಿಸಿದ ಮಾಫಿಯಾ ಮುಂಡೀರ್ ಎಂಬ ಸಂಗೀತ ತಂಡದೊಂದಿಗೆ ಅವರು ತಮ್ಮ ಸಂಗೀತ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಾದ್‌ಶಾ ಅವರು ಯೋ ಯೋ ಮತ್ತು ಇತರ ರ‍್ಯಾಪರ್‌ಗಳಾದ ರಫ್ತಾರ್, ಇಕ್ಕಾ ಮತ್ತು ಲಿಲ್ ಗೋಲು ಅವರೊಂದಿಗೂ ತುಂಬ ಕೆಲಸ ಮಾಡಿದ್ದಾರೆ. ತಂಡದ ಭಾಗವಾಗಿ, ಅವರು ಗೆಟ್ ಅಪ್ ಜವಾನಿ, ಅಂಗ್ರೇಜಿ ಬೀಟ್ ಮತ್ತು ಬ್ರೌನ್ ರ‍್ಯಾಂಗ್‌ನಂತಹ ಹಿಟ್ ಹಾಡುಗಳಲ್ಲಿ ಯೋ ಯೋ ಅವರೊಂದಿಗೆ ಕೆಲಸ ಮಾಡಿದ್ದಾರೆ.
Published by:Vasudeva M
First published: