ಇಷ್ಟು ದಿನ ಆಲ್ಬಂ ಹಾಡುಗಳ ಮೂಲಕ, ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದ ಚಂದನ್ ಶೆಟ್ಟಿ ಈಗ ಸಿನಿಮಾ ಹೀರೋ ಆಗ್ತಿದ್ದಾರೆ. ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಅಂದಿದೆ.. ನನ್ನ ಕಣ್ಣುಗಳು ಬ್ಲೈಂಡ್ ಆಗಿದೆ.. ನನ್ನ ಬಾಡಿ ಬ್ಯಾಲೆನ್ಸ್ ತಪ್ಪಿದೆ.. ಈ ಹಾಡು ಕೇಳದವರೇ ಇಲ್ಲ. ಈ ಸಾಂಗ್(Song) ಎಷ್ಟು ಫೇಮಸ್ ಆಯ್ತು ಅಂದರೆ, ಬರೀ ಇಂಗ್ಲಿಷ್(English) ಹಾಡುಗಳನ್ನೇ ಹಾಕುತ್ತಿದ್ದ ಪಬ್ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ ಮಾಡಿದ್ದು, ಚಂದನ್ ಶೆಟ್ಟಿ(Chandan Shetty). ಹೌದು, ಚಂದನ್ ಶೆಟ್ಟಿ ಕನ್ನಡದ ಆಲ್ಬಂ ಸಾಂಗ್(Album Song)ಗೆ ಮುನ್ನುಡಿ ಬರೆದವರು. ಅವರ ಹಾಡುಗಳೆಲ್ಲ ಸಖತ್ ಫೇಮಸ್ ಆಗಿದ್ದವು. ಇದೀಗ ಅವರು ಕೇವಲ ಗಾಯಕ, ಸಂಗೀತ ನಿರ್ದೇಶಕ ಅಲ್ಲ. ನಾಯಕನಟನಾಗಿ ಬಡ್ತಿ ಪಡೆದಿದ್ದಾರೆ. ಹೌದು, ಚಂದನ್ ಶೆಟ್ಟಿ ನಟನೆಯ ಮೊದಲ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಇಷ್ಟು ದಿನ ಹಾಡುಗಳಿಂದ ಸದ್ದು ಮಾಡುತ್ತಿದ್ದ ಚಂದನ್ ಶೆಟ್ಟಿ. ಇನ್ನು ಮುಂದೆ, ನಟನೆಯಿಂದ ಸದ್ದು ಮಾಡಲಿದ್ದಾರೆ. ಅಷ್ಟಕ್ಕೂ ಚಂದನ್ ಶೆಟ್ಟಿ ನಟನೆಯ ಮೊದಲ ಸಿನಿಮಾ ಟೈಟಲ್ ಏನು ಅಂತ ಕುತೂಹಲ ಜಾಸ್ತಿ ಆಗುತ್ತಿದೆಯಾ? ಮುಂದೆ ನೋಡಿ
‘ಎಲ್ರ ಕಾಲೆಳೆಯುತ್ತೆ ಕಾಲ’ ಎಂದ ಚಂದನ್ ಶೆಟ್ಟಿ!
‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಮೂಲಕ ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ, ನಟನೆಯ ಮೂಲಕ ಈಗಾಗಲೇ ಹೆಸರುವಾಸಿಯಾಗಿರುವ ಸುಜಯ್ ಶಾಸ್ತ್ರಿ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಚಿತ್ರ . ಚಿತ್ರಕ್ಕೆ ‘ಎಲ್ರ ಕಾಲೆಳಿಯತ್ತೆ ಕಾಲ’ (Elra Kaaleliyutte Kaala) ಎಂದು ಹೆಸರಿಡಲಾಗಿದೆ. ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಶೀರ್ಷಿಕೆಗಳ ಟ್ರೆಂಡ್ ಈ ಮೂಲಕ ಮುಂದುವರೆದಿದ್ದು, ಹೆಸರಿನಿಂದಲೇ ಚಿತ್ರ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.
ಇದನ್ನು ಓದಿ : ಹೋಮ್ ಲೋನ್-ಕಾರ್ ಲೋನ್ ಬಾಲಯ್ಯ `ಸೈಕ್ಲೋನ್’, ಏನ್ ಮಸ್ತ್ ಡೈಲಾಗ್ಸ್ ಹೊಡಿತಾರಪ್ಪ ಈ ಆಂಟಿ!
ಚಿತ್ರದ ಮೊದಲ ಪೋಸ್ಟರ್ ರಿಲೀಸ್
ಚಿತ್ರದ ಮೊದಲ ಪೋಸ್ಟರ್ಅನ್ನು ಬಿಡುಗಡೆ ಮಾಡಿ, ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಬೆಟ್ಟ- ಗುಡ್ಡ ಪರಿಸರದ ನಡುವೆ ಬಸ್ ಒಂದು ಸಾಗುತ್ತಿರುವ ಚಿತ್ರವಿರುವ ಪೋಸ್ಟರ್ ಅನ್ನು ಚಿತ್ರತಂಡ ಶೇರ್ ಮಾಡಿಕೊಂಡಿದೆ. ಜಗದೀಶ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಗೋಕುಲ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಉಷಾ ಗೋವಿಂದರಾಜು ನಿರ್ಮಾಣ . ಇನ್ನು ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರು ಚಂದನ್ ಶೆಟ್ಟಿ ಹೇಗೆ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ.
ಇದನ್ನು ಓದಿ : ರಾಜಕೀಯ ಸಮುದ್ರಕ್ಕೆ ಧುಮುಕಲಿದ್ದಾರೆ ಖ್ಯಾತ ನಿರ್ದೇಶಕ, `ಕೈ’ ಹಿಡಿಯಲು ಸಜ್ಜಾದ ಎಸ್. ನಾರಾಯಣ್!
ಇನ್ನೂ ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆಯನ್ನು ರಾಜ್ಗುರು ಹೊಸಕೋಟೆ ರಚಿಸಿದ್ದಾರೆ, ಪ್ರವೀಣ್- ಪ್ರದೀಪ್ ಸಂಗೀತ ನೀಡುತ್ತಿದ್ರೆ, ವಿಶ್ವಜಿತ್ ರಾವ್ ಛಾಯಾಗ್ರಹಣದ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದ ಕುತೂಹಲ ಹೆಚ್ಚಿಸಿದ್ದ ಚಂದನ್ ಶೆಟ್ಟಿ
ಕಳೆದ ವಾರ ಚಂದನ್ ಶೆಟ್ಟಿ ಹೊಸ ಪೋಸ್ಟ್ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಹಿಂದೆಂದೂ ಕಾಣಿಸಿರದ ಗೆಟಪ್ನಲ್ಲಿ ಅವರು ಕಾಣಿಸಿಕೊಂಡಿದ್ದರು. ರೆಟ್ರೋ ಲುಕ್ನಲ್ಲಿ ಸಖತ್ತಾಗಿ ಮಿಂಚಿದ್ದರು. ಹೊಸ ವಿಚಾರ ಸದ್ಯದಲ್ಲೇ ಎಂದು ಬರೆದುಕೊಂಡು ಫೋಟೋ ಪೋಸ್ಟ್ ಮಾಡಿದ್ದರು. ಇದೀಗ ಆ ವಿಚಾರ ಹೊರಬಿದ್ದಿದೆ. ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ