• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rapper All Ok: ವೇದಿಕೆ ಮೇಲೆ ಹಾಡ್ತಿದ್ದ ಆಲ್ ​ಒಕೆ ಅಲೋಕ್​ರನ್ನು ತಳ್ಳಿ ಬೀಳಿಸಿದ ಫ್ಯಾನ್, ವಿಡಿಯೋ ವೈರಲ್​!

Rapper All Ok: ವೇದಿಕೆ ಮೇಲೆ ಹಾಡ್ತಿದ್ದ ಆಲ್ ​ಒಕೆ ಅಲೋಕ್​ರನ್ನು ತಳ್ಳಿ ಬೀಳಿಸಿದ ಫ್ಯಾನ್, ವಿಡಿಯೋ ವೈರಲ್​!

ಆಲ್​ ಒಕೆ ಅಲೋಕ್​

ಆಲ್​ ಒಕೆ ಅಲೋಕ್​

ಆಲ್‌ ಓಕೆ ರ‍್ಯಾಪರ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದರು. ವೇದಿಕೆ ಬಳಿಯೇ ಗುಂಪುಗೂಡಿ ಅಲೋಕ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು.

  • News18 Kannada
  • 5-MIN READ
  • Last Updated :
  • Karwar, India
  • Share this:

ಒಂದು ಕಾಲದಲ್ಲಿ ಕನ್ನಡದ ರ‍್ಯಾಪ್​ ಸಾಂಗ್ (Kannada Rap Songs) ಅಂದರೆ ಜನರಿಗೆ ಅಷ್ಟು ಕ್ರೇಜ್​ ಇರಲಿಲ್ಲ. ಬಿಗ್​ಬಾಸ್ (Bigboss)​ ಸ್ಫರ್ಧಿ ರಾಕೇಶ್​ ಅಡಿಗ (Rakesh Adiga) , ಚಂದನ್​ ಶೆಟ್ಟಿ (Chanda Shetty) , ಅಲೋಕ್​ (Allok) ಅವರು ತಮ್ಮ ರ‍್ಯಾಪ್​ಗಳಿಂದ ಕನ್ನಡ ಸಾಂಗ್​ಗಳು ವಿದೇಶದಲ್ಲೂ ಸದ್ದು ಮಾಡುವಂತೆ ಮಾಡಿದ್ದಾರೆ. ಇತ್ತೀಚೆಗೆ ವೇದಿಕೆ ಮೇಲೆ ಹಾಡು ಹಾಡುತ್ತಿದ್ದ ರ‍್ಯಾಪರ್​ ಆಲ್​ಓಕೆಯವರನ್ನು (Rapper AllOk) ವ್ಯಕ್ತಿಯೊಬ್ಬ ತಳ್ಳಿ ಅವರನ್ನು ಬಿಳಿಸಿರುವ ಘಟನೆ ನಡೆದಿದೆ. ವೇದಿಕೆ ಮೇಲೆ ಹಾಡು ಹಾಡುತ್ತಿದ್ದ ರ‍್ಯಾಪರ್ ಆಲ್‌ ಒಕೆಯವರನ್ನು ವ್ಯಕ್ತಿಯೊಬ್ಬ ವೇದಿಕೆ ಮೇಲಿಂದ ತಳ್ಳಿ ಎಸ್ಕೇಪ್‌ ಆದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜರುಗಿದೆ ಎಂದು ಹೇಳಲಾಗಿದೆ.


ಆಲ್​ಒಕೆಯನ್ನು ತಳ್ಳಿ ಬಿಳಿಸಿದ ವ್ಯಕ್ತಿ!


ಕಾರವಾರ (Karwar) ನಗರದ ಮಯೂರವರ್ಮ ವೇದಿಕೆಯಲ್ಲಿ ನಡೆಯುತ್ತಿದ್ದ ಕರುನಾಡು ಕರಾವಳಿ ಉತ್ಸವದಲ್ಲಿ ಈ ಘಟನೆ ನಡೆದಿದೆ. ಆಲ್‌ ಓಕೆ ರ‍್ಯಾಪರ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದರು. ವೇದಿಕೆ ಬಳಿಯೇ ಗುಂಪುಗೂಡಿ ಅಲೋಕ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು.


ಅದ್ಧೂರಿಯಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಏಕಾಏಕಿ ವ್ಯಕ್ತಿಯೊಬ್ಬ ವೇದಿಕೆ ಮೇಲೆ ಬಂದು ಗಾಯಕ್‌ ಅಲೋಕ್‌ ಅವರನ್ನು ತಬ್ಬಿಕೊಂಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಪೊಲೀಸ್‌ ನೋಡಿ ಹೆದರಿದಿ ಆಲ್‌ ಓಕೆ ಅಲೋಕ್‌ ಅಭಿಮಾನಿ ಅವರನ್ನು ತಳ್ಳಿ ಅಲ್ಲಿಂದ ಓಡಿ ಹೋಗಿದ್ದಾರೆ. ಘಟನೆಯ ದೃಶ್ಯವನ್ನು ಸ್ಥಳಿಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.


ಕೆಳಗೆ ಬಿದ್ದ ಆಲ್​ಒಕೆ ಅಲೋಕ್​!


ವೇದಿಕೆ ಹತ್ತಿದ್ದ ಅಭಿಮಾನಿ ಅಲೋಕ್​ ಅವರನ್ನು ತಳ್ಳಿ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ. ಇದ್ದ ಅಲೋಕ್​ ವೇದಿಕೆ ಮೇಲೆಯೇ ಬಿದ್ದಿದ್ದಾರೆ. ಅಲ್ಲಿ ನೆರೆದಿದ್ದ ಜನರು ಅಲೋಕ್​ ಅವರ ಬಳಿ ಬಂದಿದ್ದಾರೆ.



ಇದನ್ನೂ ಓದಿ: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ


ಅಲೋಕ್​ ಅವರೇ ಎದ್ದು ಮತ್ತೆ ವೇದಿಕೆ ಮುಂಬಾಗ ಬಂದು ಡೋಂಟ್ ವರಿ ಎಂದು ಅವರ ಹಾಡುತ್ತಿದ್ದ ಮಾರಮ್ಮನ ಡಿಸ್ಕೋ ಹಾಡನ್ನು ಮುಂದುವರಿಸಿದ್ದಾರೆ.


ಜೋಷ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ!


ಆಲ್ ಓಕೆ ಎಂದೇ ಪ್ರಸಿದ್ಧರಾಗಿರುವ ಅಲೋಕ್ ಆರ್ ಬಾಬು ಕನ್ನಡದ ಪ್ರಸಿದ್ದ ರ್ಯಾಪರ್, ಗಾಯಕ, ನಟ ಮತ್ತು ಸಂಗೀತ ನಿರ್ದೇಶಕ. ಹಿಪ್ ಹಾಪ್ ಸಂಗೀತದ ಮೂಲಕ ಸಿನಿ ಕರಿಯರ್ ಆರಂಭಿಸಿದರು. ಜೋಷ್ ಚಿತ್ರದ ಮೂಲಕ ನಟನಾಗಿ ಸಿನಿಪಯಣ ಆರಂಭಿಸಿದ ಅಲೋಕ್ ನಂತರ ಮಂದಹಾಸ, ಐತಲಕ್ಕಡಿ, ನಿನ್ನಿಂದಲೇ , ಗಜಕೇಸರಿ, ಪಟಾಕಿ, ತಾರಕ್ ಮುಂತಾದ ಚಿತ್ರಗಳಲ್ಲಿ ನಟಿಸಿದರು.

Published by:ವಾಸುದೇವ್ ಎಂ
First published: