• Home
 • »
 • News
 • »
 • entertainment
 • »
 • RJ Rachana: ಸಾಯೋಕು ಮುನ್ನ ಈ ಕೆಲಸ ಮಾಡಬೇಕು ಅಂದ್ಕೊಂಡಿದ್ರಂತೆ RJ ರಚನಾ!

RJ Rachana: ಸಾಯೋಕು ಮುನ್ನ ಈ ಕೆಲಸ ಮಾಡಬೇಕು ಅಂದ್ಕೊಂಡಿದ್ರಂತೆ RJ ರಚನಾ!

ಆರ್​.ಜೆ. ರಚನಾ

ಆರ್​.ಜೆ. ರಚನಾ

Rapid Rashmi: ರೇಡಿಯೋ ಕ್ಷೇತ್ರದಿಂದ ದೂರವುಳಿದಿದ್ದ ರಚನಾ ಮಗುವನ್ನು ದತ್ತು ಪಡೆಯಲು ಯೋಚನೆ ಮಾಡಿದ್ದರಂತೆ.ಈ ಯೋಚನೆಯಿಂದ ರಶ್ಮಿ ಕೂಡಾ ಪ್ರಭಾವಿತಳಾಗಿದ್ದರಂತೆ . ಮತ್ತು ಆ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೆ' ಎಂದು ರಶ್ಮಿ ಹೇಳಿದ್ಧಾರೆ.

 • Share this:

  ಖ್ಯಾತ ರೇಡಿಯೋ ಜಾಕಿ (Radio Jockey), ನಟಿ ಆರ್​ಜೆ ರಚನಾ (RJ Rachana) ನಿಧನಕ್ಕೆ (Death) ಕನ್ನಡಿಗರು ಸಾಕಷ್ಟು ಬೇಸರ ಮಾಡಿಕೊಳ್ಳುತ್ತಿದ್ದಾರೆ.. ಚಿಕ್ಕ ವಯಸ್ಸಿನಲ್ಲಿ ಈ ಹೃದಯ ಘಾತದಿಂದ (Heart Attack) ನಿಧನರಾಗಿರುವ ರಚನಾ ರೇಡಿಯೋ ಜಾಕಿಯಾಗಿ ಹೆಸರು ಮಾಡಿದ್ದರು. ಇವರ ಮಾತಿಗೆ ಬೆಂಗಳೂರಿನಲ್ಲಿ (Bengaluru) ಮರುಳಾಗದವರೇ ಇಲ್ಲ. ಎಫ್ ಎಂ ರೇಡಿಯೋ ಬಗ್ಗೆ ಕ್ರೇಜ್ ಇದ್ದ ಕಾಲದಲ್ಲಿ ರಚನಾ ರೇಡಿಯೋ ಜಾಕಿ ಕ್ಷೇತ್ರದಲ್ಲಿ ಸೂಪರ್‌ಸ್ಟಾರ್ ಆಗಿದ್ದವರು. 'ಪೋರಿ ಟಪೋರಿ', 'ಮಕ್ಕಳೊಂದಿಗಿನ ಕಾರ್ಯಕ್ರಮ, ಸಿನಿಮಾ ತಾರೆಯರೊಂದಿಗೆ ಸಂದರ್ಶನ ಎಲ್ಲವನ್ನೂ ಆರಾಮಾಗಿ ನಿಭಾಯಿಸಿಬಿಡುತ್ತಿದ್ದರು. ಕನ್ನಡದ ಸಿನಿಮಾ ತಾರೆಯರಿಗೂ ರಚನಾ ತುಂಬಾನೇ ಚಿರಪರಿಚಿತರಾಗಿದ್ದರು.. ಹೀಗಾಗಿ ರಚನ ಅವರ ನಿಧನಕ್ಕೆ ಕನ್ನಡ ಸಿನಿಮಾ ರಂಗದ ಗಣ್ಯರು ವಲಯದವರು ಇಂದಿಗೂ ಕಂಬನಿ ಮಿಡಿಯುತ್ತಿದ್ದಾರೆ. ರಚನಾ ಅವರೊಂದಿಗಿನ ಒಡನಾಟ ಗಳನ್ನು ಪ್ರತಿಯೊಬ್ಬರೂ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ರಚನಾ ಆಪ್ತ ಸ್ನೇಹಿತೆಯಾಗಿದ್ದ ಮತ್ತೊಬ್ಬ ರೇಡಿಯೋ ಜಾಕಿ ರಾಪಿಡ್ ರಶ್ಮಿ ಕೂಡ ರಚನ ಜೊತೆಗಿನ ಒಡನಾಟವನ್ನು ಬಿಚ್ಚಿಟ್ಟಿದ್ದಾರೆ.


  ರಚನಾ ಜೊತೆಗಿನ ಒಡನಾಟ ಹಂಚಿಕೊಂಡ  ರಾಪಿಡ್ ರಶ್ಮಿ


  ರಚನಾ ಅವರಂತೆಯೇ ರೇಡಿಯೋ ಜಾಕಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ರ್ಯಾಪಿಡ್ ರಶ್ಮಿ ರಚನಾ ಅವರನ್ನು ಬಲ್ಲವರು. ಹಲವು ವರ್ಷಗಳ ಕಾಲ ರಚನಾ ಜೊತೆ ಒಡನಾಟ ಇಟ್ಟುಕೊಂಡಿದ್ದ ರಶ್ಮಿ ರಚನಾ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 'ಆರ್​ಜೆಯಾಗಿ ವೃತ್ತಿ ಜೀವನವನ್ನು ಆರಂಭಿಸುವ ಮೊದಲು ನಾವು ಕಾರ್ಯಕ್ರಮ ನಡೆಸಿಕೊಡುತ್ತಿದ್ದೆವು. ಆಗಿನಿಂದ ನಾವು ಉತ್ತಮ ಸ್ನೇಹಿತರಾಗಿದ್ದೆವು'' ಎಂದಿದ್ದಾರೆ..


  ಇದನ್ನೂ ಓದಿ: ಮದ್ವೆ ಟ್ರೋಲ್ಸ್​ಗೆಲ್ಲ ಟಕ್ಕರ್​ ಕೊಟ್ರಾ ರಶ್ಮಿಕಾ? ಇದನ್ನು ಕುಡಿದು ಆರಾಮಾಗಿರಿ ಅಂದಿದ್ಯಾಕೆ ಕಿರಿಕ್​ ಬ್ಯೂಟಿ?


  ಇನ್ನು ರಚನಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದಿರುವ ರಶ್ಮಿ, ಅವರ ಆಹಾರದ ಬಗ್ಗೆಯೂ ಸ್ಪಷ್ಟತೆ ಹೊಂದಿದ್ದರು. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡುತ್ತಿದ್ದರು. ಸಲಾಡ್​ಗಳನ್ನು ತಿನ್ನುವುದನ್ನು ಇಷ್ಟಪಡುತ್ತಿದ್ದರು ಎಂದಿದ್ದಾರೆ. ರಚನಾ ಅವರೊಂದಿಗೆ ದೀರ್ಘಕಾಲದ ಒಡನಾಟ ಇದ್ದರೂ ಕೂಡ ಇತ್ತೀಚೆಗೆ ಅವರೊಂದಿಗೆ ಅಷ್ಟಾಗಿ ಸಂಪರ್ಕದಲ್ಲಿರಲಿಲ್ಲ ಎಂದು ರಶ್ಮಿ ಹೇಳಿದ್ದಾರೆ.


  ಮಗು ದತ್ತು ಪಡೆಯಲು ಬಯಸಿದ್ದ ರಚನಾ


  ಇನ್ನು ರಚನಾ ಅವರ ಬಗೆಗಿನ ಆಸಕ್ತಿದಾಯಕ ವಿಚಾರವನ್ನು ರಶ್ಮಿ ಹೊರಗೆ ಹಾಕಿದ್ದಾರೆ. ರೇಡಿಯೋ ಕ್ಷೇತ್ರದಿಂದ ದೂರವುಳಿದಿದ್ದ ರಚನಾ ಮಗುವನ್ನು ದತ್ತು ಪಡೆಯಲು ಯೋಚನೆ ಮಾಡಿದ್ದರಂತೆ. ಈ ಯೋಚನೆಯಿಂದ ರಶ್ಮಿ ಕೂಡಾ ಪ್ರಭಾವಿತಳಾಗಿದ್ದರಂತೆ, ಮತ್ತು ಆ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೆ' ಎಂದು ರಶ್ಮಿ ಹೇಳಿದ್ಧಾರೆ. ಆದರೆ ವಿಧಿಯ ನಿರ್ಧಾರ ಬೇರೆ ಇತ್ತು. ಜೀವನದಲ್ಲಿ ಹೊಸದೇನನ್ನೋ ಮಾಡಲು ಹೋಗುವರಿಗೂ ಹೀಗಾಗುತ್ತದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಕಂಬನಿ ಮಿಡಿದಿದ್ದಾರೆ.


  ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ರಚನಾ


  ಇನ್ನು RJ ರಚನಾ ಮಗು ದತ್ತು ಪಡೆಯುವ ಸಮಾಜಮುಖಿ ಚಿಂತನೆಯನ್ನು ಇಟ್ಟುಕೊಂಡಿದ್ದರು. ಆದರೆ ಅದು ನೆರವೇರುವ ಮುನ್ನವೇ ಅಕಾಲಿಕವಾಗಿ ರಚನಾ ಇಹಲೋಕ ತ್ಯಜಿಸಿದ್ದಾರೆ.. ಆದರೆ ರಚನಾ ತಮ್ಮ ನಿಧನದ ಬಳಿಕ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


  ಇದನ್ನೂ ಓದಿ: ಜಾಹ್ನವಿ ಕಪೂರ್​ಗೆ ಲಕ್ಷಗಟ್ಟಲೆ ಬೆಲೆಬಾಳೋ ಹ್ಯಾಂಡ್​ಬ್ಯಾಗ್ ಕೊಟ್ಟಿದ್ದ 200 ಕೋಟಿ ವಂಚಕ!


  ನಿರರ್ಗಳವಾಗಿ, ತಡವರಿಸದೆ ಮಾತಾಡಬಲ್ಲ ರೇಡಿಯೋ ಜಾಕಿಗಳಲ್ಲಿ ಆರ್ ಜೆ ರಚನಾ ಹೆಸರು ಮೊದಲಿರುತ್ತೆ. ಕನ್ನಡವನ್ನು ಸ್ಪಷ್ಟವಾಗಿ ಮಾತಾಡಬಲ್ಲ ರಚನಾಗೆ ಅವರದ್ದೇ ಆದ ಅಭಿಮಾನಿ ಬಳಗವೂ ಇತ್ತು. ಆದರೆ, ಕಳೆದ ಆರೇಳು ವರ್ಷಗಳಿಂದ ರೇಡಿಯೋ ಜಾಕಿ ಕೆಲಸಕ್ಕೆ ವಿದಾಯ ಹೇಳಿದ್ದರು. ಎಫ್ ಎಂ ರೇಡಿಯೋ ಸಮೂಹದಿಂದಲೇ ದೂರವಿದ್ದರು. ಇವರ ಧ್ವನಿಯನ್ನು ಕೇಳುಗ ವರ್ಗ ಇಷ್ಟು ಮಿಸ್ ಮಾಡಿಕೊಳ್ಳುತ್ತಲೇ ಇತ್ತು. ಈಗ ರಚನಾರನ್ನು ಕಳೆದುಕೊಂಡ ಅವರ ಅಭಿಮಾನಿಗಳು ಮತ್ತಷ್ಟು ದು:ಖಿತರಾಗಿದ್ದಾರೆ.

  Published by:ranjumbkgowda1 ranjumbkgowda1
  First published: