ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ: ರ‍್ಯಾಪಿಡ್​ ರಶ್ಮಿಯಿಂದ ಮಹಿಳಾ ಆಯೋಗಕ್ಕೆ ದೂರು

news18
Updated:April 16, 2018, 6:54 PM IST
ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ: ರ‍್ಯಾಪಿಡ್​ ರಶ್ಮಿಯಿಂದ ಮಹಿಳಾ ಆಯೋಗಕ್ಕೆ ದೂರು
news18
Updated: April 16, 2018, 6:54 PM IST
ನ್ಯೂಸ್​ 18 ಕನ್ನಡ

ರಾಜರಥ ಸಿನಿಮಾ ತಂಡದ ವಿವಾದತ್ಮಕ ಹೇಳಿಕೆ ವಿಚಾರವಾಗಿ ತನಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ನಿರೂಪಕಿ ರ‍್ಯಾಪಿಡ್ ರಶ್ಮಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

 

'ಫೇಸ್‍ಬುಕ್ ಹಾಗೂ ಯೂಟ್ಯೂಬ್​ನಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಅಭ್ಯವಾದ ಕಮೆಂಟ್​ಗಳ ಮೂಲಕ ನನಗೆ ಸಂದೇಶಗಳು ಬರುತ್ತಿವೆ. ಈ ಸಂಬಂಧ ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ಜರುಗಿಸಬೇಕೆಂದು' ರಶ್ಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ 'ರಾಜರಥ' ತಂಡದೊಂದಿಗೆ ನಡೆಸಿದ್ದ ಸಂದರ್ಶನಲ್ಲಿ  ಸಿನಿಮಾ ನೋಡದವರು ಎಂದು ಪ್ರಶ್ನೆ ಕೇಳಿದ ನಿರೂಪಕಿ ರಶ್ಮಿಗೆ ಪ್ರತಿಕ್ರಿಯಿಸಿದ್ದ ಅನೂಪ್​​ ಭಂಡಾರಿ, ನಿರೂಪ್​ ಹಾಗೂ ಅವಂತಿಕಾ ಶೆಟ್ಟಿ ಅವರು ಕಚಡಾ, ಲೋಫರ್ ನನ್ ಮಕ್ಳು ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

 

ರಶ್ಮಿ ಅವರಿಗೆ ಬಂದಿರುವ ಪ್ರತಿಯೊಂದು ಸಂದೇಶದ ಪ್ರತಿಯನ್ನು ಮಹಿಳಾ ಆಯೋಗಕ್ಕೆ ಸಲ್ಲಿಸಲಾಗಿದ್ದು,  ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುವ ಸಾಧ್ಯತೆ.
First published:April 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ