Sandalwood: ಚಾನ್ಸ್​ ಕೊಡಿಸುವ ಆಸೆ ತೋರಿಸಿ ನಟಿ ಮೇಲೆ ರೇಪ್​, ಸ್ಯಾಂಡಲ್​ವುಡ್​ ನಟ ಕಮ್​ ನಿರ್ಮಾಪಕ ಅಂದರ್​!

ನಟ, ನಿರ್ಮಾಪಕ ಹರ್ಷವರ್ದನ್ ಟಿ ಜಿ ಅಲಿಯಾಸ್ ವಿಜಯಭಾರ್ಗವ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಿನಿಮಾಗಳಲ್ಲಿ ಸಹನಟಿಯಾಗಿ ಪಾತ್ರಗಳನ್ನು ಮಾಡುತ್ತಿದ್ದ ನಟಿ ಈತನ ವಿರುದ್ಧ ದೂರು ನೀಡಿದ್ದಾರೆ.

ನಟ ಕಮ್ ನಿರ್ಮಾಪಕ ಹರ್ಷವರ್ಧನ್​

ನಟ ಕಮ್ ನಿರ್ಮಾಪಕ ಹರ್ಷವರ್ಧನ್​

  • Share this:
ಚಿತ್ರರಂಗದಲ್ಲಿ ಏಳು ಬೀಳು ಸಹಜ. ಸಿನಿಮಾರಂಗದಲ್ಲಿ ಮಿಂಚಬೇಕು ಅಂದುಕೊಂಡವರೆಲ್ಲ ಸ್ಟಾರ್​ (Star) ಆಗುವುದಿಲ್ಲ. ಹೀರೋಗಳು ಕಷ್ಟ ಪಟ್ಟು ಮೇಲೆ  ಬಂದಿರುತ್ತಾರೆ. ಇನ್ನೂ ನಟಿ (Heroin)ಯರು ಕೂಡ ತಮ್ಮ ಆಸೆ ಈಡೇರಿಸಿಕೊಳ್ಳಲು ನಾನಾ ರೀತಿಯ ಹರಸಾಹಸ ಪಟ್ಟು ನಟಿ ಸ್ಥಾನ ಪಡೆದುಕೊಂಡಿರುತ್ತಾರೆ. ಅದರಲ್ಲೂ, ಈಗ ಅದೆಷ್ಟೋ ಮಂದಿ ತಾನು ತಾರೆಯಾಗಬೇಕೆಂದು ಕನಸು ಕಂಡಿರುತ್ತಾರೆ. ಇಂಥವರನ್ನು ಯಾಮಾರಿಸಲು ಇಲ್ಲಿ ತುಂಬ ಜನ ಇದ್ದಾರೆ. ಚಾನ್ಸ್​(Chance) ಕೊಡಿಸುವ ಆಮೀಷವೊಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಈ ರೀತಿಯ ಪ್ರಕರಣಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಬಾಲಿವುಡ್ (Bollywood)​​ನಲ್ಲಿ ಚಾನ್ಸ್​ ಆಸೆ ತೋರಿಸಿ ಮಂಚಕ್ಕೆ ಕರೆಯುವುದು ಕಾಮನ್ (Common)​ ಆಗೋಗಿದೆ. ಆದರೆ, ಈ ರೀತಿಯ ಘಟನೆ ಇದೀಗ ಸ್ಯಾಂಡಲ್​ವುಡ್ (Sandalwood)​ನಲ್ಲಿ ನಡೆದಿದೆ. ಹೌದು, ಈ ಘಟನಯಿಂದ ಚಂದನವನ ಬೆಚ್ಚಿ ಬಿದ್ದಿದೆ. ಇಂಥವರಿಂದ ಸ್ಯಾಂಡಲ್​ವುಡ್​ಗೂ ಕೆಟ್ಟ ಹೆಸರು. ಯುವ ನಟಿಯೊಬ್ಬರಿಗೆ ಚಾನ್ಸ್ ನೀಡುವುದಾಗಿ ಆಮೀಷವೊಡ್ಡಿ ನಟ ಕಮ್​ ನಿರ್ಮಾಪಕನೊಬ್ಬ ಅತ್ಯಾಚಾರ (Rape) ಮಾಡಿದ್ದಾನೆ. ಆತನನ್ನು ಈಗಾಗಲೇ ಪೊಲೀಸರು (Police) ಬಂಧಿಸಿ ಎಫ್​ಐಆರ್ ​(Fir) ದಾಖಲಿಸಿದ್ದಾರೆ. ಮಿಷನ್ 2023(Mission 2023) ಚಿತ್ರದ ಹೀರೋ ಕಮ್​ ನಿರ್ಮಾಪಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಟಿಗೆ ನಂಬಿಸಿ ದೋಖಾ ಮಾಡಿದ ಹರ್ಷವರ್ಧನ್!​

ನಟ, ನಿರ್ಮಾಪಕ ಹರ್ಷವರ್ದನ್ ಟಿ ಜಿ ಅಲಿಯಾಸ್ ವಿಜಯಭಾರ್ಗವ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಿನಿಮಾಗಳಲ್ಲಿ ಸಹನಟಿಯಾಗಿ ಪಾತ್ರಗಳನ್ನು ಮಾಡುತ್ತಿದ್ದ ನಟಿ ಈತನ ವಿರುದ್ಧ ದೂರು ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಆಕೆಗೆ ಚಾನ್ಸ್​  ನೀಡುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.  ಜೊತೆಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ವಂಚಿಸಿದ್ದಾನೆ ಎಂದು ನಟಿ ಕಣ್ಣೀರು ಹಾಕಿದ್ದಾರೆ. ನೀನೆ ನನ್ನ ಹೆಂಡತಿ ಎಂದು ಮೋಸ ಮಾಡಿದ್ದಾನೆ ಎಂದು ನಟಿ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.





ಇದನ್ನು ಓದಿ: ದೇವ್ರಿಗೆ ನನ್ನ ಬ್ರಾ ಸೈಜ್​ನದ್ದೇ ಚಿಂತೆ ಎಂದಿದ್ದ ನಟಿಗೆ ಸಂಕಷ್ಟ, ಶ್ವೇತಾ ವಿರುದ್ಧ ದಾಖಲಾಯ್ತು ಎಫ್​ಐಆರ್​!

ತನಿಖೆ ಚುರುಕುಗೊಳಿಸಿದ ಪೊಲೀಸರು!

ನಟಿ ನೀಡಿದ ದೂರಿನ ಆಧಾರದ ಮೇಲೆ ಈಗಾಗಲೇ ನಟ ಕಮ್​ ನಿರ್ಮಾಪಕ ಹರ್ಷವರ್ದನ್ ಟಿ ಜಿ ಅಲಿಯಾಸ್ ವಿಜಯಭಾರ್ಗವ್​ರನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬಂಧಿಸಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರ್ಷವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 417, 376, 504, 506 ಅಡಿ ಪ್ರಕರಣ ದಾಖಲಾಗಿದೆ. ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೂಡು ಮಾಡಿದ್ದಾಳೆ ನಟಿ. ಅಲ್ಲದೆ ಕೊಲೆ ಮಾಡಿಸುವುದಾಗಿ ಹರ್ಷವರ್ಧನ್ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ. ಸುಮಾರು 7 ರಿಂದ 8 ತಿಂಗಳಿನಿಂದ ನಿರಂತರವಾಗಿ ನಟಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಗಂಡ ಇದ್ರೂ `ಆ’ ನಟನ ಜೊತೆ ನಮಿತಾ ಖುಲ್ಲಂ ಖುಲ್ಲಾ? ಮ್ಯಾಟರ್​ ತಿಳಿದು ರಾಂಗ್​ ಆದ ಪತಿ!

ಸ್ಯಾಂಡಲ್​ವುಡ್​ನಲ್ಲಿ ಹೆಚ್ಚಾಯ್ತು ಕಾಮುಕರ ಕಾಟ!

ಚಿತ್ರರಂಗದಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಕಾಮನ್​ ಆಗಿಬಿಟ್ಟಿದೆ. ತಾನೂ ಸ್ಟಾರ್​ ಆಗಬೇಕು ಎಂದು ಆಸೆ ಇಟ್ಟುಕೊಂಡು ಗಾಂಧಿನಗರಕ್ಕೆ ಕಾಲಿಡುವ ಅದೆಷ್ಟೋ ಹೆಣ್ಣುಮಕ್ಕಳಿಗೆ ಈ ರೀತಿಯ ಅನುಭವಗಳಾಗಿವೆ. ಇದು ಕೇವಲ ಸ್ಯಾಂಡಲ್​ವುಡ್​ನಲ್ಲಿ ಅಷ್ಟೆ ಅಲ್ಲ . ಭಾರತೀಯ ಸಿನಿಮಾರಂಗದಲ್ಲಿ ಈ ರೀತಿಯ ಘಟನೆಗಳು ತುಂಬಾ ನಡೆದಿವೆ. ಹೀಗಾಗಿ ನಟ, ನಟಿಯರಾಗಬೇಕು ಎಂದು ಗಾಂಧಿನಗರಕ್ಕೆ ಕಾಲಿಡುವವರು ಎಚ್ಚರದಿಂದ ಇರಿ.
Published by:Vasudeva M
First published: