Ranveer Vs Wild: ಜುಲೈ 8ಕ್ಕೆ ರಣವೀರ್ ವರ್ಸಸ್ ವೈಲ್ಡ್ ಬಿಡುಗಡೆ, ಕುತೂಹಲ ಮೂಡಿಸಿದ ಟ್ರೈಲರ್

ಬಹು ನೀರಿಕ್ಷಿತ ರಣವೀರ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್‌ ಟ್ರೈಲರ್ ಮತ್ತು ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ಶುಕ್ರವಾರ, ನೆಟ್‌ಫ್ಲಿಕ್ಸ್ ಭಾರತದಿಂದ ತನ್ನ ಮೊದಲ ಸಂವಾದಾತ್ಮಕ ಸಾಹಸ ವಿಶೇಷಕ್ಕಾಗಿ 40-ಸೆಕೆಂಡ್ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ರಣವೀರ್ ಸಿಂಗ್ ಮತ್ತು ಮ್ಯಾನ್ ವರ್ಸಸ್ ವೈಲ್ಡ್ ಹೋಸ್ಟ್ ಬೇರ್ ಗ್ರಿಲ್ಸ್ ನೇತೃತ್ವದಲ್ಲಿ ಇದು ಜುಲೈ 8 ರಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ರಣವೀರ್ ವರ್ಸಸ್ ವೈಲ್ಡ್ ಲಗ್ಗೆ ಇಟ್ಟಿದೆ.

ರಣವೀರ್ vs ವೈಲ್ಡ್

ರಣವೀರ್ vs ವೈಲ್ಡ್

  • Share this:
ಬಹು ನೀರಿಕ್ಷಿತ ರಣವೀರ್ ವರ್ಸಸ್ ವೈಲ್ಡ್ (Ranveer vs Wild) ವಿತ್ ಬೇರ್ ಗ್ರಿಲ್ಸ್‌ (Bear Grylls) ಟ್ರೈಲರ್ ಮತ್ತು ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ಶುಕ್ರವಾರ, ನೆಟ್‌ಫ್ಲಿಕ್ಸ್ (Netflix) ಭಾರತದಿಂದ ತನ್ನ ಮೊದಲ ಸಂವಾದಾತ್ಮಕ ಸಾಹಸ (Adventure) ವಿಶೇಷಕ್ಕಾಗಿ 40-ಸೆಕೆಂಡ್ ಟ್ರೇಲರ್ ಅನ್ನು (Trailer) ಬಿಡುಗಡೆ ಮಾಡಿದೆ. ರಣವೀರ್ ಸಿಂಗ್ (Ranveer Singh) ಮತ್ತು ಮ್ಯಾನ್ ವರ್ಸಸ್ ವೈಲ್ಡ್ (Man v/s Wild) ಹೋಸ್ಟ್ ಬೇರ್ ಗ್ರಿಲ್ಸ್ ನೇತೃತ್ವದಲ್ಲಿ ಇದು ಜುಲೈ 8 ರಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ (Streaming Platform) ರಣವೀರ್ ವರ್ಸಸ್ ವೈಲ್ಡ್ ಲಗ್ಗೆ ಇಟ್ಟಿದೆ.

ಹೇಗಿದೆ ರಣವೀರ್ ವರ್ಸಸ್ ವೈಲ್ಡ್ ಟ್ರೈಲರ್‌?
ರಣವೀರ್ ವರ್ಸಸ್ ವೈಲ್ಡ್ ಟ್ರೈಲರ್‌ ಅದ್ಭುತವಾಗಿ ಮೂಡಿ ಬಂದಿದ್ದು, ಬಾಲಿವುಡ್ ನಟ ರಣವೀರ್ ಕಾಡಿನಲ್ಲಿ ಬದುಕುವ ಪ್ರಯತ್ನದಲ್ಲಿ ಕರಡಿಗಳಿಂದ ಓಡಿ ಹೋಗುವುದನ್ನು ಇಲ್ಲಿ ನೋಡಬಹುದು. ಎಂದಿನಂತೆ ಸಾಹಸಿ ಗ್ರಿಲ್ಸ್ ಅವರ ಅದ್ಭುತ ಸಾಹಸಮಯ ದೃಶ್ಯಗಳನ್ನು ಇಲ್ಲಿ ಸಹಜ ಸುಂದರವಾಗಿ ಕಟ್ಟಿಕೊಡಲಾಗಿದೆ. ಬೇರ್ ಗ್ರಿಲ್ಸ್ ಜಿಪ್‌ಲೈನ್‌ನಲ್ಲಿ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ, "ರಣವೀರ್ ಪೂರ್ಣ ಸಾಹಸವನ್ನು ಪಡೆಯಲಿದ್ದಾರೆ" ಎಂದು ಗ್ರಿಲ್ಸ್ ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು.

ಟ್ರೇಲರ್ ಹಾವು, ತೋಳ, ಕರಡಿ ಓಡುತ್ತಿರುವಂತಹ ಪ್ರಾಣಿಗಳ ಶಾಟ್‌ಗಳೊಂದಿಗೆ ಪ್ರಾರಂಭವಾಗುತ್ತದೆ ನಂತರ ರಣವೀರ್‌ ಕಾಣಿಸಿಕೊಳ್ಳುತ್ತಾರೆ. ಚಿತ್ರಿಕರಣ ನಡೆದ ಸ್ಥಳ ಉತ್ತರ ಅಮೆರಿಕಾದ ಯಾವುದೋ ಜಾಗ ಎಂದು ತಿಳಿದುಬಂದಿದೆ. ಕೆಲವೇ ಕೆಲವು ಡೈಲಾಗ್ ಗಳು ಇದ್ದರೂ, ಟ್ರೈಲರ್ ಹೆಚ್ಚು ಮುಖಭಾವಕ್ಕೆ ಒತ್ತು ನೀಡಿದೆ. ಇಬ್ಬರ ಸಾಹಸಮಯ ದೃಶ್ಯಗಳನ್ನು, ದುರ್ಗಮ ಕಾಡಿನಲ್ಲಿ ಇಬ್ಬರ ಸಂಚಾರವನ್ನು ರಣವೀರ್ ವರ್ಸಸ್ ವೈಲ್ಡ್ ಟ್ರೈಲರ್‌ ನಲ್ಲಿ ನೋಡಬಹುದು. ವಿಶೇಷವಾಗಿ ಕರಡಿಯಿಂದ ತಪ್ಪಿಸಿಕೊಳ್ಳುವ ರಣಬೀರ್ ಓಟವು ಅಂತಿಮವಾಗಿ ಅವರು ಸತ್ತು ಬಿದ್ದಿರುವಂತೆ ನಟಿಸಿ ಬಚಾವ್ ಆಗುವ ದೃಶ್ಯವನ್ನು ಸಹ ಇಲ್ಲಿ ನೊಡಬಹುದು.

ಭಾರತದ ಮೊಟ್ಟಮೊದಲ ಸಂವಾದಾತ್ಮಕ ಸಾಹಸ
ನೆಟ್‌ಫ್ಲಿಕ್ಸ್ ಇಂಡಿಯಾದ ವಿಪಿ ಕಂಟೆಂಟ್, ಮೋನಿಕಾ ಶೆರ್ಗಿಲ್, ಹೇಳಿಕೆಯಲ್ಲಿ “ಹೆಚ್ಚಿನ ಆಕ್ಟೇನ್ ಮತ್ತು ರಣವೀರ್ ಸಿಂಗ್ ಹಾಗೂ ವಿಶ್ವದ ಅತ್ಯುತ್ತಮ ತಜ್ಞ, ಬೇರ್ ಗ್ರಿಲ್ಸ್‌ನೊಂದಿಗಿನ ಅಂತಿಮ ಸಾಹಸಕ್ಕೆ ಪ್ರೇಕ್ಷಕರನ್ನು ಕರೆದೊಯ್ಯಲು ನಾವು ಉತ್ಸುಕರಾಗಿದ್ದೇವೆ. ನೆಟ್‌ಫ್ಲಿಕ್ಸ್ ಭಾರತದ ಮೊಟ್ಟಮೊದಲ ಸಂವಾದಾತ್ಮಕ ಸಾಹಸ ವಿಶೇಷತೆಯನ್ನು ತರುತ್ತಿದೆ, ಅದು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: Anupama Gowda: ಈ ಕಾರಣಕ್ಕೆ ಅನುಪಮಾ ಗೌಡ ರಾಜಾ-ರಾಣಿ ಶೋ ನಿರೂಪಣೆ ಮಾಡ್ತಿಲ್ವಂತೆ

ರಣವೀರ್ ವರ್ಸಸ್ ವೈಲ್ಡ್ ಅನ್ನು ದಿ ನ್ಯಾಚುರಲ್ ಸ್ಟುಡಿಯೋಸ್ ಸಹಯೋಗದಲ್ಲಿ ಬನಿಜಯ್ ಏಷ್ಯಾ ನಿರ್ಮಿಸಿದೆ. ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ದಟ್ಟಾರಣ್ಯದಲ್ಲಿ ಬದುಕಿಗೆ ಸವಾಲೊಡ್ಡಿ ಬರುವ ಇಂತಹ ಅನೇಕ ಸಾಹಸ ಕೆಲಸಗಳನ್ನು ಮಾಡುತ್ತಿರುತ್ತಾರೆ. ನೆಟ್ ಫ್ಲಿಕ್ಸ್ ಕೂಡ ಜಂಗಲ್ ಮೇ ಮಂಗಲ್ ಎಂಬ ಶೀರ್ಷಿಕೆ ನೀಡಿ ರಣವೀರ್ VS ವೈಲ್ಡ್, ರೋಮಾಂಚಕ ಸಾಹಸಗಳನ್ನು ಹೊಂದಿರುವ ಸಂವಾದಾತ್ಮಕ ವಿಶೇಷತೆ ಶೀಘ್ರದಲ್ಲೇ ಬರಲಿದೆ ಎಂದು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದೆ.

ಪ್ರಧಾನಿ ಸೇರಿ ಇತರೆ ಗಣ್ಯರ ಜೊತೆ ಸಂವಾದಾತ್ಮಕ ಸಾಹಸ ನಡೆಸಿದ್ದ ಗ್ರಿಲ್ಸ್
ಗ್ರಿಲ್ಸ್‌ಗೆ, ರಣವೀರ್ vs ವೈಲ್ಡ್ ಸಾಹಸಕ್ಕಾಗಿ ಭಾರತೀಯ ಸೆಲೆಬ್ರಿಟಿಯೊಂದಿಗೆ ಕೈಜೋಡಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಹ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ವಿಕ್ಕಿ ಕೌಶಲ್ ಮತ್ತು ರಜನಿಕಾಂತ್ ಅವರಂತಹವರು ಈ ಹಿಂದೆ ಗ್ರಿಲ್ಸ್ ಅವರ ಸಾಹಸಗಳಲ್ಲಿ ಸೇರಿಕೊಂಡಿದ್ದಾರೆ.

ಇದು 2019 ರಲ್ಲಿ ಬಿಡುಗಡೆಯಾದ ಯು ವರ್ಸಸ್ ವೈಲ್ಡ್ ನಂತರ ನೆಟ್‌ಫ್ಲಿಕ್ಸ್‌ಗಾಗಿ ಗ್ರಿಲ್ಸ್‌ನ ಎರಡನೇ ಸಂವಾದಾತ್ಮಕ ಸಾಹಸವಾಗಿದೆ. ಪ್ರತಿಷ್ಠಿತ ಡಿಸ್ಕವರಿ ವಾಹಿನಿಯ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Shah Rukh Khan: ಬ್ಲಾಕ್​ ಬಾಸ್ಟರ್ ನಿರ್ದೇಶಕರ ಜೊತೆ ಶಾರುಖ್ ಅದೃಷ್ಟ ಪರೀಕ್ಷೆ, ಮತ್ತದೇ ಚಾರ್ಮ್ ಗೆ ಮರಳಲಿದ್ದಾರಾ ಕಿಂಗ್ ಖಾನ್?

ರಣವೀರ್ vs ವೈಲ್ಡ್ ಮೂಲಕ ನೆಟ್ ಫ್ಲಿಕ್ಸ್ ಗೆ ನಟ ರಣವೀರ್ ಚೊಚ್ಚಲ ಪಾದಾರ್ಪಣೆ ಮಾಡುತ್ತಿದ್ದು, ಜುಲೈ 8ಕ್ಕೆ ರಣವೀರ್ vs ವೈಲ್ಡ್ ಸ್ಟ್ರೀಮ್ ಆಗಲಿದೆ.
Published by:Ashwini Prabhu
First published: