Ranveer Singh: ಮಾವನ ಮನೆಯಲ್ಲಿ ಚಿರೋಟಿ ತಿಂದು ರಣವೀರ್ ಸಿಂಗ್ ಫುಲ್ ಖುಷ್, ಯಾವತ್ತೂ ಇದರ ರುಚಿ ನೋಡಿರ್ಲಿಲ್ವಂತೆ!

ಕಳೆದ ಭಾನುವಾರದಂದು ಬಾಲಿವುಡ್ ನಟ ರಣವೀರ್ ಸಿಂಗ್​ ಬೆಂಗಳೂರಿನ ತಮ್ಮ ಮಾವನ ಮನೆಯಲ್ಲಿ ದಕ್ಷಿಣ ಭಾರತದ ಒಂದು ಸಿಹಿ ತಿನಿಸನ್ನು ಸೇವಿಸಿ ಆನಂದಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಲಿವುಡ್​ ನ ಎಷ್ಟೋ ನಟ ನಟಿಯರು ತಮ್ಮ ಸಿನಿಮಾ (Film) ಚಿತ್ರೀಕರಣದಿಂದ ಬಿಡುವು ಸಿಕ್ಕಾಗ ತಮ್ಮ ನೆಚ್ಚಿನ ಪ್ರವಾಸಿ ಸ್ಥಳಗಳಿಗೆ ಹೋಗಿ ಮೋಜು ಮಸ್ತಿ ಮಾಡಿದರೆ, ಇನ್ನೂ ಕೆಲವರು ತಮ್ಮ ಮನೆಯವರೊಂದಿಗೆ ಸಮಯ ಕಳೆಯುತ್ತಾರೆ. ಆದರೆ ಇಲ್ಲೊಬ್ಬ ಬಾಲಿವುಡ್ (Bollywood) ನಟ ತಮ್ಮ ಕೆಲಸದಿಂದ ಬಿಡುವು ಸಿಕ್ಕಾಗ ಏನು ಮಾಡಿದ್ದಾರೆ ನೋಡಿ. ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ತನ್ನ ನಟನೆಯಿಂದ ಹಾಗೂ ವಿಭಿನ್ನ ವಸ್ತ್ರ ವಿನ್ಯಾಸದಿಂದ ತುಂಬಾ ಜನಪ್ರಿಯತೆ ಗಳಿಸಿದ ನಟ. ಜೊತೆಗೆ ರಣವೀರ್ ತಮಗೆ ಸಿಕ್ಕಂತಹ ಬಿಡುವಿನ ಸಮಯವನ್ನು ಒಳ್ಳೆಯ ಬಗೆ ಬಗೆಯ ದೇಸಿ ಆಹಾರಗಳ ಸೇವನೆಯ ಮೂಲಕ ಕಳೆಯಲು ಇಷ್ಟಪಡುತ್ತಾರೆ. ಹೌದು, ಕಳೆದ ಭಾನುವಾರದಂದು ರಣವೀರ್ ಸಿಂಗ್​ ಬೆಂಗಳೂರಿನ (Bengaluru) ತಮ್ಮ ಮಾವನ ಮನೆಯಲ್ಲಿ ದಕ್ಷಿಣ ಭಾರತದ (South india) ಒಂದು ಸಿಹಿ ಭಕ್ಷ್ಯವನ್ನು ಸೇವಿಸಿ ಆನಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿಗೆ ಆಗಮಿಸಿದ ರಣವೀರ್ ದಂಪತಿ:

ಸದ್ಯ  ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ನಟ ರಣವೀರ್ ಸಿಂಗ್ ಹಾಗೂ ಅವರ ಹೆಂಡತಿ ಮತ್ತು ನಟಿ ದೀಪಿಕಾ ಪಡುಕೋಣೆ ತಮ್ಮ ಬಿಡುವಿನ ವೇಳೆಯಲ್ಲಿ ಜೊತೆಯಾಗಿ ಬೆಂಗಳೂರಿನಲ್ಲಿರುವ ದೀಪಿಕಾ ಅವರ ಹೆತ್ತವರ ಮನೆಗೆ ಬಂದು ಸ್ವಲ್ಪ ಸಮಯ ಕಳೆದಿದ್ದಾರೆ. ರಣವೀರ್ ಈ ವಿರಾಮದ ದಿನವನ್ನು ದೇಶಿಯ ಸಿಹಿ ಭಕ್ಷ್ಯವನ್ನು ಸೇವಿಸುವುದರೊಂದಿಗೆ ಆನಂದಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸಿಹಿ ಭಕ್ಷ್ಯದ ಒಂದು ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

ಚಿರೋಟಿ ಬಗ್ಗೆ ರಣವೀರ್​ ಪೋಸ್ಟ್


ರಣವೀರ್​ ಸಿಂಗ್​  ದಕ್ಷಿಣ ಭಾರತದ ಸಿಹಿ ತಿನಿಸುಗಳಲ್ಲಿ ಒಂದಾದ ‘ಚಿರೋಟಿ‘ ಫೋಟೋವನ್ನು ಇನ್ಸ್ಟಾಗ್ರಾಮ್​ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದ ಮೇಲೆ ‘ಚಿರೋಟಿ ಹಾಲು‘ ಎಂದು ಶೀರ್ಷಿಕೆ ಸಹ ನೀಡಿದ್ದಾರೆ. ಜೊತೆಗೆ ಈ ಸಿಹಿ ತಿನಿಸಿನ ಬಗ್ಗೆ ತಮಗಿರುವ ಉತ್ಸಾಹವನ್ನು ವ್ಯಕ್ತಪಡಿಸಲು ಅವರು ಫೋಟೋದ ಜೊತೆ ಕೆಲವು ಸ್ಟಿಕ್ಕರ್‌ಗಳನ್ನು ಸಹ ಶೀರ್ಷಿಕೆಗೆ ನೀಡಿದ್ದಾರೆ. ಜೊತೆಗೆ ಈ ಫೋಟೋದ ಕೆಳಭಾಗದಲ್ಲಿ ಬೆಂಗಳೂರು ಮತ್ತು ಸಂಡೆ ಎಂಬ ಕ್ಯಾಚಿ ಕ್ಯಾಪ್ಶನ್ ಸಹ​ ನೀಡಿದ್ದಾರೆ.

ಇದನ್ನೂ ಓದಿ: Ranveer-Deepika: ಗಂಡನ ಬಗ್ಗೆ ಡಿಪ್ಪಿ ಸಾಲು ಸಾಲು ಕಂಪ್ಲೇಂಟ್​, ರಾತ್ರಿ ಬೆಡ್​ರೂಂಗೆ ಲೇಟಾಗಿ ಹೋಗ್ತಾರಂತೆ ರಣವೀರ್ ಸಿಂಗ್​!

ದಕ್ಷಿಣ ಭಾರತದ ಸಿಹಿ ತಿನಿಸು:

ಚಿರೋಟಿ ಒಂದು ಸಾಂಪ್ರದಾಯಿಕ ದಕ್ಷಿಣ ಭಾರತದ ಸಿಹಿ ತಿಂಡಿಯಾಗಿದ್ದು, ಇದನ್ನು ಪುಡಿ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಭಾಗಗಳಲ್ಲಿ ಇದನ್ನು ರುಚಿಕರವಾದ ಭಕ್ಷ್ಯವೆಂದು ಪರಿಗಣಿಸಲಾಗುತ್ತದೆ. ಚಿರೋಟಿಯನ್ನು ಪುಡಿ ಮಾಡುವ ಮೂಲಕ ಬಡಿಸಲಾಗುತ್ತದೆ. ಈ ಚಿರೋಟಿಗೆ ರಣವೀರ್ ಸಿಂಗ್​ ಬಾದಾಮಿ ಹಾಲು ಮತ್ತು ಪುಡಿ ಸಕ್ಕರೆಯನ್ನು ಹಾಕಿಕೊಂಡು ಚೆನ್ನಾಗಿ ಕಲಿಸಿಕೊಂಡು ಸೇವಿಸಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ರಣವೀರ್​ ದಕ್ಷಿಣದ ಸಿಹಿ ತಿಂಡಿಗೆ ಮಾರು ಹೋಗಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್​ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ranveer Singh‌:‌ ಸ್ಟೈಲ್‌ ಐಕಾನ್ ರಣವೀರ್‌ ಸಿಂಗ್ ಗಡ್ಡ ಮತ್ತು ಹೊಳೆಯುವ ಕೂದಲಿನ ರಹಸ್ಯ ಇಷ್ಟೇ ಅಂತೆ ನೋಡಿ...

ದೇಸಿ ಪುಡ್ಡಿ ರಣವೀರ್​:

ನಟ ರಣವೀರ್ ದಿಂಗ್ ಅವರು ತುಂಬಾ ದೊಡ್ಡ ದೇಸಿ ಫುಡ್ಡಿ ಎಂದು ಹೇಳಲಾಗುತ್ತದೆ. ತನ್ನ ಅತ್ತೆ-ಮಾವನ ಮನೆಗೆ ಬಂದಾಗಲೆಲ್ಲಾ ದಕ್ಷಿಣ ಭಾರತದ ವಿವಿಧ ರೀತಿಯ ಭಕ್ಷ್ಯಗಳನ್ನು ಆನಂದಿಸುವುದರಿಂದ ಹಿಡಿದು ಎಲ್ಲಾ ರೀತಿಯ ದೇಸಿ ಆಹಾರಗಳನ್ನು ಇವರು ಇಷ್ಟಪಡುತ್ತಾರಂತೆ. ಅಲ್ಲದೇ ರಣವೀರ್​ ಸಿಂಧಿ ಆಹಾರದ ದೊಡ್ಡ ಅಭಿಮಾನಿ ಎಂದು ಹೇಳಿದರೂ ತಪ್ಪಾಗುವುದಿಲ್ಲ. ಈ ಪಾಕಪದ್ಧತಿಯಲ್ಲಿ ಸಿಂಧಿ ಕರ್ರಿ ಮತ್ತು ಆರ್ಬಿ ಟುಕ್ ಅವರ ನೆಚ್ಚಿನ ಭಕ್ಷ್ಯಗಳಾಗಿವೆಯಂತೆ.
Published by:shrikrishna bhat
First published: