• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bollywood Story: ಬಯಲಾಯ್ತು ಯಶ್ ರಾಜ್ ಫಿಲ್ಮ್ಸ್ ಜೊತೆ ರಣವೀರ್ ಸಿಂಗ್ ಬ್ರೇಕಪ್‌ ಹಿಂದಿನ ಸತ್ಯ ! 

Bollywood Story: ಬಯಲಾಯ್ತು ಯಶ್ ರಾಜ್ ಫಿಲ್ಮ್ಸ್ ಜೊತೆ ರಣವೀರ್ ಸಿಂಗ್ ಬ್ರೇಕಪ್‌ ಹಿಂದಿನ ಸತ್ಯ ! 

ಬಾಲಿವುಡ್​ ಕಥೆ

ಬಾಲಿವುಡ್​ ಕಥೆ

ರಣವೀರ್‌ ಸಿಂಗ್‌ ವೃತ್ತಿ ಜೀವನದ ಆರಂಭದಿಂದಲೂ ಯಶ್‌ರಾಜ್‌ ಪ್ರೊಡಕ್ಷನ್ ಹೌಸ್‌ನ  ಟ್ಯಾಲೆಂಟ್ ಮ್ಯಾನೇಜ್‌ಮೆಂಟ್‌ನೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದರು.

  • Share this:

ಬಾಜೀರಾವ್‌ ಮಸ್ತಾನಿ, ರಾಮ್‌ ಲೀಲಾ, ಗಲ್ಲಿಬಾಯ್‌ ಮುಂತಾದ ಹಿಟ್‌ ಚಿತ್ರಗಳನ್ನು ನೀಡಿರುವ ರಣವೀರ್ ಸಿಂಗ್ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. 2010 ರಲ್ಲಿ ಯಶ್ ರಾಜ್ ಫಿಲ್ಮ್ಸ್‌ನ ಬ್ಯಾಂಡ್ ಬಾಜಾ ಬಾರಾತ್‌ ಚಿತ್ರದೊಂದಿಗೆ ಬಾಲಿವುಡ್‌ಗೆ (Bollywwod) ಎಂಟ್ರಿ ಕೊಟ್ಟಾಗಿನಿಂದ ಸಾಕಷ್ಟು ಬ್ಲಾಕ್‌ ಬಸ್ಟರ್‌ ಚಿತ್ರಗಳೊಂದಿಗೆ ಅವರ ಸಿನಿ ಜರ್ನಿ ಯಶಸ್ಸಿನೊಂದಿಗೇ ಸಾಗಿದೆ. ಅಂದಹಾಗೆ ರಣವೀರ್‌ ಸಿಂಗ್‌ (Ranvir Sing) ವೃತ್ತಿ ಜೀವನದ ಆರಂಭದಿಂದಲೂ ಯಶ್‌ರಾಜ್‌ ಪ್ರೊಡಕ್ಷನ್ ಹೌಸ್‌ನ  ಟ್ಯಾಲೆಂಟ್ ಮ್ಯಾನೇಜ್‌ಮೆಂಟ್‌ನೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಆದರೆ ಕೆಲ ತಿಂಗಳ ಹಿಂದೆ ಯಶ್ ರಾಜ್ ಫಿಲಂಸ್ (Yash Raj Films) ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಎಲ್ಲರಿಗೂ ಶಾಕ್‌ ನೀಡಿದ್ದರು. ಇದಾಗಿ ಬಹಳ ಸಮಯದ ನಂತರ ಇದರ ಹಿಂದಿ ಕಾರಣ ಬೆಳಕಿಗೆ ಬಂದಿದೆ.


ಸಾಲು ಸಾಲು ಚಿತ್ರಗಳ ಸೋಲು!


ಇತ್ತೀಚಿನ ವರದಿ ಪ್ರಕಾರ, ಯಶ್ ರಾಜ್ ಫಿಲ್ಮ್ಸ್‌ನ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಬಗ್ಗೆ ರಣವೀರ್ ಸಿಂಗ್ ಅತೃಪ್ತರಾಗಿದ್ದಾರೆ ಎಂದು ಹೇಳಿದೆ. ಯಶ್‌ ರಾಜ್‌ ಫಿಲ್ಮ್ಸ್ ನ ನಟ ರಣವೀರ್‌ ಸಿಂಗ್‌ ನಟನೆಯ 'ಜಯೇಶ್‌ಭಾಯ್ ಜೋರ್ದಾರ್' ಸೋಲಿನ ನಂತರ ರಣವೀರ್ ಸಿಂಗ್‌ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದರು ಎಂದು ವರದಿಯಾಗಿತ್ತು.


ಅಲ್ಲದೇ ರಣವೀರ್‌ ಸಿಂಗ್‌ ನಟನೆಯ '83ʼ ಮತ್ತು 'ಸರ್ಕಸ್' ಚಿತ್ರವನ್ನು ಬ್ಲಾಕ್‌ಬಸ್ಟರ್‌ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆ ಎರಡೂ ಚಿತ್ರಗಳೂ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತವು.


ನಂತರದಲ್ಲಿ ಇದೇ ಯಶ್‌ರಾಜ್‌ ಫಿಲ್ಮ್ಸ್‌ ಹಾಗೂ ರಣವೀರ್‌ ಸಿಂಗ್‌ ಬ್ರೇಕಪ್‌ಗೆ ಕಾರಣವಾಯ್ತು ಎನ್ನಲಾಗಿದೆ. ಯಶ್‌ರಾಜ್‌ ಜೊತೆಗೆ ಕೆಲಸ ಮಾಡಲು ರಣವೀರ್‌ ಸ್ವಲ್ಪ ಕಾಲ ಬ್ರೇಕ್‌ ತೆಗೆದುಕೊಳ್ಳುವುದಾಗಿ ನಿರ್ಧರಿಸಿದ್ದಾಗಿ ಹೇಳಲಾಗಿತ್ತು.


YRF ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಅತೃಪ್ತಿ!


ಕೆಲವು ತಿಂಗಳ ಹಿಂದೆ ಯಶ್ ರಾಜ್ ಅವರ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ನಿಂದ ರಣವೀರ್‌ ಸಿಂಗ್‌ ಹೊರಗುಳಿದಿದ್ದಾರೆ. ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ರಣವೀರ್‌ ಸಿಂಗ್‌ರನ್ನು ಎ-ಲಿಸ್ಟರ್‌ಗಳಲ್ಲಿ ಒಬ್ಬರಾಗಿ ತೋರಿಸಲು ಪ್ರಯತ್ನಿಸುತ್ತಿಲ್ಲ.


ತನಗೆ ಏನು ದೊರೆಯಬೇಕಿತ್ತೋ ಅದು ಸಿಗುತ್ತಿಲ್ಲ ಎಂಬುದಾಗಿ ರಣವೀರ್‌ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗಿತ್ತು. ಅಂದಹಾಗೆ ನಟ ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಚಿತ್ರ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆಗುವ ಮೊದಲು ಇದು ನಡೆದಿದೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ


ಆದಿತ್ಯ ಚೋಪ್ರಾ, ರಣವೀರ್‌ ಸಿಂಗ್‌ ಅವರನ್ನು ಬ್ಯಾಂಡ್ ಬಾಜಾ ಬಾರಾತ್‌ ಚಿತ್ರದಲ್ಲಿ ಪರಿಚಯಿಸಿದಾಗಿನಿಂದ ಅವರ ಜೊತೆಗೇ ಹೆಚ್ಚು ಕೆಲಸ ಮಾಡಿದ್ದರು.


ಆದರೆ ಈಗ ಯಶ್ ರಾಜ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್‌ನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಕ್ಕಾಗಿ ರಣವೀರ್ ಸಿಂಗ್‌ ವಿಷಾದಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಇದಾದ ನಂತರದಿಂದ ಗಮನಾರ್ಹವಾದ ಯಾವ ಚಿತ್ರಕ್ಕೂ ನಟ ರಣವೀರ್‌ ಸಹಿ ಮಾಡಿಲ್ಲ ಎನ್ನುವುದು ಗಮನಾರ್ಹ.


ಇನ್ನು, ನಿರ್ದೇಶಕ ಕರಣ್ ಜೋಹರ್ ಅವರ ನಿರ್ದೇಶನದ ಉದ್ಯಮದಲ್ಲಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ನಟ ರಣವೀರ್‌ ಸಿಂಗ್‌ ನಟಿಸುತ್ತಿದ್ದಾರೆ.


ಗಲ್ಲಿಬಾಯ್‌ ಚಿತ್ರದಲ್ಲಿ ರಣವೀರ್‌ಗೆ ಜೊತೆಯಾಗಿದ್ದ ಆಲಿಯಾ ಭಟ್ ಇಲ್ಲೂ ಕೂಡ ಸ್ಕ್ರೀನ್‌ ಶೇರ್‌ ಮಾಡುತ್ತಿದ್ದಾರೆ. ಚಿತ್ರದಲ್ಲಿ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: ಪ್ರವಾಸ ಹೋಗಲು ಸಮಂತಾ ಪ್ರೇರಣೆ! ಸ್ಯಾಮ್ ವೆಕೇಷನ್ ಫೋಟೋಸ್ ನೋಡಿ


ಇದಲ್ಲದೆ, ಸಂಜಯ್ ಲೀಲಾ ಬನ್ಸಾಲಿ ಅವರ ಬೈಜು ಬಾವ್ರಾದಲ್ಲಿ ರಣವೀರ್ ಕಾಣಿಸಿಕೊಳ್ಳಲಿದ್ದಾರೆ. ಇದು ರಣವೀರ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಎಂದೇ ಭಾವಿಸಲಾಗುತ್ತಿದೆ.
ಈ ಮಧ್ಯೆ ಕೊನೆಯದಾಗಿ ಕಾಣಿಸಿಕೊಂಡಿದ್ದ ಸರ್ಕಸ್‌ ಚಿತ್ರ ಹೀನಾಯವಾಗಿ ಸೋತಿದ್ದು, ಮತ್ತೊಂದು ಬ್ಲಾಕ್‌ ಬಸ್ಟರ್‌ ಚಿತ್ರಕ್ಕಾಗಿ ರಣವೀರ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

First published: