HOME » NEWS » Entertainment » RANVEER SINGH TROLLED BY SUSHANT SINGH RAJPUT FANS AFTER HIS NEW BINGO AD ACCUSED OF MOCKING LATE ACTOR AE

Sushant Singh: ರಣವೀರ್ ಸಿಂಗ್​ ಹೊಸ ಜಾಹೀರಾತು ನೋಡಿ ಸಿಟ್ಟಿಗೆದ್ದ ಸುಶಾಂತ್​ ಅಭಿಮಾನಿಗಳು

Ranveer Singh: ರಣವೀರ್​  ಸಿಂಗ್​ ಅಭಿನಯದ ಹೊ ಜಾಹೀರಾತೊಂದು ರಿಲೀಸ್ ಆಗಿದೆ. ಅದರಲ್ಲಿ ಸುಶಾಂತ್​ ಸಿಂಗ್​ ಅವರನ್ನು ರಣವೀರ್ ನಕಲು ಮಾಡುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಸುಶಾಂತ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. 

Anitha E | news18-kannada
Updated:November 20, 2020, 1:08 PM IST
Sushant Singh: ರಣವೀರ್ ಸಿಂಗ್​ ಹೊಸ ಜಾಹೀರಾತು ನೋಡಿ ಸಿಟ್ಟಿಗೆದ್ದ ಸುಶಾಂತ್​ ಅಭಿಮಾನಿಗಳು
ರಣವೀರ್ ಸಿಂಗ್​
  • Share this:
ಸುಶಾಂತ್​ ಸಿಂಗ್​ ರಜಪೂತ್ ಅಗಲಿಕೆಯ ನೋವು ಇನ್ನೂ ಅವರ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಸುಶಾಂತ್​ ಸಾವನ್ನಪ್ಪಿ 5 ತಿಂಗಳಿಗೂ ಹೆಚ್ಚಿನ ಸಮಯವಾಗಿದೆ. ಆದರೂ ನಟನ ಸಾವಿನ ಹಿಂದಿನ ಸತ್ಯ ಬಹಿರಂಗವಾಗಿಲ್ಲ. ಈಗಲೂ ಸಹ ಬಾಲಿವುಡ್​ನ ಸ್ಟಾರ್​ ಕಿಡ್ಸ್​ ಹಾಗೂ  ನೆಪೋಟಿಸಂ ಗ್ಯಾಂಗ್ ಎಂದೇ ಖ್ಯಾತರಾಗಿರುವ ಬಿ-ಟೌಬನ್​ ಸೆಲೆಬ್ರಿಟಿಗಳ ವಿರುದ್ಧ ಸುಶಾಂತ್ ಅಭಿಮಾನಿಗಳು ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ ಮುಂದುವರೆಸಿದ್ದಾರೆ. ಹೀಗಿರುವಾಗಲೇ ಸುಶಾಂತ್ ಅಭಿಮಾನಿಗಳು ಈಗ ರಣವೀರ್​ ಸಿಂಗ್​ ಮೇಲೆ ಸಿಟ್ಟಾಗಿದ್ದಾರೆ. ಸುಶಾಂತ್​ ಸಿಂಗ್​ ಅವರನ್ನು ನಕಲು ಮಾಡಿರುವ ಆರೋಪ ಹೊರಿಸುತ್ತಿರುವ ನೆಟ್ಟಿಗರು, ರಣವೀರ್​ಸಿಂಗ್​ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. ಅಷ್ಟಕ್ಕೂ ರಣವೀರ್ ಸಿಂಗ್​ ಎಲ್ಲಿ ಹಾಗೂ ಯಾವಾಗ ಸುಶಾಂತ್​ ಅವರನ್ನು ಅಣಕಿಸಿದ್ದಾರೆ  ಎಂದು ಯೋಚಿಸುತ್ತಿದ್ದೀರಾ..? ಅದಕ್ಕೂ ಉತ್ತರ ಇಲ್ಲಿದೆ. ಇದೇ ಕಾರಣದಿಂದ ಈಗ ರಣವೀರ್​ ಸಿಂಗ್​ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ರಣವೀರ್ ಸಿಂಗ್​ ತಮ್ಮ ವಿಚಿತ್ರವಾದ ಸ್ಟೈಲ್​ನಿಂದಾಗಿ ಟ್ರೋಲಿಗರಿಗೆ ಬಲಿಯಾಗುತ್ತಿದ್ದರು. ಆದರೆ ಈಗ, ತಮ್ಮ ಜಾಹೀರಾತೊಂದರಲ್ಲಿ ಮಾಡಿರುವ ಅಭಿನಯದದಿಂದ ನೆಟ್ಟಿಗರಿಗೆ ಕೋಪ ತರಿಸಿದ್ದಾರೆ. ಇನ್ನು ಸುಶಾಂತ್ ಅವರ ಬಗ್ಗೆ ತಮಾಷೆ ಮಾಡಿದರೆ, ಇನ್ನು ಸಹಿಸೋದಿಲ್ಲ ಎಂದು ರಣವೀರ್​ ಸಿಂಗ್​ ಹಾಗೂ ಜಾಹೀರಾತಿನ ಕಂಪೆನಿಗೆ ಎಚ್ಚರಿಕೆ ನೀಡಿದ್ದಾರೆ.
Published by: Anitha E
First published: November 20, 2020, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading