Bollywood: ‘83’ ಚಿತ್ರೀಕರಣದ ವೇಳೆ ರಣವೀರ್ ಯಾರನ್ನು ನೋಡಿ ಭೂತ ಎಂದು ಭಾವಿಸಿದ್ದರು ಗೊತ್ತೇ?

ದಿಢೀರನೆ ವೆಸ್ಟ್ ಇಂಡೀಸ್ ನ ಮಾಜಿ ನಾಯಕ ಕ್ಲೈವ್ ಲಾಯ್ಡ್ ಈ ಚಿತ್ರದ ಚಿತ್ರೀಕರಣದ ಸೆಟ್ ಗೆ ಬಂದಿದ್ದು ನೋಡಿದ ರಣವೀರ್ ಅವರು ಒಂದು ಕ್ಷಣ ಏನೆಂದು ಭಾವಿಸಿದ್ದರು ಎಂಬುದನ್ನು ಇಲ್ಲಿ ಹೇಳಿಕೊಂಡಿದ್ದಾರೆ.

83 ಚಿತ್ರದ ಪೋಸ್ಟರ್

83 ಚಿತ್ರದ ಪೋಸ್ಟರ್

  • Share this:
ನಟ ರಣವೀರ್ ಸಿಂಗ್ (Actor Ranveer Singh) ಅವರು ತಮ್ಮ ಇತ್ತೀಚೆಗೆ ಬಿಡುಗಡೆಯಾದ ಹೊಸ ಚಿತ್ರವಾದ 83 ರ ಚಿತ್ರೀಕರಣದ ಸೆಟ್ ನಲ್ಲಿ 1983 ರ ವಿಶ್ವಕಪ್ (1983 World Cup) ನಲ್ಲಿ ಭಾರತೀಯ ಕ್ರಿಕೆಟ್ ತಂಡದ ( Indian cricket team) ವಿಜಯದ ಬಗ್ಗೆ ಚಿತ್ರೀಕರಣ ನಡೆಸುವಾಗಿನ ಆ ಮಧುರವಾದ ಕ್ಷಣದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದಂತಹ ಸಂಭಾಷಣೆಯಲ್ಲಿ ಮಾಜಿ ನಾಯಕ ಕಪಿಲ್ ದೇವ್ (Kapil Dev) ಪಾತ್ರದಲ್ಲಿ ನಟಿಸಿರುವ ರಣವೀರ್, ಚಿತ್ರದ ಕೊನೆಯ ಭಾಗವಾದ ಪ್ರಶಸ್ತಿ ಸಮಾರಂಭದ ಚಿತ್ರೀಕರಣದ ಬಗ್ಗೆ ತಮಗೆ ಆದ ಅನುಭವವನ್ನು(Experience) ಹಂಚಿಕೊಂಡಿದ್ದಾರೆ.

ಕ್ಲೈವ್ ಲಾಯ್ಡ್ ಬಂದ ಕ್ಷಣ
ಆದರೆ ದಿಢೀರನೆ ವೆಸ್ಟ್ ಇಂಡೀಸ್ ನ ಮಾಜಿ ನಾಯಕ ಕ್ಲೈವ್ ಲಾಯ್ಡ್ ಈ ಚಿತ್ರದ ಚಿತ್ರೀಕರಣದ ಸೆಟ್ ಗೆ ಬಂದಿದ್ದು ನೋಡಿದ ರಣವೀರ್ ಅವರು ಒಂದು ಕ್ಷಣ ಏನೆಂದು ಭಾವಿಸಿದ್ದರು ಎಂಬುದನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಕ್ಲೈವ್ ಲಾಯ್ಡ್ ಅವರು 1983 ರಲ್ಲಿ ನಡೆದ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ್ದರು.
ನಾವು ಪ್ರಶಸ್ತಿ ಸಮಾರಂಭದ ಚಿತ್ರೀಕರಣದಲ್ಲಿ ಆ ವಿಶ್ವಕಪ್ ಟ್ರೋಫಿಯನ್ನು ಕೈಯಲ್ಲಿ ಎತ್ತಿಕೊಂಡು ನಾವು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿದ್ದೆವು, ನಿಜವಾದ ಕಪ್ ನೊಂದಿಗೆ ಶೂಟಿಂಗ್ ಮಾಡುತ್ತಿದ್ದೆವು. ನಾವು ಅದೇ ಐತಿಹಾಸಿಕ ಬಾಲ್ಕನಿಯಲ್ಲಿ ನಿಂತು ಚಿತ್ರಕ್ಕಾಗಿ ಚಿತ್ರೀಕರಣ ಮಾಡಿದೆವು” ಎಂದು ಹೇಳಿದರು.

ಇದನ್ನೂ ಓದಿ: 83 Movie Review: ಐತಿಹಾಸಿಕ ಗೆಲುವಿನ ರೋಮಾಂಚನಕಾರಿ ದೃಶ್ಯಕಾವ್ಯ: ಚಿತ್ರದಲ್ಲಿ ಕಾಣಿಸೋದೇ ಇಲ್ಲ ರಣವೀರ್​ ಸಿಂಗ್​!

ಪ್ರಶಸ್ತಿ ಸಮಾರಂಭ
ಚಿತ್ರದ ನಿರ್ದೇಶಕರಾದ ಕಬೀರ್ ಈ ಪ್ರಶಸ್ತಿ ಸಮಾರಂಭದ ಬಗ್ಗೆ ತುಂಬಾನೇ ಕಾಳಜಿ ವಹಿಸಿ ಚಿತ್ರೀಕರಣ ಮಾಡಿದರು, ಏಕೆಂದರೆ ಈ ಫೋಟೋಗಳನ್ನು ಮತ್ತು ವೀಡಿಯೋವನ್ನು ಜನರು ತುಂಬಾ ವರ್ಷಗಳಿಂದ ನೋಡುತ್ತಾ ಬರುತ್ತಿದ್ದು, ಚೆನ್ನಾಗಿ ಮೂಡಿ ಬರಬೇಕು ಎಂಬುದು ಅವರ ಪ್ರಯತ್ನವಾಗಿತ್ತು" ಎಂದು ರಣವೀರ್ ಹೇಳಿದರು.

ದೃಶ್ಯಾವಳಿಗಳ ವೀಕ್ಷಣೆ
ಈ ಪ್ರಶಸ್ತಿ ಸಮಾರಂಭದ ಚಿತ್ರೀಕರಣಕ್ಕಾಗಿ ಆ ಐತಿಹಾಸಿಕ ಬಾಲ್ಕನಿಯ ಮೇಲೆ ಅನೇಕ ಕ್ಯಾಮೆರಾಗಳನ್ನು ಹಾಕಿದ್ದರು ಮತ್ತು ಆ ಒಂದು ಶಾಟ್ ನ ಚಿತ್ರೀಕರಣದಲ್ಲಿ ಸುಮಾರು 50 ರಿಂದ 80 ಜನರು ಸೇರಿದ್ದರು. ಎಲ್ಲರೂ ಸರಿಯಾಗಿ ನಟಿಸಬೇಕು ಮತ್ತು ಯಾರದ್ದೇ ಒಬ್ಬರ ಪಾತ್ರವು ಸ್ವಲ್ಪ ಹೆಚ್ಚು ಕಮ್ಮಿ ಆದರೂ ಚಿತ್ರೀಕರಣ ಸರಿಯಾಗಿ ಆಗುವುದಿಲ್ಲ. ನಾವೆಲ್ಲಾರೂ ನಮ್ಮ ಪಾತ್ರ ಸರಿಯಾಗಿ ಮೂಡಿ ಬರಲು ಸುಮಾರು ಬಾರಿ ಈ ದೃಶ್ಯಾವಳಿಗಳನ್ನು ನೋಡುತ್ತಿದ್ದೆವು” ಎಂದು ಇವರು ಹೇಳಿದರು.

ಇದೆಲ್ಲಾ ನಡೆಯಬೇಕಾದರೆ ಇದ್ದಕ್ಕಿದ್ದಂತೆ, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ಲೈವ್ ಲಾಯ್ಡ್ ಸೆಟ್ ನ ಒಂದು ಬದಿಯಲ್ಲಿ ನಿಂತಿದ್ದರು. ನಾವು ಅವರನ್ನು ನೋಡಿ ಇದು ನಿಜವೇ ಅಥವಾ ನಾವು ಭೂತವನ್ನು ನೋಡುತ್ತಿದ್ದೇವೆಯೇ? ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ನಮ್ಮ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ 'ಕ್ಲೈವ್ ಲಾಯ್ಡ್ ಏನು ಮಾಡುತ್ತಿದ್ದಾರೆ ಎಂದು ನೋಡಿದರೆ ಅವರು ಬೆಳಿಗ್ಗೆಯೇ ಸೆಟ್ ಗೆ ಬಂದು ಕಬೀರ್ ಅವರೊಂದಿಗೆ ಕುಳಿತು ಪ್ರಶಸ್ತಿ ಸಮಾರಂಭದ ಚಿತ್ರೀಕರಣ ನೋಡುತ್ತಿದ್ದಾರೆ" ಎಂದು ಗೊತ್ತಾಯಿತು ಎಂದು ಹೇಳಿದರು.

ಕ್ಷಣವನ್ನು ಮರುಸೃಷ್ಟಿ
ಹಿಂದಿನ ಒಂದು ಸಂದರ್ಶನವೊಂದರಲ್ಲಿ, ಕಬೀರ್ ಖಾನ್ ಅವರು ಲಾಯ್ಡ್ ಅವರ ಸೆಟ್ ಗಳಿಗೆ ನೀಡಿದ ಅಚ್ಚರಿಯ ಭೇಟಿಯ ಬಗ್ಗೆಯೂ ಮಾತನಾಡಿದ್ದರು. "ವಿಶ್ವಕಪ್ ಅನ್ನು ಕಪಿಲ್ ದೇವ್ ಅವರಿಗೆ ಹಸ್ತಾಂತರಿಸುವ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿದ್ದಾಗ ನನಗೆ ಸರಿಯಾಗಿ ನೆನಪಿದೆ. ನಾವು ಲಾರ್ಡ್ಸ್ ನಲ್ಲಿ ಒಂದೇ ಬಾಲ್ಕನಿಯಲ್ಲಿದ್ದೆವು, ಅದೇ ಸ್ಥಳದಲ್ಲಿ ಅನೇಕ ವರ್ಷಗಳ ನಂತರದ ಕ್ಷಣವನ್ನು ಮರುಸೃಷ್ಟಿಸುತ್ತಿದ್ದೆವು ಮತ್ತು ಅದೇ ಸಮಯಕ್ಕೆ ಕ್ಲೈವ್ ಲಾಯ್ಡ್ ಒಳಗೆ ಬಂದು ನನ್ನ ಪಕ್ಕದಲ್ಲಿ ಕುಳಿತರು.

ಅವರು ಶೂಟಿಂಗ್ ಸ್ಥಳಕ್ಕೆ ಹತ್ತಿರ ಹೋಗಲು ಬಯಸುತ್ತಾರೆಯೇ ಎಂದು ನಾನು ಅವರನ್ನು ಕೇಳಿದಾಗ ಅವರು 'ಎರಡನೇ ಬಾರಿ ಕಪ್ ಅನ್ನು ನಾನು ನೋಡಬೇಕೆಂದು ನೀವು ಬಯಸುವಿರಾ ಎಂದು ನಗುತ್ತಾ ಕೇಳಿದರು. ತದ ನಂತರ ಇಬ್ಬರು ಮಹಿಳೆಯರು ವೆಲ್ವೆಟ್ ಬಟ್ಟೆಯಿಂದ ಮುಚ್ಚಿದ ಟ್ರಾಲಿಯೊಂದಿಗೆ ಒಳಗೆ ಬಂದರು. ಅವರು ಆ ಕಪ್ ಮೇಲಿನ ಬಟ್ಟೆಯನ್ನು ತೆಗೆದಾಗ ಮೂಲ 83 ರ ವಿಶ್ವಕಪ್ ಅನ್ನು ನಾವು ನೋಡಿದ್ದೆವು.

ಇದನ್ನೂ ಓದಿ: Ranveer Singh: ಹೀರೋ ಆಗೋಕೆ 20 ಕೋಟಿ ದುಡ್ಡು ಕೊಟ್ಟು ಬಂದಿದ್ರಾ ರಣ್ವೀರ್ ಸಿಂಗ್? ಗಂಭೀರ ಆರೋಪ

ಚಿತ್ರೀಕರಣ ಮುಗಿಸಿ ನಾವು ಭಾವುಕ
“ಈ ವಿಶ್ವಕಪ್ ಪ್ರಶಸ್ತಿಯನ್ನು ತೆಗೆದುಕೊಳ್ಳುವ ಸೀನ್ ನಲ್ಲಿ ರಣವೀರ್ ಮಾತನಾಡಿ "ಅವರ ಹೆಸರನ್ನು ಕೂಗಿದಾಗ ನಾನು ನಡೆಯಲು ಪ್ರಾರಂಭಿಸುತ್ತೇನೆ. ನಾನು ಟ್ರೋಫಿಯನ್ನು ನನ್ನ ಕೈಯಲ್ಲಿ ತೆಗೆದುಕೊಂಡೆ ಮತ್ತು ಹುಡುಗರ ಬಳಿಗೆ ಹೋದೆ, ನಾನು ಆ ಕಪ್ ಅನ್ನು ಎತ್ತಿದೆ. ಬಾಜಿರಾವ್ ಮಸ್ತಾನಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನನಗೆ ಆದ ಆನಂದ ಮತ್ತೆ ಈ ಚಿತ್ರದ ಚಿತ್ರೀಕರಣದಲ್ಲಿ ಸಿಕ್ಕಿತು ಎಂದು ನಾನು ಹೇಳಬಲ್ಲೆ” ಎಂದು ನಟ ಹಂಚಿಕೊಂಡರು. ನಾವೆಲ್ಲರೂ ಈ ಅವಿಸ್ಮರಣೀಯ ಘಟನೆಯ ಚಿತ್ರೀಕರಣ ಮುಗಿಸಿ ನಾವು ಭಾವುಕರಾದೆವು ಮತ್ತು ಈ ರೀತಿಯ ಅನುಭವವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ" ಎಂದು ನಟ ಹೇಳಿದರು.
Published by:vanithasanjevani vanithasanjevani
First published: