Jayeshbhai Jordaar Trailer ರಿಲೀಸ್​, ಫುಲ್​​ ಕಾಮಿಡಿ ಸಿನಿಮಾ- ಬಟ್​ ಸೀರಿಯಸ್ ಮ್ಯಾಟರ್!

ನಟ ರಣವೀರ್ ಸಿಂಗ್ ಅವರು ದಿವ್ಯಾಂಗ್ ಠಕ್ಕರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಜಯೇಶ್ ಭಾಯ್ ಜೋರ್ದಾರ್’(Jayeshbhai Jordaar) ಚಿತ್ರದಲ್ಲಿ ನಟಿಸಿದ್ದಾರೆ .ಇದೀಗ ಈ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಟ ರಣವೀರ್​ ಸಿಂಗ್​

ನಟ ರಣವೀರ್​ ಸಿಂಗ್​

  • Share this:
ತನ್ನ ಸಿನಿಮಾ ವೃತ್ತಿ ಜೀವನದಲ್ಲಿ ತುಂಬಾನೇ ವಿಭಿನ್ನ(Different)ವಾದ ಚಿತ್ರ ಕಥೆಗಳನ್ನು ಆರಿಸಿಕೊಂಡು ಆ ಪಾತ್ರ(Character)ಗಳಿಗೆ ಜೀವ ತುಂಬಿದಂತೆ ನಟನೆ ಮಾಡಿ ಅಭಿಮಾನಿಗಳಿಂದ ಮತ್ತು ಅನೇಕ ನಿರ್ಮಾಪಕ(Producers) ಹಾಗೂ ನಿರ್ದೇಶಕ(Director)ರಿಂದ ಸೈ ಎನಿಸಿಕೊಂಡಿರುವ ಈಗಿನ ಬಾಲಿವುಡ್(Bollywood) ನಟರ ಸಾಲಿನಲ್ಲಿ ನಟ ರಣವೀರ್ ಸಿಂಗ್(Ranveer Singh) ಅವರು ಸಹ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಕಳೆದ ವರ್ಷ ಇವರು ‘83’ ಎಂಬ ಹಿಂದಿ(Hindi) ಚಿತ್ರದಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಜಯಿಸಿಕೊಟ್ಟ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಪಾತ್ರವನ್ನು ಮಾಡಿ ಮೆಚ್ಚುಗೆ ಪಡೆದಿದ್ದರು. 

ಈ ವರ್ಷದ ತಮ್ಮ ಮೊದಲ ಚಿತ್ರ ಬಿಡುಗಡೆಗಾಗಿ ಭಾರಿ ಸಂಚಲನವನ್ನು ಈಗಾಗಲೇ ಸೃಷ್ಟಿಸಿದ್ದ ನಟ ರಣವೀರ್ ಸಿಂಗ್ ಅವರು ದಿವ್ಯಾಂಗ್ ಠಕ್ಕರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಜಯೇಶ್ ಭಾಯ್ ಜೋರ್ದಾರ್’(Jayeshbhai Jordaar) ಚಿತ್ರದಲ್ಲಿ ನಟಿಸಿದ್ದಾರೆ .ಇದೀಗ ಈ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಜಯೇಶ್ ಭಾಯ್ ಜೋರ್ದಾರ್’ ಟ್ರೈಲರ್​ ರಿಲೀಸ್!

ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣದಲ್ಲಿ ಜಯೇಶ್​​ ಭಾಯ್​ ಜೋರ್ಧಾರ್​​ ಸಿನಿಮಾ ತಯಾರಾಗಿದೆ. ಈ ಸಿನಿಮಾದ ಟ್ರೈಲರ್​ ರಿಲೀಸ್ ಆಗಿದ್ದು, ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾದಲ್ಲಿ ಸಮಾಜಕ್ಕೆ ಒಂದು ಮಹ್ವತ್ವವಾದ ಸಂದೇಶ ಇದೆ ಎಂಬುದು ಟ್ರೈಲರ್​ನಲ್ಲೇ ಗೊತ್ತಾಗಿದೆ. ಹೆಣ್ಣು ಮಕ್ಕಳು ಅಂದರೆ ಅಸಡ್ಡೆ ತೋರುವವರಿಗೆ ಖಡಕ್ ಸಂದೇಶ ನೀಡಲಿದ್ದಾರೆ ರಣವೀರ್​ ಸಿಂಗ್​. ಈ ಸಿನಿಮಾದ ಟ್ರೈಲರ್​ ಸಖತ್​ ಫನ್ನಿಯಾಗಿದ್ದು, ಅಭಿಮಾನಿಗಳು ಫೂಲ್​ ಥ್ರಿಲ್​ ಆಗಿದ್ದಾರೆ.

ಇದನ್ನೂ ಓದಿ : ಮಹೇಶ್ ಬಾಬು ಕೊಂಡ 1.19 ಕೋಟಿಯ ಹೊಸ ಕಾರಲ್ಲಿ ನೀವೂ ಒಮ್ಮೆ ಸವಾರಿ ಮಾಡಿ!

ಮನೀಶ್​ ಶರ್ಮಾ ಜೊತೆ ರಣವೀರ್​ನ 2ನೇ ಸಿನಿಮಾ!

‘ಜಯೇಶ್‌ಭಾಯ್ ಜೋರ್ದಾರ್’ ಚಿತ್ರ ನಟ ರಣವೀರ್‌ಗೆ ತುಂಬಾನೇ ವಿಶೇಷವಾಗಿದೆ. ಏಕೆಂದರೆ ಇದು 2010 ರಲ್ಲಿ ಬಿಡುಗಡೆಯಾದ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದ ಮೂಲಕ ಈ ನಟನನ್ನು ಬಾಲಿವುಡ್‌ಗೆ ಪರಿಚಯಿಸಿದ ನಿರ್ಮಾಪಕರಾದ ಮನೀಶ್ ಶರ್ಮಾ ಅವರೊಂದಿಗೆ ಮತ್ತೊಮ್ಮೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಚಲನಚಿತ್ರ ನಿರ್ಮಾಪಕರು ರಾಮ್ ಲೀಲಾ ಚಿತ್ರದ ನಟನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, “ರಣವೀರ್ ಗಲ್ಲಾಪೆಟ್ಟಿಗೆಯ ಯಶಸ್ಸುಗಳ ಅಪೇಕ್ಷಣೀಯ ಟ್ರ್ಯಾಕ್ ರೆಕಾರ್ಡ್‌ನೊಂದಿಗೆ ಬಹುಮುಖ ನಾಯಕ ನಟನಾಗಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: ರಣಬೀರ್ ಮದುವೆಗೆ ಮಾಜಿ ಗರ್ಲ್​ಫ್ರೆಂಡ್ಸ್ ಕೊಟ್ರು ದುಬಾರಿ ಉಡುಗೊರೆ, ಲಕ್ಷದಿಂದ ಕೋಟಿ ತನಕ, ಏನೇನ್ ಗಿಫ್ಟ್ ಸಿಕ್ತು?

ನಟ ರಣವೀರ್ ಕೈಯಲ್ಲಿ ಸಾಲು ಸಾಲು ಸಿನಿಮಾ!

ನಟ ರಣವೀರ್ ಅಲ್ಲದೆ, ಜಯೇಶ್‌ಭಾಯ್ ಜೋರ್ದಾರ್ ಚಿತ್ರದಲ್ಲಿ ನಟಿ ಶಾಲಿನಿ ಪಾಂಡೆ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಈ ಚಿತ್ರವು ಇದೇ ಮೇ ತಿಂಗಳ 13ನೇ ತಾರೀಖಿನಂದು ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ರೋಹಿತ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಸರ್ಕಸ್’ ಚಿತ್ರ ಮತ್ತು ಕರಣ್ ಜೋಹರ್ ನಿರ್ದೇಶನದ, ನಟಿ ಆಲಿಯಾ ಭಟ್ ಜೊತೆಯಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೇರಿದಂತೆ ಕೆಲವು ಆಸಕ್ತಿದಾಯಕ ಚಲನ ಚಿತ್ರಗಳಲ್ಲಿ ನಟ ರಣವೀರ್ ಅವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Vasudeva M
First published: