Ranveer Singh: 12ನೇ ವಯಸ್ಸಿನಲ್ಲೇ ಬಯಸಿ ಬಯಸಿ ಶೀಲ ಕಳೆದುಕೊಂಡಿದ್ದ ಬಿ-ಟೌನ್​ ಪ್ಲೇ ಬಾಯ್​ ರಣವೀರ್​ ಸಿಂಗ್​..!

Ranveer Singh: ಯಾವುದೇ ವಿಷಯದಲ್ಲೂ ಮುಚ್ಚು ಮರೆಯಿಲ್ಲದೆ ಬಡಬಡನೆ ಮಾತನಾಡುವ ರಣವೀರ್​ ಸಿಂಗ್​, ಸದಾ ಎಲ್ಲಿ ಹೋದರೂ ಜನರನ್ನು ನಗೆಗಡಲಿನಲ್ಲಿ ಮುಳುಗಿಸುತ್ತಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಈ ಹಿಂದೆ ಅವರು ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಅಲೆದಾಡುವಾಗ ತಮ್ಮೊಂದಿಗೆ ನಡೆದಿದ್ದ ಘಟನೆ ಬಗ್ಗೆ ಹೇಳಿಕೊಂಡಿದ್ದರು. ಈಗ ತಮ್ಮ ಶೀಲ ಕೆಳದುಕೊಂಡ ಬಗ್ಗೆ ವಿವರವಾಗಿ ಹಾಗೂ ಮುಕ್ತವಾಗಿ ಹೇಳಿದ್ದಾರೆ.

Anitha E | news18
Updated:August 21, 2019, 10:17 AM IST
Ranveer Singh: 12ನೇ ವಯಸ್ಸಿನಲ್ಲೇ ಬಯಸಿ ಬಯಸಿ ಶೀಲ ಕಳೆದುಕೊಂಡಿದ್ದ ಬಿ-ಟೌನ್​ ಪ್ಲೇ ಬಾಯ್​ ರಣವೀರ್​ ಸಿಂಗ್​..!
ರಣವೀರ್ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ
  • News18
  • Last Updated: August 21, 2019, 10:17 AM IST
  • Share this:
ಬಾಲಿವುಡ್​ನ ಪ್ಲೇ ಬಾಯ್ ಎಂದೇ ಕರೆಯಲ್ಪಡುವ ಬಾಲಿವುಡ್ ನಟ ರಣವೀರ್ ಸಿಂಗ್. ಅವರು ವೇದಿಕೆ ಮೇಲೆ ಬಂದರೆ ಸಾಕು ಅದಕ್ಕೆ ಜೀವ ಬಂದು ಬಿಡುತ್ತದೆ. ಅವರಿದ್ದ ಕಡೆ ನಗುವಿನ ಅಲೆಯ ಜತೆಗೆ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಹ ವಿಷಯಗಳನ್ನು ಯಾವುದೇ ರೀತಿಯ ಫಿಲ್ಟರ್​ ಇಲ್ಲದಂತೆ ಹೇಳಿ ಬಿಡುತ್ತಾರೆ.

ಇಂತಹ ಅವರಿಗೆ ಯಾವುದೇ ವಿಷಯದಲ್ಲೂ ಮುಚ್ಚು ಮರೆಯಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಈ ಹಿಂದೆ ಅವರು ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಅಲೆದಾಡುವಾಗ ತಮ್ಮೊಂದಿಗೆ ನಡೆದಿದ್ದ ಘಟನೆ ಬಗ್ಗೆ ಹೇಳಿಕೊಂಡಿದ್ದರು.

ವಿಭಿನ್ನ ಲುಕ್​ನಲ್ಲಿ ರಣವೀರ್​ ಸಿಂಗ್​


ಹೌದು, ರಣವೀರ್​ ಸಿಂಗ್ ಇಂದು ದೊಡ್ಡ ನಟ. ಆದರೆ ಅವರು ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಎಲ್ಲರಂತೆ ಕಷ್ಟಪಟ್ಟು ಮೇಲೆ ಬಂದವರು. ಒಮ್ಮೆ ಅವರು ಸಿನಿಮಾ ಅವಕಾಶಕ್ಕಾಗಿ ಮುಂಬೈನ ಅಂದೇರಿಯಲ್ಲಿದ್ದ ವ್ಯಕ್ತಿಯೊಬ್ಬರ ಮನೆಗೆ ಭೇಟಿ ಮಾಡಲು ಹೋಗಿದ್ದಾರೆ. ಆಗ ಅವರಿಗೆ ಅಲ್ಲಾದ ಅನುಭವ ನಿಜಕ್ಕೂ ಹೇಳಿಕೊಳ್ಳಲು ಯೋಗ್ಯವಲ್ಲದು.ಸಿನಿಮಾದಲ್ಲಿ ಅವಕಾಶ ಬೇಕಾದರೆ ನೀನು ಕೊಂಚ ಕಷ್ಟಪಡಬೇಕು. ಅದರ ಜತೆಗೆ ಕೊಂಚ ಸ್ಮಾರ್ಟ್​ ಆಗಿಯೂ ಇರಬೇಕು ಎಂದೆಲ್ಲ ಆತ ಮಾತನ್ನು ಆರಂಭಿಸಿ ನಂತರ ಪಾತ್ರ ಬೇಕಾದರೆ ಪಲ್ಲಂಗ ಏರುವಂತೆ ಆಫರ್​ ಕೊಟ್ಟಿದ್ದರಂತೆ. ಅಲ್ಲದೆ ಅವರು ಅವರೊಂದಿಗೆ ಅಂದು ನಡೆದುಕೊಂಡ ರೀತಿಯ ಕುರಿತು ಕೇಳಿದರೆ ಡೇರ್​ ಡೆವಿಲ್​ ರಣವೀರ್​ ಸಿಂಗ್​ ವಿವರಿಸೋಕೆ ಎಷ್ಟು ಕಷ್ಟಪಡುತ್ತಾರೆ ಅಂತ ನೀವೇ ನೋಡಿ..... ಇಲ್ಲಿದೆ ವಿಡಿಯೋ...

(3:59 to 6:30)

ಇಂದು ರಣವೀರ್​ ಸಿಂಗ್​, ಅಭಿನಯ, ಮ್ಯಾನರಿಸಂ ಹಾಗೂ ಅವರ ಸ್ಟೈಲ್​ನಿಂದಾಗಿ ಕೋಟ್ಯಂತರ ಮಂದಿ ಹೆಣ್ಣು ಮಕ್ಕಳು ಅವರ ಅಭಿಮಾನಿಗಳಾಗಿದ್ದಾರೆ. ಇಂತಹ ನಟ ತಮ್ಮ ಬಾಲ್ಯದಲ್ಲಿ ನಡೆದಿದ್ದ ಒಂದು ಘಟನೆ ಬಗ್ಗೆ 2014ರಲ್ಲಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

ಇದನ್ನೂ ಓದಿ: Sye Raa Narasimha Reddy Teaser: ಧೂಳೆಬ್ಬಿಸುತ್ತಿದ್ದಾನೆ ಸೈರಾ ನರಸಿಂಹ ರೆಡ್ಡಿ: ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಟೀಸರ್​ ಔಟ್​..!

'ಭಾರತದಲ್ಲಿ ಲೈಂಗಿಕತೆ ಬಗ್ಗೆ ಇರುವ ಮಡಿವಂತಿಕೆಯಿಂದಾಗಿ ಮಕ್ಕಳಿಗೆ ಈ ವಿಷಯಗಳಲ್ಲಿ ಕೊಂಚ ಕೆಟ್ಟ ಕುತೂಹಲ ಇರುತ್ತದೆ. ಹಾಗೇ ನನಗೂ ಈ ವಿಷಯದಲ್ಲಿ ಕೆಟ್ಟ ಕುತೂಹಲವಿತ್ತು. ಅಂದರೆ ಆಗ ನನಗೆ 12ರ ವಯಸ್ಸು ನನಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಯುವತಿಯೊಂದಿಗೆ ನಾನು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆ. ಇದಾದ ನಂತರ 26ನೇ ವಷಯಸ್ಸಿನವರೆಗೂ ಲೆಕ್ಕವಿಲ್ಲದಷ್ಟು ಹುಡುಗಿಯರೊಂದಿಗೆ ನಾನು ದೈಹಿಕ ಸಂಬಂಧ ಇಟ್ಟುಕೊಂಡಿದ್ದೆ. ನಂತರ ಈ ವಿಷಯದಲ್ಲಿ ನನ್ನ ಅಭಿಪ್ರಾಯ ಬದಲಾಗಿ ನಂತರ ಒಂದು ಸಂಬಂಧದಲ್ಲಿ ಬಂಧಿಯಾಗುವ ಕುರಿತು ಆಲೋಚಿಸ ತೊಡಗಿದ್ದೆ' ಎಂದು ರಣವೀರ್ ಹೇಳಿಕೊಂಡಿದ್ದಾರೆ.

ಇದೇ ಕಾರಣದಿಂದಲೇ ರಣವೀರ್​ ಸಿಂಗ್​ ಯಶಸ್ಸಿನ ಉತ್ತುಂಗದಲ್ಲಿದ್ದರೂ ಅವರು ಕಾಂಡೋಮ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.ಬಿಚ್ಚು ಮನಸ್ಸಿನ ಹಾಗೂ ಜಾಲಿ ಸ್ವಾಭಾವದ ರಣವೀರ್​ ಸಿಂಗ್​ ಏನು ಮಾತನಾಡಿದರೂ ಅಭಿಮಾನಿಗಳು ಕೇಳುತ್ತಾರೆ. ಆದರೆ ಕೆಲವು ವಿಷಯಗಳನ್ನು ರಣವೀರ್​ ಮಡಿವಂತಿಕೆಯ ಗಡಿ ದಾಟಿ ಮಾತನಾಡಿದಾಗ ಅದಕ್ಕೆ ಟೀಕೆಯನ್ನೂ ಮಾಡುತ್ತಾರೆ. ಆದರೆ ಹೊಗಳಿದಾಗ ಹಿಗ್ಗಿ ಟೀಕಿಸಿದಾಗ ಕುಗ್ಗುವ ಸ್ವಭಾವವನ್ನು ರೂಢಿಸಿಕೊಳ್ಳದ ರಣವೀರ್​ ಮಾತ್ರ ತಮ್ಮ ವೃತ್ತಿ ಜೀವನದತ್ತ ಗಮನವನ್ನು ಕೇಂದ್ರಿಕರಿಸುತ್ತಾ ಯಶಸ್ಸಿನ ಮೆಟ್ಟಿಲನ್ನು ಏರುತ್ತಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

Rakul Preet Singh: ಬಿಸಿಲ ಬೇಗೆಗೆ ಬಿಕಿನಿ ಮೊರೆ ಹೋದ ರಾಕುಲ್​ ಪ್ರೀತ್​ ಸಿಂಗ್​

First published: August 20, 2019, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading