• Home
  • »
  • News
  • »
  • entertainment
  • »
  • Jayeshbhai Jordaar Movie: ಹೊಸ ಸಿನಿಮಾ ಕೈಗೆತ್ತಿಕೊಂಡ ಸ್ಟೈಲಿಶ್​ ಕಿಂಗ್​ ರಣವೀರ್​ ಸಿಂಗ್​..!

Jayeshbhai Jordaar Movie: ಹೊಸ ಸಿನಿಮಾ ಕೈಗೆತ್ತಿಕೊಂಡ ಸ್ಟೈಲಿಶ್​ ಕಿಂಗ್​ ರಣವೀರ್​ ಸಿಂಗ್​..!

ನಟ ರಣವೀರ್​ ಸಿಂಗ್​

ನಟ ರಣವೀರ್​ ಸಿಂಗ್​

ಲವರ್​ ಬಾಯ್​, ರೊಮ್ಯಾಂಟಿಕ್​ ಹೀರೋ, ಖಡಕ್ ವಿಲನ್​, ಕಾಮಿಡಿ ನಟನಾಗಿ ರಣವೀರ್​ ಸಿಂಗ್​ರನ್ನು ನೋಡಿದ್ದೇವೆ. ಈಗ ಅವರು ಹೊಸ ಅವತಾರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ. ಹೌದು, ರಣವೀರ್​ ಸಿಂಗ್​ ಈಗ ಗುಜರಾತಿ ವ್ಯಕ್ತಿಯ ಪಾತ್ರದಲ್ಲಿ ತೆರೆ ಮೇಲೆ ರಂಜಿಸಲಿದ್ದಾರೆ.

  • News18
  • 2-MIN READ
  • Last Updated :
  • Share this:

- ಅನಿತಾ ಈ, 

ಬಾಲಿವುಡ್​ನ ಸ್ಟೈಲಿಶ್​ ನಟ ರಣವೀರ್​ ಸಿಂಗ್​ ಸದ್ಯ ಕೈ ತುಂಬಾ ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳನ್ನು ಇಟ್ಟುಕೊಂಡಿದ್ದಾರೆ. ಅವರ ಅಭಿನಯದ 'ಗಲ್ಲಿ ಬಾಯ್​' ಚಿತ್ರ ಕಡಿಮೆ ಬಜೆಟ್​ನದ್ದಾದರು ಬಾಕ್ಸಾಫಿಸ್​ನಲ್ಲಿ ಸಖತ್​ ಸದ್ದು ಮಾಡಿತ್ತು.

'ಗಲ್ಲಿ ಬಾಯ್​' ನಂತರ ಈಗ ರಣವೀರ್ ಮಾಜಿ ಕ್ರಿಕೆಟಿಗ​ ಕಪಿಲ್​ ದೇವ್ ಅವರ ಜೀವನಾಧಾರಿತ ಸಿನಿಮಾ '83' ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಆದರೆ ಈ ಚಿತ್ರ ಮುಗಿಯುವ ಮುನ್ನವೇ ಈಗ ಮತ್ತೊಂದು ಸಿನಿಮಾ ಸಹಿ ಮಾಡಿದ್ದಾರೆ.

ಇದನ್ನೂ ಓದಿ: PHOTOS: ಸಂಭಾವನೆ ವಿಷಯದಲ್ಲಿ ಒಂದು ಮೆಟ್ಟಿಲು ಮೇಲೇರಿದ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ

ಹೌದು, ಯಶ್​ ರಾಜ್​ ಫಿಲ್ಮ್ಸ್​ ಅಡಿ ನಿರ್ಮಾಣವಾಗುತ್ತಿರುವ ​ಹೊಸ ಸಿನಿಮಾಗೆ ರಣವೀರ್​ ಸಿಂಗ್​ ನಾಯಕ. ತಮ್ಮ ಹೊಸ ಸಿನಿಮಾ ಬಗ್ಗೆ ಖುದ್ದು ರಣವೀರ್​ ಟ್ವೀಟ್​ ಮಾಡಿದ್ದಾರೆ.

Its a ‘miracle script’!!! 😍ಹೊಸ ಬರಹಗಾರ ಹಾಗೂ ನಿರ್ದೇಶಕನನ್ನು ಯಶ್​ ರಾಜ್​ ಫಿಲ್ಮ್ಸ್​ ಪರಿಚಯಿಸುತ್ತಿದ್ದು, ದಿವ್ಯಾಂಗ್​ ಟಕ್ಕರ್​ ರಣವೀರ್​ ಅಭಿನಯದ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 'ಜಯೇಶ್​ಭಾಯ್​ ಜೋರ್​ದಾರ್​' ಎಂಬ ಹೆಸರಿನ ಸಿನಿಮಾದಲ್ಲಿ ರಣವೀರ್​ ಪಕ್ಕಾ ಗುಜರಾತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Where in the world did this kid come from?!?!? #DivyangThakkar is straight up JORDAAR !!! 😍🎥❤🙏🏽 @yrf #JayeshbhaiJordaar pic.twitter.com/VIUszwSAbX


ಮನೀಶ್​ ಶರ್ಮಾ ನಿರ್ಮಾಣದ ಈ ಸಿನಿಮಾದ ಅಕ್ಟೋಬರ್​ನಲ್ಲಿ ಸೆಟ್ಟೇರಲಿದೆ. ಈ ಸಿನಿಮಾದ ಕತೆ ತುಂಬಾ ಚೆನ್ನಾಗಿದ್ದು, ಕೇಳಿದ ಕೂಡಲೇ ರಣವೀರ್​ ಓಕೆ ಹೇಳಿದ್ದಾರಂತೆ. ಅಲ್ಲದೆ ಯಶ್​ ರಾಜ್​ ಫಿಲ್ಮ್ಸ್​ ರಣವೀರ್​ ಅವರನ್ನು ಈ ಕತೆಗೆ ಆಯ್ಕೆ ಮಾಡಿರುವುದು ಅವರಿಗೆ ಖುಷಿ ತಂದಿದೆ ಎಂದಿದ್ದಾರೆ ರಣವೀರ್​.

PHOTOS: '83' ಸಿನಿಮಾದಲ್ಲಿ ಕಪಿಲ್​ ಪಾತ್ರದಲ್ಲಿ ನಟ ರಣವೀರ್​ ಸಿಂಗ್​

First published: