Ranveer Singh: ಅಬ್ಬಬ್ಬಾ.. ನಟ ರಣವೀರ್ ಸಿಂಗ್ ಸೆಕ್ಸಿ ಶರ್ಟ್‌ಲೆಸ್‌ ಫೋಟೋ ನೋಡಿ ಹೇಗಿದೆ..!

Ranveer Singh: ಫಿಟ್ನೆಸ್ ಎನ್ನುವುದು ನಟನ ಜೀವನದಲ್ಲಿ ಒಂದು ಅವಿಭಾಜ್ಯ ಅಂಗವಾಗಿದ್ದು, ತನ್ನ ನಟನೆಯ ವೃತ್ತಿಯಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಬೇಕೆಂಬ ಹಂಬಲ ಇವರಿಗಿದೆ

ರಣವೀರ್ ಸಿಂಗ್

ರಣವೀರ್ ಸಿಂಗ್

  • Share this:
ಬಾಲಿವುಡ್‌ನಲ್ಲಿರುವ ನಾಯಕ ನಟರು ಫಿಟ್ ಆಗಿರಲು ಜಿಮ್‌ನಲ್ಲಿ (Gym) ಪ್ರತಿದಿನ ಕಠಿಣವಾದ ತಾಲೀಮು ನಡೆಸುತ್ತಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅದರಲ್ಲೂ ಬಾಲಿವುಡ್‌ನಲ್ಲಿರುವ ಈಗಿನ ನಟರ ಪೈಕಿ ರಣವೀರ್ ಸಿಂಗ್ (Ranveer Singh) ತಮ್ಮ ದೇಹವನ್ನು ಅತ್ಯಂತ ಫಿಟ್ ಆಗಿ ಇರಿಸಿಕೊಂಡಿದ್ದಾರೆ ಎಂದು ಹೇಳಬಹುದು. ನೀವು ನಿಮ್ಮ ಜಿಮ್ ಸೆಷನ್‌ಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದರೆ, ಪ್ರೇರೇಪಿತರಾಗಲು ಈ ನಟನ ಸಾಮಾಜಿಕ ಮಾಧ್ಯಮದಲ್ಲಿರುವ (social media) ಪೋಸ್ಟ್‌ಗಳನ್ನು ಮತ್ತು ಫೀಡ್‌ಗಳನ್ನು ನೋಡಬಹುದು. ಯಾವಾಗಲೂ ತನ್ನ ಫಿಟ್ನೆಸ್‌ನಿಂದಾಗಿ (Fitness) ಹೆಚ್ಚಾಗಿ ಸುದ್ದಿಯಲ್ಲಿರುವ ರಣವೀರ್ ಸೋಮವಾರದ (Monday) ಪ್ರೇರಣಾದಾಯಕ (Motivation) ಪೋಸ್ಟ್‌ನೊಂದಿಗೆ ವಾರವನ್ನು ಪ್ರಾರಂಭಿಸಿದ್ದಾರೆ ಮತ್ತು ಇದು ನೋಡುಗರನ್ನು ಸೆಳೆಯದೇ ಇರದು.

ಆಬ್ಸ್‌ ಪ್ರದರ್ಶನ
ಸೋಮವಾರ ಬೆಳಗ್ಗೆ ರಣವೀರ್ ತನ್ನ ಟ್ರ್ಯಾಕ್ ಪ್ಯಾಂಟ್ ಧರಿಸಿ ಜಿಮ್‌ಗೆ ತೆರಳಿ ಅವರು ತಮ್ಮ ಮೈಕಟ್ಟನ್ನು ಸಂಪೂರ್ಣವಾಗಿ ನಿರ್ಮಿಸಿಕೊಂಡ ಆಬ್ಸ್‌ನೊಂದಿಗೆ ಪ್ರದರ್ಶಿಸಿದರು. ನಟ ತನ್ನ ಸ್ನಾಯುಗಳನ್ನು ಸ್ವಲ್ಪ ಬಾಗಿಸಿ ಅವರ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ನಂತರ ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ranveer Singh‌:‌ ಸ್ಟೈಲ್‌ ಐಕಾನ್ ರಣವೀರ್‌ ಸಿಂಗ್ ಗಡ್ಡ ಮತ್ತು ಹೊಳೆಯುವ ಕೂದಲಿನ ರಹಸ್ಯ ಇಷ್ಟೇ ಅಂತೆ ನೋಡಿ.


12 ಲಕ್ಷ ಜನರು ಲೈಕ್
ರಣವೀರ್ ಈ ಫೋಟೋಗಳನ್ನು ಹಂಚಿಕೊಂಡು ಇದಕ್ಕೆ "ಈ ಪ್ರಕ್ರಿಯೆಯು ಬಹುಮಾನವಾಗಿದೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದು ಕೊಂಡಿದ್ದಾರೆ. ಈ ಫೋಟೋವನ್ನು ಈಗಾಗಲೇ 12ಲಕ್ಷ ಜನರು ಇಷ್ಟಪಟ್ಟಿದ್ದಾರೆ ಮತ್ತು ಫಿಟ್ನೆಸ್ ಎನ್ನುವುದು ನಟನ ಜೀವನದಲ್ಲಿ ಒಂದು ಅವಿಭಾಜ್ಯ ಅಂಗವಾಗಿದ್ದು, ತನ್ನ ನಟನೆಯ ವೃತ್ತಿಯಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಬೇಕೆಂಬ ಹಂಬಲ ಇವರಿಗಿದೆ ಎಂದು ಹೇಳಬಹುದು.

ರಣವೀರ್ ತನ್ನ ಫೋಟೋಗಳಿಂದ ಎಲ್ಲಾ ಜಿಮ್‌ಗೆ ಹೋಗಿ ತಾಲೀಮು ನಡೆಸುವವರಿಗೊಂದು ಇನ್ನಷ್ಟು ಹುಮ್ಮಸ್ಸು ತುಂಬಿಸುವ ಪ್ರೇರಣೆ ಆಗುತ್ತಿರುವುದು ಇದೇ ಮೊದಲಲ್ಲ. ವಿಶೇಷವಾಗಿ, ಸೋಮವಾರದ ಪ್ರೇರಣಾ ಪೋಸ್ಟ್‌ಗಳು ವಾರ ಪ್ರಾರಂಭವಾಗುತ್ತಿದ್ದಂತೆ ಅಭಿಮಾನಿಗಳ ಪಾಲಿಗೆ ಪ್ರೇರಣೆ ಅಂತಾನೆ ಹೇಳಬಹುದು.

ಜಿಮ್‌ನಲ್ಲಿ ಕಠಿಣವಾದ ತಾಲೀಮು
ಕೆಲವು ವಾರಗಳ ಹಿಂದೆ, ಈ ನಟ ಬೂದು ಬಣ್ಣದ ಟ್ಯಾಂಕ್ ಧರಿಸಿ ಜಿಮ್‌ನಲ್ಲಿ ಕಠಿಣವಾದ ತಾಲೀಮು ನಡೆಸುತ್ತಿರುವ ದೃಶ್ಯವನ್ನು ಫೋಟೋದಲ್ಲಿ ಕಾಣಬಹುದು. ಈ ಫೋಟೋವನ್ನು ಸಹ ಸುಮಾರು 15 ಲಕ್ಷ ಜನರು ಇಷ್ಟ ಪಟ್ಟಿದ್ದಾರೆ. ಒಟ್ಟಿನಲ್ಲಿ ನಟ ರಣವೀರ್ ಅವರ ಸೋಮವಾರದ ಪ್ರೇರಣಾದಾಯಕವಾದ ಪೋಸ್ಟ್‌ಗಳು ಅಭಿಮಾನಿಗಳಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Ranveer Singh: ಹೀರೋ ಆಗೋಕೆ 20 ಕೋಟಿ ದುಡ್ಡು ಕೊಟ್ಟು ಬಂದಿದ್ರಾ ರಣ್ವೀರ್ ಸಿಂಗ್? ಗಂಭೀರ ಆರೋಪ

'83’ ಇದೇ ಡಿಸೆಂಬರ್ ನಲ್ಲಿ ಬಿಡುಗಡೆ
ಸುದೀರ್ಘ ದಿನಗಳ ನಂತರ, ರಣವೀರ್ ಮುಂಬರುವ ಚಿತ್ರ '83’ ಇದೇ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. 1983ರಲ್ಲಿ ಭಾರತದ ಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ಗೆಲುವಿನ ಮರು ನಿರೂಪಣೆಗಾಗಿ ನಟ ದಂತಕಥೆ ಕಪಿಲ್ ದೇವ್ ಪಾತ್ರವನ್ನು ಚಿತ್ರದಲ್ಲಿ ನಟಿಸಿದ್ದನ್ನು ಅಭಿಮಾನಿಗಳು ನೋಡಬಹುದಾಗಿದೆ. ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದು, ದೀಪಿಕಾ ರೋಮಿ ಭಾಟಿಯಾ ಪಾತ್ರದಲ್ಲಿ ನಟಿಸಿದ್ದಾರೆ. ರಣವೀರ್ ತಮ್ಮ ಎರಡನೇ ಚಿತ್ರದ ಚಿತ್ರೀಕರಣಕ್ಕಾಗಿ ನವದೆಹಲಿಯಲ್ಲಿ ಇದ್ದಾರೆ. ಅವರ ಮುಂದಿನ ಚಿತ್ರವಾದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ನಟಿ ಆಲಿಯಾ ಭಟ್‌ರೊಂದಿಗೆ ನಟಿಸಲಿದ್ದಾರೆ.

83 ಸಿನಿಮಾದಲ್ಲಿ ರಣವೀರ ಪತ್ನಿಯಾಗಿ ದೀಪಿಕಾ ನಟನೆ
ಇನ್ನು ನಿಜಜೀವನದಲ್ಲೂ ಗಂಡ-ಹೆಂಡತಿ ಆಗಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 83 ಸಿನಿಮಾದಲ್ಲಿಯೂ ಸಹ ಗಂಡ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ.. 83 ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟನೆಯ ಮಾಡಿದ್ದಾರೆ. ಹೀಗಾಗಿ ಕಪಿಲ್ ದೇವ್ ಅವರ ಪತ್ನಿ ರೂಮಿ ದೇವ್ ಅವರ ಪಾತ್ರದಲ್ಲಿ ದೀಪಿಕಾ ಪಡುಕೋಣೆ ರನ್ವೀರ್ ಸಿಂಗ್ ಜೊತೆಗೆ ನಟನೆ ಮಾಡಿದ್ದಾರೆ.
Published by:vanithasanjevani vanithasanjevani
First published: