ಮೊದಲೆಲ್ಲಾ ಭಾರತ (India) ದ ಸಿನಿಮಾಗಳು ಅಂದರೆ ಬಾಲಿವುಡ್ (Bollywood) ಚಿತ್ರಗಳು ಮಾತ್ರ ಎನ್ನುತ್ತಿದ್ದರು. ಹಿಂದಿ (Hindi) ಚಿತ್ರರಂಗಕ್ಕೆ ಇರುವ ಮಾರುಕಟ್ಟೆ ಬೇರೆ ಯಾವ ಭಾಷೆಗಳಿಗೆ ಇಲ್ಲ ಎನ್ನುತ್ತಿದ್ದರು. ಇದೀಗ ಎಲ್ಲವೂ ಬದಲಾಗಿದೆ ಮಾರುಕಟ್ಟೆ ಬಗ್ಗೆ ಮಾತನಾಡಿದ್ದ ಬಾಲಿವುಡ್ಗೆ ನಡುಕ ಶುರುವಾಗಿದೆ. ಬೇರೆ ಭಾಷೆಗಳ ಸಿನಿಮಾಗಳ ಅಬ್ಬರು ಕಂಡು ಬಾಲಿವುಡ್ ದಂಗಾಗಿದೆ. ಅದರಲ್ಲೂ ಈ ವರ್ಷ ಅಂತೂ ಬಾಲಿವುಡ್ಗೆ ಡಬಲ್ ಶಾಕ್ ಎನ್ನಬಹುದು. ಮೊದಲು ಆರ್ಆರ್ಆರ್ (RRR) , ನಂತರ ಕೆಜಿಎಫ್ 2 (KGF 2) . ಈ ಎರಡು ಸಿನಿಮಾಗಳು ಹಿಂದಿ ಚಿತ್ರರಂಗಕ್ಕೆ ಶಾಕ್ ನೀಡಿತ್ತು. ಇತ್ತ ಬಾಲಿವುಡ್ ಸ್ಟಾರ್ಗಳ ಸಿನಿಮಾಗಳು ಮಕಾಡೆ ಮಲಗುತ್ತಿದೆ. ಇತ್ತೀಚಿಗೆ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ (Box Office) ನಲ್ಲಿ ಹೀನಾಯ ಸೋತಿವೆ. ಬಾಲಿವುಡ್ ನಲ್ಲಿ ಸೌತ್ ಸ್ಟಾರ್ (South Star) ಗಳ ಆರ್ಭಟ ಪ್ರಾರಂಭವಾದ ಬಳಿಕ ಯಾವ ಹಿಂದಿ ಸಿನಿಮಾವೂ ಉತ್ತಮ ಗಳಿಕೆ ಮಾಡಿಲ್ಲ.
ಮಕಾಡೆ ಮಲಗಿದ ಜಯೇಶ್ಭಾಯ್ ಜೋರ್ದಾರ್!
ನಿನ್ನೆ (ಮೇ 13) ತೆರೆಗೆ ಬಂದ ರಣವೀರ್ ಸಿಂಗ್(Ranveer sIngh) ನಟನೆಯ ಜಯೇಶ್ ಭಾಯ್ ಜೋರ್ದಾರ್ ಸಿನಿಮಾ ಕೂಡ ಫ್ಲಾಪ್ ಲಿಸ್ಟ್ಗೆ ಸೇರಿಕೊಳ್ಳಲಿದೆ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಣವೀರ್ ಸಿಂಗ್ ಸಿನಿಮಾ ಅಂದ್ಮೇಲೆ ಭಾರಿ ನಿರೀಕ್ಷೆ ಇದ್ದೆ ಇರುತ್ತದೆ. ಆದರೆ ಜಯೇಶ್ ಭಾಯ್ ಜೋರ್ದಾರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಚಿತ್ರಕ್ಕೆ ನೆಟ್ಟಿಗರು ಡಿಸಾಸ್ಟರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಐದಕ್ಕೆ ಒಂದು ಸ್ಟಾರ್ ಕೊಟ್ಟ ವಿಮರ್ಶಕರು!
ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸಿನಿಮಾ ಕಳಪೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ 1.5 ರೇಟಿಂಗ್ ಕೊಟ್ಟಿದ್ದಾರೆ. ಇನ್ನು ವಿಮರ್ಶಕ ರೋಹಿತ್ ಜೈಸ್ವಾಲ್ ಕೂಡ ಐದಕ್ಕೆ ಒಂದು ಸ್ಟಾರ್ ನೀಡಿದ್ದಾರೆ. ಅನೇಕರು ಈ ಸಿನಿಮಾಗೆ ಬಾಯಿಗೆ ಬಂದಹಾಗೆ ಬೈಯುತ್ತಿದ್ದಾರೆ. ದೊಡ್ಡ ತಲೆನೋವು ಸಿನಿಮಾ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಸಿನಿಮಾ ಅರ್ಧಕ್ಕೆ ಎದ್ದು ಬಂದಿದ್ದಾರೆ.ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ದೂರು ದಾಖಲು, ಅಂಥಾದ್ದೇನು ಮಾಡಿದ್ದಾರೆ ಅಂತ ನೀವೇ ನೋಡಿ
ರಣವೀರ್ ಸಿಂಗ್ ಸಿನಿಮಾ ಅಲ್ಲ ಇದು ಎಂದ ಫ್ಯಾನ್ಸ್!
‘ಜಯೇಶ್ಭಾಯ್ ಜೋರ್ದಾರ್’ ಚಿತ್ರ ನಟ ರಣವೀರ್ಗೆ ತುಂಬಾನೇ ವಿಶೇಷವಾಗಿತ್ತು. ಏಕೆಂದರೆ ಇದು 2010 ರಲ್ಲಿ ಬಿಡುಗಡೆಯಾದ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದ ಮೂಲಕ ಈ ನಟನನ್ನು ಬಾಲಿವುಡ್ಗೆ ಪರಿಚಯಿಸಿದ ನಿರ್ಮಾಪಕರಾದ ಮನೀಶ್ ಶರ್ಮಾ ಅವರೊಂದಿಗೆ ಮತ್ತೊಮ್ಮೆ ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ದಿವ್ಯಾಂಗ್ ಠಕ್ಕರ್ ಆಕ್ಷನ್ ಕಟ್ ಹೇಳಿದ್ದಾರೆ. ರಣ್ವೀರ್ ಸಿಂಗ್ ಗೆ ನಾಯಕಿಯಾಗಿ ಅರ್ಜುನ್ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ ನಟಿಸಿದ್ದಾರೆ.
ಇದನ್ನೂ ಓದಿ: ಮುಂದಿನ ಸಿನಿಮಾದಲ್ಲೂ ಗಡ್ಡಕ್ಕಿಲ್ಲ ಮುಕ್ತಿ! ಇದೇ ಟ್ರೆಂಡ್ ಮುಂದುವರಿಸ್ತಾರೆ ರಾಕಿ ಭಾಯ್
ಅರ್ಜುನ್ ರೆಡ್ಡಿ ಸೂಪರ್ ಸಕ್ಸಸ್ ಬಳಿಕ ಶಾಲಿನಿ ಮತ್ತೆ ಗೆಲವು ಕಂಡಿಲ್ಲ. ಸರಣಿ ಸೋಲಿನಲ್ಲಿರುವ ಶಾಲಿನಿ ಚೊಚ್ಚಲ ಬಾಲಿವುಡ್ ಸಿನಿಮಾದಲ್ಲಿ ಸ್ಟಾರ್ ನಟನ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಅಲ್ಲದೆ ದೊಡ್ಡ ಗೆಲುವಿನ ಕನಸು ಕಂಡಿದ್ದರು. ಆದರೆ ಈ ಸಿನಿಮಾ ಕೂಡ ಸರಣಿ ಸೋಲಿನ ಲಿಸ್ಟ್ ಗೆ ಸೇರ್ಪಡೆಯಾಗಿದೆ. ಕೊನೆಗೂ ಬಾಲಿವುಡ್ಗೆ ಎದುರಾಗಿದ್ದ ಆತಂಕಗಳು ನಿಜವಾಗುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳೇ ನೆಲ ಕಚ್ಚುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ