KGF 2 ಸಿನಿಮಾ ನೋಡಿ ಫಿದಾ ಆದ ರಣವೀರ್​ ಸಿಂಗ್​! ಥೇಟ್​ ರಾಕಿ ಭಾಯ್​ ಥರ ಸೂಟ್​ ತೊಟ್ಟು ಪೋಸ್​

ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ಪ್ರತಿದಿನ ಒಂದಲ್ಲ ಒಂದು ದಾಖಲೆಗಳನ್ನು ಕೆಜಿಎಫ್​ 2 ಸಿನಿಮಾ ಮಾಡುತ್ತಿದೆ. 'ಕೆಜಿಎಫ್ 2' ಬಗ್ಗೆ ಈಗಾಗಲೇ ಸಾಕಷ್ಟು ಕಲಾವಿದರು, ಸ್ಟಾರ್ ನಟರು ಮಾತನಾಡಿದ್ದಾರೆ.

ಯಶ್​, ರಣವೀರ್​ ಸಿಂಗ್​

ಯಶ್​, ರಣವೀರ್​ ಸಿಂಗ್​

  • Share this:
ಕನ್ನಡದ (Kannada) ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಸಿನಿಮಾ (Cinema) ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗ (Indian Film Industry) ಥಂಡಾ ಹೊಡೆದಿದೆ. ಸಲಾಂ ರಾಕಿ ಭಾಯ್ (Salaam Rocky Bhai)​.. ಇದು ಕೇವಲ ಒಂದಿಬ್ಬರು ಹೇಳುತ್ತಿರುವ ಮಾತಲ್ಲ. ಇಡೀ ವಿಶ್ವವೇ ರಾಕಿ ಭಾಯ್​ ಆರ್ಭಟ ಕಂಡು ಈ ಮಾತು ಹೇಳುತ್ತಿದ್ದಾರೆ. ಇಡೀ ವಿಶ್ವದಲ್ಲೇ ರಾಕಿಂಗ್​ ಸ್ಟಾರ್​ ಯಶ್ (Rocking Star Yash)​ ಹೆಸರು ಫೇಮಸ್​ ಆಗಿದೆ. ಯಶ್​ ಈಗ ಕೇವಲ ರಾಕಿಂಗ್​ ಸ್ಟಾರ್​ ಅಲ್ಲ, ನ್ಯಾಷನಲ್​ ಸ್ಟಾರ್ (National Star)​ ಆಗಿದ್ದಾರೆ. ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ಪ್ರತಿದಿನ ಒಂದಲ್ಲ ಒಂದು ದಾಖಲೆಗಳನ್ನು ಕೆಜಿಎಫ್​ 2 ಸಿನಿಮಾ ಮಾಡುತ್ತಿದೆ. 'ಕೆಜಿಎಫ್ 2' ಬಗ್ಗೆ ಈಗಾಗಲೇ ಸಾಕಷ್ಟು ಕಲಾವಿದರು, ಸ್ಟಾರ್ ನಟರು ಮಾತನಾಡಿದ್ದಾರೆ.

ಕೆಜಿಎಫ್​ 2 ಸಿನಿಮಾ ನೋಡಿ ಮೆಚ್ಚಿದ ರಣವೀರ್​!

ಕೆಜಿಎಫ್​ 2 ಸಿನಿಮಾ ನೋಡಿದ ಬೇರೆ ಭಾಷೆಯ ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ರಾಕಿ ಭಾಯ್​ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್​ ನಟ ರಣವೀರ್​ ಸಿಂಗ್​ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 'ಕೆಜಿಎಫ್ 2' ಮತ್ತು ಯಶ್ ಬಗ್ಗೆ ಸಂದರ್ಶನವೊಂದರಲ್ಲಿ ಕೆಜಿಎಫ್​ 2 ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ಸಿನಿಮಾ ನೋಡಿದ ರಣವೀರ್​​ ಸಿಂಗ್ 'ಕೆಜಿಎಫ್ 2' ಮತ್ತು ಯಶ್‌ಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ರೀತಿಯ ಚಿತ್ರಗಳು ನನಗೆ ತುಂಬಾ ಇಷ್ಟ ಆಗುತ್ತವೆ ಎಂದು ಹೇಳಿದ್ದಾರೆ.

ರಾಕಿ ಭಾಯ್​ ಥರ ಸೂಟ್ ತೊಟ್ಟ ರಣವೀರ್​ ಸಿಂಗ್​!

ಬಾಲಿವುಡ್​ ಮಂದಿ ರಾಕಿ ಭಾಯ್​ ಹೆಸರು ಕೇಳಿದರು ನಡುಕ ಶುರುವಾಗುವ ಪರಿಸ್ಥಿತಿಯಲ್ಲಿದ್ದಾರೆ. ಹಿಂದಿ ಭಾಷೆಯಲ್ಲಿ ಕೆಜಿಎಫ್​2 ಹೊಸ ಅಧ್ಯಾಯ ಬರೆದಿದೆ. ಇದೀಗ ಕೆಜಿಎಫ್​ 2 ನೋಡಿರುವ ರಣವೀರ್​​ ಸಿಂಗ್‌ಗೆ  ಈ ಸಿನಿಮಾ ಬಹಳ ಇಷ್ಟವಾಗಿದೆಯಂತೆ. ಜೊತೆಗೆ ರಾಕಿಂಗ್ ಸ್ಟಾರ್ ಅಭಿನಯವನ್ನೂ ಕೂಡ ಮೆಚ್ಚಿಕೊಂಡಿದ್ದಾರೆ. "ಕೆಜಿಎಫ್: ಚಾಪ್ಟರ್ 2 ನೋಡಿದಾಗ, ನನಗೆ ತುಂಬಾನೇ ಖುಷಿ ಆಯ್ತು. ಅದ್ಭುತ ಅನಿಸಿತ್ತು. ಸಿನಿಮಾದುದ್ದಕ್ಕೂ 'ಯಶ್ ಅವನನ್ನು ಕೊಂದುಬಿಡು' ಅಂತ ಕಿರುಚಿತ್ತಿದೆ ಎಂದು ಹೇಳಿದ್ದಾರೆ.



ಇದನ್ನೂ ಓದಿ: ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ರಾಕಿ ಭಾಯ್​, ಡೈರೆಕ್ಟರ್​ ಫಿಕ್ಸ್​-ಕ್ಯಾರೆಕ್ಟರ್​ ಕೂಡ ರಿವೀಲ್​!

ಯಶಸ್ವಿ 25 ದಿನ ಪೂರೈಸಿದ ಕೆಜಿಎಫ್​ 2 ಸಿನಿಮಾ!

ಕೆಜಿಎಫ್ ಚಾಪ್ಟರ್ 2' ಬಿಡುಗಡೆಯಾಗಿ ನಿನ್ನೆಗೆ (ಮೇ 8) 25 ದಿನಗಳನ್ನು ಪೂರೈಸಿದೆ. ಕಳೆದ 24 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ ಹಲವು ದಾಖಲೆಗಳನ್ನು ಮುರಿದಿದೆ. ಕನ್ನಡದ ಜೊತೆ ಜೊತೆಗೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಕಲೆಕ್ಷನ್ ಭೇಟೆ ಮುಂದುವರೆಸಿದೆ. ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಇಂದಿಗೆ (ಮೇ 8) 25 ದಿನಗಳಾಗಿವೆ. ಕಳೆದ 24 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾವನ್ನೂ ಬೇರೆ ಯಾರೂ ಕೂಡ ಟಚ್​ ಮಾಡುವುದಕ್ಕೆ ಆಗಿಲ್ಲ. 25 ದಿನಗಳಲ್ಲಿ 'ಕೆಜಿಎಫ್ 2' ಕಲೆಕ್ಷನ್ ಪಟ್ಟಿಗೆ ಇನ್ನೊಂದು ನೂರು ಕೋಟಿ ಸೇರ್ಪಡೆಯಾಗಿದೆ.

ಇದನ್ನೂ ಓದಿ: ಕೊನೆಗೂ ಆಮಿರ್​ ಖಾನ್​ ಆಂತಕ ನಿಜವಾಯ್ತು, ರಾಕಿ ಭಾಯ್ ಅಬ್ಬರಕ್ಕೆ ದಂಗಲ್​ ದಾಖಲೆ ಧೂಳಿಪಟ!

ಹಿಂದಿಯಲ್ಲಿ 400 ಕೋಟಿ ಕಲೆಕ್ಷನ್​!

ರಾಕಿಂಗ್ ಸ್ಟಾರ್ ಯಶ್ (Rocking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಹಿಂದಿಯಲ್ಲಂತೂ ಯಾರೂ ಊಹಿಸಿರದ ದಾಖಲೆಗಳನ್ನು ಮಾಡಿದೆ. ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರದ ಪ್ರಕಾರ, 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಇನ್ನೂ 3 ರಿಂದ 4 ಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಿದ್ದಾರೆ.  'ಕೆಜಿಎಫ್ 2' ಹಿಂದಿ ಮಾರುಕಟ್ಟೆಯಲ್ಲೇ 403 ರಿಂದ 405 ಕೋಟಿ ಗಳಿಸಿರಬಹುದು ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ.
Published by:Vasudeva M
First published: