• Home
  • »
  • News
  • »
  • entertainment
  • »
  • Ranveer Singh: ಲಿಯೋನೆಲ್ ಮೆಸ್ಸಿ ಜೊತೆ ರಣವೀರ್‌ ಸಿಂಗ್; ಸಖತ್​ ಎಡಿಟಿಂಗ್ ಎಂದ್ರು ನೆಟ್ಟಿಗರು

Ranveer Singh: ಲಿಯೋನೆಲ್ ಮೆಸ್ಸಿ ಜೊತೆ ರಣವೀರ್‌ ಸಿಂಗ್; ಸಖತ್​ ಎಡಿಟಿಂಗ್ ಎಂದ್ರು ನೆಟ್ಟಿಗರು

ರಣವೀರ್​ ಸಿಂಗ್​

ರಣವೀರ್​ ಸಿಂಗ್​

ಮೆಸ್ಸಿ ಅಭಿಮಾನಿಯಾಗಿರುವ ರಣವೀರ್ ವಿಶ್ವಪ್ರಸಿದ್ಧ ಫುಟ್ಬಾಲ್ ಆಟಗಾರನೊಂದಿಗೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದು, ಇದು ಫೋಟೋಶಾಪ್ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ವಿಶ್ವಕಪ್ (World Cup) ಮುಗಿದಿರಬಹುದು ಆದರೆ ಫುಟ್ಬಾಲ್ ಫಿವರ್​ ಇನ್ನೂ ಕಮ್ಮಿಯಾಗಿಲ್ಲ. ಏಕೆ ಗೊತ್ತಾ? ಫುಟ್ಬಾಲ್ ಪಂದ್ಯಗಳು (Football Match) ಮುಗಿದಿದ್ದರೂ ಅಭಿಮಾನಿಗಳು ಪಂದ್ಯದ ಹೈಲೈಟ್ಸ್‌ಗಳನ್ನೇ ಮೆಲುಕು ಹಾಕುತ್ತಿದ್ದಾರೆ ಹಾಗೂ ಕತಾರ್‌ನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ರಸನಿಮಿಷಗಳನ್ನು ಆಗಾಗ್ಗೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಫುಟ್ಬಾಲ್ ಅಭಿಮಾನಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಇಂಟರ್ನೆಟ್‌ನಲ್ಲಿ ಫಿಫಾ ಕಿಚ್ಚನ್ನು ಮತ್ತೆ ಹತ್ತಿಸಿದ್ದಾರೆ.


ಮೆಸ್ಸಿ ಜೊತೆ ರಣವೀರ್ ಸಿಂಗ್ ಫೋಟೋ


ಛಾಯಾಗ್ರಾಹಕ ರೋಹನ್ ಶ್ರೇಷ್ಠಾ ತಮ್ಮ ಫೋಟೋಶೂಟ್‌ನಿಂದ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರೊಂದಿಗೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು ರಣವೀರ್ ಇಲ್ಲಿ ತಮ್ಮ ಕೈಚಳಕವನ್ನು ತೋರಿಸಿದ್ದು, ಸ್ವತಃ ಮೆಸ್ಸಿ ಅಭಿಮಾನಿಯಾಗಿರುವ ರಣವೀರ್ ವಿಶ್ವಪ್ರಸಿದ್ಧ ಫುಟ್ಬಾಲ್ ಆಟಗಾರನೊಂದಿಗೆ ತೋಳು ಬಳಸಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದು, ಇದು ಫೋಟೋಶಾಪ್ ಮಾಡಿರುವುದು ಎಂಬುದು ಮೊದಲಿಗೆ ತಿಳಿಯುವುದೇ ಇಲ್ಲ.


Ranveer Singh Photoshops Himself Into Picture With Lionel Messi Netizens Say Waah Kya Editing Hai stg pvn
ರಣವೀರ್​ ಸಿಂಗ್​


ಮೆಸ್ಸಿ, ರೋಹನ್ ಮತ್ತು ಅವರನ್ನು ಒಳಗೊಂಡ ಮಾರ್ಫ್ ಮಾಡಿದ ಚಿತ್ರವನ್ನು ನಟ ಹಂಚಿಕೊಂಡಿದ್ದಾರೆ. ಫೋಟೋಶಾಪ್ ನಿಮಗೆ ಗೊತ್ತಿರುವುದರಿಂದ ನೀವು ನನ್ನನ್ನು ಫೋಟೋಶಾಪ್ ಮಾಡಬಹುದು ಎಂಬುದು ಇದರರ್ಥವಲ್ಲ ಎಂದು ರಣವೀರ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.


ನಟನ ಕ್ರಿಯಾತ್ಮಕತೆ ಮೆಚ್ಚಿಕೊಂಡ ಇಂಟರ್ನೆಟ್ ಮಂದಿ


ರಣವೀರ್ ಹಂಚಿಕೊಂಡ ಈ ಫೋಟೋ ಅಭಿಮಾನಿಗಳನ್ನು ಆಕರ್ಷಿಸಿದ್ದು ಮಾತ್ರವಲ್ಲದೆ ಪ್ರತಿಯೊಬ್ಬರೂ ನಟನ ಬುದ್ಧಿವಂತಿಕೆ ಹಾಗೂ ಕ್ರಿಯಾತ್ಮಕತೆಗೆ ಮೆಚ್ಚಿಕೊಂಡಿದ್ದಾರೆ. ಈ ಫೋಟೋಗೆ ಫೋಟೋಗ್ರಾಫರ್ ರೋಹನ್ ಶ್ರೇಷ್ಟಾ ಕಮೆಂಟ್ ಮಾಡಿದ್ದು, ಈ ಹಾಸ್ಯ ಸರಿಯಾದ ಸ್ಥಳಕ್ಕೆ ಹೊಡೆದಿದೆ ಹಾಗೂ ಅವರಿಗೆ ನಗು ತಡೆದುಕೊಳ್ಳಲಾಗಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ರೋಹನ್ ನಗುವಿನ ಕಾಮೆಂಟ್ ಅನ್ನು ನೀಡಿದ್ದು, ಸಿದ್ಧಾಂತ್ ಕಪೂರ್ ಇದು ಪೋಸ್ಟ್ ಆಫ್ ದ ಡೇ ಎಂದು ಹೇಳಿದ್ದಾರೆ.


ರೋಹನ್ ಹಂಚಿಕೊಂಡ ಚಿತ್ರ


ಇದಕ್ಕೂ ಮೊದಲು, ರೋಹನ್ ಅವರು ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರನ ಛಾಯಾಚಿತ್ರವನ್ನು ತಮ್ಮ ಜೀವನದಲ್ಲಿ ಇದೊಂದು ವಿಶೇಷ ಕ್ಷಣ ಎಂದು ಬಣ್ಣಿಸಿ ಫೋಟೋಗಳನ್ನು ಹಂಚಿಕೊಂಡಿದ್ದರು. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೆಸ್ಸಿಯೊಂದಿಗೆ ಅದೇ ಫೋಟೋಶೂಟ್‌ನ ರೀಲ್ ಅನ್ನು ಹಂಚಿಕೊಂಡಿದ್ದಾರೆ.


ಪತ್ನಿ ದೀಪಿಕಾರೊಂದಿಗೆ ಫಿಫಾ ಫೈನಲ್ ವೀಕ್ಷಿಸಿದ ರಣ್‌ವೀರ್


ಕ್ರೀಡಾ ಉತ್ಸಾಹಿ ಎಂದು ಹೆಸರುವಾಸಿಯಾಗಿರುವ ಬಾಲಿವುಡ್ ರಣವೀರ್ ಸಿಂಗ್, ಫಿಫಾ ವಿಶ್ವಕಪ್ ಫೈನಲ್‌ ವೀಕ್ಷಣೆಗಾಗಿ ತಮ್ಮ ಪತ್ನಿ ದೀಪಿಕಾ ಪಡುಕೋಣೆಯೊಂದಿಗೆ ಕತಾರ್‌ನಲ್ಲಿ ಪಂದ್ಯಾಟವನ್ನು ವೀಕ್ಷಿಸಿದ್ದರು ಮೆಸ್ಸಿ ಮತ್ತು ತಂಡವು 1986 ರಿಂದ ತಮ್ಮ ಮೊದಲ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಫ್ರಾನ್ಸ್ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದರು. ಪಂದ್ಯವು ಮೂರು ಮೂರು ಅಂಕದಲ್ಲಿ ಟೈ ಆದ ನಂತರ, ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಆಧರಿಸಿ ನಿರ್ಧರಿಸಲಾಯಿತು


ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ


ಇನ್ನು ರಣವೀರ್ ಬಾಲಿವುಡ್‌ನಲ್ಲಿ ಸಖತ್ ಬ್ಯುಸಿಯಾಗಿರುವ ನಟ ಎಂದೆನಿಸಿದ್ದು, ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಸರ್ಕಸ್ ಚಿತ್ರವು ಇದೇ ಶುಕ್ರವಾರ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ರಣವೀರ್ ದ್ವಿಪಾತ್ರದಲ್ಲಿ ನಟಿಸಿದ್ದು, ರಣವೀರ್ ಜೊತೆಗೆ ವರುಣ್ ಶರ್ಮಾ, ಪೂಜಾ ಹೆಗ್ಡೆ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: Prabhas-Salaar: ಸಲಾರ್ ಚಿತ್ರತಂಡದಿಂದ ಸಂಕ್ರಾಂತಿಗೆ ಸಖತ್ ಗಿಫ್ಟ್; ಪ್ರಭಾಸ್ ಅಭಿಮಾನಿಗಳು ಫುಲ್​ ಖುಷ್


ಕರಣ್ ಜೋಹರ್‌ನ ಹಾಸ್ಯ ಚಿತ್ರದಲ್ಲಿ ಆಲಿಯಾ ರಣ್‌ವೀರ್ ಜೋಡಿ


ಕ್ರಿಸ್‌ಮಸ್ ಹಬ್ಬ ಹಾಗೂ ವಾರಾಂತ್ಯದ ಸಂಭ್ರಮದ ನಡುವೆ ಕ್ರಿಸ್‌ಮಸ್ ನಿಧಾನವಾಗಿಯೇ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುತ್ತಿದೆ. ರಣವೀರ್ ಮುಂದಿನ ವರ್ಷ ಕರಣ್ ಜೋಹರ್ ಅವರ ರೋಮ್ಯಾಂಟಿಕ್ ಹಾಸ್ಯಚಿತ್ರವಾದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ನಟಿಸಿದ್ದು, ಚಿತ್ರದಲ್ಲಿ ಆಲಿಯಾ ಭಟ್ ಸಹ-ನಟಿಯಾಗಿ ರಣವೀರ್‌ಗೆ ಜೋಡಿಯಾಗಿದ್ದಾರೆ. ಅದೂ ಅಲ್ಲದೆ ರಣವೀರ್ ಅಭಿನಯದ ಹಲವಾರು ಚಿತ್ರಗಳು ಬಿಡುಗಡೆ ಕಾಣಲಿವೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರವು ಏಪ್ರಿಲ್ 28, 2023 ರಂದು ಬಿಡುಗಡೆಯಾಗಲಿದೆ.

Published by:ಪಾವನ ಎಚ್ ಎಸ್
First published: