Ranveer Singh: ಹೀರೋ ಆಗೋಕೆ 20 ಕೋಟಿ ದುಡ್ಡು ಕೊಟ್ಟು ಬಂದಿದ್ರಾ ರಣ್ವೀರ್ ಸಿಂಗ್? ಗಂಭೀರ ಆರೋಪ

KRK on Ranveer Singh: ಆದಿತ್ಯ ಚೋಪ್ರಾ ಅವರು ರಣವೀರ್ ಅವರನ್ನು ಹೀರೋ ಮಾಡಿದ್ರು. ಅವರು ಇಂದು ದೊಡ್ಡ ಸ್ಟಾರ್ ಆಗಿದ್ದಾರೆ ಎಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ ಅದು ಸುಳ್ಳು. ರಣವೀರ್ ತಂದೆ 20 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಕೊಟ್ಟ ನಂತರವೇ ಯಶ್ ರಾಜ್ ಫಿಲ್ಮ್ಸ್ ಅವರನ್ನು ಹೀರೋ ಮಾಡಲು ಒಪ್ಪಿಕೊಂಡಿತು

ರಣ್ವೀರ್ ಸಿಂಗ್

ರಣ್ವೀರ್ ಸಿಂಗ್

  • Share this:

Ranveer Singh Paid Money: YRF ಅಂದ್ರೆ ಯಶ್ ರಾಜ್ ಫಿಲ್ಮ್ಸ್ (Yash Raj Films) ವಾಸ್ತವವಾಗಿ ರಣವೀರ್ ಸಿಂಗ್ ಅನ್ನು ಹೀರೋ ಆಗಿ ಮಾಡಲಿಲ್ಲ. ಬದಲಾಗಿ, ಅವರ ತಂದೆ ಜಗಜಿತ್ ಸಿಂಗ್ ಭವ್ನಾನಿ ತಮ್ಮ ಮಗನನ್ನು ಹೀರೋ (Hero) ಆಗಿ ಲಾಂಚ್ ಮಾಡಲು ಆದಿತ್ಯ ಚೋಪ್ರಾ (Aditya Chopra) ಕಂಪನಿಗೆ 20 ಕೋಟಿ (20 crore rupees) ರೂಪಾಯಿಗಳನ್ನು ಕೊಟ್ಟಿದ್ದರು ಎಂದು ಬಾಲಿವುಡ್ ಕ್ರಿಟಿಕ್ ಕಮಾಲ್ ಆರ್ ಖಾನ್ ಹೇಳಿಕೊಂಡಿದ್ದಾರೆ.ಕೆಆರ್‌ಕೆ (KRK) ಎಂದು ಕರೆಯಲ್ಪಡುವ ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ (Kamaal R Khan), ಬಾಲಿವುಡ್ (Bollywood) ನಟ ರಣವೀರ್ ಸಿಂಗ್ ಚೊಚ್ಚಲ ಸಿನಿಮಾ ಎಂಟ್ರಿ ಬಗ್ಗೆ ಕೆಲವು ಕಿರಿಕ್‌ಗೆ ಆಹಾರವಾಗುವಂಥ ಹೇಳಿಕೆಗಳನ್ನು ನೀಡಿದ್ದಾರೆ.


ಬಾಲಿವುಡ್‌ನಲ್ಲಿ ಕಮಾಲ್ ಆರ್ ಖಾನ್ ತಮ್ಮನ್ನು ತಾವು ಕ್ರಿಟಿಕ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಕ್ರಿಟಿಕ್ ಆಗಿರುವುದಕ್ಕಿಂತ ಕಿರಿಕ್ ಆಗುವಂಥ ಹೇಳಿಕೆಗಳನ್ನು ಕೊಡೋದಕ್ಕೆ ಹೆಚ್ಚು ಫೇಮಸ್. ಈ ಹಿಂದೆ ಬಾಲಿವುಡ್ ಪ್ರಮುಖ ನಟ ಸಲ್ಮಾನ್ ಖಾನ್ ಅವರೊಂದಿಗೆ ಕೂಡಾ ಕಿರಿಕ್ ಮಾಡಿಕೊಂಡಿದ್ದರು.


ಅವರ ಬಗ್ಗೆ ವೈಯಕ್ತಿಕವಾಗಿ ಮತ್ತು ಅವರ ಸಿನಿಮಾಗಳ ವಿಷಯದಲ್ಲಿ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದರು ಕಮಾಲ್ ಖಾನ್. ಅಷ್ಟೇ ಅಲ್ಲದೆ ಸಲ್ಮಾನ್ ಖಾನ್ ಅವರನ್ನು ಇಂಡಸ್ಟ್ರಿಯಿಂದಲೇ ಹೊರಹಾಕುತ್ತೇನೆ. ಅವರು ದೊಡ್ಡ ಹೀರೋ ಇರಬಹುದು. ಆದರೆ ನಾನು ಅವರನ್ನು ಝೀರೋ ಮಾಡುತ್ತೇನೆ ಎಂದೆಲ್ಲಾ ಬಡಬಡಿಸಿದ್ದರು ಕಮಾಲ್ ಖಾನ್. ಈ ವಿಷಯದಲ್ಲಿ ನಟ ಗೋವಿಂದ ಅವರನ್ನು ಎಳೆ ತಂದು ಮತ್ತಷ್ಟು ಕಿರಿಕ್ ಮಾಡಿಕೊಂಡಿದ್ದರು ಕೂಡಾ.


ಇದನ್ನೂ ಓದಿ: ಹಾಟ್​ ಫೋಟೋ ಶೇರ್ ಮಾಡಿದ Ranveer Sigh: ಟವೆಲ್​ ಜಾರುತ್ತಿದೆ ಜೋಕೆ ಎಂದ Pooja Hegde

ಈಗ ಅವರ ಬಾಯಿಂದ ಇನ್ನೊಂದು ವಿವಾದಾತ್ಮಕ ವಿಷಯ ಬಂದಿದೆ. YRF ವಾಸ್ತವವಾಗಿ ರಣವೀರ್ ಸಿಂಗ್ ಅವರನ್ನು ಹೀರೋ ಮಾಡಲಿಲ್ಲ. ಬದಲಾಗಿ ರಣ್‌ವೀರ್‌ ದುಡ್ಡು ಕೊಟ್ಟು ಹೀರೋ ಆಗಿದ್ದಾರೆ. ರಣ್‌ವೀರ್‌ ತಂದೆ ಜಗಜಿತ್ ಸಿಂಗ್ ಭವ್ನಾನಿ ತಮ್ಮ ಮಗನನ್ನು ಹೀರೋ ಮಾಡಲು ಆದಿತ್ಯ ಚೋಪ್ರಾ ಕಂಪನಿಗೆ 20 ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದಿದ್ದಾರೆ ಕಮಾಲ್ ಖಾನ್.


ರಾಣಿ ಮುಖರ್ಜಿ ಮತ್ತು ಸೈಫ್ ಅಲಿ ಖಾನ್ ಅಭಿನಯದ ಬಂಟಿ ಔರ್ ಬಬ್ಲಿ 2 ಚಿತ್ರದ ವಿಮರ್ಶೆ ಮಾಡುವಾಗ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ರಾಮ್ ಲೀಲಾ ಮತ್ತು ಬಾಜಿ ರಾವ್ ಮಸ್ತಾನಿಯಂತಹ ದೊಡ್ಡ ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ನಟಿಸಿರುವ ರಣವೀರ್ ಸಿಂಗ್, ಅನುಷ್ಕಾ ಶರ್ಮಾ ಅವರೊಂದಿಗೆ ನಟಿಸಿದ ಯಶ್ ರಾಜ್ ಚಿತ್ರದೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಬ್ಯಾಂಡ್ ಬಾಜಾ ಬಾರಾತ್ ಚಲನಚಿತ್ರ ಆ ಸಮಯದಲ್ಲಿ ದೊಡ್ಡ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಯಶ್ ರಾಜ್ ಪ್ರೊಡಕ್ಷನ್ಸ್, YRF ಯಶಸ್ವಿಯಾಗಿ ರಣ್‌ವೀರ್ ವೃತ್ತಿಜೀವನ ಪ್ರಾರಂಭಿಸಿತ್ತು.


ಇದನ್ನೂ ಓದಿ: '83' Movie Trailer- ಮೈನವಿರೇಳಿಸುವ '83' ಟ್ರೇಲರ್, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್; ಕನ್ನಡದಲ್ಲಿ ಕಿಚ್ಚನ ವಾಯ್ಸ್

ತಮ್ಮ ಹೇಳಿಕೆಯಲ್ಲಿ, ಕೆಆರ್‌ಕೆ "ಆದಿತ್ಯ ಚೋಪ್ರಾ ಅವರು ರಣವೀರ್ ಅವರನ್ನು ಹೀರೋ ಮಾಡಿದ್ರು. ಅವರು ಇಂದು ದೊಡ್ಡ ಸ್ಟಾರ್ ಆಗಿದ್ದಾರೆ ಎಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ ಅದು ಸುಳ್ಳು. ರಣವೀರ್ ತಂದೆ 20 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಕೊಟ್ಟ ನಂತರವೇ ಯಶ್ ರಾಜ್ ಫಿಲ್ಮ್ಸ್ ಅವರನ್ನು ಹೀರೋ ಮಾಡಲು ಒಪ್ಪಿಕೊಂಡಿತು’' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಬಾಲಿವುಡ್‌ ತಾರೆಯರ ಬಗ್ಗೆ ಅತಿರೇಕದ ಹೇಳಿಕೆಗಳನ್ನು ನೀಡುವ ಕೆಆರ್‌ಕೆ, ಸಲ್ಮಾನ್ ಖಾನ್ ಮತ್ತು ಅವರ ಚಿತ್ರ ರಾಧೆ ಬಗ್ಗೆ ಈ ಹಿಂದೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯಿಂದಾಗಿ ಈಗಲೂ ಕಾನೂನು ಪ್ರಕಾರ ಕೇಸು ಎದುರಿಸುತ್ತಿದ್ದಾರೆ.

Published by:Soumya KN
First published: