ಈ ಬಾಲಿವುಡ್ ನಟ ಯಾರೆಂದು ಗುರುತಿಸಬಲ್ಲಿರಾ? ಹೆಸರು ಕೇಳಿ ಕನ್ಫ್ಯೂಸ್ ಆಗ್ತೀರಾ...

news18
Updated:June 24, 2018, 6:28 PM IST
ಈ ಬಾಲಿವುಡ್ ನಟ ಯಾರೆಂದು ಗುರುತಿಸಬಲ್ಲಿರಾ? ಹೆಸರು ಕೇಳಿ ಕನ್ಫ್ಯೂಸ್ ಆಗ್ತೀರಾ...
news18
Updated: June 24, 2018, 6:28 PM IST
ನ್ಯೂಸ್ 18 ಕನ್ನಡ

ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಎಲ್ಲರನ್ನು ಆಕರ್ಷಿಸುತ್ತದೆ. ಅದರಲ್ಲೂ ಸ್ಟಾರ್ ಪಟ್ಟಕ್ಕೇರಿರುವ ನಟ-ನಟಿಯರ ಇಂತಹ ಚಿತ್ರಗಳು ವೈರಲ್ ಆಗುವುದು ಸಾಮಾನ್ಯ. ಅದರಂತೆ ಈಗ ಬಾಲಿವುಡ್ ನಟ ರಣವೀರ್ ಸಿಂಗ್​ರ ಫೋಟೋ ಒಂದು ಸಖತ್ ವೈರಲ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಅವರು 1985ರಲ್ಲಿ ಮಾಡಿಸಿದ್ದ ಹೇರ್ ಸ್ಟೈಲ್.

ಬಿ-ಟೌನಲ್ಲಿ ವಿಶಿಷ್ಟ ಉಡುಗೆಗಳಿಂದ ಗಮನ ಸೆಳೆಯುವ ರಣವೀರ್ ಸಿಂಗ್ 33 ವರ್ಷಗಳ ಹಿಂದಿನ ಲುಕ್​ನ್ನು ಪ್ರಸ್ತುತ ಬ್ರೆಜಿಲ್​ ಫುಟ್​ಬಾಲ್ ತಾರೆ ಪಾಲಿನ್ಹೊ ಮತ್ತು ವೆಸ್ಟ್​ ಇಂಡೀಸ್ ಕ್ರಿಕೆಟರ್ ಸುನಿಲ್ ನರೇನ್ ಫಾಲೋ ಮಾಡುತ್ತಿದ್ದಾರೆ ಎಂದರೆ ನಂಬಲೇ ಬೇಕು. 1985 ರಲ್ಲಿ ರಣವೀರ್ ಮಾಡಿದ ಸ್ಪೈಕ್ ಕೇಶ ವಿನ್ಯಾಸವನ್ನು ಗಮನಿಸಿದರೆ ಹೌದು ಎಂದೆನಿಸುತ್ತದೆ.
A post shared by Ranveer Singh (@ranveersingh) on


Loading...


ಇನ್​ಸ್ಟಾಗ್ರಾಂನಲ್ಲಿ ರಣವೀರ್ ಸಿಂಗ್ ಹಂಚಿಕೊಂಡಿರುವ ಬಾಲ್ಯದ ಈ ಫೋಟೋವನ್ನು ಕೇವಲ ಒಂದು ಗಂಟೆಯಲ್ಲಿ 3 ಲಕ್ಷಕ್ಕಿಂತ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ ರಣವೀರ್​ ಅವರ ಹಳೆ ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಅವರ ಈ ಲುಕ್​ಗೆ ಪ್ರೇಯಸಿ ನಟಿ ದೀಪಿಕಾ ಪಡುಕೋಣೆ Nooo ಎಂದು ನಾಚಿ ನೀರಾಗಿ ಕಮೆಂಟ್ ಮಾಡಿದ್ದು ವಿಶೇಷವಾಗಿತ್ತು.A post shared by Ranveer Singh (@ranveersingh) on
'ಗಲ್ಲಿ ಬಾಯ್' ಸಿನಿಮಾಗಾಗಿ ಇತ್ತೀಚೆಗೆ ತಮ್ಮ ದೇಹದಾರ್ಢ್ಯವನ್ನು ಇಳಿಸಿದ್ದ ರಣವೀರ್ ಸಿಂಗ್ ಸದ್ಯ ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಬಾ' ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ತೆಲುಗಿನ 'ಟೆಂಪರ್' ಸಿನಿಮಾದ ರಿಮೇಕಾಗಿದ್ದು, ರಣವೀರ್ ನಾಯಕಿಯಾಗಿ ಸಾರಾ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.
First published:June 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...