Ranveer Singh: ಬಾಲಿವುಡ್​ ಸ್ಟಾರ್​ಗೆ ಮುತ್ತಿಟ್ಟು ಗಾಳಿ ಸುದ್ದಿಗೆ ಅಂತ್ಯ ಹಾಡಿದ ರಣವೀರ್​ ಸಿಂಗ್​..!

Ranveer Singh: ಬಿ-ಟೌನ್​ ಅಂಗಳದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತವೆ. ಅದು ಯಾವ ನಟ-ನಟಿಯರನ್ನೂ ಬಿಟ್ಟಿಲ್ಲ. ಅದರಲ್ಲೂ ಒಂದಲ್ಲ ಒಂದು ವಿಷಯದಿಂದ ಟ್ರೋಲ್​ ಆಗುವ ನಟ ರಣವೀರ್​ ಸಿಂಗ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಸಹ ಬಾಲಿವುಡ್​ ತಾರೆಯೊಬ್ಬರಿಗೆ ಮುತ್ತಿಟ್ಟಿರುವ ಕಾಣರಕ್ಕೆ.

Anitha E | news18-kannada
Updated:December 9, 2019, 1:27 PM IST
Ranveer Singh: ಬಾಲಿವುಡ್​ ಸ್ಟಾರ್​ಗೆ ಮುತ್ತಿಟ್ಟು ಗಾಳಿ ಸುದ್ದಿಗೆ ಅಂತ್ಯ ಹಾಡಿದ ರಣವೀರ್​ ಸಿಂಗ್​..!
ರಣವೀರ್​ ಸಿಂಗ್​
  • Share this:
ಬಿ-ಟೌನ್​ನ ಸ್ಟೈಲ್​ ಐಕಾನ್​... ವಿಭಿನ್ನ ಸ್ಟೈಲ್​ಗಳ ಕಿಂಗ್​... ರಣವೀರ್​ ಸಿಂಗ್​ ತಮ್ಮ ಮ್ಯಾನಸಿರಂ ಹಾಗೂ ಜಿಂದಾ ದಿಲ್​ ವರ್ತನೆಯಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ. ಎಲ್ಲಿದ್ದರೂ ಅಲ್ಲಿ ತಮ್ಮ ಹಾಸ್ಯ ಪ್ರಜ್ಞೆಯಿಂದಾಗಿ ನಗುವಿನ ಹೊಳೆ ಹರಿಸುತ್ತಲೇ ಇರುತ್ತಾರೆ.

ಬಿ-ಟೌನ್​ ಅಂಗಳದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತವೆ. ಅದು ಯಾವ ನಟ-ನಟಿಯರನ್ನೂ ಬಿಟ್ಟಿಲ್ಲ. ಅದರಲ್ಲೂ ಒಂದಲ್ಲ ಒಂದು ವಿಷಯದಿಂದ ಟ್ರೋಲ್​ ಆಗುವ ನಟ ರಣವೀರ್​ ಸಿಂಗ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಸಹ ಬಾಲಿವುಡ್​ ತಾರೆಯೊಬ್ಬರಿಗೆ ಮುತ್ತಿಟ್ಟಿರುವ ಕಾಣರಕ್ಕೆ.

Ranveer Singh Kisses and Puts an End to the Reports of Cold War with Shahid Kapoor
ಶಾಹಿದ್​ ಕಪೂರ್​ಗೆ ಮುತ್ತಿಟ್ಟ ರಣವೀರ್​ ಸಿಂಗ್​


ಶಾಹಿದ್​ ಹಾಗೂ ರಣವೀರ್ ಸಿಂಗ್​ ನಡುವೆ ತುಂಬಾ ಸಮಯದಿಂದ ಶೀತಲ ಸಮರ ನಡೆಯುತ್ತಿದೆ ಎಂಬ ಸುದ್ದಿ ಹರಿದಡುತ್ತಿತ್ತು. ಸ್ಟಾರ್​ ಸ್ಕ್ರೀನ್​ ಅವಾರ್ಡ್ಸ್​ 2019ರ ಕಾರ್ಯಕ್ರಮದಲ್ಲಿ ಈ ನಟರು ಎದುರಾಗಿದ್ದಾರೆ. ಈ ವೇಳೆ ತಮ್ಮ ನಡುವೆ ಇದೆ ಎನ್ನಲಾಗುತ್ತಿದ್ದ ಶೀತಲ ಸಮರ ವಿಷಯಕ್ಕೆ ಅಂತ್ಯ ಹಾಡಲು ರಣವೀರ್​ ಸಾಹಿದ್​ಗೆ ಮುತ್ತಿಡುವ ಮೂಲಕ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. 
View this post on Instagram
 

Kabeer Singh and Simba 🤪😋


A post shared by Viral Bhayani (@viralbhayani) on


'ಪದ್ಮಾವತ್​' ಸಿನಿಮಾ ಬಿಡುಗಡೆ ಸಮಯದಲ್ಲಿ ಶಾಹಿದ್​ ಸಂದರ್ಶನವೊಂದರಲ್ಲಿ ಅಸಮಧಾನ ವ್ಯಕ್ತಪಡಿಸಿದ್ದರು. ಚಿತ್ರೀಕರಣದ ಸಮಯದಲ್ಲಿ ಸೆಟ್​ನಲ್ಲಿ ಗುಂಪಿನಿಂದ ಹೊರಗೆ ಉಳಿದ ಅನುಭವವಾಗಿತ್ತು ಎಂದಿದ್ದರು. ನಂತರ ರಣವೀರ್​ ಸಿಂಗ್​ ಮತ್ತೊಂದು ಸಂದರ್ಶನದಲ್ಲಿ ನಾನು ಎಲ್ಲರನ್ನೂ ಚೆನ್ನಾಗಿಯೇ ನೊಡಿಕೊಂಡಿದ್ದೆ. ಎಲ್ಲರೊಂದಿಗೂ ಚೆನ್ನಾಗಿಯೇ ಇದ್ದೆ ಪರೋಕ್ಷವಾಗಿ ಹೇಳಿದ್ದರು.

Deepika Padukone: ಹೊಸ ಸ್ಟೈಲ್​ನಲ್ಲಿ ಮಿಂಚಿದ ದೀಪಿಕಾ: ಗುಳಿಕೆನ್ನೆ ಸುಂದರಿಯ ಲುಕ್​ಗೆ ಬಿ-ಟೌನ್​ ಸ್ಟಾರ್​ಗಳು ಫಿದಾ..!

First published: December 9, 2019, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading