Ranveer Singh‌:‌ ಸ್ಟೈಲ್‌ ಐಕಾನ್ ರಣವೀರ್‌ ಸಿಂಗ್ ಗಡ್ಡ ಮತ್ತು ಹೊಳೆಯುವ ಕೂದಲಿನ ರಹಸ್ಯ ಇಷ್ಟೇ ಅಂತೆ ನೋಡಿ...

Ranveer Singh‌:‌ ಬಹಳಷ್ಟು ಮಂದಿಗೆ ರಣವೀರ್‌ ವಿಲಕ್ಷಣ ಶೈಲಿ ಇಷ್ಟ ಇಲ್ಲದೆಯೂ ಇರಬಹುದು. ಅದರೆ, ಕೂದಲು ಮತ್ತು ಗಡ್ಡದ ವಿಷಯದಲ್ಲಿ ಅವರನ್ನು ಮೆಚ್ಚದೇ ಇರಲು ಸಾಧ್ಯವೇ ಇಲ್ಲ. ನಟರು ಹಲವಾರು ಹೇರ್‌ ಸ್ಟೈಲಿಂಗ್‌ ಉತ್ಪನ್ನಗಳನ್ನು ಬಳಸುತ್ತಾರೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ.

ರಣವೀರ್‌ ಸಿಂಗ್

ರಣವೀರ್‌ ಸಿಂಗ್

  • Share this:
ಬಾಲಿವುಡ್ ತಾರೆಯರ ಪೈಕಿ, ರಣವೀರ್‌ ಸಿಂಗ್(Ranveer Singh) ತಮ್ಮ ವಿಲಕ್ಷಣ ಫ್ಯಾಷನ್ (exotic style) ಶೈಲಿಗೆ ಜನಪ್ರಿಯರು. ಎಲ್ಲಾ ತಾರೆಯರು, ಟ್ರೆಂಡ್‍ಗೆ ತಕ್ಕಂತೆ ಫ್ಯಾಷನ್ ಶೈಲಿ (fashion style)ಅನುಸರಿಸಿದರೆ ರಣವೀರ್ ಮಾತ್ರ ಆಗಾಗ ತನಗಿಷ್ಟ ಬಂದಂತೆ ಚಿತ್ರ ವಿಚಿತ್ರ ಧಿರಿಸು ಅಥವಾ ಕೇಶ ಶೈಲಿಗಳನ್ನು ಮಾಡಿಕೊಂಡು ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದುಂಟು. ಎಷ್ಟೇ ವಿಲಕ್ಷಣವಾಗಿದ್ದರೂ, ರಣವೀರ್‌ ಸುಂದರ ಕೇಶರಾಶಿ (beautiful beard)ಮತ್ತು ಗಡ್ಡದ ಒಡೆಯ ಎಂಬುವುದರಲ್ಲಿ ಎರಡು ಮಾತಿಲ್ಲ. ಸಿನಿಮಾ ರಂಗದಲ್ಲಿ 2 ಜುಟ್ಟು ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನಟರು ಕೆಲವೇ ಕೆಲವು ಮಂದಿ ಇದ್ದಾರೆ, ಆದರೆ ರಣವೀರ್‌ಗೆ ಈ ವಿಷಯದಲ್ಲಿ ಯಾವುದೇ ಸಂಕೋಚವಿಲ್ಲ..! (hesitation) ರಣವೀರ್‌ಗೆ ತಮ್ಮ ಫ್ಯಾಷನ್ ಶೈಲಿಯ ಬಗ್ಗೆ ವಿಪರೀತ ಆತ್ಮ ವಿಶ್ವಾಸವಿದೆ (confident about his style)ಮತ್ತು ನಾವೆಲ್ಲರೂ ಆ ಶೈಲಿಯನ್ನು ಸಂಪೂರ್ಣವಾಗಿ ಇಷ್ಟ ಪಡುತ್ತೇವೆ ಕೂಡ.

ರಣವೀರ್‌ ಕೂದಲ ಆರೈಕೆ
ಬಹಳಷ್ಟು ಮಂದಿಗೆ ರಣವೀರ್‌ ವಿಲಕ್ಷಣ ಶೈಲಿ ಇಷ್ಟ ಇಲ್ಲದೆಯೂ ಇರಬಹುದು. ಅದರೆ, ಕೂದಲು ಮತ್ತು ಗಡ್ಡದ ವಿಷಯದಲ್ಲಿ ಅವರನ್ನು ಮೆಚ್ಚದೇ ಇರಲು ಸಾಧ್ಯವೇ ಇಲ್ಲ. ನಟರು ಹಲವಾರು ಹೇರ್‌ ಸ್ಟೈಲಿಂಗ್‌ ಉತ್ಪನ್ನಗಳನ್ನು ಬಳಸುತ್ತಾರೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಅದರಿಂದ ಕೂದಲಿಗೆ ಹಾನಿ ಆಗುತ್ತದೆ ಎಂಬುವುದು ಕೂಡ.

ಇದನ್ನೂ ಓದಿ: Ranveer Singh: ಹೀರೋ ಆಗೋಕೆ 20 ಕೋಟಿ ದುಡ್ಡು ಕೊಟ್ಟು ಬಂದಿದ್ರಾ ರಣ್ವೀರ್ ಸಿಂಗ್? ಗಂಭೀರ ಆರೋಪ

ಆದರೆ ರಣವೀರ್‌ಗೆ ಅದರ ಬಗ್ಗೆ ಚಿಂತೆಯೇ ಇಲ್ಲವೇನೋ ಎಂಬಂತೆ ಕಾಣಿಸುತ್ತದೆ. ಏಕೆಂದರೆ ಅವರ ಅಂದದ ಗಡ್ಡ ಅಥವಾ ಹೊಳೆಯುವ ಉದ್ದ ಕೂದಲನ್ನು ನೋಡಿದರೆ, ಅವರು ನಿಜಕ್ಕೂ ಕೂದಲನ್ನು ಆರೈಕೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವಂತಿದೆ. ಅದು ಹೇಗೆ..? ಉತ್ತರ ನಿರೀಕ್ಷಿಸಿದ್ದಕ್ಕಿಂತಲೂ ಸರಳವಾಗಿರಬಹುದು.

ಕೂದಲಿನ ರಹಸ್ಯ ಬಹಿರಂಗ
ರಣವೀರ್‌ ಸ್ಟೈಲಿಸ್ಟ್ ಆಗಿರುವ , ಡಿಶೇವ್ ಬಾರ್ಬರ್ ಶಾಪ್‍ನ ನಿರ್ದೇಶಕ ದರ್ಶನ್ ಯೆವಲೇಕರ್, ಹಿಂದೊಮ್ಮೆ ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಣವೀರ್‌ ಆರೋಗ್ಯವಂತ ಕೂದಲಿನ ರಹಸ್ಯವನ್ನು ಬಿಚ್ಚಿಟ್ಟಿದ್ದರು. ರಣವೀರ್‌ ನೈಸರ್ಗಿಕ ಆರೋಗ್ಯವಂತ ಕೂದಲನ್ನು ಹೊಂದಿದ್ದರೂ, ನಿತ್ಯವೂ ಸ್ಟೈಲಿಂಗ್ ಮಾಡುವುದರಿಂದ ಗಮನಾರ್ಹ ಹಾನಿ ಉಂಟಾಗುತ್ತದೆ ಎಂಬುದನ್ನು ಆರಂಭದಲ್ಲೇ ಅವರಿಗೆ ತಿಳಿಸುವ ಅಗತ್ಯವಿರುತ್ತದೆ ಎಂದು ಹೇಳಿದ್ದರು.

ತನ್ನ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ರಣವೀರ್‌, ನಿತ್ಯವೂ ಮತ್ತು ಅಗತ್ಯವಿದ್ದಾಗ ತನ್ನ ನೆತ್ತಿಗೆ ಹೊಂದಿಕೊಳ್ಳುವಂತಹ ಶಾಂಪೂ ಮತ್ತು ಕಂಡೀಶನರ್ ಬಳಸುತ್ತಾರೆ. ಆದರೆ ಅದಷ್ಟೇ ಅಲ್ಲ..! ಮತ್ತೊಂದು ರಹಸ್ಯವೂ ಇದೆ, ಅದುವೇ ಕೂದಲಿಗೆ ಎಣ್ಣೆ ಹಾಕುವುದು. ಅದು ನಿಮ್ಮ ಪಿಎಚ್ ಬ್ಯಾಲೆನ್ಸ್ ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಕೂದಲನ್ನು ಸದೃಢಗೊಳಿಸುತ್ತದೆ. ಅದನ್ನು ರಾತ್ರಿಯಲ್ಲೇ ಮಾಡಲು ಪ್ರಯತ್ನಿಸಿ, ಏಕೆಂದರೆ ಆಗ ಕೂದಲಿಗೆ ಹೊರಾಂಗಣದ ಧೂಳು ಮತ್ತು ಮಾಲಿನ್ಯ ಅಂಟಿಕೊಳ್ಳುವುದಿಲ್ಲ” ಎನ್ನುತ್ತಾರೆ ಅವರು.

ಇದನ್ನೂ ಓದಿ: '83' Movie Trailer- ಮೈನವಿರೇಳಿಸುವ '83' ಟ್ರೇಲರ್, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್; ಕನ್ನಡದಲ್ಲಿ ಕಿಚ್ಚನ ವಾಯ್ಸ್

ಗಡ್ಡಕ್ಕೂ ಇರಲಿ ಆರೈಕೆ
ತಜ್ಞರ ಪ್ರಕಾರ, ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಹಾಕುವುದರಿಂದ ಕೂದಲಿಗೆ ಅನೇಕ ಪ್ರಯೋಜನಗಳಿವೆ ಮತ್ತು ಅದು ಸುಂದರ ಹಾಗೂ ಅತ್ಯುತ್ತಮವಾಗಿ ಕಾಣುತ್ತದೆ.ಆದರೆ ನಿಮಗೆ ರಣವೀರ್‌ರಂತಹ ಗಡ್ಡ ಬೇಕೆಂದು ಆಸೆ ಇದ್ದರೆ, ಅವರಂತೆಯೇ ನೀವು ಆಗಾಗ ಗಡ್ಡವನ್ನು ಟ್ರಿಮ್ ಮಾಡುತ್ತಿರಬೇಕು ಹಾಗೂ ಗಡ್ಡದ ಶ್ಯಾಂಪೂ ಮತ್ತು ಎಣ್ಣೆ ಬಳಸಿ ಅಗತ್ಯ ಆರೈಕೆಗಳನ್ನು ಮಾಡಬೇಕು. ನಿಮ್ಮ ಕೂದಲಿನ ಬೆಳವಣಿಗೆ ಮತ್ತು ಚರ್ಮಕ್ಕೆ ಹೊಂದಿಕೊಳ್ಳುವಂತಹ ಬ್ರ್ಯಾಂಡ್‌ ಬಳಸಿದರೆ ಅಲರ್ಜಿಗಳಿಂದ ತಪ್ಪಿಸಿಕೊಳ್ಳಬಹುದು.
Published by:vanithasanjevani vanithasanjevani
First published: