• Home
  • »
  • News
  • »
  • entertainment
  • »
  • Jayeshbhai Jordaar First Look: ಗುಜರಾತಿ 'ಜಯೇಶ್​ಭಾಯ್'​​ ಆದ ಸ್ಟೈಲಿಶ್​ ಕಿಂಗ್​ ರಣವೀರ್​ ಸಿಂಗ್..!​

Jayeshbhai Jordaar First Look: ಗುಜರಾತಿ 'ಜಯೇಶ್​ಭಾಯ್'​​ ಆದ ಸ್ಟೈಲಿಶ್​ ಕಿಂಗ್​ ರಣವೀರ್​ ಸಿಂಗ್..!​

'ಜಯೇಶ್​ಭಾಯ್​ ಜೋರ್​ದಾರ್'​ ಸಿನಿಮಾದಲ್ಲಿ ರಣವೀರ್ ಸಿಂಗ್​ ಲುಕ್​

'ಜಯೇಶ್​ಭಾಯ್​ ಜೋರ್​ದಾರ್'​ ಸಿನಿಮಾದಲ್ಲಿ ರಣವೀರ್ ಸಿಂಗ್​ ಲುಕ್​

Jayeshbhai Jordaar First Look: ಈ ಹಿಂದೆ 'ಜಯೇಶ್​ಭಾಯ್​ ಜೋರ್​ದಾರ್​' ಬಗ್ಗೆ ಟ್ವೀಟ್​ ಮಾಡುವ ಮೂಲಕ ​ರಣವೀರ್​ ಸಿಂಗ್ ಸುಳಿವು ಕೊಟ್ಟಿದ್ದರು. ಈ ಚಿತ್ರದ ಮೂಲಕ ಹೊಸ ಬರಹಗಾರ ಹಾಗೂ ನಿರ್ದೇಶಕನನ್ನು ಯಶ್​ ರಾಜ್​ ಫಿಲ್ಮ್ಸ್​ ಪರಿಚಯಿಸುತ್ತಿದ್ದು, ದಿವ್ಯಾಂಗ್​ ಟಕ್ಕರ್​ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಸದಾ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ನಟ ರಣವೀರ್​ ಸಿಂಗ್​ ಸದ್ಯ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಬಹು ನಿರೀಕ್ಷಿತ ಸಿನಿಮಾ 'ಜಯೇಶ್​ಭಾಯ್​ ಜೋರ್​ದಾರ್​' ಚಿತ್ರದ ಫಸ್ಟ್​ಲುಕ್ ಬಿಡುಗಡೆಯಾಗಿದೆ.

ಗುಜರಾತಿ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ರಣವೀರ್​ ಅವರ ಫಸ್ಟ್​ಲುಕ್​ ಸಖತ್​ ಆಗಿದೆದ. ಟಿಪಿಕಲ್​ ಗುಜರಾತಿ ಪಾತ್ರದಲ್ಲಿ ರಣವೀರ್​ ಕಾಣಸಿಕೊಂಡಿದ್ದು,  ಈ ಚಿತ್ರ ಯಶ್​ ರಾಜ್​ ಫಿಲ್ಮ್ಸ್​ ಅಡಿ ನಿರ್ಮಾಣವಾಗುತ್ತಿದೆ.

 
ಈ ಹಿಂದೆ ಈ ಸಿನಿಮಾದ ಬಗ್ಗೆ ಟ್ವೀಟ್​ ಮಾಡುವ ಮೂಲಕ ​ರಣವೀರ್​ ಸಿಂಗ್ ಸುಳಿವು ಕೊಟ್ಟಿದ್ದರು. ಹೊಸ ಬರಹಗಾರ ಹಾಗೂ ನಿರ್ದೇಶಕನನ್ನು ಯಶ್​ ರಾಜ್​ ಫಿಲ್ಮ್ಸ್​ ಪರಿಚಯಿಸುತ್ತಿದ್ದು, ದಿವ್ಯಾಂಗ್​ ಟಕ್ಕರ್​ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.


ಯಶ್​ ರಾಜ್​ ಸ್ಟುಡಿಯೋಸ್​ ನಿರ್ಮಾಣದ ಈ ಸಿನಿಮಾದ ಅಕ್ಟೋಬರ್​ನಲ್ಲಿ ಸೆಟ್ಟೇರಲಿದೆ. ಈ ಸಿನಿಮಾದ ಕತೆ ತುಂಬಾ ಚೆನ್ನಾಗಿದ್ದು, ಕೇಳಿದ ಕೂಡಲೇ ರಣವೀರ್​ ಓಕೆ ಹೇಳಿದ್ದರಂತೆ. ಈ ಸಿನಿಮಾಗಾಗಿ ರಣವೀರ್ ಸಿಂಗ್​ ತೂಕವನ್ನೂ ಇಳಿಸಿಕೊಂಡಿದ್ದಾರೆ.

ಇದನ್ನೂ ಓದಿ: DBoss Darshan: ರಣ್​ವಿತ್ ಶೆಟ್ಟಿಯನ್ನು ಎತ್ತಿ ಮುದ್ದಾಡಿದ ಡಿಬಾಸ್​ ದರ್ಶನ್​

ಕಿತ್ತಳೆ ಬಣ್ಣದ ಟೀ ಶರ್ಟ್​ನಲ್ಲಿ, ಮೀಸೆ ಜತೆಗೆ ರಣವೀರ್​ ಹಿಂದೆ ಮುಖಮುಚ್ಚಿಕೊಂಡಿರುವ ಗುಜರಾತಿ ಹೆಣ್ಣು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಓರ್ವ ಸಾಮಾನ್ಯವ ಗುಜರಾತಿ ಮನುಷ್ಯನಾಗಿ ನಟಿಸಿರುವ ರಣವೀರ್​ ಸಿಂಗ್​ ಫಸ್ಟ್​ಲುಕ್ ನೋಡಿದರೆ, ಅವರು ಮತ್ತೊಮ್ಮೆ ಪಾತ್ರದಲ್ಲಿ ಮುಳುಗಿರುವುದು ಕಾಣುತ್ತದೆ.

Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!


 

First published: