ಬಾಲಿವುಡ್ನ (Bollywood) ಪವರ್ಫುಲ್ ಮತ್ತು ರೊಮ್ಯಾಂಟಿಕ್ (Romantic) ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಮುಂಬೈನಲ್ಲಿ ಮದುವೆಯ ನಂತರ ಒಟ್ಟಿಗೆ ತಮ್ಮ ಮೊದಲ ಮನೆಯನ್ನು (Home) ಖರೀದಿಸಿದ್ದೂ ಎಲ್ಲರಿಗೂ ಗೊತ್ತೇ ಇದೆ. ಒಂದೆರೆಡು ತಿಂಗಳ ಅಂದರೆ ಕೃಷ್ಣ ಜನ್ಮಾಷ್ಟಮಿ (Krishna Janmashtami) ದಿನ ಗೃಹ ಪ್ರವೇಶ ಕೂಡ ನಡೆದಿದ್ದು, ದಂಪತಿ ತಮ್ಮ ಮೊದಲ ಸ್ವಂತ ಮನೆಗೆ ಬಲಗಾಲಿಟ್ಟು ಹೋಗಿದ್ದಾರೆ.
119 ಕೋಟಿಗೆ ಮನೆ ಖರೀದಿಸಿದ ದಂಪತಿ
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಂಬೈನ ತಮ್ಮ ಮನೆಗೆ ಪ್ರವೇಶಿಸಿದ್ದು, ಕೆಲವು ಫೋಟೋಗಳನ್ನು ರಣವೀರ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಈ ಹಿಂದೆ ಹಂಚಿಕೊಂಡಿದ್ದರು. ವರದಿಗಳ ಪ್ರಕಾರ ಬೆಲೆಬಾಳುವ ಆಸ್ತಿಯ ಬೆಲೆ 119 ಕೋಟಿ ರೂಪಾಯಿಯಾಗಿದೆ ಎನ್ನಲಾಗಿದೆ. ಹಾಗೆಯೇ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅಲ್ಲೇ ಅಕ್ಕಪಕ್ಕದಲ್ಲಿದ್ದು, ದಂಪತಿಗಳಿಗೆ ಬಿಗ್ ಬಿ ಮತ್ತೆ ಬಾದ್ ಶಾ ನೆರೆಹೊರೆಯವರಾಗಿದ್ದಾರೆ.
ವರದಿಯ ಪ್ರಕಾರ, ಬೃಹತ್ ಬಂಗಲೆಯ ಸ್ಥಳವು ಒಟ್ಟು 11,266 ಚದರ ಅಡಿ ಕಾರ್ಪೆಟ್ ಪ್ರದೇಶ ಮತ್ತು 1,300 ಚದರ ಅಡಿ ವಿಶೇಷವಾದ ಟೆರೇಸ್ ಅನ್ನು ಹೊಂದಿದೆ.
ಎಸ್ಕ್ವೈರ್ ಮ್ಯಾಗಜೀನ್ ಜೊತೆ ರಣವೀರ್ ಮಾತುಕತೆ
ರಣವೀರ್ ಸಿಂಗ್ ಅವರು ಈ ತಿಂಗಳಿನಲ್ಲಿ ಎಸ್ಕ್ವೈರ್ ಮ್ಯಾಗಜೀನ್ ಸಿಂಗಾಪುರದ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು, ಈ ಹೆಗ್ಗಳಿಕೆಗೆ ಪಾತ್ರರಾದ ಮೊದಲಿಗರೂ ಹೌದು. ಮ್ಯಾಗಜಿನ್ನೊಂದಿಗಿನ ಅವರ ವಿಶೇಷ ಸಂದರ್ಶನದಲ್ಲಿ, ರಣವೀರ್ ತಮ್ಮ ಬಾಲ್ಯ, ದೊಡ್ಡ ಬಾಲಿವುಡ್ ಕನಸು ಮತ್ತು ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗಿನ ಜೀವನದ ಬಗ್ಗೆ ಮಾತನಾಡಿದ್ದಾರೆ.
ದೀಪಿಕಾ ತುಂಬಾ ಹೋಮ್ಲಿ ಎಂದ ರಣವೀರ್
ಜೀವನದಲ್ಲಿ ನೀವು ಏನನ್ನು ಸೆಲೆಬ್ರೇಟ್ ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಸಿಂಗ್ ದೀಪಿಕಾ ಮತ್ತು ನಾನು ನಮ್ಮ ಮೊದಲ ಮನೆಯನ್ನು ಒಟ್ಟಿಗೆ ಖರೀದಿಸಿದ್ದೇವೆ, ಆದ್ದರಿಂದ ನಾವು ನಮ್ಮ ಮನೆಯನ್ನು ನಿರ್ಮಿಸುತ್ತಿದ್ದೇವೆ. ಇಬ್ಬರು ಆ ಮನೆಯಲ್ಲಿ ಇರಲು ಬಯಸುತ್ತೇವೆ. ದೀಪಿಕಾ ಮತ್ತು ನಾನು ಕೆಲಸದಲ್ಲಿ ತುಂಬಾನೆ ಬ್ಯುಸಿಯಾಗಿದ್ದೇವೆ ಮತ್ತು ಅವಳು ತುಂಬಾ ಹೋಮ್ಲಿ ಆಗಿದ್ದಾಳೆ. ಇಬ್ಬರು ಹೆಚ್ಚು ಹೊತ್ತು ಮನೆಯಲ್ಲಿ ಮತ್ತು ಒಟ್ಟಿಗೆ ಸಮಯ ಕಳೆಯಲು ಬಯಸುತ್ತೇವೆ" ಎಂದಿದ್ದಾರೆ.
ನಮ್ಮ ಮನೆ ನಗರದಿಂದ ಸ್ವಲ್ಪ ಹೊರಗಿದೆ. ಮನೆಯ ಸ್ಥಳ ಪ್ರಶಾಂತವಾಗಿದೆ. ನಾವಿಬ್ಬರೂ ಉತ್ತಮ ಸಮಯ ಕಳೆಯಲು ಆ ಮನೆ ನಮಗೆ ತುಂಬಾ ವಿಶೇಷ ಎಂದಿದ್ದಾರೆ. ಹಾಗೆಯೇ ರಣವೀರ್ ಸಿಂಗ್ ತನ್ನ ಪತ್ನಿ ತುಂಬಾ ಹೋಮ್ಲಿ, ಅವಳಿಗೆ ಮನೆಯನ್ನು ಅಲಂಕರಿಸುವುದು ಎಂದರೆ ತುಂಬಾ ಇಷ್ಟ ಅಂತಾನೂ ಹೇಳಿದ್ದಾರೆ.
ಮುದ್ದು ಮಡದಿ ಬಗ್ಗೆ ಮೆಚ್ಚುಗೆ
ದೀಪಿಕಾ ಆ ಮನೆ ಬಗ್ಗೆ ವಿಶೇಷವಾದ ಆಸಕ್ತಿ, ಪ್ರೀತಿ ಮತ್ತು ಹೆಮ್ಮೆಯನ್ನು ಹೊಂದಿದ್ದಾಳೆ. ಯಾವಾಗಲೂ ಮನೆ ಅಲಂಕರಿಸುವ ಬಗ್ಗೆ ಮಾತನಾಡುತ್ತಾಳೆ. ಅವಳಲ್ಲಿ ಆ ಮಗುವಿನಂತಹ ಉತ್ಸಾಹವನ್ನು ನೋಡಲು ನಾನು ಇಷ್ಟಪಡುತ್ತೇನೆ ಮತ್ತು ಅವಳಿಗೆ ನಾನು ಕೂಡ ಪ್ರೋತ್ಸಾಹಿಸುತ್ತೇನೆ. ದೀಪಿಕಾ ತುಂಬಾ ಆಕ್ಟೀವ್ ಮತ್ತು ಇಂಟೀರಿಯರ್ ಡೆಕೋರೇಟರ್ ಐಡಿಯಾ ಹೊಂದಿದ್ದಾಳೆ ಎಂದು ಬಾಲಿವುಡ್ ನಟ ಮತ್ತು ದೀಪಿಕಾ ಪತಿ ರಣವೀರ್ ಸಿಂಗ್ ಮುದ್ದು ಮಡದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೀಪಿಕಾ ಗೃಹಿಣಿಯಾಗಿ ಮನೆ ನಿಭಾಯಿಸಲು ಇಷ್ಟ ಪಡುತ್ತಾಳೆ ನನಗೂ ಅವಳ ಆ ಸ್ವಭಾವ ಇಷ್ಟ. ನಮ್ಮ ಹೊಸ ಮನೆಯಲ್ಲಿ ನಾವಿಬ್ಬರೂ ಉತ್ತಮ ಸಮಯ ಕಳೆಯುತ್ತಿದ್ದೇವೆ ಎಂದು ರಣವೀರ್ ಹೇಳಿದ್ದಾರೆ.
ದಂಪತಿಗಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಹಲವು ಚಿತ್ರಗಳನ್ನು ಹೊಂದಿದ್ದಾರೆ ದೀಪಿಕಾ ಅಭಿನಯದ ಪಠಾಣ್ ಬಿಡುಗಡೆಗೆ ಕಾಯುತ್ತಿದ್ದು, 'ಪ್ರಾಜೆಕ್ಟ್ ಕೆ' ಮತ್ತು 'ಜವಾನ್' ನಲ್ಲೂ ಇವರು ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ರಣವೀರ್ ಅಭಿನಯದ ಸರ್ಕಸ್ ಇದೇ ಡಿಸೆಂಬರ್ 23ಕ್ಕೆ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ