IPL Final ಪಂದ್ಯದಲ್ಲೂ ರಾಕಿ ಭಾಯ್‌ ಹವಾ! ಕೆಜಿಎಫ್‌ 2 ಸಾಂಗ್‌ಗೆ ರಣವೀರ್‌ ಸಿಂಗ್ ಸಖತ್ ಸ್ಟೆಪ್‌

ನಿನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಾಲಿವುಡ್ ನಟ ರಣವೀರ್ ಸಿಂಗ್ ಕೆಜಿಎಫ್ ಸಿನಿಮಾದ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಸುಲ್ತಾನ ಹಾಡಿಗೆ ಸಹ ನೃತ್ಯಗಾರ ಜೊತೆ ರಣವೀರ್ ಸಿಂಗ್ ಹೆಜ್ಜೆ ಹಾಕಿದ್ದಾರೆ.

ಕೆಜಿಎಫ್‌ ಹಾಡಿಗೆ ಕುಣಿದ ರಣವೀರ್ ಸಿಂಗ್

ಕೆಜಿಎಫ್‌ ಹಾಡಿಗೆ ಕುಣಿದ ರಣವೀರ್ ಸಿಂಗ್

  • Share this:
ಕ್ರಿಕೆಟ್ ಪ್ರೇಮಿಗಳ (Cricket Lovers) ಜ್ವರ (Fever) ಹೆಚ್ಚಿಸಿದ್ದ ಐಪಿಎಲ್ ಕ್ರಿಕೆಟ್ ಫೈನಲ್ ಮ್ಯಾಚ್‌ (IPL Cricket Final Match) ಮುಗಿದಿದೆ, ಆದ್ರೆ ಚಿತ್ರ ಪ್ರೇಮಿಗಳ (Cinema Lovers) ಜ್ವರ ಹೆಚ್ಚಿಸಿದ್ದ ಕೆಜಿಎಫ್ ಚಾಪ್ಟರ್ (KGF Chapter 2) ಅಬ್ಬರ ಮುಂದುವರೆದಿದೆ. ಅರೇ, ಐಪಿಎಲ್‌ಗೂ ಕೆಜಿಎಫ್‌ಗೂ ಏನ್ ಸಂಬಂಧ ಅಂತ ಕೇಳ್ತೀರಾ? ಸಂಬಂಧ ಇದೆ ಸ್ವಾಮೀ… ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಅದು ಮಾಡುತ್ತಿರುವ ದಾಖಲೆ (Records), ಬಾಕ್ಸ್ ಆಫೀಸ್‌ನಲ್ಲಿ (Box Office) ಅದರ ಅಬ್ಬರ, ರಾಕಿ ಭಾಯ್ (Rocky Bhai) ಅಲಿಯಾಸ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹವಾ ಬಗ್ಗೆಯೂ ಗೊತ್ತು. ಇದೀಗ ಐಪಿಎಲ್ ಫೈನಲ್ ಪಂದ್ಯದಲ್ಲೂ ಕೆಜಿಎಫ್‌ ಚಾಪ್ಟರ್ 2 ಹವಾ ಜೋರಾಗಿದೆ. ಬಾಲಿವುಡ್‌ನ ಖ್ಯಾತ ನಟ (Bollywood Hero) ರಣವೀರ್ ಸಿಂಗ್ (Ranveer Singh) ರಾಕಿ ಭಾಯ್ ಗೆಟಪ್‌ನಲ್ಲಿ ಮಿಂಚಿದ್ದಾರೆ. “ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್..” ಅಂತಾನೇ ರಾಕಿ ಬಾಯ್ ಸ್ಟೈಲ್‌ನಲ್ಲೇ (Style) ರಣವೀರ್ ಕುಣಿದಿದ್ದಾರೆ.

ಐಪಿಎಲ್ ಅಂಗಳದಲ್ಲಿ ಕೆಜಿಎಫ್‌ 2 ಹವಾ

ನಿನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಾಲಿವುಡ್ ನಟ ರಣವೀರ್ ಸಿಂಗ್ ಕೆಜಿಎಫ್ ಸಿನಿಮಾದ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಸುಲ್ತಾನ ಹಾಡಿಗೆ ಸಹ ನೃತ್ಯಗಾರ ಜೊತೆ ರಣವೀರ್ ಸಿಂಗ್ ಹೆಜ್ಜೆ ಹಾಕಿದ್ದಾರೆ.ಸುಲ್ತಾನನ ಹಾಡಿಗೆ ಹೆಜ್ಜೆ ಹಾಕಿದ ರಣವೀರ್ ಸಿಂಗ್

ಸಮಾರೋಪ ಸಮಾರಂಭದಲ್ಲಿ ಮೊದಲಿಗೆ ಅದ್ಭುತವಾಗಿ ಪ್ರೇಕ್ಷಕರನ್ನು ರಂಜಿಸಿದ ಬಾಲಿವುಡ್ ನಟ ರಣವೀರ್ ಸಿಂಗ್, ಅನೇಕ ಚಿತ್ರಗಳ ಹಾಡಿಗೆ ಹೆಜ್ಜೆಹಾಕಿದರು. ಕೈಯಲ್ಲಿ ಐಪಿಎಲ್ ಧ್ವಜ ಹಿಡಿದುಕೊಂಡು ಕ್ರೀಡಾಂಗಣಕ್ಕೆ ಪ್ರವೇಶಿಸಿದ ಅವರು, ಪ್ರೇಕ್ಷಕರಲ್ಲಿನ ಜೋಶ್​ ಅನ್ನು ಇಮ್ಮಡಿಗೊಳಿಸಿದರು. ಇದರ ನಡುವೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಜಿಎಫ್ 2 ಚಿತ್ರದ ಹಾಡು ಮೊಳಗಿದ್ದು, ರಣವೀರ್ ಸಿಂಗ್ ಕೆಜಿಎಫ್ 2 ಚಿತ್ರದ ‘ಧೀರಾ ಧೀರಾ‘ ಮತ್ತು ಥೀಮ್​ ಸಾಂಗ್​ ಗೆ ಕುಣಿದು ಕುಪ್ಪಳಿಸಿದರು. ಈ ಮೂಲಕ ಐಪಿಎಲ್​ ನಲ್ಲಿಯೂ ರಾಕಿ ಭಾಯ್ ಹವಾ ಆದಂತಾಗಿದೆ.

ಇದನ್ನೂ ಓದಿ: IPL 2022 Champion: ರೋಚಕ ಹಣಾಹಣಿಯಲ್ಲಿ ಗೆದ್ದು ಬೀಗಿದ ಗುಜರಾತ್, ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ಹಾರ್ದಿಕ್ ಪಡೆ

“ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್..” ಅಂತ ರಾಕಿ ಭಾಯ್ ಆದ ರಣವೀರ್

ಕೆಜಿಎಫ್‌ ಚಾಪ್ಟರ್ 2 ಸಿನಿಮಾದ ರಾಖಿ ಭಾಯ್ ಪಾತ್ರದಂತೆ ವೇಷ ಭೂಷಣ ತೊಟ್ಟ ರಣವೀರ್ ಸಿಂಗ್, ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಮಿಟೇಟ್ ಮಾಡುವ ಯತ್ನ ಮಾಡಿದ್ದಾರೆ. ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್… ವಿ ಡೋಂಟ್ ಲೈಕ್ ಇಟ್. ವಿ ಅವಾಯ್ಡ್. ಬಟ್ ವೈಲೆನ್ಸ್ ಲೈಕ್ಸ್ ಅಸ್.. ವಿ ಕಾಂಟ್ ಅವಾಯ್ಡ್ ಅಂತ ರಾಕಿ ಭಾಯ್ ನಂತೆ ರಣವೀರ್ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

ಐಪಿಎಲ್‌ ಅಂಗಳದಲ್ಲಿ ರೆಹಮಾನ್ ಹಾಡಿನ ಮೋಡಿ

ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 15 ನೇ ಸೀಸನ್‌ನ ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆಯಿತು. ನಿನ್ನೆಯ ಸಮಾರೋಪ ಸಮಾರಂಭದಲ್ಲಿ ಸಿನಿ ಲೋಕದ ಹಲವು ತಾರೆಯರು ಭಾಗವಹಿಸಿದ್ದರು. ಈ ವೇಳೆ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ಗಾಯಕಿ ನೀತಿ ಮೋಹನ್ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಎಆರ್ ರೆಹಮಾನ್ ದೇಶಭಕ್ತಿ ಹಾಡಿನ ಮೂಲಕ ಕ್ರೀಡಾ ಪ್ರಪಂಚವನ್ನು ಮತ್ತೊಂದು ದಿಕ್ಕಿನೆಡೆಗೆ ಕರೆದುಕೊಂಡು ಹೋದರು.
Published by:Annappa Achari
First published: