Ranveer Singh: ವೇದಿಕೆ ಮೇಲೆ ಭಾವುಕರಾದ ರಣವೀರ್ ಸಿಂಗ್! ನಿಜವಾಗಿ ನಡೆದದ್ದೇನು ಗೊತ್ತಾ?

ಪ್ರಶಸ್ತಿ ಸ್ವೀಕರಿಸುವಾಗ ಭಾವುಕರಾದ ರಣವೀರ್ ಅವರ ಕಣ್ಣಲ್ಲಿ ನೀರು ಬಂತು. ಅವರು ತಮ್ಮ ಇಷ್ಟು ದಿನಗಳ ಸಾಧನೆಗೆ ತಂದೆ, ತಾಯಿ, ತಂಗಿ ಮತ್ತು ಪತ್ನಿ ದೀಪಿಕಾ ಪಡುಕೋಣೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಫಿಲ್ಮ್ ​​ಫೇರ್ ಅವಾರ್ಡ್​​ನಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದ ರಣವೀರ್ ಸಿಂಗ್

ಫಿಲ್ಮ್ ​​ಫೇರ್ ಅವಾರ್ಡ್​​ನಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದ ರಣವೀರ್ ಸಿಂಗ್

  • Share this:
ಯಾವಾಗಲೂ ತಮ್ಮ ವಿಶಿಷ್ಟ ಡ್ರೆಸ್ಸಿಂಗ್ ಸ್ಟೈಲ್ (Dressing Style) ಮತ್ತು ಮಾತುಗಳಿಂದ ​​ವೈರಲ್ ಆಗುತ್ತಿರುವ ಬಾಲಿವುಡ್ (Bollywood) ಹೀರೋ ರಣವೀರ್ ಸಿಂಗ್ (Ranveer Singh) ಈಗ ತಮ್ಮ ಅಭಿಮಾನಿಗಳೊಂದಿಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಫಿಲ್ಮ್‌ಫೇರ್ (Film fare) ಪ್ರಶಸ್ತಿ ಪಡೆದ ಕ್ಷಣದಲ್ಲಿ ಭಾವುಕರಾದ ವಿಡಿಯೋ ತುಣುಕಿನಲ್ಲಿ ತಮ್ಮ ಮಡದಿ ದೀಪಿಕಾ (Deepika Padkone) ಅವರಿಗೆ ವೇದಿಕೆಯಲ್ಲೇ ಮುತ್ತಿಟ್ಟ ವಿಡಿಯೋ ಈಗ ವೈರಲ್ ಆಗಿದೆ. ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದ ನಂತರ ರಣವೀರ್ ಸಿಂಗ್ ವೇದಿಕೆಯಲ್ಲೇ ಭಾವುಕರಾಗಿ ಮಾತನಾಡಿದ್ದಾರೆ. ಪ್ರಶಸ್ತಿ ಗೆದ್ದಿದ್ದಕ್ಕಾಗಿ ಅವರು ತಮ್ಮ ತಂದೆ ತಾಯಿ ಮತ್ತು ಸಹೋದರಿಯನ್ನು ನೆನಪಿಸಿಕೊಂಡರು. ಇದರೊಂದಿಗೆ ತಮ್ಮ ಪ್ರೀತಿಯ ಮಡದಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯನ್ನು ತಮ್ಮ ಮನೆಯ ಲಕ್ಷ್ಮಿ ಎಂದು ಕರೆದು ವೇದಿಕೆ ಮೇಲೆ ಅವರಿಗೆ ಮುತ್ತಿಟ್ಟಿದ್ದಾರೆ.

ಅತ್ಯುತ್ತಮ ನಟ ಪ್ರಶಸ್ತಿ:

ರಣವೀರ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅವರು ದೀಪಿಕಾ ಪಡುಕೋಣೆಗೆ ಮತ್ತಿಟ್ಟ ವಿಡಿಯೋ ಹಂಚಿಕೊಂಡಿದ್ದಾರೆ. ಫಿಲ್ಮ್‌ಫೇರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅವರು ಅಭಿನಯಿಸಿದ ‘83’ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಸ್ವೀಕರಿಸುವಾಗ ಭಾವುಕರಾದ ರಣವೀರ್ ಅವರ ಕಣ್ಣಲ್ಲಿ ನೀರು  ಬಂತು. ಅವರು ತಮ್ಮ ಇಷ್ಟು ದಿನಗಳ ಸಾಧನೆಗೆ ತಂದೆ, ತಾಯಿ,ತಂಗಿ ಮತ್ತು ಪತ್ನಿ ದೀಪಿಕಾ ಪಡುಕೋಣೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು. ತನ್ನ ಜೀವನದಲ್ಲಿ ತಾವು ಮಾಡಿದ ಸಾಧನೆಗಳಿಗೆಲ್ಲ ತನ್ನ ತಂದೆ ತಾಯಿಯೇ ಕಾರಣ ಅವರೇ ನನ್ನ ನಿಜವಾದ ದೇವರು ಎಂದು ಹೇಳಿದರು. ಇಷ್ಟು ದಿನ ಅವರು ಏನೇನು ಮಾಡಿದ್ದಾರೋ ಅದೆಲ್ಲವನ್ನು ತನಗಾಗೆ ಮಾಡಿದ್ದಾರೆ ಎಂದು ಹೇಳಿದರು.

ಮನೆಯಲ್ಲಿ ಲಕ್ಷ್ಮಿ ಇದ್ದಾಳೆ:

ಇದಾದ ನಂತರ ತನ್ನ ಮನೆಯಲ್ಲಿ ಲಕ್ಷ್ಮಿ ಇದ್ದಾಳೆ ಎಂದು ಹೇಳಿ ವೇದಿಕೆಯಿಂದ ಕೆಳಗೆ ಓಡಿ ಬಂದು ವೇದಿಕೆಯ ಹಿಂದಿನಿಂದ ದೀಪಿಕಾ ಪಡುಕೋಣೆಯನ್ನು ಕರೆದುಕೊಂಡು ಬಂದರು. ನಂತರ ವೇದಿಕೆಯ ಮೇಲೆ ದೀಪಿಕಾ ಕೆನ್ನೆಗೆ ಮುತ್ತಿಟ್ಟರು. ಅವರು ಹಂಚಿಕೊಂಡ ವೀಡಿಯೊದ ಆರಂಭದಲ್ಲಿ, ಕರಣ್ ಜೋಹರ್ ಅತ್ಯುತ್ತಮ ನಟ ಎಂದು ರಣವೀರ್ ಅವರನ್ನು ಘೋಷಿಸುವುದನ್ನು ನಾವು ಕಾಣಬಹುದು. ನಂತರ ರಣವೀರ್ ವೇದಿಕೆಯ ಮೇಲೆ ಹತ್ತಿ ತನ್ನ ಭಾವನೆಗಳನ್ನು ಮಾತಿನ ಮೂಲಕ ನೆರೆದಿರುವ ಎಲ್ಲರೆದುರು ಹೇಳಿಕೊಂಡರು. ನನ್ನ ಜೀವನದಲ್ಲಿ ಏನೇ ನಡೆದರೂ ಅದು ನನ್ನ ಕಲ್ಪನೆಗೂ ಮೀರಿದ್ದು. ಕೆಲವೊಮ್ಮೆ ನಾನು ಇಲ್ಲಿದ್ದೇನೆ, ನಿಮ್ಮೆಲ್ಲರ ಮುಂದೆ ಇದ್ದೇನೆ ಎಂದು ಸಹ ಕೆಲವು ಬಾರಿ ನಂಬಲೂ ಸಾಧ್ಯ ಆಗುವುದಿಲ್ಲ. ಪ್ರತಿ ದಿನವೂ ನನಗೆ ನಾನು ಸೆಲೆಬ್ರೆಟಿ ಎಂಬುದನ್ನು ನೆನಸಿಕೊಂಡಾಗ ಇದು ನನ್ನ ಕನಸಿರಬಹುದು ಅನಿಸುತ್ತದೆ ಎಂದು ಹೇಳಿದ್ದಾರೆ. ಇದೊಂದು ಮಿರಾಕಲ್ ಎಂದು ನಾನು ಭಾವಿಸಿದ್ದೇನೆ ಎನ್ನುತ್ತಿರುವಾಗ ಅವರ ಕಣ್ಣಂಚಲ್ಲಿ ನೀರು ಜಿನುಗಿತು.

ಇದನ್ನೂ ಓದಿ:  ಎಡಗೈ ಅಪಘಾತಕ್ಕೆ ಕಾರಣ ಅಂತವ್ರೆ ದೂದ್ ಪೇಡ ದಿಗಂತ್ !

ಥ್ಯಾಂಕ್ಸ್ ಟೂ ಪೀಪಲ್!:

ರಣವೀರ್ ಸಿಂಗ್ ಇನ್ನಷ್ಟು ವಿಚಾರಗಳನ್ನು ಜನರೆದುರು ಹಂಚಿಕೊಂಡಿದ್ದಾರೆ. ಅತಿ ದೊಡ್ಡ ಧನ್ಯವಾದಗಳನ್ನು ನಾನು ಜನರಿಗೆ ಸಲ್ಲಿಸಲು ಬಯಸುತ್ತೇನೆ ಪ್ರೇಕ್ಷಕರು ನನ್ನನ್ನು ಮೆಚ್ಚಿಕೊಂಡು ನನ್ನ ಜೀವನಯಾನದಲ್ಲಿ ಒಂದು ಭಾಗವಾಗಿ ನನ್ನ ಕನಸಿನಂತೆಯೇ ಬದುಕಲು ಸಹಕಾರ ಮಾಡಿಕೊಟ್ಟಿದ್ದಾರೆ. ಈ ಅವಕಾಶ ನೀಡಿದ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ನಾನು ಏನೇ ಆಗಿದ್ದರೂ ಅದಕ್ಕೆ ನನ್ನ ತಂದೆ ತಾಯಿಯೇ ಕಾರಣ. ಮತ್ತು ನನ್ನ ಸಹೋದರಿ ಸಹ ಇದಕ್ಕೆ ಕಾರಣ. ನಾನು ಏನೇ ಮಾಡಿದರು ಕುಟುಂಬದ ಸಹಕಾರ ನನಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ಕೊಟ್ಟ ಮಾತಿನಂತೆ ಮೈಸೂರಿನ ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ, ಪುನೀತ್ ಓದಿಸುತ್ತಿದ್ದ ಮಕ್ಕಳ ಜೊತೆ ಮಾತು, ಆಟ!

ದೀಪಿಕಾಗೆ ಮುತ್ತಿಟ್ಟ ರಣವೀರ್:

ರಣವೀರ್ ಸಿಂಗ್ ದೀಪಿಕಾ ಅವರನ್ನು ಮನೆಯ ಲಕ್ಷ್ಮಿ ಎಂದು ಕರೆದರು. ವೇದಿಕೆಯಿಂದ ಕೆಳಗಿಳಿದು ಹೋಗಿ ದೀಪಿಕಾ ಅವರನ್ನು ವೇದಿಕೆಯ ಹಿಂಬಾಗದಿಂದ ಕರೆದುಕೊಂಡು ಓಡಿ ವೇದಿಕೆಗೆ ಬಂದರು.ವೇದಿಕೆಯ ಮೇಲೆ ದೀಪಿಕಾ ಕೈ ಹಿಡಿದು ಅವರೇ ತನ್ನ ಶಕ್ತಿ ಎಂದು ಹೇಳಿದ್ದಾರೆ. ಆ ಕ್ಷಣಕ್ಕೆ ದೀಪಿಕಾ ಮುಖದಲ್ಲೂ ನಗು ಮೂಡಿದೆ. ಇದಾದ ನಂತರ ರಣವೀರ್ ಆಕೆಯ ಕೆನ್ನೆಗೆ ಬಲವಾಗಿ ಮುತ್ತಿಟ್ಟಿದ್ದಾರೆ. ನಂತರ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
First published: