Deepika padukone: ಕನ್ನಡದಲ್ಲಿ ದೀಪಿಕಾ ಪಡುಕೋಣೆ ಚಿತ್ರ ಬರ್ತಿದೆ, ಇದೇ ವರ್ಷ ರಿಲೀಸ್!

Deepika padukone: ದೀಪಿಕಾ ಪಡುಕೋಣೆ ಅಭಿನಯದ  ಮತ್ತೊಂದು ಕನ್ನಡ ಚಿತ್ರ ತೆರೆಗೆ ಬರುತ್ತಿದೆ. ಹೌದು. ಇದು ನಿಜ ಅದೂ ಕೂಡ ಈ ವರ್ಷವೇ ತೆರೆಕಾಣುತ್ತಿದೆ. ಈ ವಿಚಾರ ಕಂಡು ದೀಪಿಕಾ ಅಭಿಮಾನಿಗಳಿಗೆ ದಿಲ್​ಖುಷ್​ ಆಗಿದೆ. ಮತ್ತೊಮ್ಮೆ ತಮ್ಮ ನೆಚ್ಚಿನ ನಟಿಯನ್ನು ತಮ್ಮ ಮಾತೃಭಾಷೆ ಕನ್ನಡದಲ್ಲಿ ನೋಡುವ ಆಸೆ ಈಡೇರಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

  • Share this:
ಬಾಲಿವುಡ್​ನ ಡಿಂಪಲ್​ ಕ್ವೀನ್(Dimple Queen)​ ದೀಪಿಕಾ ಪಡುಕೋಣೆ(Deepika Padukone) ಮದುವೆ ಬಳಿಕವೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ಒಂದು ದಶಕಗಳಿಂದ ಬಾಲಿವುಡ್​ನ ರೂಲ್(Rule)​ ಮಾಡಿದವರು. 2007 ರಲ್ಲಿ ತೆರೆಕಂಡ ಓಂ ಶಾಂತಿ ಓಂ(Om Shanthi Om) ಸಿನಿಮಾ ಮೂಲಕ ದೀಪಿಕಾ ಬಾಲಿವುಡ್​ಗೆ ಕಾಲಿಟ್ಟಿದ್ದರು. ಅಲ್ಲಿಂದ ಅವರು ಹಿಂದೆ ತಿರುಗಿಯೋ ನೋಡಲಿಲ್ಲ. ದೀಪಿಕಾ ಅಭಿನಯಿಸಿದ ಸಿನಿಮಾಗಳೆಲ್ಲ ಸೂಪರ್​ ಹಿಟ್​. ಚೆನ್ನೈ ಎಕ್ಸ್​ಪ್ರೆಸ್(Chennai Express)​, ರಾಮ್​​ಲೀಲಾ(Ram Leela), ಬಾಜಿರಾವ್​ ಮಸ್ತಾನಿ(Bajirao Mastani), ಪದ್ಮಾವತ್​(Padmavat) ಸೇರಿ ಹಲವು ಸಿನಿಮಾಗಳಲ್ಲಿ ದೀಪಿಕಾ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಆದರೆ, ಈ ಡಿಂಪಲ್ ಕ್ವೀನ್​ ಬಾಲಿವುಡ್​ಗೆ ಎಂಟ್ರಿಯಾಗುವ ಮೊದಲು ಕನ್ನಡ(Kannada)ದಲ್ಲಿ ನಟಿಸಿದ್ದರು. ಅದು ನಮ್ಮ ರಿಯಲ್ ಸ್ಟಾರ್​ ಉಪೇಂದ್ರ(Real Star Upendra) ಅಭಿನಯದ ಐಶ್ವರ್ಯ(Aishwarya) ಸಿನಿಮಾದಲ್ಲಿ. ಈ ವಿಚಾರ ಬಹುತೇಕ ಎಲ್ಲರಿಗೂ ತಿಳಿದಿದೆ. ಇದೀಗ ಹೊಸ  ವಿಚಾರ ಏನಪ್ಪಾ ಅಂದರೆ,  ದೀಪಿಕಾ ಪಡುಕೋಣೆ ಅಭಿನಯದ  ಮತ್ತೊಂದು ಕನ್ನಡ ಚಿತ್ರ ತೆರೆಗೆ ಬರುತ್ತಿದೆ. ಹೌದು. ಇದು ನಿಜ ಅದೂ ಕೂಡ ಈ ವರ್ಷವೇ ತೆರೆಕಾಣುತ್ತಿದೆ. ಈ ವಿಚಾರ ಕಂಡು ದೀಪಿಕಾ ಅಭಿಮಾನಿಗಳಿಗೆ ದಿಲ್​ಖುಷ್​ ಆಗಿದೆ. ಮತ್ತೊಮ್ಮೆ ತಮ್ಮ ನೆಚ್ಚಿನ ನಟಿಯನ್ನು ತಮ್ಮ ಮಾತೃಭಾಷೆ ಕನ್ನಡದಲ್ಲಿ ನೋಡುವ ಆಸೆ ಈಡೇರಿದೆ. ಅರೇ.. ಅದ್ಯಾವ ಕನ್ನಡ ಸಿನಿಮಾದಲ್ಲಿ ದೀಪಿಕಾ ನಟಿಸಿದ್ದಾರೆ? ಅದೂ ಯಾವುದೇ ಸುದ್ದಿ ಇಲ್ಲದೇನಾ? ಈ  ವರ್ಷವೇ ಆ ಚಿತ್ರ ತೆರೆಕಾಣುತ್ತಾ? ಹೀಗೆ ನಿಮ್ಮನ್ನ ಕಾಡುತ್ತಿರುವ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. 

ಐಶ್ವರ್ಯ ಸಿನಿಮಾ ಬಳಿಕ ಕನ್ನಡದಲ್ಲಿ ಮತ್ತೊಂದು ಸಿನಿಮಾ!

ಹೌದು.. ಕನ್ನಡದಲ್ಲಿ ದೀಪಿಕಾ ಪಡುಕೋಣೆಯ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದೆ. 15 ವರ್ಷಗಳ ಹಿಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದ 'ಐಶ್ವರ್ಯ' ಸಿನಿಮಾವೇ ದೀಪಿಕಾ ನಟಿಸಿದ ಕೊನೆಯ ಸಿನಿಮಾ ಆಗಿತ್ತು. ಅಲ್ಲಿಂದಲೂ ದೀಪಿಕಾ ಕನ್ನಡ ಚಿತ್ರಗಳಲ್ಲಿ ಮತ್ತೆ ನಟಿಸಬೇಕು ಅನ್ನುವುದು ಕನ್ನಡಿಗರ ಒತ್ತಾಸೆಯಾಗಿತ್ತು. ಈಗ ಆಸೆ ಈಡೇರುವ ಕಾಲ ಕೂಡಿ ಬಂದಿದೆ. ದೀಪಿಕಾ ಹಾಗೂ ರಣ್‌ವೀರ್ ಸಿಂಗ್ ನಟಿಸಿರುವ 83 ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಕ್ರಿಕೆಟ್​ನ ದಂತಕಥೆ ಕಪೀಲ್​ ದೇವ್​ ಅವರ ಬಯೋಪಿಕ್​ ಸಿನಿಮಾ 83. ಕಪೀಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ಅಭಿನಯಿಸಿದ್ದಾರೆ. ಅದು ಒಂದೇ ಚಿತ್ರದಲ್ಲಿ ಮತ್ತೆ ಗಂಡ - ಹೆಂಡತಿ ನಟಿಸಿರುವುದು ಭಾರೀ ಕುತೂಹಲ ಮೂಡಿಸಿದೆ.

ಇದನ್ನು ಓದಿ : ಡಿವೋರ್ಸ್​ ಬಳಿಕ ಹಾಲಿವುಡ್​ಗೆ ಹಾರಿದ ಬ್ಯೂಟಿ ಕ್ವೀನ್​​: ನ್ಯೂ ಗೆಟ್​ಪ್​ನಲ್ಲಿ ಸಮಂತಾ!

ಕ್ರಿಸ್​ಮಸ್​ಗೆ ಬಿಡುಗಡೆಯಾಗಲಿದೆ ‘83’ ಸಿನಿಮಾ

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ನಟಿಸಿದ '83' ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಈ ಸಿನಿಮಾ ಬಿಡುಗಡೆ ವಿಳಂಬ ಆಗಿತ್ತು. ಆದ್ರೀಗ ಡಿಸೆಂಬರ್ 24ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿರುವುದರಿಂದ ಮೊಟ್ಟ ಮೊದಲ ಟೀಸರ್ ರಿಲೀಸ್ ಮಾಡಿದೆ.  '83'ಯ ಮೊದಲ ಟ್ರೈಲರ್ ಇದೇ ನವೆಂಬರ್ 30ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಟೀಸರ್​ ಮೂಲಕವೇ ರಣವೀರ್​ ಸಿಂಗ್​ ಅಭಿಮಾನಿಗಳ ಮನಸ್ಸು ಗೆದಿದ್ದಾರೆ. ಸೇಮ್​ ಕಪಿಲ್​ ದೇವ್​ ಅವರ ರೀತಿಯೇ ರಣವೀರ್​ ಸಿಂಗ್​ ಕಾಣುತ್ತಾರೆ.


ಇದನ್ನು ಓದಿ : ಬೆಂಗಳೂರಿಗೆ ಬರ್ತಿದ್ದಾರೆ ರಾಜಮೌಳಿ, ಜೂ.ಎನ್​ಟಿಆರ್​: ಇಂದು ಆರ್​ಆರ್​ಆರ್​​​ ಸಿನಿಮಾದ ಭರ್ಜರಿ ಪ್ರಚಾರ!

ಮತ್ತೊಮ್ಮೆ 1983 ವಿಶ್ವಕಪ್​ ತೆರೆ ಮೇಲೆ!

ಕಪಿಲ್ ನಾಯಕತ್ವದ ಕ್ರಿಕೆಟ್ ತಂಡ 1983ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿತ್ತು. ಆ ಕ್ಷಣಗಳನ್ನು ತೆರೆಮೇಲೆ ಕಟ್ಟಿಕೊಡಲು '83' ಸಿನಿಮಾ ಮಾಡಲಾಗಿದೆ. ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟಿಸಿರುವ ಈ ಸಿನಿಮಾದ  ಟೀಸರ್ ರಿಲೀಸ್ ಆಗಿದೆ. ಇದೇ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ. ಈ ಮೂಲಕ ಕನ್ನಡದಲ್ಲಿ ಮತ್ತೆ ದೀಪಿಕಾ ಪಡುಕೋಣೆ ಸಿನಿಮಾ ನೋಡುವ ಅವಕಾಶ ಸಿಕ್ಕಂತಾಗಿದೆ.
Published by:Vasudeva M
First published: