• Home
  • »
  • News
  • »
  • entertainment
  • »
  • Ranveer and Deepika: ರಣವೀರ್‌ -ದೀಪಿಕಾ ವಿಚ್ಛೇದನ ವದಂತಿ, ಕೊನೆಗೂ ತೆರೆ ಎಳೆದ ಆ ಒಂದು ಕಾಮೆಂಟ್

Ranveer and Deepika: ರಣವೀರ್‌ -ದೀಪಿಕಾ ವಿಚ್ಛೇದನ ವದಂತಿ, ಕೊನೆಗೂ ತೆರೆ ಎಳೆದ ಆ ಒಂದು ಕಾಮೆಂಟ್

ರಣವೀರ್ ಮತ್ತು ದೀಪಿಕಾ

ರಣವೀರ್ ಮತ್ತು ದೀಪಿಕಾ

ಬಾಲಿವುಡ್‌ ನ ಕ್ಯೂಟ್‌ ಕಪಲ್‌ ರಣವೀರ್‌ ಹಾಗೂ ದೀಪಿಕಾ ಜೋಡಿ ಮಧ್ಯೆ ಬಿರುಕು ಮೂಡಿದೆಯಾ ಎಂಬ ಅನುಮಾನ ಶುರುವಾಗಿತ್ತು. ಕಳೆದ ಕೆಲವು ವಾರಗಳಿಂದ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬೇರ್ಪಡುವ ಬಗ್ಗೆ ವದಂತಿಗಳು ಎಲ್ಲೆಡೆ ಹರಿದಾಡುತ್ತಿದ್ದವು. ಆದರೆ ಪತಿ ರಣವೀರ್‌ ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾಳ ಫೋಟೋಗೆ ಮಾಡಿದ ಆ ಒಂದು ಕಾಮೆಂಟ್‌ ಬಹುತೇಕ ಎಲ್ಲ ವದಂತಿಗಳಿಗೆ ತಣ್ಣೀರೆರೆಚಿದೆ.

ಮುಂದೆ ಓದಿ ...
  • Share this:

ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಬಿ-ಟೌನ್‌ನ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಅವರ ವಿಚ್ಛೇದನದ ಸುದ್ದಿ ಹೆಚ್ಚು ವೈರಲ್ ಆಗಿತ್ತು. ಬಾಲಿವುಡ್‌ ನ ಕ್ಯೂಟ್‌ ಕಪಲ್‌ ರಣವೀರ್‌ ಹಾಗೂ ದೀಪಿಕಾ ಜೋಡಿ ಮಧ್ಯೆ ಬಿರುಕು ಮೂಡಿದೆಯಾ ಎಂಬ ಅನುಮಾನ ಶುರುವಾಗಿತ್ತು. ಕಳೆದ ಕೆಲವು ವಾರಗಳಿಂದ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬೇರ್ಪಡುವ ಬಗ್ಗೆ ವದಂತಿಗಳು (Rumors) ಎಲ್ಲೆಡೆ ಹರಿದಾಡುತ್ತಿದ್ದವು. ಆದರೆ ಪತಿ ರಣವೀರ್‌ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ದೀಪಿಕಾಳ ಫೋಟೋಗೆ ಮಾಡಿದ ಆ ಒಂದು ಕಾಮೆಂಟ್‌ ಬಹುತೇಕ ಎಲ್ಲ ವದಂತಿಗಳಿಗೆ ತಣ್ಣೀರೆರೆಚಿದೆ.


ಅಕ್ಟೋಬರ್ 3 ರಂದು, ರಣವೀರ್ ಸಿಂಗ್‌ ತನ್ನ ನಟಿ-ಪತ್ನಿ ದೀಪಿಕಾ ಅವರನ್ನು 'ನನ್ನ ರಾಣಿ' ಎಂದು ಕರೆಯುವ ಮೂಲಕ ವಿಚ್ಚೇದನದ ಎಲ್ಲ ಸುಳ್ಳು ಸುದ್ದಿಗಳನ್ನು ಮುಚ್ಚಿ ಹಾಕಿದ್ದಾರೆ.


ವಿಚ್ಛೇದನ ವದಂತಿ‌ ಬಗ್ಗೆ ರಣವೀರ್ ಏನು ಹೇಳಿದ್ರು?
Cartier ಆಭರಣ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ದೀಪಿಕಾ ಆಯ್ಕೆಯಾಗಿದ್ದು, “ಭಾರತೀಯ ನಟಿ ದೀಪಿಕಾಪಡುಕೋಣೆ ಅವರನ್ನು ತನ್ನ ಹೊಸ ರಾಯಭಾರಿಯಾಗಿ ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ." ಎಂದು ಕಂಪನಿಯವರು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ಗೆ ರಣವೀರ್ ಸಿಂಗ್ ಪ್ರತಿಕ್ರಿಯಿಸಿದ್ದು, "ನನ್ನ ರಾಣಿ, ನಾವು ಹೆಮ್ಮೆ ಪಡುವಂತೆ ಮಾಡಿದ್ದಾರೆ" ಎಂದು ಕಾಮೆಂಟ್‌ ಮಾಡಿದ್ದಾರೆ. ಈ ಮೂಲಕ ವಿಚ್ಛೇದನದ ವದಂತಿಗೆ ತೆರೆ ಎಳೆದಿದ್ದಾರೆ.


ಇದನ್ನೂ ಓದಿ: Samantha Fitness: ನಟಿ ಸಮಂತಾ ಫಿಟ್ನೆಸ್ ಸೀಕ್ರೆಟ್​ ಈ ಸ್ಪೆಷಲ್ ಇಡ್ಲಿಯಂತೆ


ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಜೋಡಿ ಎಂದರೆ ಅತಿಶೋಕ್ತಿಯಲ್ಲ. ಇವರಿಬ್ಬರೂ ವಿಮಾನ ನಿಲ್ದಾಣಗಳು, ಈವೆಂಟ್‌ಗಳು ಮತ್ತು ರೆಸ್ಟೊರೆಂಟ್‌ ಇತ್ಯಾದಿ ಎಲ್ಲೇ ಹೋದರೂ ಹೆಚ್ಚು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.


ದೀಪ್‌ವೀರ್‌ ನಡುವೆ ಸಂಬಂಧ ಹಳಸಿದೆ ಎಂಬ ಟ್ವೀಟ್‌
ಉಮರ್‌ ಸಂಧು ಎಂಬ ಸಿನಿಮಾ ವಿಮರ್ಶಕರೊಬ್ಬರು ದೀಪಿಕಾ ಮತ್ತು ರಣವೀರ್‌ ಸಿಂಗ್‌ ನಡುವೆ ಏನೋ ಸರಿ ಇಲ್ಲ ಎಂದು ಟ್ವೀಟ್‌ ಮಾಡಿದ್ದರು. ಆದರೆ ಇವರ ಟ್ವೀಟ್‌ಗೆ ಈ ಜೋಡಿ ಉತ್ತರಿಸಲು ಹೋಗಿರಲಿಲ್ಲ. ಅದರ ಬದಲಿಗೆ ಅಭಿಮಾನಿಗಳು ಸಂಧು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಟ್ವೀಟ್‌ ಕೇವಲ ವದಂತಿ ಮಾತ್ರ ಎಂದು ರಣವೀರ್‌ ಟ್ವೀಟ್‌ ಮಾಡಿದ್ದರು. ಆದರೆ ಈಗ ಮತ್ತೆ ದೀಪಿಕಾ ಬಗ್ಗೆ ಪೋಸ್ಟ್‌ ಮಾಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ ಎಂದು ಹೇಳಬಹುದು.


ಸುಮಾರು 5 ವರ್ಷ ಪ್ರೀತಿಸಿ, 2018 ರಲ್ಲಿ ಮದುವೆಯಾದ ಈ ಜೋಡಿಯನ್ನು ಎಲ್ಲರೂ ಮೆಚ್ಚಿದ್ದರು. ಆದರೆ ವೈರಲ್‌ ಆದ ಆ ಒಂದು ಟ್ವೀಟ್‌ ಈ ಸ್ಟಾರ್‌ ಕಪಲ್‌ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ವೈರಲ್‌ ಟ್ವೀಟ್‌ ನೋಡಿ ದೀಪಿಕಾ ಮತ್ತು ರಣವೀರ್‌ ಬೇರೆ ಬೇರೆ ಆಗಿ ಬಿಡ್ತಾರಾ ಎಂದು ಎಲ್ಲರೂ ಚಿಂತಿಸುತ್ತಿದ್ದರು. ಆದರೆ ವೈರಲ್‌ ಆದ ಟ್ವೀಟ್‌ಗೆ ಖುದ್ದು ರಣವೀರ್‌ ಸಿಂಗ್‌ ಅವರೇ ಪ್ರತಿಕ್ರಿಯೆ ನೀಡಿ ಅಭಿಮಾನಿಗಳ ಪ್ರಶ್ನೆಗೆ ಪರೋಕ್ಷವಾಗಿ ಉತ್ತರಿಸಿದರು.


ʼಪವರ್‌ ಕಪಲ್‌ʼ ಎಂದು ಹೊಗಳಿದ ಅಭಿಮಾನಿಗಳು
ರಣವೀರ್ ಸಿಂಗ್ ಅವರು ದೀಪ್‌ವೀರ್ ಅಭಿಮಾನಿಗಳಿಗೆ ಬಿಗ್ ರಿಲೀಫ್ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಅವರನ್ನು 'ಪವರ್ ಕಪಲ್' ಎಂದು ಶ್ಲಾಘಿಸಿದ್ದಾರೆ. ದೀಪ್‌ವೀರ್ ನಡುವೆ ಏನೂ ಸರಿ ಇಲ್ಲ ಎಂಬ ಟ್ವೀಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿತ್ತು.


ಇದನ್ನೂ ಓದಿ:  Shah Rukh Khan: ಗೌರಿ ಖಾನ್ ತನ್ನನ್ನು ಬಿಟ್ಟು ಹೋಗ್ತೇನೆ ಅಂತ ಹೆದರಿಸಿದ್ರೆ ಶಾರುಖ್ ಖಾನ್ ಸಿಟ್ಟಲ್ಲಿ ಏನ್ ಮಾಡ್ತಾರಂತೆ ಗೊತ್ತಾ?


ಉಮೈರ್‌ ಸಂಧು ಈ ರೀತಿಯ ಟ್ವೀಟ್‌ ಮಾಡಿದ್ದು, ಅಭಿಮಾನಿಗಳ ಆತಂಕಕ್ಕೆ ಅದು ಕಾರಣವಾಗಿತ್ತು. ಆದರೆ ಅದು ಫೇಕ್‌ ಸುದ್ದಿ ಎಂಬ ಸ್ಪಷ್ಟನೆ ಇದೀಗ ದೊರೆತಿದೆ. ದೀಪಿಕಾ ಹಾಗೂ ರಣವೀರ್‌ ಅಭಿಮಾನಿಗಳು ಈ ಟ್ವಿಟ್ಟರ್‌ ಯೂಸರ್‌ ವಿರುದ್ಧ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.


ರಣವೀರ್ ಮತ್ತು ದೀಪಿಕಾ ಒಟ್ಟಿಗೆ ನಟಿಸುತ್ತಾರಾ?
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಒಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿದ್ದವು. ಅದನ್ನು ರಣವೀರ್‌ ಸಿಂಗ್‌ ಸಹ ದೃಢಪಡಿಸಿದ್ದಾರೆ. ಆದರೆ ಅವರ ಮುಂಬರುವ ಪ್ರಾಜೆಕ್ಟ್ ಬಗ್ಗೆ ಅಧಿಕೃತ ಪ್ರಕಟಣೆ ಇನ್ನು ಹೊರಬಿದ್ದಿಲ್ಲ.

Published by:Ashwini Prabhu
First published: