ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ 'ಗಲ್ಲಿ ಬಾಯ್​' ಟ್ರೈಲರ್​..!

Anitha E | news18
Updated:January 15, 2019, 2:20 PM IST
ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ 'ಗಲ್ಲಿ ಬಾಯ್​' ಟ್ರೈಲರ್​..!
'ಗಲ್ಲಿಬಾಯ್​' ಸಿನಿಮಾದಲ್ಲಿ ರಣವೀರ್ ಸಿಂಗ್​-ಅಲಿಯಾ ಭಾಟ್​
Anitha E | news18
Updated: January 15, 2019, 2:20 PM IST
ಲವರ್​ ಬಾಯ್​, ಐತಿಹಾಸಿಕ ಪಾತ್ರ ಸೇರಿದಂತೆ ಖಳನ ಪಾತ್ರದಲ್ಲೂ ನಟಿಸುವ ಮೂಲಕ ರಣವೀರ್​ ತಮ್ಮ ಅಭಿನಯ ಕೌಶಲ್ಯವನ್ನು ಈಗಾಗಲೇ ಸಾಭೀತು ಮಾಡಿಕೊಂಡಿದ್ದಾರೆ. ಹಾಸ್ಯ, ಗಂಭೀರ ಪಾತ್ರದಲ್ಲಿ ತೆರೆ ಮೇಲೆ ಬೆಂಕಿ ಹಚ್ಚುವ ರಣವೀರ್​ ನಿಜ ಜೀವನದಲ್ಲಿ ಹಾಗೂ ವೇದಿಕೆಗಳ ಮೇಲೆ ರಣವೀರ್​ ನಿಜಕ್ಕೂ ಜಾಲಿ ವ್ಯಕ್ತಿತ್ವದ ಮನುಷ್ಯ.

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ 'ಶಿವನಂದಿ'ಯನ್ನು ಉಡುಗೊರೆಯಾಗಿ ಕೊಡುತ್ತಿರುವ ಡಿ-ಬಾಸ್​ 'ಯಜಮಾನ'

ರಣವೀರ್​ ಎಲ್ಲೇ ಇದ್ದರೂ ಅಲ್ಲಿ, ಮಸ್ತಿ, ಜೋಶ್​ ಹಾಗೂ ನಗುವಿನ ಸಾಗರವೇ ಇರುತ್ತದೆ. ಸದ್ಯ 'ಸಿಂಬಾ' ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ರಣವೀರ್​ಗೆ ಈಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅದೇ ಅವರ ಅಭಿನಯದ ಹೊಸ ಸಿನಿಮಾ 'ಗಲ್ಲಿ ಬಾಯ್​' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಎರಡು ನಿಮಿಷ 42 ಸೆಕೆಂಡ್​ ಇರುವ ಟ್ರೈಲರ್​ನಲ್ಲಿ ಅಲಿಯಾ ಹಾಗೂ ರಣವೀರ್​ ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್​ನಲ್ಲಿನ ಡೈಲಾಗ್​ಗಳು ಸದ್ಯ ಸದ್ದು ಮಾಡುತ್ತಿವೆ.

ಜೋಯಾ ಅಖ್ತರ್​ ನಿರ್ದೇಶನದ ಈ ಸಿನಿಮಾವನ್ನು ರಿತೇಶ್​ ಸಿದ್ವಾನಿ, ಜೋಯಾ ಹಾಗೂ ಫರ್ಹಾನ್​ ನಿರ್ಮಿಸುತ್ತಿದ್ದಾರೆ. ಈ ಟ್ರೈಲರ್​ ನೋಡಿದ ಮೇಲಂತೂ ಸಿನಿಮಾ ಬಗೆಗಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ