Baiju Bawra: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ರಣವೀರ್​ ಸಿಂಗ್​-ಆಲಿಯಾ ಭಟ್​..!

 ಆಲಿಯಾ ಭಟ್​ ಹಾಗೂ ರಣವೀರ್ ಸಿಂಗ್​

ಆಲಿಯಾ ಭಟ್​ ಹಾಗೂ ರಣವೀರ್ ಸಿಂಗ್​

ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಬಹುನಿರೀಕ್ಷಿತ ಸಿನಿಮಾಗೆ ಬೈಜೂ ಬಾವರ ಎಂದಯ ಶೀರ್ಷಿಕೆ ಕೊಟ್ಟಿದ್ದು, ಅದರ ಚಿತ್ರೀಕರಣವನ್ನು ಅಕ್ಟೋಬರ್​ನಲ್ಲಿ ಆರಂಭಿಸುವ ಆಲೋಚನೆಯಲ್ಲಿದ್ದಾರಂತೆ. ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುವರಿಗೆ ಸಂಜಯ್ ಲೀಲಾ ಬನ್ಸಾಲಿ ಸಹ ಒಬ್ಬರು.

  • Share this:

ಬಾಲಿವುಡ್​ನ ಕ್ರೇಜಿ ಸ್ಟಾರ್​ ರಣವೀರ್ ಸಿಂಗ್​ (Ranveer Singh) ಹಾಗೂ ಕ್ಯೂಟ್​ ಬ್ಯೂಟಿ ಆಲಿಯಾ ಭಟ್​ (Alia Bhatt) ಅವರು ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ (Rocky Aur Rani Ki Prem Kahani) ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಜೋಡಿಯ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ರಣವೀರ್ ಸಿಂಗ್ ಅಭಿನಯದ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಇನ್ನು ಆಲಿಯಾ ಭಟ್​ ಕೈ ತುಂಬ ಹೊಸ ಪ್ರಾಜೆಕ್ಟ್​ಗಳಿವೆ. ಹೀಗಿರುವಾಗಲೇ ಈ ಸ್ಟಾರ್​ ಜೋಡಿ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ಹೌದು, ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್​ ಅಭಿನಯಸಲು ಓಕೆ ಮಾಡಿದ್ದಾರಂತೆ. ಈ ಸಿನಿಮಾಗೆ ಈಗಾಗಲೇ ಟೈಟಲ್​ ಸಹ ಫಿಕ್ಸ್​ ಆಗಿದೆ. 


ಮಾಧ್ಯಮ ಒಂದು ವರದಿ ಮಾಡಿರುವ ಪ್ರಕಾರ ನಿರ್ದೇಶಕ ಹಾಗೂ ನಿರ್ಮಾಪಕ  ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಬಹುನಿರೀಕ್ಷಿತ ಸಿನಿಮಾಗೆ ಬೈಜೂ ಬಾವರ (Baiju Bawra) ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಜೊತೆಗೆ ಅದರ ಚಿತ್ರೀಕರಣವನ್ನು ಅಕ್ಟೋಬರ್​ನಲ್ಲಿ ಆರಂಭಿಸುವ ಆಲೋಚನೆಯಲ್ಲಿದ್ದಾರಂತೆ ಬನ್ಸಾಲಿ. ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುವರಿಗೆ ಸಂಜಯ್ ಲೀಲಾ ಬನ್ಸಾಲಿ ಸಹ ಒಬ್ಬರು.


Alia Bhatt, Gangubai Kathiawadi, Sanjay Leela Bhansali,ಆಲಿಯಾ ಭಟ್​, ಗಂಗೂಬಾಯಿ ಕಾತಿಯಾವಾಡಿ, ಸಂಜಯ್​ ಲೀಲಾ ಬನ್ಸಾಲಿ, alia bhatt and sanjay leela bansali wraps up shooting for gangubai kathiawadi movie ae
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್


ಬೈಜು ಬಾವರ ಸಿನಿಮಾಗಾಗಿ ಗೋರೆಗಾವ್​ನ ಮೈದಾನದಲ್ಲಿ ವಿಶಾಲವಾದ ಸೆಟ್​ ನಿರ್ಮಿಸಲಾಗುತ್ತಿದೆಯಂತೆ. ಅಂತೆಯೇ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಕರಣ್ ಜೋಹರ್​ ಅವರ ಸಿನಿಮಾದ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ಬನ್ಸಾಲಿ ಅವರ ಬೈಜು ಬಾವರ ಚಿತ್ರೀಕರಣದಲ್ಲೂ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Neha Dhupia BAby Shower: ಗರ್ಭಿಣಿ ನಟಿ ನೇಹಾ ಧೂಪಿಯಾಗೆ ಸಿಕ್ತು ಸ್ನೇಹಿತೆಯರ ಕಡೆಯಿಂದ ಭರ್ಜರಿ ಸರ್ಪ್ರೈಸ್​..!


ಬೈಜು ಬಾವರ ಹಾಗೂ ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗಳಲ್ಲಿ ಆಲಿಯಾ ಭಟ್ ಹಾಗೂ ರಣವೀರ್​ ಸಿಂಗ್​ ಅವರದ್ದು ವಿಭಿನ್ನವಾದ ಪಾತ್ರಗಳಂತೆ. ಈ ಕಾರಣಕ್ಕೆ ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ದೊಡ್ಡ ದೊಡ್ಡ ಭಾಗದ ಶೂಟಿಂಗ್​ ಅನ್ನು ಬೈಜು ಬಾವರ ಸಿನಿಮಾದ ಶೂಟಿಂಗ್ ಆರಂಭವಾಗುವ ಮೊದಲೇ ಮುಗಿಸುವ ಪ್ಲಾನ್ ಇದೆಯಂತೆ.


ಇದನ್ನೂ ಓದಿ: Raghavendra: ಕೃಷ್ಣನ ವೇಷದಲ್ಲಿ ಮಿಂಚಿದ ಮಜಾ ಭಾರತದ ಅದ್ಭುತ ಪ್ರತಿಭೆ ರಾಗಿಣಿ


ಇನ್ನು ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ ಸಾಮಾನ್ಯ ಲವ್ ಸ್ಟೋರಿ ಅಲ್ಲವಂತೆ. ಇದೊಂದು ವಿಭಿನ್ನ ಪ್ರೇಮ ಕತೆಯಾಗಿದ್ದು, 2022ರಲ್ಲಿ ತೆರೆ ಕಾಣಲಿದೆ ಈ ಸಿನಿಮಾ. ಈ ಚಿತ್ರದಲ್ಲಿ ಹಿರಿಯ ನಟ ಧರ್ಮೇಂದ್ರ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

View this post on Instagram


A post shared by Karan Johar (@karanjohar)

ಕರಣ್​ ಜೋಹರ್ ಅವರು ಸದ್ಯ ಶೇರ್​ಷಾ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಜೊತೆಗೆ ಕಿರುತೆರೆಯಲ್ಲಿ ಬಿಗ್ ಬಾಸ್​ ಒಟಿಟಿ ನಿರೂಪಕರಾಗಿದ್ದಾರೆ. ಇದರ ಜೊತೆಗೆ ಸಿನಿಮಾಗಳ ಚಿತ್ರೀಕರಣದಲ್ಲೂ ಭಾಗಿಯಾಗುತ್ತಿದ್ದಾರೆ. ಇತ್ತ ಸಂಜಯ್ ಲೀಲಾ ಬನ್ಸಾಲಿ ಅವರ ಬೈಜು ಬಾವರ ಸಿನಿಮಾ ಕುರಿತಾಗಿ ಯಾವುದೇ ಅಧಿಕೃತ ಪ್ರಕಟಣೆಯಾಗಿಲ್ಲ. ಜೊತೆಗೆ ಸಿನಿಮಾ ಕತೆ ಹಾಗೂ ಇತರೆ ವಿವರಗಳೂ ಸಹ ಲಭ್ಯವಾಗಿಲ್ಲ. ಆದರೆ ಸಿನಿಮಾದ ಲೀ ಡ್​ ಪಾತ್ರಕ್ಕೆ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಆಯ್ಕೆಯಾಗಿದ್ದಾರೆ ಅನ್ನೋದು ಖಚಿತವಾಗಿದೆ. ಜೊತೆಗೆ ಆಲಿಯಾ ಭಟ್ ಜತೆ ಈಗಾಗಲೇ ಸಂಜಯ್​ ಲೀಲಾ ಬನ್ಸಾಲಿ ಅವರು ಗಂಗೂಬಾಯಿ ಕಾಠಿಯಾವಾಡಿ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

Published by:Anitha E
First published: