Ranveer Singh| ಕಿರುತೆರೆಗೆ ಬಾಲಿವುಡ್‍ನ ಗಲ್ಲಿಬಾಯ್: ಕಲರ್ಸ್ ವಾಹಿನಿಯಲ್ಲಿ  ‘ದ ಬಿಗ್ ಪಿಕ್ಚರ್’ ನಿರೂಪಿಸಲಿದ್ದಾರೆ ರಣ್‍ವೀರ್ ಸಿಂಗ್

ಮೋಹಕ ತಾರೆ ದೀಪಿಕಾ ಪಡುಕೋಣೆ ಅವರ ಪತಿ, ರಣ್‍ವೀರ್ ಸಿಂಗ್. ಅವರು ‘ದ ಬಿಗ್ ಪಿಕ್ಚರ್’ ಎಂಬ ಕ್ವಿಜ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದು, ಈ ಕ್ವಿಜ್ ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಮೂಡಿ ಬರಲಿದೆ.

ರಣವೀರ್​ ಸಿಂಗ್.

ರಣವೀರ್​ ಸಿಂಗ್.

  • Share this:
ರಣ್‍ವೀರ್ ಸಿಂಗ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ, ಅವರು ಕಲರ್ಸ್ ವಾಹಿನಿಯಲ್ಲಿ  ‘ದ ಬಿಗ್ ಪಿಕ್ಚರ್’ ಎಂಬ ಕ್ವಿಜ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ, ಕಿರುತೆಗೆ ಕಾಲಿಡಲಿದ್ದಾರೆ.ಬಾಲಿವುಡ್‍ನಲ್ಲಿ ಮಿಂಚಿದ ಹಲವಾರು ತಾರೆಗಳು, ಕಿರುತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಅಮಿತಾಭ್ ಬಚ್ಚನ್ , ಶಾರುಖ್ ಖಾನ್, ಶಿಲ್ಪಾ ಶೆಟ್ಟಿ, ಆಮಿರ್ ಖಾನ್,ಅಕ್ಷಯ್ ಕುಮಾರ್, ಅರ್ಜುನ್ ಕಪೂರ್ ಮುಂತಾದವರು ಆ ಸಾಲಿಗೆ ಸೇರುತ್ತಾರೆ. ಈಗ ಮತ್ತೊಬ್ಬ ಜನಪ್ರಿಯ ಬಾಲಿವುಡ್ ತಾರೆ ಕಿರುತೆಗೆ ಅಂಗಳಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

ಅವರೇ ಗಲ್ಲಿಬಾಯ್, ಮೋಹಕ ತಾರೆ ದೀಪಿಕಾ ಪಡುಕೋಣೆ ಅವರ ಪತಿ, ರಣ್‍ವೀರ್ ಸಿಂಗ್. ಅವರು ‘ದ ಬಿಗ್ ಪಿಕ್ಚರ್’ ಎಂಬ ಕ್ವಿಜ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದು, ಈ ಕ್ವಿಜ್ ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಮೂಡಿ ಬರಲಿದೆ. ತಾವು ಕಲರ್ಸ್ ವಾಹಿನಿಗಾಗಿ, ‘ದ ಬಿಗ್ ಪಿಕ್ಚರ್’ ಎಂಬ ಕ್ವಿಜ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವ ವಿಷಯವನ್ನು ಗಲ್ಲಿಬಾಯ್ ರಣ್‍ವೀರ್ ಸಿಂಗ್ ಖುದ್ದು ಖಚಿತ ಪಡಿಸಿದ್ದು, ತಾನು ಆ ವಾಹಿನಿಯ ಜೊತೆ ಕೆಲಸ ಮಾಡಲು ಉತ್ಸುಕನಾಗಿರುವುದಾಗಿ ಹೇಳಿದ್ದಾರೆ.

‘ದ ಬಿಗ್ ಪಿಕ್ಚರ್’ ಕ್ವಿಜ್ ಕಾರ್ಯಕ್ರಮದಲ್ಲಿ ರಣ್‍ವೀರ್ ಸಿಂಗ್, ಸ್ಪರ್ಧಿಗಳಿಗೆ ದೃಶ್ಯ ಆಧಾರಿತ ಪ್ರಶ್ನೆಗಳನ್ನು ಕೇಳಲಿದ್ದಾರೆ. ಸರಿಯಾದ ಉತ್ತರ ನೀಡುವ ಸ್ಪರ್ಧಿಗಳು, ದೊಡ್ಡ ಮೊತ್ತದ ಬಹುಮಾನ ಪಡೆಯಲಿದ್ದಾರೆ.ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿರುವ ತಮ್ಮ ಉತ್ಸಾಹವನ್ನು ಅವರು ಪ್ರಕಟಣೆಯೊಂದರಲ್ಲಿ ವ್ಯಕ್ತಪಡಿಸಿದ್ದಾರೆ. “ಒಬ್ಬ ಕಲಾವಿದನಾಗಿ ನನ್ನ ಪಯಣದಲ್ಲಿ, ಪ್ರಯೋಗ ಮತ್ತು ಆನ್ವೇಷಣೆಗಳು ನಿರಂತರವಾಗಿವೆ. ಭಾರತೀಯ ಸಿನೇಮಾ ನನಗೆ ಎಲ್ಲವನ್ನು ನೀಡಿದೆ- ಅದು ನಟನಾಗಿ ನನ್ನ ಕೌಶಲಗಳನ್ನು ತೋರಿಸಲು ಮತ್ತು ಬೆಳೆಸಿಕೊಳ್ಳಲು ವೇದಿಕೆಯಾಗಿತ್ತು.

ಇಷ್ಟೊಂದು ಭಾರತೀಯರ ಪ್ರೀತಿ ಗಳಿಸಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ಕಲರ್ಸ್ ವಾಹಿನಿಯಲ್ಲಿ ದ ಬಿಗ್ ಪಿಕ್ಚರ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ, ಇದೀಗ ಅತ್ಯಂತ ವಿಶಿಷ್ಟ ಮಾರ್ಗದಲ್ಲಿ ಜನರೊಂದಿಗೆ ಸಂಪರ್ಕ ಹೊಂದಲು ಹೊರಟಿದ್ದೇನೆ. ಕಲರ್ಸ್‍ನೊಂದಿಗೆ ಈ ವಿನೂತನ ಕಾರ್ಯಕ್ರಮ ಮಾಡಲು ನಾನು ಉತ್ಸುಕನಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.ಕಲರ್ಸ್ ಟೀವಿಯಲ್ಲಿ, ಕಾರ್ಯಕ್ರಮದ ಮೊದಲ ಲುಕ್ ಸಂಜೆ 6.45ಕ್ಕೆ ಪ್ರಸಾರವಾಗಲಿದ್ದು, ಅದರಲ್ಲಿ ರಣ್‍ವೀರ್ ಅವರನ್ನು ಎಂದೆಂದೂ ಕಂಡಿರದ ಅವತಾರದಲ್ಲಿ ಕಾಣಬಹುದು.

ಮೂರು ಲೈಫ್ ಲೈನ್‍ಗಳ ಸಹಾಯದಿಂದ ಸ್ಪರ್ಧಿಗಳು, 12 ದೃಶ್ಯ ಆಧಾರಿತ ಪ್ರಶ್ನೆಗಳಿಗೆ ಉತ್ತರಿಸಿದರೆ ದೊಡ್ಡ ಬಹುಮಾನದ ಮೊತ್ತವನ್ನು ಪಡೆಯಬಹುದು.ದ ಬಿಗ್ ಪಿಕ್ಚರ್ ಕಾರ್ಯಕ್ರಮದ ಇಂಟರ್ಯಾಕ್ಟಿವ್ ಫಾಮ್ರ್ಯಾಟ್‍ನಿಂದ, ವೀಕ್ಷಕರು ಮನೆಯಲ್ಲೇ ಕುಳಿತು ಆಟವಾಡಿ, ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ.

ಇದನ್ನೂ ಓದಿ: Siddaramaiah| ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ; ಸಿದ್ದರಾಮಯ್ಯ ಕಿಡಿ

ಬನಿಜಯ್ ಏಷ್ಯಾ ಮತ್ತು ಐಟಿವಿ ಸ್ಟುಡಿಯೋ ಗ್ಲೋಬಲ್ ಎಂಟರ್‍ಟೈನ್‍ಮೆಂಟ್ ಬಿ ವಿ ಸಹಯೋಗದಲ್ಲಿ , ಕಲರ್ಸ್ ಟೀವಿ ಪ್ರಸಾರ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ರಣ್‍ವೀರ್ ಸಿಂಗ್ ಅವರಿಂದ ಮನರಂಜನೆಯನ್ನು ಪಡೆಯುವುದು ಮಾತ್ರವಲ್ಲ, ಜ್ಞಾನ ಪಡೆಯಬಹುದು ಮತ್ತು ಬಹಳಷ್ಟು ವಿಷಯಗಳನ್ನು ಕಲಿಯುವುದು ಕೂಡ ಸಾಧ್ಯವಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: