ವೈರಲ್​ ಆಯಿತು ದೀಪಿಕಾರ ಫೋಟೊ: ರಣವೀರ್ ಮಾಡಿದ​ ಪೋಸ್ಟ್​ಗೆ ಸಿಗುತ್ತಿವೆ ವಿಚಿತ್ರ ಪ್ರತಿಕ್ರಿಯೆಗಳು..!

ದೀಪಿಕಾ ನಿಜಕ್ಕೂ ತಾಯಿಯಾಗಲಿದ್ದಾರಾ..? ಅಷ್ಟಕ್ಕೂ ರಣವೀರ್​ ಸಿಂಗ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಫೋಟೊ ಹಿಂದಿನ ಸತ್ಯವೇನು ಅಂತ ತಿಳಿಯೋಕೆ ಈ ವರದಿ ಓದಿ...

Anitha E | news18
Updated:May 24, 2019, 7:07 PM IST
ವೈರಲ್​ ಆಯಿತು ದೀಪಿಕಾರ ಫೋಟೊ: ರಣವೀರ್ ಮಾಡಿದ​ ಪೋಸ್ಟ್​ಗೆ ಸಿಗುತ್ತಿವೆ ವಿಚಿತ್ರ ಪ್ರತಿಕ್ರಿಯೆಗಳು..!
ರಣವೀರ್-​ ದೀಪಿಕಾ
Anitha E | news18
Updated: May 24, 2019, 7:07 PM IST
ನೀಳ ಕಾಲಿನ ಸುಂದರಿ ದೀಪಿಕಾ ಪಡುಕೋಣೆ ಗರ್ಭಿಣಿ ಅನ್ನೋ ಸುದ್ದಿ ತುಂಬಾ ಹರಿದಾಡುತ್ತಿದೆ. ಹೀಗಿರುವಾಗಲೇ ನಟ ರಣವೀರ್​ ಸಿಂಗ್​ ದೀಪಿಕಾರ ಒಂದು ಫೋಟೊವನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಈಗ ಅದು ವೈರಲ್​ ಆಗುತ್ತಿದೆ.

ಹೌದು, ರಣವೀರ್​ ಸಿಂಗ್​ ಪತ್ನಿ ದೀಪಿಕಾರ ಜತೆ ವಿವಾಹವಾದಾಗಿನಿಂದಲೂ ಪತ್ನಿಯನ್ನು ಹೊಗಳಲು ಸಿಗುವ ಒಂದು ಅವಕಾಶವನ್ನೂ ಅವರು ಬಿಡುವುದಿಲ್ಲ. ಹೀಗಿರುವಾಗಲೇ ಈಗ ಮತ್ತೆ ರಣವೀರ್​ ಈಗ ಮಡದಿ ದೀಪಿಕಾರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ಚಿತ್ರ.

 


Loading...ರಣವೀರ್​ ದೀಪಿಕಾರ ಚಿತ್ರವನ್ನು ಫೋಟೊಶಾಪ್​ನಲ್ಲಿ ಬಾಲ್ಯದ ಚಿತ್ರದಂತೆ ಬದಲು ಮಾಡಿ ಪೋಸ್ಟ್​ ಂಆಡಿದ್ದಾರೆ. ಕಾನ್ಸ್​ನಲ್ಲಿ ತೆಗೆದಿದ್ದ ದೀಪಿಕಾರ ಒಂದು ಚಿತ್ರವನ್ನು ರಣವೀರ್​ ಹೀಗೆ ಬದಲು ಮಾಡಿ ಪೋಸ್ಟ್​ ಮಾಡಿರುವುದು ಜಾಲತಾಣಿಗರಲ್ಲಿ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: 26 ವರ್ಷಗಳ ಹಿಂದೆಯೇ ಸ್ಯಾಂಡಲ್​ವುಡ್​ನಲ್ಲಿ ರ‍್ಯಾಪ್​ ಹಾಡಿನ ಪ್ರಯೋಗ ಮಾಡಿದ್ದ ಜಗ್ಗೇಶ್​..!

ಎಲ್ಲರೂ ದೀಪಿಕಾ ಗರ್ಭಿಣಿಯಾಗಿರುವುದಕ್ಕೆ ರಣವೀರ್​ ಈ ಚಿತ್ರವನ್ನು ಪೋಸ್ಟ್​ ಮಾಡಿದ್ದಾರಾ, ಅಥವಾ ಸದ್ಯದಲ್ಲೇ ಮಗು ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರಾ ಎಂದೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಈ ಚಿತ್ರದಲ್ಲಿ ಬೇಬಿ ದೀಪಿಕಾ ಸಖತ್ ಕ್ಯೂಟ್​ ಆಗಿದ್ದು, ಇದಕ್ಕೆ 50 ಸಾವಿರಕ್ಕು ಹೆಚ್ಚು ಲೈಕ್ಸ್​ ಹಾಗೂ ನೂರಾರು ಕಮೆಂಟ್​ಗಳು ಸಕ್ಕಿವೆ.

ಈ ಹಿಂದೆ ದೀಪಿಕಾ ಅವರ ಹೊಸ ಸಿನಿಮಾದ ಕಿಸ್ಸಿಂಗ್​ ವಿಡಿಯೋ ಲೀಕ್​ ಆಗಿ ಸುದ್ದಿಯಲ್ಲಿದ್ದರು. ಈಗ ಅವರ ಚಿತ್ರದಿಂದಾಗಿ.... ಒಟ್ಟಾರೆ ರಣವೀರ್​ ಸಿಂಗ್​ ಹಾಗೂ ದೀಪಿಕಾ ಸದಾ ಒಂದಲ್ಲ ಒಂದು ವಿಷಯಗಳಿಂದ ಸುದ್ದಿಯಲ್ಲಿರೋದಂತೂ ಸತ್ಯ.

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...