news18-kannada Updated:May 25, 2020, 8:36 PM IST
ದೀಪಿಕಾ-ರಣವೀರ್
ಬಾಲಿವುಡ್ ಕ್ಯೂಟ್ ಕಪಲ್ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಒಂದಲ್ಲಾ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೀಗ ದೀಪಿಕಾ ತಮ್ಮ ಪತಿ ರಣವೀರ್ ಸಿಂಗ್ ಮೇಲೆ ಗಂಬೀರ ಆರೋಪವನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ ಆರೋಪ ಎನೆಂದು ಹೇಳಿಕೊಂಡಿದ್ದಾರೆ!.
ದೀಪಿಕಾ ಮತ್ತು ರಣವೀರ್ ಪ್ರೀತಿಸಿ 2018 ರ ನವೆಂಬರ್ ತಿಂಗಳಿನಲ್ಲಿ ಮದುವೆಯಾದರು. ಅದಕ್ಕೂ ಮುನ್ನ ಈ ಜೋಡಿ ಡೇಟಿಂಗ್ ನಡೆಸುತ್ತಿದ್ದರು. ಆದರೆ ಇವರಿಬ್ಬರ ಡೇಟಿಂಗ್ ಕಾಲದಿಂದ ಇಲ್ಲಿಯವರೆಗೆ ರಣವೀರ್ ಸಿಂಗ್ ದೀಪಿಕಾರಿಗೆ ಒಂದೇ ಒಂದು ಬಾರಿ ರುಚಿಯಾದ ಅಡುಗೆ ಮಾಡಿಕೊಡಲಿಲ್ಲವಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಡೇಟಿಂಗ್ ದಿನಗಳಲ್ಲಿ ರಣವೀರ್ ಅವರು ದೀಪಿಕಾಗೆ ರುಚಿಯಾದ ಅಡುಗೆ ಮಾಡಿಕೊಡುವುದಾಗಿ ಹೇಳಿದ್ದರಂತೆ, ಮಾತ್ರವಲ್ಲದೆ, ಪ್ರಾಮಿಸ್ ಕೂಡ ಮಾಡಿದ್ದರಂತೆ. ಆದರೆ ಇಲ್ಲಿಯವರೆಗೆ ಪ್ರಾಮಿಸ್ ಈಡೇರಿಸಲಿಲ್ಲ ಎಂದು ದೀಪಿಕಾ ಹೇಳಿದ್ದಾರೆ.
ಇತ್ತೀಚೆಗೆ ರಣವೀರ್ ಸಿಂಗ್ ಮತ್ತು ಇಂಡಿಯನ್ ಫುಟ್ಬಾಲ್ ಟೀಮ್ ಕ್ಯಾಪ್ಟನ್ ಸುನೀಲ್ ಚೆಟ್ರಿ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಲಾಕ್ಡೌನ್ ಕುರಿತಾಗಿ ಕೆಲವು ಮಾಹಿತಿಗಳನ್ನು ಲೈವ್ನಲ್ಲಿ ಹಂಚಿಕೊಂಡಿದ್ದರು. ಆ ವೇಳೆ ರಣವೀರ್ ದೀಪಿಕಾ ಅವರನ್ನು ಇಂಪ್ರೆಸ್ ಮಾಡಲು ಬಟರ್ ಚಿಕನ್ ಮಾಡಲು ಬರುತ್ತದೆ ಎಂದು ಸುಳ್ಳು ಹೇಳಿದ್ದೆ ಎಂದಿದ್ದರು.
ಅಮೆರಿಕಾ ಯುನಿವರ್ಸಿಟಿಯಲ್ಲಿ ಓದುತ್ತಿರುವಾಗ ನಾನು ಮಾಡಿದ ಬಟರ್ ಚಿಕನ್ ತಿನ್ನಲು ಪಾಕಿಸ್ತಾನ, ಬಾಂಗ್ಲದೇಶ, ಇಂಡಿಯಾದವರು ಕ್ಯೂ ನಿಲ್ಲುತ್ತಿದ್ದರು ಎಂದು ಡೇಟಿಂಗ್ ಸಮಯದಲ್ಲಿ ಹೇಳಿದ್ದೆ ಎಂದು ಇನ್ಸ್ಟಾಗ್ರಾಂ ಲೈವ್ನಲ್ಲಿ ಹೇಳಿದ್ದಾರೆ. ಆದರೆ ದೀಪಿಕಾಗೆ ಮಾತ್ರ ರಣವೀರ್ ಇದುವರೆಗೆ ಬಟರ್ ಚಿಕನ್ ಮಾಡಿಕೊಟ್ಟಿಲ್ಲವಂತೆ.
Roposo: ಸದ್ದಿಲ್ಲದೆ ಜನಪ್ರಿಯಗೊಳ್ಳುತ್ತಿದೆ ಈ ವಿಡಿಯೋ ಶೇರಿಂಗ್ ಆ್ಯಪ್!
First published:
May 25, 2020, 7:36 PM IST