Ranu Mondal: ಟ್ರೆಂಡಿಂಗ್​ನಲ್ಲಿದೆ ರಾನು ಹಾಡಿದ ಮೊದಲ ಹಾಡು ತೇರಿ ಮೇರಿ ಕಹಾನಿ

Teri meri Kahani full song: ಹಿಮೇಶ್​ ನಿರ್ಮಿಸಿ, ನಿರ್ದೇಶಿಸಿ ಹಾಗೂ ನಟಿಸುತ್ತಿರುವ ಹ್ಯಾಪಿ ಹಾರ್ಡಿ ಆ್ಯಂಡ್​ ಹೀರ್ ಸಿನಿಮಾದಲ್ಲಿ ಈ ತೇರಿ ಮೇರಿ ಕಹಾನಿ ಹಾಡನ್ನು ರಾನು ಅವರಿಂದ ಹಾಡಿಸಲಾಗಿದೆ.

Anitha E | news18-kannada
Updated:September 12, 2019, 1:16 PM IST
Ranu Mondal: ಟ್ರೆಂಡಿಂಗ್​ನಲ್ಲಿದೆ ರಾನು ಹಾಡಿದ ಮೊದಲ ಹಾಡು ತೇರಿ ಮೇರಿ ಕಹಾನಿ
ರೈಲ್ವೆ ಸಿಂಗರ್​ ರಾನು ಹಾಗೂ ರಿಮೇಶ್​ ರೇಶಮಿಯಾ
Anitha E | news18-kannada
Updated: September 12, 2019, 1:16 PM IST
ರೈಲ್ವೆ ಸಿಂಗರ್​ ರಾನು ಮಂಡಲ್​ ಹಾಡಿದ ಮೊದಲ ಹಾಡು ಬಿಡುಗಡೆಯಾಗಿದೆ. ಮೊನ್ನೆಯಷ್ಟೆ (ಸೆ10ರಂದು) ಈ ಹಾಡಿನ ಟೀಸರ್​ ಬಿಡುಗಡೆಯಾಗಿತ್ತು. ಅದಕ್ಕೂ ಮೊದಲು ರಾನು ಹಾಡಿದ ಪುಟ್ಟ ವಿಡಿಯೋ ತುಣುಕನ್ನು ಸಂಗೀತ ನಿರ್ದೇಶಕ ಹಿಮೇಶ್​ ರೇಶಮಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಈಗ ನಿನ್ನೆ ಇದರ ಸಂಪೂರ್ಣ ಹಾಡು ಬಿಡುಗಡೆಯಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜತೆಗೆ ಈ ಹಾಡು ಈಗ ಯೂ ಟ್ಯೂಬ್​ ಟ್ರೆಂಡಿಂಗ್​ನಲ್ಲಿ ಮೂರನೇ ಸ್ಥಾನದಲ್ಲಿದೆ.



 

ಹಿಮೇಶ್​ ನಿರ್ಮಿಸಿ, ನಿರ್ದೇಶಿಸಿ ಹಾಗೂ ನಟಿಸುತ್ತಿರುವ 'ಹ್ಯಾಪಿ ಹಾರ್ಡಿ ಆ್ಯಂಡ್​ ಹೀರ್' ಸಿನಿಮಾದಲ್ಲಿ ಈ 'ತೇರಿ ಮೇರಿ ಕಹಾನಿ' ಹಾಡನ್ನು ರಾನು ಅವರಿಂದ ಹಾಡಿಸಲಾಗಿದೆ.


Loading...

 




View this post on Instagram




 

Happy Hardy and Heer - Official teaser coming soon, cheers love you all, thanks for all your support #happyhardyandheer #poster #teasercomingsoon #instapost #instadaily #instaupdate #trending #instalike


A post shared by Himesh Reshammiya (@realhimesh) on






ಈ ಹಾಡು ಬಿಡುಗಡೆ ಮಾಡುತ್ತಿದ್ದಂತೆಯೇ ಲಕ್ಷಗಟ್ಟಲೆ ಲೈಕ್ಸ್ ಹಾಗೂ ವೀಕ್ಷಣೆ ಸಿಕ್ಕಿದೆ. ಅದರಲ್ಲೂ ನಿನ್ನೆ ಬಿಡುಗಡೆಯಾಗಿರುವ ಈ ಹಾಡಿಗೆ ಸದ್ಯಕ್ಕೆ 39 ಲಕ್ಷದ 11 ಸಾವಿರ ವೀಕ್ಷಣೆ ಸಿಕ್ಕಿದೆ.

ಇದನ್ನೂ ಓದಿ: 'ಪೈಲ್ವಾನ್'​ಗೆ ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ: ಸುದೀಪ್​ ಎಂಟ್ರಿಗೆ ಪ್ರೇಕ್ಷಕರು ಫಿದಾ..!

ಇದಕ್ಕೂ ಮೊದಲೇ ಅಂದರೆ ಸೆ.5ರಂದು ಇದೇ ಹಿಮೇಶ್​ ಈ ಹಿಂದೆ ಹಾಡಿರುವ 'ಆಶಿಕೆ ಮೆ ತೇರಿ....' ಹಾಡಿನ ರಿಮಿಕ್ಸ್​ ವರ್ಷನ್​ ಹಾಡು ಬಿಡುಗಡೆಯಾಗಿದೆ.



ಇನ್ನು ಈಗಾಗಲೇ ಹಿಮೇಶ್​ ಅವರು ರಾನು ಅವರಿಗೆ ಬಾಲಿವುಡ್​ನಲ್ಲಿ ಬೇಕ್​ ಕೊಟ್ಟಿದ್ದು, ಮೂರು ಹಾಡುಗಳನ್ನೂ ಹಾಡಿಸಿದ್ದಾರೆ. ಇದರ ಜತೆಗೆ ಈಗ ರಾನು ಅವರಿಗೆ ಸಿಕ್ಕಾಪಟ್ಟೆ ಅವಕಾಶಗಳು ಅರಸಿ ಬರುತ್ತಿವೆಯಂತೆ.

Radhika Apte: ರಾಧಿಕಾ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸಲು ಇದೇ ಕಾರಣವಂತೆ..!


 
First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...